ತುಮಕೂರು | ಕಾರ್ಮಿಕ ಹಕ್ಕು ರಕ್ಷಣೆಗೆ ಹೋರಾಟ: ಸಂಹಿತೆ ರದ್ದುಪಡಿಸುವಂತೆ ಬಂದ್‌ಗೆ ಕರೆ

ತುಮಕೂರು: ಫೆ. 12ರಂದು ರಾಷ್ಟ್ರೀಯ ಸಾರ್ವತ್ರಿಕ ಮುಷ್ಕರ ನಡೆಯಲಿದೆ. ಕಾರ್ಮಿಕ ಸಂಹಿತೆ ಹಿಂಪಡೆಯುವುದು ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಮುಷ್ಕರ.  ಇದರ ಪ್ರಯುಕ್ತ ನಗರದಲ್ಲಿ ಬುಧವಾರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿಯಿಂದ ಹಮ್ಮಿಕೊಂಡಿದ್ದ ಸಮಾವೇಶದಲ್ಲಿ ಸ್ವಯಂ ಪ್ರೇರಿತ ಬಂದ್‌ಗೆ ಕರೆ ನೀಡಲಾಯಿತು.

ಜೆಸಿಟಿಯು, ಸಂಯುಕ್ತ ಹೋರಾಟ ಕರ್ನಾಟಕದಿಂದ ರೈತ– ಕಾರ್ಮಿಕರ ಸಮಾವೇಶ ಆಯೋಜಿಸಲಾಗಿತ್ತು. ಮುಷ್ಕರದ ಭಾಗವಾಗಿ ಕೈಗಾರಿಕೆಗಳು ಬಂದ್ ಆಗಲಿವೆ. ಕಾರ್ಮಿಕರು, ರೈತರು ಭಾಗವಹಿಸಲಿದ್ದಾರೆ. ಜಿಲ್ಲೆಯ ಎಲ್ಲರೂ ಸ್ವಯಂ ಪ್ರೇರಿತವಾಗಿ ಮುಷ್ಕರದಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಲಾಯಿತು.

ಕಾರ್ಪೊರೇಟ್‌ ದಣಿಗಳ ಸೇವೆಯಲ್ಲಿ ತೊಡಗಿವೆ. ಬೆಂಬಲ ಬೆಲೆ, ಕನಿಷ್ಠ ಕೂಲಿ ನಿರಾಕರಿಸಲಾಗುತ್ತಿದೆ’ ‘ಸರ್ಕಾರಗಳು ಶರವೇಗದಲ್ಲಿ ರೈತ– ಕಾರ್ಮಿಕರ ವಿರೋಧಿ ಕಾನೂನು ಜಾರಿಗೊಳಿಸುತ್ತಿದೆ. ಎಂದು ಸಿಐಟಿಯು ರಾಜ್ಯ ಕಾರ್ಯದರ್ಶಿ ಕೆ.ಮಹಂತೇಶ್‌ ಹೇಳಿದರು.

ಇದನ್ನೂ ಓದಿ : ಭರವಸೆಗಳನ್ನು ನೀಡಲಾಯಿತು, ಆದರೆ ಯಾವುದೂ ಜಾರಿಗೆ ಬಂದಿಲ್ಲ: ಧವಾಳೆ

ಸಾಮಾನ್ಯರನ್ನು ಸಂಕಷ್ಟಕ್ಕೆ ದೂಡಿದೆ. ಬಂಡವಾಳ ಶಾಹಿಗಳಿಗೆ ಪೂರಕವಾಗಿ ಕೆಲಸ ಮಾಡುತ್ತಿದೆ. ನರೇಂದ್ರ ಮೋದಿ ನೇತೃತ್ವದ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನಂತರ ತ್ರಿಪಕ್ಷೀಯ ವ್ಯವಸ್ಥೆಯಲ್ಲಿ ನಡೆಯುತ್ತಿದ್ದ ಭಾರತೀಯ ಕಾರ್ಮಿಕ ಸಮ್ಮೇಳನವನ್ನು ನಿಲ್ಲಿಸಲಾಗಿದೆ. ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ ಎಂದು ಟೀಕಿಸಿದರು.

ಎಐಟಿಯುಸಿ ಪ್ರಧಾನ ಕಾರ್ಯದರ್ಶಿ ಗಿರೀಶ್‌, ‘ಕೇಂದ್ರದಲ್ಲಿ ಜಿಜೆಪಿ ಅಧಿಕಾರಕ್ಕೆ ಬಂದ ನಂತರ ದುಡಿಯುವ ಜನರಿಗೆ ಸಂಕಷ್ಟ ತಂದೊಡ್ಡುತ್ತಿದೆ. ನಮ್ಮ ಹಕ್ಕು ಉಳಿಸಿಕೊಳ್ಳಲು ದುಡಿಯುವ ಜನ ಮುಂದಾಗಬೇಕು’ ಎಂದರು.

ವಿವಿಧ ಸಂಘಟನೆಗಳ ಮುಖಂಡರಾದ ಮಂಜುಳಾ ಗೋನವಾರ, ಶಂಕರಪ್ಪ, ಬಿ.ಉಮೇಶ್‌, ಸ್ವಾಮಿ, ಕಂಬೇಗೌಡ, ಸೈಯದ್‌ ಮುಜೀಬ್‌, ರೇಖಾ, ಚಂದ್ರಶೇಖರ್‌, ಜಿ.ಕಮಲಾ, ಬಿ.ಷಣ್ಮಖಪ್ಪ ಇತರರು ಹಾಜರಿದ್ದರು.

ಜಿಲ್ಲಾ ಅಧ್ಯಕ್ಷ ರಾಜ್ಯ ರೈತ ಸಂಘ ಎ.ಗೋವಿಂದರಾಜು ಮಾತನಾಡಿ ಸರ್ಕಾರಗಳು ರೈತ ವಿರೋಧಿಯಾಗಿವೆ. ಬಲವಂತದ ಭೂಸ್ವಾಧೀನ ಮಾಡಲಾಗುತ್ತಿದೆ. ಬೆಂಬಲ ಬೆಲೆ ನಿಗದಿಗೆ ಹಿಂದೇಟು ಹಾಕುತ್ತಿವೆ. ಬಿತ್ತನೆ ಬೀಜಗಳ ಮಸೂದೆ ಮೂಲಕ ರೈತರನ್ನು ಕಾರ್ಪೊರೇಟ್‌ ಗುಲಾಮಗಿರಿಗೆ ತಳ್ಳಿವೆ. ವಿದ್ಯುತ್‌ ಕಾಯ್ದೆಯಿಂದ ಜನತೆಯ ಸುಲಿಗೆಗೆ ಹೊರಟಿವೆ. ಇದರ ವಿರುದ್ಧ ಎಲ್ಲರು ಒಂದಾಗಿ ಚಳವಳಿ ಕಟ್ಟಬೇಕು ಎಂದರು.

Donate Janashakthi Media

Leave a Reply

Your email address will not be published. Required fields are marked *