ಕಬ್ಬು ಬೆಳೆಗಾರರ ಹೋರಾಟ : 700 ರೈತರ ಮೇಲೆ ಎಫ್‌ಐಆರ್‌

ಬಾಗಲಕೋಟೆ: ನವೆಂಬರ್ 13ರಂದು ಜಿಲ್ಲೆಯ ಸೈದಾಪೂರದ ಸಮೀರವಾಡಿ ಸಕ್ಕರೆ ಕಾರ್ಖಾನೆಯಲ್ಲಿ ಕಬ್ಬು ತುಂಬಿದ್ದ ಟ್ರಾಕ್ಟರ್ ಟ್ರೇಲರ್ ಗಳಿಗೆ ಬೆಂಕಿ ಹಚ್ಚಿದ ಪ್ರಕರಣದ ಸಂಬಂಧ, ಕೊಲೆ ಸಂಚಿನ ಆರೋಪದ ಮೇಲೆ 17 ಜನ ರೈತ ಮುಖಂಡರು ಮತ್ತು 700 ರೈತರ ಮೇಲೆ ಎಫ್‌ಐಆರ್‌ ದಾಖಲಾಗಿದೆ. ಕೊಲೆ

ಮಹಾಲಿಂಗಪುರ ಪೋಲಿಸ್ ಠಾಣೆಯ ಪಿಎಸ್‌ಐ ಶಿವಾನಂದ ಸಿಂಗನ್ನವರ್‌ ಅವರು ಸರ್ಕಾರದ ಪರವಾಗಿ ಎಫ್‌ಐಆರ್‌ ದಾಖಲಿಸಿದ್ದಾರೆ. (ಸಿ. ಆರ್ ನಂಬರ್ 75/2025)

ನವೆಂಬರ್‌ 12ರಂದು ರಂದು ಗೋದಾವರಿ ಸಕ್ಕರೆ ಕಾರ್ಖಾನೆ ಸಮೀರವಾಡಿ ರವರು ಸರಕಾರ ನಿಗದಿ ಪಡಿಸಿದ ದರ ಪ್ರತಿ ಟನ್ ಗೆ ಕೊಡುವದಾಗಿ ಘೋಷಣೆ ಮಾಡಿ ಕಾರ್ಖಾನೆ ಪೂಜೆ ಕಾರ್ಯಕ್ರಮ ಮಾಡಿ ಕಬ್ಬು ಕಟಾವು ಮಾಡಲು ಆದೇಶ ಕೊಟ್ಟಿದ್ದರು. ಅದರಂತೆ ಕಬ್ಬು ತುಂಬಿದ ಸುಮಾರು 150 ಟ್ರ್ಯಾಕ್ಟರ್‌ಗಳು ಕಬ್ಬು ತುಂಬಿಕೊಂಡು ಕಾರ್ಖಾನೆಗೆ ಬಂದಿದ್ದವು.

ಇದನ್ನೂ ಓದಿ: ನೀರಿನ ಸೋರಿಕೆ ಹಾಗೂ ಅಕ್ರಮ ಬಳಕೆದಾರರ ಮೇಲೆ ಕ್ರಮ: ಡಿಕೆಶಿ

ಇದನ್ನು ಖಂಡಿಸಿ (1) ಬಸವಂತ ಕಾಂಬಳೆ, 2) ಹಣಮಂತಗೌಡ ಪಾಟೀಲ 3) ಸುರೇಶ ಚಿಂಚಲಿ 4) ಸುರೇಶ ಢವಳೇಶ್ವರ 5)ಮಹೇಶಗೌಡ ಪಾಟೀಲ 6) ದುಂಡಪ್ಪ ಯರಗಟ್ಟಿ, 7) ಕಲಮೇಶ ಹನಗೋಜಿ 8) ಮುತ್ತು ಹೊಸಕೋಟಿ 9)ರಾಚಪ್ಪ ಕೊಳ್ಳೋಳಿ 10) ಈರಪ್ಪ ಹಂಚಿನಾಳ 11) ಬಸಪ್ಪ ಸಂಗನ್ನವರ 12) ಸದಾಶಿವ ಸಂಕರಡ್ಡಿ 13)ಸುಭಾಸ ಶಿರಬೂರ 14) ಮಂಜು ಅರಕೇರಿ 15) ಹಣಮಂತ ನಬಾಬ್ 16) ಮುತ್ತಪ್ಪ ಕೋಮಾರ 17) ಗಂಗಾಧರ ಮೇಟಿ ಇವರ ನೇತೃತ್ವದಲ್ಲಿ ಸುಮಾರು 700 ಜನರು ಸಕ್ಕರೆ ಕಾರ್ಖಾನೆಗಳಿಗೆ ಮುತ್ತಿಗೆ ಹಾಕಿ‌ ಪ್ರತಿಭಟಿಸಿದರು. ಈ ವೇಳೆ ಪೊಲೀಸರ ಮೇಲೆ ಕಲ್ಲು ತೂರಿ ಕೊಲೆಗೆ ಸಂಚು ರೂಪಿಸಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಸ್ಥಳದಲ್ಲಿ ಇಲ್ಲದಿದ್ದರೂ ಪ್ರಕರಣ ದಾಖಲು: ಆರೋಪ

ಈ ಪ್ರಕರಣದಲ್ಲಿ 17ನೇ ಆರೋಪಿಯನ್ನಾಗಿ ರೈತ ಮುಖಂಡ ಗಂಗಾಧರ ಮೇಟಿ ಹೆಸರಿದೆ. ಕಳೆದೊಂದು ವಾರದಿಂದ ತಾನು ಕುಟುಂಬ ಸಮೇತ ದಿಲ್ಲಿ ಪ್ರವಾಸದಲ್ಲಿದ್ದು, ತನ್ನ ಮೇಲೆ ಸುಳ್ಳು ಮೊಕದ್ದಮೆ ದಾಖಲಿಸಲಾಗಿದೆ ಎಂದು ಗಂಗಾಧರ ಮೇಟಿ ದೂರಿದ್ದಾರೆ.

ಮುಧೋಳದಲ್ಲಿ ನಡೆದ ಕಬ್ಬು ಬೆಳೆಗಾರರ ಚಳುವಳಿಯಲ್ಲಿ ತಾನು ಒಂದು ದಿನವು ಭಾಗವಹಿಸಲಿಲ್ಲ. ಘಟನೆ ನಡೆದಾಗ ಸ್ಥಳದಲ್ಲಿ ಇಲ್ಲದಿದ್ದರೂ ತಮ್ಮ ಮೇಲೆ ಸುಳ್ಳು ಪ್ರಕರಣ ದಾಖಲಿಸಲಾಗಿದೆ ಎಂದು ಗಂಗಾಧರ ಮೇಟಿ ಆರೋಪಿಸಿದ್ದಾರೆ.

ಸದ್ಯ ದಿಲ್ಲಿ ಪ್ರವಾಸದಲ್ಲಿರುವ ಅವರು, ಇಂಡಿಯಾ ಗೇಟ್ ಬಳಿಯಿಂದ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿ, ಪೊಲೀಸ್‌ ಇಲಾಖೆಯ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ನೋಡಿ: ನಿರಂಜನ ಜನಮುಖಿ ಬರಹಗಾರ: ಮುಕುಂದರಾಜ್ Janashakthi Media

Donate Janashakthi Media

Leave a Reply

Your email address will not be published. Required fields are marked *