ಇಂಡಿಯಾದಲ್ಲಿ ಅಕ್ಷರ ಶಕೆ ಶುರುಮಾಡಿದ ‘ಭಾರತದ ಶಿಕ್ಷಣ ಮಾತೆ’ ಸಾವಿತ್ರಿಬಾಯಿ ಫುಲೆ

ಅರುಣ್ ಜೋಳದಕೂಡ್ಲಿಗಿ
ಸಾವಿತ್ರಿಬಾಯಿ ಫುಲೆಯವರು ನಮ್ಮ ದೇಶ ಕಂಡ ಒಬ್ಬ ಧೀಮಂತ ಮಹಿಳೆ. ದೀನ ದಲಿತರಿಗಾಗಿ,ಮೊಟ್ಟ ಮೊದಲಿಗೆ ಶಾಲೆ ತೆರೆದ ಅಕ್ಷರಮಾತೆ. ಅವರು ದೇಶದ ಪ್ರಥಮ ಶಿಕ್ಷಕಿ, ಪ್ರಥಮ ಸಮಾಜ ಸುಧಾರಕಿ, ಪ್ರಥಮ ವೈಚಾರಿಕ ಕವಯಿತ್ರಿ. ಮಹಿಳಾ ಶಿಕ್ಷಣಕ್ಕೆಅಪಾರವಾಗಿ ಇಂಬು ನೀಡಿದ ಸಾವಿತ್ರಿಬಾಯಿ ಫುಲೆಯವರ ಜನ್ಮ ದಿನದ ವಿಶೇಷ ಲೇಖನ ಇಂಡಿಯಾ

18 ನೇ ಶತಮಾನ ಬ್ರಿಟಿಷ್ ಆಡಳಿತದ ಕಾಲಘಟ್ಟವಾಗಿತ್ತು, ಸತಿ ಸಹಗಮನ ಪದ್ದತಿ ಜೀವಂತವಾಗಿತ್ತು, ಬ್ರಾಹ್ಮಣರನ್ನು ಹೊರತು ಪಡಿಸಿದ ಯಾರೂ ಕೂಡ ಕಲಿಯಲು ಅವಕಾಶವಿಲ್ಲದ ಕಾಲಘಟ್ಟದಲ್ಲಿ, ಗೋವಿಂದರಾವ್ ತನ್ನ ಅಂಗಡಿಯ ಲೆಕ್ಕ ಬರೆಯುತ್ತಿದ್ದ ಬ್ರಾಹ್ಮಣ ಲೆಕ್ಕಿಗನ ಮಾತು ಕೇಳಿ ಮಗ ಜ್ಯೋತಿಬಾಪುಲೆಯನ್ನು 7 ವಯಸ್ಸಿಗೆ ಮರಾಠಿ ಓದಿಸಿ, ಶಾಲೆ ಬಿಡಿಸುತ್ತಾರೆ.

ಮುನ್ಷಿ ಗಫರ್ ಖಾನ್ ಎನ್ನುವ ಪರ್ಷಿಯನ್ ಶಿಕ್ಷಕರಿದ್ದರು. ಇವರಿಗೂ ಗೋವಿಂದರಾವರಿಗೂ ಇನ್ನಿಲ್ಲದ ಸ್ನೇಹ. ಇದನ್ನು ಅರಿತ ಸುಗುಣಬಾಯಿ ಗಫರ್ ಖಾನ್ ಅವರಲ್ಲಿ ಬಂದು ಜ್ಯೋತಿಭಾ ಅವರ ಶಿಕ್ಷಣ ಮುಂದುವರಿಸುವಂತೆಯೂ, ಇಂಗ್ಲೀಷ್ ಶಿಕ್ಷಣ ಕಲಿಸುವಂತೆಯೂ ಗೋವಿಂದರಾವ ಅವರ ಮನವೊಲಿಸಲು ಕೇಳಿಕೊಳ್ಳುತ್ತಾಳೆ. ಗಫರ್ ಖಾನ್ ಕೂಡ ಗೋವಿಂದರಾವ್ ಅವರನ್ನು ಮನವೊಲಿಸಿ ಯಶಸ್ವಿಯಾಗುತ್ತಾರೆ. 1847 ರಲ್ಲಿ 9 ವರ್ಷದ ಸಾವಿತ್ರಿಯನ್ನು ಮದುವೆಯಾಗುತ್ತಾರೆ. 1848 ರಲ್ಲಿ ಜೋತಿಭಾ English ಎಜುಕೇಷನ್‌ ಶುರುಮಾಡುತ್ತಾರೆ. ಆ ಕಾಲಘಟ್ಟ ಪ್ರಾನ್ಸ್ ಕ್ರಾಂತಿ(1799) ಆಗಿ 50 ವರ್ಷವಾಗಿತ್ತು. ಜೋತಿಭಾ ಪಠ್ಯದಲ್ಲಿ ಪ್ರಾನ್ಸ್ ಕ್ರಾಂತಿಯ ಬಗ್ಗೆ ಓದಿದ್ದರು. ಸಮಾನತೆ, ಸ್ವಾತಂತ್ರ್ಯ, ಭ್ರಾತೃತ್ವವನ್ನು ಆಧರಿಸಿದ ಗಣರಾಜ್ಯದ ಅರಿವು ಜ್ಯೋತಿಭಾ ಅವರಿಗೆ ಕಸಿಯಾಯಿತು. ಈ ಅರಿವು ಪಡೆದ ಜ್ಯೋತಿಭಾ ಗೆ ತನ್ನ ಎದುರಿನ ಅಸ್ಪೃಶ್ಯತೆ, ಅಸಮಾನತೆ ಡಾಳಾಗಿ ಕಾಣತೊಡಗಿದವು. ಇಂಡಿಯಾ

ಇದನ್ನೂ ಓದಿಸಾವಿತ್ರಿಬಾಯಿ ಫುಲೆ ಸ್ಮರಣೆ

1820 ರಲ್ಲಿ ಬ್ರಿಟಿಷ್ ಸರಕಾರ ಶಾಲೆಗಳನ್ನು ತೆರೆದಿದ್ದರೂ ಅದು ಮೇಲ್ಜಾತಿಗಳ ಕಲಿಕೆ ಪ್ರಮಾಣ ಹೆಚ್ಚಾಗಿತ್ತು. ಕಣ್ಣೆದುರು ಜೀತಪದ್ದತಿ, ಅಮಾನುಷ ಅಸ್ಪೃಶ್ಯತೆ, ಬಾಲ್ಯವಿವಾಹ, ಮಹಿಳೆಯರ ಹೀನಾಯ ಸ್ಥಿತಿಯನ್ನು ನೋಡಿದ ಜ್ಯೋತಿಭಾ ಮಹಿಳೆಯರ ಶಿಕ್ಷಣದ ಅಗತ್ಯವನ್ನು ಕಂಡುಕೊಳ್ಳುತ್ತಾರೆ. ಜೋತಿಭಾ ಮೊದಲನೆಯದಾಗಿ ಸಾವಿತ್ರಿಗೆ ಅಕ್ಷರ ಕಲಿಸುತ್ತಾರೆ. ಶಿಕ್ಷಣ ಕಲಿಸುವುದು ಧರ್ಮವಿರೊಧಿ ಸಂಗತಿಯಾಗುತ್ತೆ. ಊರಿನ ಮೇಲ್ಜಾತಿಯವರು ಬಂದು ಗೋವಿಂದರಾವ್ ಅವರಲ್ಲಿ ನಿನ್ನ ಮಗ ಜ್ಯೋತಿಭಾ ಮತ್ತು ಸಾವಿತ್ರಿ ಅಸ್ಪೃಶ್ಯರಿಗೆ, ಮಹಿಳೆಯರಿಗೆ ಅಕ್ಷರ ಕಲಿಸುತ್ತಿದ್ದಾರೆ. ಇದು ದೇಶದ್ರೋಹದ ಕೆಲಸ ಎಂದು ವಿರೋಧಿಸುತ್ತಾರೆ. ಆಗ ಗೋವಿಂದರಾವ್ ಉಟ್ಟ ಬಟ್ಟೆಯಲ್ಲಿಯೃ ಜ್ಯೋತಿಭಾ ಮತ್ತು ಸಾವಿತ್ರಿಯರನ್ನು ಮನೆಯಿಂದ ಹೊರ ಹಾಕುತ್ತಾರೆ. ಆಗ ನಿರ್ಗತಿಕರಾಗಿ ಹೊರಬಿದ್ದ ದಂಪತಿಗಳೆಗೆ ನೆರವಾಗುವುದು ಶಿಕ್ಷಕ ಮುನ್ಷಿ ಗಫರ್ ಖಾನ್. ಈತ ಪುಣೆಯ ಜೋತಿಭಾ ಸ್ನೇಹಿತರೂ ಆಗಿದ್ದ ಉಸ್ಮಾನ್ ಶೇಖ್ ಎನ್ನುವವರಲ್ಲಿ ಸಹಾಯ ಮಾಡಲು ಕೋರುತ್ತಾರೆ. ಆಗ ಉಸ್ಮಾನ್ ಶೇಖ್ ತಮ್ಮ ದೊಡ್ಡ ಮನೆಯ ಎರಡು ಕೋಣೆಗಳನ್ನು ಶಾಲೆಗಾಗಿ ನೀಡುತ್ತಾರೆ. ಜೊತೆಗೆ ಸಾವಿತ್ರಿ ಯ ಕೆಲಸಕ್ಕೆ ಜೊತೆಯಾಗಲು ಉಸ್ಮಾನ್ ಶೇಖ್ ತನ್ನ ತಂಗಿ ಫಾತೀಮಾ ಶೇಖ್ ಅವರನ್ನು ಪರಿಚಯಿಸುತ್ತಾರೆ. 1848 ರಲ್ಲಿ ಭುದವಾರ ಪೇಟೆಯಲ್ಲಿ ಹೆಣ್ಣುಮಕ್ಕಳಿಗೆ ಒಂದು ಶಾಲೆ ಶುರುವಾಗುತ್ತೆ. ಸಾವಿತ್ರಿ ಈ ಶಾಲೆಯ ಮೊದಲ ಶಿಕ್ಷಕಿಯಾಗುತ್ತಾಳೆ. ಅಹಮದಾಬಾದ್ ನಲ್ಲಿ ಶಿಕ್ಷಕರ ತರಬೇತಿಯನ್ನು ಸಾವಿತ್ರಿ ಫಾತೀಮಾ ಸಾವಿತ್ರಿ ಇಬ್ಬರೂ ಪೂರೈಸಿ ಅಧಿಕೃತವಾಗಿ ಶಾಲಾ ಶಿಕ್ಷಕಿಯರಾಗಿ ಬದಲಾಗುತ್ತಾರೆ.

ಹೀಗೆ ಇಂಡಿಯಾದಲ್ಲಿ ಅಕ್ಷರದ ಶಕೆಯನ್ನು ಶುರುಮಾಡಿದ ದೇಶದ ಮೊದಲ ಶಿಕ್ಷಕಿ ಸಾವಿತ್ರಿಬಾಯಿ ಪುಲೆಯನ್ನು ನೆನೆಯೋಣ. ಜತೆಗೆ ಜ್ಯೋತಿಭಾಪುಲೆ, ಮುನ್ಷಿ ಗಫರ್ ಖಾನ್, ಸುಗುಣಬಾಯಿ, ಉಸ್ಮಾನ್ ಶೇಖ್, ಮತ್ತು ಫಾತೀಮಾ ಶೇಖ್ ಇವರನ್ನೂ ನೆನೆಯೋಣ. ಇಂಡಿಯಾ

ಈ ವಿಡಿಯೋ ನೋಡಿ : ನೆನೆಯೋಣ ಬನ್ನಿ ಅಕ್ಷರದವ್ವ ಸಾವಿತ್ರಿಬಾಯಿ ಫುಲೆಯ ಚಿಂತಕಿ, ಕೆ. ನೀಲಾರ ಮಾತುಗಳು

 

Donate Janashakthi Media

Leave a Reply

Your email address will not be published. Required fields are marked *