ಬಿ.ಇಡಿ ಪ್ರವೇಶಕ್ಕೆ ದುಬಾರಿ ಶುಲ್ಕ : ಸೀಟನ್ನು ರದ್ದುಗೊಳಿಸಿ, ಕಟ್ಟಿರುವ ಪ್ರವೇಶ ಶುಲ್ಕವನ್ನು ವಾಪಸ್ ಕೊಡಿ ಎಂದು ಪತ್ರ ಬರೆದ ಅಭ್ಯರ್ಥಿಗಳು

ಕಲಬುರಗಿ:  ಬಿ.ಇಡಿ ಪದವಿ ಮುಗಿಸಿ ಉತ್ತಮ ಶಿಕ್ಷಕರಾಗಬೇಕು ಎಂಬ ಕನಸು ಹೊತ್ತಿದ್ದ ಅಭ್ಯರ್ಥಿಗಳಿಗೆ ಸರ್ಕಾರಿ ಕೋಟಾದಡಿ ಸೀಟು ಲಭಿಸಿದ್ದರೂ ಖಾಸಗಿ ಹಾಗೂ ಅನುದಾನಿತ ಕಾಲೇಜುಗಳಲ್ಲಿ ಪ್ರಸಕ್ತ ಸಾಲಿನಲ್ಲಿ ಬಿ.ಇಡಿ ಪ್ರವೇಶ ಪಡೆಯಲು ಬಂದ ಅಭ್ಯರ್ಥಿಯಿಂದ ನಿಗದಿತ ಶುಲ್ಕದ ಜೊತೆಗೆ ಹೆಚ್ಚುವರಿಯಾಗಿ 225,000ರಿಂದ 735,000 ಹಣ ಕಟ್ಟಿಸಿಕೊಳ್ಳಲಾಗುತ್ತಿದೆ.

ಹೀಗಾಗಿ ಹಣ ಕಟ್ಟಲಾಗದ ಕೆಲವು ಅಭ್ಯರ್ಥಿಗಳು, ತಮಗೆ ಹಂಚಿಕೆಯಾಗಿರುವ ಬಿ.ಇಡಿ ಸೀಟನ್ನು ರದ್ದುಗೊಳಿಸಿ, ಕಟ್ಟಿರುವ ಪ್ರವೇಶ ಶುಲ್ಕವನ್ನು ವಾಪಸ್ ಕೊಡಿ ಎಂದು ಡಯಟ್‌ಗೆ ಪತ್ರ ಬರೆದಿದ್ದಾರೆ. ‘ಪ್ರಜಾವಾಣಿ’ಗೆ ಈ ಪತ್ರಗಳು ಲಭಿಸಿದೆ.

ಸರ್ಕಾರಿ ಕೋಟಾದಡಿ ಆಯ್ಕೆಯಾದ ಅಭ್ಯರ್ಥಿಗಳು ಸರ್ಕಾರಿ ಕಾಲೇಜಿಗೆ ಕ 5,125, ಅನುದಾನಿತ ಕಾಲೇಜಿಗೆ 76,175 ಹಾಗೂ ಖಾಸಗಿ (ಅನುದಾನ ರಹಿತ) ಕಾಲೇಜಿಗೆ ಕ 10,175 ಶುಲ್ಕ ಪಾವತಿಸಬೇಕು. ಆದರೆ, ಖಾಸಗಿ ಮತ್ತು ಅನುದಾನಿತ ಕಾಲೇಜುಗಳು ಅಭ್ಯರ್ಥಿಗಳಿಂದ ಪ್ರತಿ ಸೆಮಿಸ್ಮರ್‌ಗೆ ಕಾಲೇಜು ಅಭಿವೃದ್ಧಿ, ಪ್ರವಾಸ, ನೋಂದಣಿ ಶುಲ್ಕ ಸೇರಿದಂತೆ 7 25,000ರಿಂದ 235,000ವರೆಗೆ ಹಣ ಕೇಳುತ್ತಿವೆ. ಜೊತೆಗೆ ವಿಶ್ವವಿದ್ಯಾಲಯಕ್ಕೆ ತಾವು ಕಟ್ಟಬೇಕಿರುವ ಸಮಗ್ರ ವಿಶ್ವವಿದ್ಯಾಲಯ ಮತ್ತು ಕಾಲೇಜು ಅಭಿವೃದ್ಧಿ ವ್ಯವಸ್ಥೆ(ಯುಯುಸಿಎಂಎಸ್) ನಿರ್ವಹಣೆಯ 71,000 ಶುಲ್ಕದ ಬದಲಿಗೆ, ಅಭ್ಯರ್ಥಿಗಳಿಂದ ಕೆ 10,000 ಕಟ್ಟಿಸಿಕೊಳ್ಳುತ್ತಿವೆ.

ಇದನ್ನೂ ಓದಿ : 1600 ಕೋಟಿ ರೂಪಾಯಿ ಮೌಲ್ಯದ ಸರ್ಕಾರಿ ಜಾಗ ಕಬಳಿಕೆ: ಶಾಸಕ ಎಚ್‌.ಸಿ. ಬಾಲಕೃಷ್ಣ ಮೇಲೆ ಆರೋಪ

ಇವೆಲ್ಲವೂ ಸೇರಿದರೆ ಸರ್ಕಾರಿ ಕೋಟಾದಡಿ ಸೀಟು ಸಿಕ್ಕರೂ ಒಬ್ಬ ಅಭ್ಯರ್ಥಿ ಒಂದು ಸಮಿಸ್ಮರ್‌ಗೆ ಸುಮಾರು 755,000ರಿಂದ 765,000ವರೆಗೆ ನತಕ್ಷಣ ಕಾಲೇಜಿಗೆ ಕಟ್ಟಬೇಕಾಗಿದೆ. ನಾಲ್ಕು ಸೆಮಿಸ್ಮರ್‌ಗಳಿಗೆ 71.5 ಲಕ್ಷದಿಂದ 72 ಲಕ್ಷದವರೆಗೆ ಕಟ್ಟಬೇಕಾಗಿರುವುದರಿಂದ ತಮಗೆ ಪ್ರವೇಶವೇ ಬೇಡ ಎಂದು ಕೆಲವು ಅಭ್ಯರ್ಥಿಗಳು ಡಯಟ್‌ಗೆ ಪತ್ರ ಬರೆದು ಅಳಲು ತೋಡಿಕೊಂಡಿದ್ದಾರೆ.

ಮೆರಿಟ್ ಲಿಸ್ಟನಲ್ಲಿ ಆಯ್ಕೆಯಾದ ಅಭ್ಯರ್ಥಿಗಳ ದಾಖಲಾತಿ ಪರಿಶೀಲಿಸಿ ಕಾಲೇಜುಗಳ ಆಯ್ಕೆಗೆ ಅವಕಾಶ ನೀಡಲಾಗುತ್ತದೆ. ಬಳಿಕ ತಾವು ಆಯ್ಕೆ ಮಾಡಿಕೊಂಡ ಕಾಲೇಜುಗಳಿಗೆ ತೆರಳಿ ಪ್ರವೇಶ ಪಡೆಯಬೇಕು. ಒಂದು ವೇಳೆ ಅಭ್ಯರ್ಥಿಯು ಕಾಲೇಜು ಬದಲಾಯಿಸಿಕೊಳ್ಳಬೇಕಾದರೆ, 2ನೇ ಸುತ್ತಿನ ಮೆರಿಟ್ ಲಿಸ್ಟ್ ಬಿಡುಗಡೆ ಆಗುವವರೆಗೂ ಕಾಯಬೇಕು. ಆ ನಂತರ ಕಾಲೇಜನ್ನು ಬದಲಿಸಿಕೊಳ್ಳಬೇಕು. ಹೀಗೆ ಬದಲಿಸಿಕೊಂಡರೆ
ಹೆಚ್ಚುವರಿಯಾಗಿ ಪಾವತಿಸಿದ ಹಣವೂ ವಾಪಸ್ ಬರುವುದಿಲ್ಲ. ಹೀಗಾಗಿ ಅಭ್ಯರ್ಥಿಗಳು ಕಾಲೇಜಿಗೆ ಪ್ರವೇಶ ಪಡೆಯುವ ಮುನ್ನವೇ ತಮಗೆ ಹಂಚಿಕೆಯಾಗಿದ್ದ ಸೀಟನ್ನು ರದ್ದುಗೊಳಿಸಬೇಕು ಎಂದು ಡಯಟ್‌ಗೆ ಪತ್ರ ಬರೆಯುತ್ತಿದ್ದಾರೆ.

ಬಿ.ಎಂ. ಪಾಟೀಲ, ಹಂಗಾಮಿ ಕುಲಪತಿ, ಕರ್ನಾಟಕ ವಿಶ್ವವಿದ್ಯಾಲಯಸರ್ಕಾರಿ ಕೋಟಾದ ಅಭ್ಯರ್ಥಿಗಳಿಗೆ ನಿಗದಿಪಡಿಸಿದ ಫೀಸ್ ಮಾತ್ರ ಪಡೆಯಬೇಕು. ಹೆಚ್ಚುವರಿ ಶುಲ್ಕ ಪಡೆಯುತ್ತಿರುವ ಕಾಲೇಜುಗಳ ವಿರುದ್ಧ ಕ್ರಮಕೈಗೊಳ್ಳಲಾಗುವುದು.

ಇದನ್ನೂ ನೋಡಿ : ಸಾಹಿತ್ಯ ಸಮ್ಮೇಳನ | ಆಹಾರ ಪದ್ಧತಿ ಮೇಲೆ ದಬ್ಬಾಳಿಕೆ – ವೈದಿಕಶಾಹಿ ವಾಸನೆ Janashakthi Media

Donate Janashakthi Media

Leave a Reply

Your email address will not be published. Required fields are marked *