ಕಾರವಾರ| ವಿದ್ಯುತ್ ಶಾಕ್ ತಗುಲಿ ಹೆಣ್ಣು ಕಾಡಾನೆ ಸಾವು

ಕಾರವಾರ: ವಿದ್ಯುತ್ ಶಾಕ್ ತಗುಲಿ ಹೆಣ್ಣು ಕಾಡಾನೆಯೊಂದು ಮೃತಪಟ್ಟಿರುವ ಘಟನೆ ಕಾಳಿ ಹುಲಿ ಸಂರಕ್ಷಿತ ಪ್ರದೇಶದ ಕುಳಗಿ ವನ್ಯಜೀವಿ ವಲಯ ವ್ಯಾಪ್ತಿಯ ಜಮಗಾ ಅರಣ್ಯ ಪ್ರದೇಶದಲ್ಲಿ ನಡೆದಿದೆ.

ಕಾಡಿನಲ್ಲಿ ಜೂನ್‌ 17 ಮಂಗಳವಾರ ಸಂಜೆ ಅರಣ್ಯ ಸಿಬ್ಬಂದಿ ಗಸ್ತು ತಿರುಗುವ ವೇಳೆ ಮೃತ ಸ್ಥಿತಿಯಲ್ಲಿ ಆನೆ ಪತ್ತೆಯಾಗಿತ್ತು.

ಇದನ್ನೂ ಓದಿ: 1008 ಸರಕಾರಿ ಶಾಲೆಗಳಲ್ಲಿ ಎಲ್.ಕೆ.ಜಿ – ಯು.ಕೆ.ಜಿ ತರಗತಿ ಪ್ರಾರಂಭ: ಮಧು ಬಂಗಾರಪ್ಪ

‘ಆಹಾರ ಅರಸುತ್ತಿದ್ದ ಆನೆಯು ಸಾಗವಾನಿ ಮರವೊಂದನ್ನು ಬಲವಾಗಿ ನೂಕಿರಬಹುದು. ಮರದ ಕೊಂಬೆಯು 220 ಕೆ.ವಿ ವಿದ್ಯುತ್ ತಂತಿಗೆ ಬಡಿದು ಅದರಿಂದ ಶಾಕ್ ತಗುಲಿ ಆನೆ ಮೃತಪಟ್ಟಿರಬಹುದು’ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಶಂಕಿಸಿದ್ದಾರೆ.

ಘಟನೆ ನಡೆದ ಸ್ಥಳಕ್ಕೆ ಬುಧವಾರ ಅರಣ್ಯ ಇಲಾಖೆ ಅಧಿಕಾರಿಗಳ ತಂಡ ತಲುಪಿದೆ. ದಾಂಡೇಲಿ ಪಶು ಆಸ್ಪತ್ರೆ ವೈದ್ಯಾಧಿಕಾರಿ ಆನೆಯ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ.

ಇದನ್ನೂ ನೋಡಿ: ಭಾರತದ ರಾಜಕೀಯ ಮತ್ತು ಹಣಕಾಸು ಒಕ್ಕೂಟ ಸವಾಲುಗಳು ಮತ್ತು ಸಾಧ್ಯತೆಗಳು Janashakthi Media

Donate Janashakthi Media

Leave a Reply

Your email address will not be published. Required fields are marked *