ಸುಪ್ರೀಂಕೋರ್ಟ್‌ನ ಮೊದಲ ಮಹಿಳಾ ನ್ಯಾಯಮೂರ್ತಿ ಫಾತಿಮಾ ಬೀವಿ (96) ನಿಧನ

ಕೊಲ್ಲಂ: ಏಷ್ಯಾ ಖಂಡದ ದೇಶಗಳಲ್ಲಿರುವ ಸುಪ್ರೀಂಕೋರ್ಟ್‌ಗಳಲ್ಲೆ ಮೊದಲ ಮೊದಲ ಮಹಿಳಾ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದ್ದ ನ್ಯಾಯಮೂರ್ತಿ ಎಂ. ಫಾತಿಮಾ ಬೀವಿ ಅವರು ಗುರುವಾರ ಕೇರಳದ ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರಿಗೆ 96 ವರ್ಷ ವಯಸ್ಸಾಗಿತ್ತು. ಭಾರತದ ಸುಪ್ರೀಂಕೋರ್ಟ್‌ಗೆ ಸೇವೆ ಸಲ್ಲಿಸಿದ ಮೊದಲ ಮುಸ್ಲಿಂ ಮಹಿಳೆ ಕೂಡ ಅವರಾಗಿದ್ದಾರೆ. ಅಲ್ಲದೆ ತಮಿಳುನಾಡಿನ ಮೊದಲ ಮಹಿಳಾ ರಾಜ್ಯಪಾಲರು ಹಾಗೂ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಮೊದಲ ಅಧ್ಯಕ್ಷರೂ ಆಗಿದ್ದರು.

ಜಸ್ಟಿಸ್ ಫಾತಿಮಾ ಬೀವಿ ಅವರು 1927 ರಲ್ಲಿ ಕೇರಳದ ಪಥನಂತಿಟ್ಟದಲ್ಲಿ ಜನಿಸಿದರು. ಪಥನಂತಿಟ್ಟದ ಕ್ಯಾಥೋಲಿಕೇಟ್ ಹೈಸ್ಕೂಲ್‌ನಲ್ಲಿ ಶಾಲಾ ಶಿಕ್ಷಣ ಪಡೆದ ಅವರು, ತಿರುವನಂತಪುರಂನ ಯೂನಿವರ್ಸಿಟಿ ಕಾಲೇಜಿನಲ್ಲಿ ರಸಾಯನಶಾಸ್ತ್ರದಲ್ಲಿ ಪದವಿ ಪಡೆದರು. ನಂತರ ತಿರುವನಂತಪುರಂನ ಸರ್ಕಾರಿ ಕಾನೂನು ಕಾಲೇಜಿನಲ್ಲಿ ಬ್ಯಾಚುಲರ್ ಆಫ್ ಲಾ ಪದವಿಯನ್ನು ಪಡೆದರು. 1950 ರಲ್ಲಿ ವಕೀಲರಾದ ಅವರು, ಇಲ್ಲಿನ ಬಾರ್ ಕೌನ್ಸಿಲ್ ಪರೀಕ್ಷೆಯಲ್ಲಿ ಅಗ್ರಸ್ಥಾನದೊಂದಿಗೆ ಚಿನ್ನದ ಪದಕವನ್ನು ಪಡೆದ ಮೊದಲ ಮಹಿಳೆಯೆ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. ಫಾತಿಮಾ ಬೀವಿ

ಇದನ್ನೂ ಓದಿ: ಗುಜರಾತ್ | ವೇತನ ಕೇಳಿದ ದಲಿತ ಯುವಕನಿಗೆ ಥಳಿಸಿ ಬಾಯಿಗೆ ಚಪ್ಪಲಿ ಹಾಕಿದ ಉದ್ಯಮಿ

ತನ್ನ ತವರು ರಾಜ್ಯದಲ್ಲಿ ಕೆಳ ನ್ಯಾಯಾಲಯದಲ್ಲಿ ವೃತ್ತಿಜೀವನವನ್ನು ಪ್ರಾರಂಭಿಸಿದ ಜಸ್ಟಿಸ್ ಫಾತಿಮಾ ಬೀವಿ ಅವರು, ಅವರು 1958 ರಲ್ಲಿ ಕೇರಳದ ಅಧೀನ ನ್ಯಾಯಾಂಗ ಸೇವೆಗಳಲ್ಲಿ ಮುನ್ಸಿಫ್ ಆಗಿ ನೇಮಕಗೊಂಡರು. 1968 ರಲ್ಲಿ ಅಧೀನ ನ್ಯಾಯಾಧೀಶರಾಗಿ ಬಡ್ತಿ ಪಡೆದ ಅವರು, 1972 ರಲ್ಲಿ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಮತ್ತು 1974 ರಲ್ಲಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದರು.

ನಂತರ ಅವರು 1980 ರಲ್ಲಿ ಆದಾಯ ತೆರಿಗೆ ಮೇಲ್ಮನವಿ ನ್ಯಾಯಾಧಿಕರಣದ ನ್ಯಾಯಾಂಗ ಸದಸ್ಯರಾಗಿ ನೇಮಕಗೊಂಡರು. ಅವರು ಆಗಸ್ಟ್ 4, 1983 ರಂದು ಹೈಕೋರ್ಟ್‌ಗೆ ನ್ಯಾಯಮೂರ್ತಿಯಾದ ಅವರು, ಮೇ 14, 1984 ರಂದು ಹೈಕೋರ್ಟ್‌ನ ಖಾಯಂ ನ್ಯಾಯಮೂರ್ತಿಯಾಗಿ ಬಡ್ತಿ ಪಡೆದರು.

ಅಕ್ಟೋಬರ್ 6, 1989 ರಂದು ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಯಾದ ಅವರು ಏಪ್ರಿಲ್ 29, 1992 ರಂದು ಸುಪ್ರೀಂ ಕೋರ್ಟ್‌ನಿಂದ ನಿವೃತ್ತರಾದರು. ಅವರು NHRC ಯ ಅಧ್ಯಕ್ಷರಾಗಿ ಕೂಡಾ ಸೇವೆ ಸಲ್ಲಿಸಿದ್ದಾರೆ. ಅವರು ಜನವರಿ 25, 1997 ರಂದು ತಮಿಳುನಾಡು ರಾಜ್ಯಪಾಲರಾಗಿ ನೇಮಕಗೊಂಡಿದ್ದರು.

ವಿಡಿಯೊ ನೋಡಿ: ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯ (ಜಾತಿ ಗಣತಿ?) ಬಹಿರಂಗ ಚರ್ಚೆಗೆ ಬ್ರಾಹ್ಮಣ, ಲಿಂಗಾಯತ, ಒಕ್ಕಲಿಗರ ವಿರೋಧ ಯಾಕೆ?

Donate Janashakthi Media

Leave a Reply

Your email address will not be published. Required fields are marked *