ರೈತ ಮಹಿಳೆ – ಮಗನ ಮೇಲೆ ಹಲ್ಲೆ: 15 ಅರಣ್ಯ ಸಿಬ್ಬಂದಿಗಳ ವಿರುದ್ಧ ಎಫ್‌ಐಆರ್

ಚಾಮರಾಜನಗರ: ಗುಂಡ್ಲುಪೇಟೆ ತಾಲೂಕಿನ ಬೊಮ್ಮಲಾಪುರ ಗ್ರಾಮದ ರೈತ ಮಹಿಳೆ ನೀಡಿದ್ದ ದೂರಿನ ಅನ್ವಯ ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ಸೆಪ್ಟೆಂಬರ್‌ 14ರಂದು ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ನೌಕರರು ಸೇರಿ 15 ಮಂದಿ ವಿರುದ್ದ ಪ್ರಕರಣ ದಾಖಲಾಗಿದೆ.

ಬೊಮ್ಮಲಾಪುರ ಗ್ರಾಮದ ರೈತ ಮಹಿಳೆ ಕಮಲಮ್ಮ ಎಂಬುವರು, ಅರಣ್ಯ ಇಲಾಖೆಯವರು ತನ್ನ ಕೈ ಹಿಡಿದು ಎಳೆದಾಡಿ, ಕಪಾಳಕ್ಕೆ ಹೊಡೆದು, ತಳ್ಳಿ ಬೀಳಿಸಿದ್ದಾರೆ.

ಇದನ್ನೂ ಓದಿ: ಗಣೇಶೋತ್ಸವ ಮೆರವಣಿಗೆ ಅಪಘಾತ: ಮೃತಪಟ್ಟವರ ಸಂಖ್ಯೆ 10ಕ್ಕೆ ಏರಿಕೆ

ಅಲ್ಲದೆ, ನನ್ನ ಮಗ ಗಂಗಾಧರ ಸ್ವಾಮಿ ಮತ್ತು ನಮ್ಮ ಜಮೀನಿನ ಬಾಜುದಾರರಾದ ರಘು, ಪ್ರದೀಪ್, ರೇವಣ್ಣ ಅವರುಗಳಿಗೆ ಕೈನಿಂದ ಹೊಡೆದು ನನ್ನ ಮಗನನ್ನು ಕೊಲೆ ಮಾಡುವ ಉದ್ದೇಶದಿಂದ ಕತ್ತು ಹಿಡಿದು ಹಿಸುಕಲು ಯತ್ನಿಸಿದ್ದಾರೆ. ಪ್ರಸಾದ್ ಮೇಲೆ ಜೀಪ್ ಹತ್ತಿಸಿ ಹತ್ಯೆಗಯ್ಯಲು ಯತ್ನ ಮಾಡಲಾಗಿದೆ ಎಂದು ಆರೋಪಿಸಿ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ದೂರು ಸಲ್ಲಿಸಿದ್ದರು.‌

ಅರಣ್ಯ ಇಲಾಖೆ ಡಿಆರ್​​ಎಫ್‌ಒ ಜ್ಞಾನಶೇಖರ್, ಡಿಆರ್​​ಎಫ್‌ಒ ಕಾರ್ತಿಕ್​ ಯಾದವ್​, ಎಸಿಎಫ್ ಸುರೇಶ್,‌ ಡಿಆರ್​​ಎಫ್‌ಒ ಶಿವಕುಮಾರ್ ಇತರ ನೌಕರರಾದ ಶಿವಣ್ಣ, ಸುಚಿತ್ರ, ಸುಬ್ರಹ್ಮಣ್ಯ, ನಾಗೇಶ್, ಸೋಮು, ಪ್ರವೀಣ್, ಮಣಿಕಂಠ, ವಿನಯ್ ಕುಮಾರ್, ಸಂತೋಷ್, ರಾಜಪ್ಪ ಹಾಗೂ ಬಸವೇಗೌಡ ಎಂಬುವರ ವಿರುದ್ದ ಎಫ್ಐಆರ್​ ದಾಖಲು ಮಾಡಲಾಗಿದೆ.

ಇದನ್ನೂ ನೋಡಿ: ನಾಲ್ಕು ದಶಕಗಳಿಂದ ಧರ್ಮಸ್ಥಳದಲ್ಲಿ ಕೊಲೆ, ದೌರ್ಜನ್ಯ, ಅತ್ಯಾಚಾರಗಳು ನಡೆಯುತ್ತಿವೆ – ಡಾ. ಕೆ.ಪ್ರಕಾಶ್‌ Janashakthi

Donate Janashakthi Media

Leave a Reply

Your email address will not be published. Required fields are marked *