ಡೆಂಟಲ್ ಸ್ಟೂಡೆಂಟ್ ಆತ್ಮಹತ್ಯೆ: ಪ್ರಾಂಶುಪಾಲ ಸೇರಿ 5 ಲೆಕ್ಚರರ್ಸ್ ವಿರುದ್ಧ ಎಫ್‌ಐಆರ್

ಬೆಂಗಳೂರು: ಬೆಂಗಳೂರಿನಲ್ಲಿ ಡೆಂಟಲ್ ಸ್ಟೂಡೆಂಟ್ ಯಶಸ್ವಿನಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧ, ಆಕೆಯ ತಾಯಿ ದೂರಿನ ಮೇರೆಗೆ ಕಾಲೇಜು ಪ್ರಾಂಶುಪಾಲ ಸೇರಿ 5 ಲೆಕ್ಚರರ್ಸ್ ವಿರುದ್ಧ ಸೂರ್ಯನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಜನವರಿ 8ರಂದು ಚಂದಾಪುರದ ಮನೆಯಲ್ಲಿ ಯಶಸ್ವಿನಿ ಆತ್ಮಹತ್ಯೆಗೆ ಶರಣಾಗಿದ್ದರು. ಆಕೆಯ ಆತ್ಮಹತ್ಯೆಗೆ ಕಾಲೇಜು ಉಪನ್ಯಾಸಕರ ಕಿರುಕುಳವೆಂಬ ಆರೋಪ ಕೇಳಿ ಬಂದಿತ್ತು.

ಇದನ್ನೂ ಓದಿ: ಉಪನ್ಯಾಸಕ ಕಿರುಕುಳಕ್ಕೆ ಬೇಸತ್ತು ದಂತ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿನಿ ಆತ್ಮಹತ್ಯೆ

ಸಹಪಾಠಿಗಳ ಮುಂದೆ ಯಶಸ್ವಿನಿ ಬಣ್ಣ ಮತ್ತು ಉಡುಪು ಬಗ್ಗೆ ಟೀಕಿಸಲಾಗಿತ್ತು. ಕಪ್ಪು ಬಣ್ಣದ ನಿನಗೆ ಡಾಕ್ಟರ್ ಆಗಬೇಕಾ ಎಂದು ಟೀಕಿಸಿದ್ದರು. ವಿದ್ಯಾರ್ಥಿನಿ ಯಶಸ್ವಿನಿ ಕಣ್ಣು ನೋವು ಎಂದಿದ್ದಕ್ಕೆ ಕೊಂಕು ಮಾತುಗಳನ್ನಾಡಿದ್ದರು.

ಸೆಮಿನಾರ್ ಮತ್ತು ರೇಡಿಯೋಲಜಿ ಕೇಸ್ ನೀಡದೆ ಕಿರುಕುಳ ನೀಡಿದ ಆರೋಪ ಕೇಳಿ ಬಂದಿದೆ. ಇದರಿಂದ ವಿದ್ಯಾರ್ಥಿನಿ ಯಶಸ್ವಿನಿ ಆತ್ಮಹತ್ಯೆ ಮಾಡಿಕೊಂಡಿದ್ದು, ಲೆಕ್ಚರರ್ಸ್ ವಿರುದ್ಧ ಯಶಸ್ವಿನಿಯ ತಾಯಿ ಪರಿಮಳಾ ಕ್ರಮಕ್ಕೆ ಒತ್ತಾಯಿಸಿದ್ದಾರೆ.

ಇದನ್ನೂ ನೋಡಿ: ರಸ್ತೆ ನಿಯಮ ಪಾಲಿಸಿ : ಅಪಘಾತಗಳನ್ನು ತಪ್ಪಿಸಿ Janashakthi Media

Donate Janashakthi Media

Leave a Reply

Your email address will not be published. Required fields are marked *