ಕೇಂದ್ರ ಸರ್ಕಾರದ ಕೃಷಿ ಕರಾಳ ಮಸೂದೆ ವಿರುದ್ಧ ರೈತರಿಂದ ಬೃಹತ್‌ ಪ್ರತಿಭಟನೆ

ಚಂಡೀಗಢ: ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ) ಕರೆಯ ಮೇರೆಗೆ ಇಂದು ಹಮ್ಮಿಕೊಂಡಿದ್ದ ದೇಶವ್ಯಾಪಿ ಕೃಷಿ ರಕ್ಷಿಸಿ, ಪ್ರಜಾಪ್ರಭುತ್ವ ಉಳಿಸಿ ಹೋರಾಟ ಅಂಗವಾಗಿ ಹರ‍್ಯಾಣ ರಾಜ್ಯದ ರೈತರು ಬೃಹತ್ ಮೆರವಣಿಗೆಯನ್ನು ನಡೆಸಿದರು. ಪ್ರತಿಭಟನಾ ಮೆರವಣಿಗೆ ರಾಜ್ಯಪಾಲರ ನಿವಾಸಕ್ಕೆ ಆಗಮಿಸಿ ಕೇಂದ್ರ ಸರ್ಕಾರದ ನೂತನ ಕೃಷಿ ಮಸೂದೆಗಳನ್ನು ರದ್ದುಪಡಿಸಬೇಕೆಂದು ರಾಜ್ಯಪಾಲರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಯೋಜಿಸಲಾಗಿತ್ತು.

ದೆಹಲಿಯ ಗಡಿಭಾಗದ ಸಿಂಘು, ಟಿಕ್ರಿ ಮತ್ತು ಗಾಜಿಪುರ್ ಸ್ಥಳಗಳಲ್ಲಿ ನಿರತರಾಗಿರುವ ರೈತರು ನಡೆಸುತ್ತಿರುವ ಪ್ರತಿಭಟನೆ ಇಂದಿಗೆ ಏಳು ತಿಂಗಳು ಪೂರೈಸಿದೆ.

ಇದನ್ನು ಓದಿ: ಕೃಷಿ ರಕ್ಷಿಸಿ-ಪ್ರಜಾಪ್ರಭುತ್ವ ಉಳಿಸಿ ಪ್ರತಿಭಟನೆ: ರೈತರನ್ನು ಬಂಧಿಸಿದ ಪೊಲೀಸರು

ಸಂಯುಕ್ತ ಕಿಸಾನ್ ಮೋರ್ಚಾದ ಚಂಡೀಗಢದಲ್ಲಿ ನೂರಕ್ಕೂ ಹೆಚ್ಚಿನ ಭಾರತೀಯ ಕಿಸಾನ್ ಸಂಘಟನೆಯ ರೈತರು ಮೆರವಣಿಗೆ ಸಾಗಿದರು. ಪ್ರತಿಭಟನಾ ನಿರತ ರೈತರು ಬೆಳಗಿನ ಹೊತ್ತು ಪಂಚ್ ಕುಲಾದಲ್ಲಿ ಸೇರಿ ನಂತರ ರಾಜಭವನದ ಕಡೆಗೆ ಹೊರಟರು.

ಈ ಸಂದರ್ಭದಲ್ಲಿ ರೈತರು ಹಾಗೂ ಪೊಲೀಸರ ಮಧ್ಯೆ ಘರ್ಷಣೆಯೂ ಸಂಭವಿಸಿದೆ ಮತ್ತು ಪೊಲೀಸರು ಲಾಠಿ ಚಾರ್ಚ್‌ ಮತ್ತು ವಾಟರ್‌ ಜೆಟ್‌ಗಳನ್ನು ಪ್ರಯೋಗಿಸಿದರು.

ಈ ಮಧ್ಯೆ ರೈತರ ಮೆರವಣಿಗೆ ಹಿನ್ನೆಲೆಯಲ್ಲಿ ಚಂಡೀಗಢ ಪೊಲೀಸರು ಬಿಗಿ ಕ್ರಮ ಕೈಗೊಂಡಿದ್ದು, ಚಂಡೀಗಢದಲ್ಲಿ 13 ಪ್ರವೇಶ ಮತ್ತು ನಿರ್ಗಮನ ಕೇಂದ್ರಗಳು ಇಂದು ಬೆಳಗ್ಗೆ 10 ಗಂಟೆಯಿಂದ ಸಾಯಂಕಾಲ 6 ಗಂಟೆಯವರೆಗೆ ತಾತ್ಕಾಲಿಕವಾಗಿ ಮುಚ್ಚಲು ಭಾರತೀಯ ಕಿಸಾನ್ ಸಂಘ ನಿರ್ಧರಿಸಿದ್ದವು.

ಇದನ್ನು ಓದಿ: ಪ್ರಜಾತಂತ್ರದ ಚೌಕಟ್ಟಿನಲ್ಲಿ 1975ರ ಅವಲೋಕನ

ಪ್ರತಿಭಟನೆಯ ತೀವ್ರತೆಯಿಂದ ಆತಂಕಕ್ಕೆ ಒಳಗಾದ ಕೇಂದ್ರ ಸರಕಾರ ದೆಹಲಿ ಗಡಿಗಳಲ್ಲಿ ಒಂದು ಹೆಚ್ಚಿನ ಪೊಲೀಸ್‌ ಭದ್ರತೆಗಳನ್ನು ನಿಯೋಜಿಸಿದ್ದರು.  ಅಲ್ಲದೆ, ದೆಹಲಿ ಪೊಲೀಸರ ಮನವಿ ಮೇರೆಗೆ ಹಳದಿ ಮಾರ್ಗದ ಮೂರು ಮುಖ್ಯ ನಿಲ್ದಾಣಗಳಾದ ವಿಶ್ವವಿದ್ಯಾಲಯ, ಸಿವಿಲ್‌ ಲೈನ್ಸ್‌ ಮತ್ತು ವಿಧಾನಸಭಾ ನಿಲ್ದಾಣಗಳನ್ನು ಬೆಳಿಗ್ಗೆ 10 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಸಾರ್ವಜನಿಕರಿಗೆ ನಿರ್ಬಂಧಿಸಲಾಗಿತ್ತು.

ಬೆಂಗಳೂರು ಒಳಗೊಂಡು ಕೋಲ್ಕತ್ತಾ, ಲಕ್ನೋ, ಸೇರಿದಂತೆ ಹಲವು ರಾಜ್ಯಗಳಲ್ಲಿ ರೈತರು ಪ್ರತಿಭಟನಾ ಪ್ರದರ್ಶನಗಳನ್ನು ನಡೆಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *