ಕೃಷಿಕಾಯ್ದೆ ವಿರುದ್ಧ ರೈತರ ಹೋರಾಟಕ್ಕೆ 150 ನೇ ದಿನ

ಕೃಷಿಕಾಯ್ದೆಗಳನ್ನು ರದ್ದುಪಡಿಸುವಂತೆ ಆಗ್ರಹಿಸಿ ದೆಹಲಿಯಲ್ಲಿ ರೈತರು ನಡೆಸುತ್ತಿರುವ ಹೋರಾಟ ಇಂದಿಗೆ 150 ನೇ ದಿನಕ್ಕೆ ತಲುಪಿದೆ. ಚಳಿ, ಮಳೆಯನ್ನೂ ಲೆಕ್ಕಿಸದೆ ಹೋರಾಟವನ್ನು ಮುಂದುವರಿಸಿದ್ದ ರೈತರು ಈಗ ಬಿಸಿಲಿನ ಬೇಗುದಿಗೆ ಬೆದರದೆ, ಕೃಷಿ ಕಾಯ್ದೆಯ ಬೇಗುದಿಯನ್ನು ಹೊರಹಾಕುತ್ತಿದ್ದಾರೆ.

                                                                          – ಗುರುರಾಜ ದೇಸಾಯಿ

ರೈತರ ಈ ದೊಡ್ಡ ಹೋರಾಟ ಆರಂಭವಾಗುವುದಕ್ಕೆ ದೊಡ್ಡ ಇತಿಹಾಸವಿದೆ, ಆಗಸ್ಟ್ 2020 ರಲ್ಲಿ ಕೃಷಿ ಮಸೂದೆಗಳನ್ನು ಕೇಂದ್ರ ಸರಕಾರ ಜಾರಿ ಮಾಡಿದಾಗ ಸಣ್ಣ ಪ್ರಮಾಣದ ಪ್ರತಿಭಟನೆಗಳು ಪ್ರಾರಂಭವಾಗಿದ್ದವು. ಕಾಯಿದೆಗಳು ಅಂಗೀಕಾರವಾದ ನಂತರವೇ ಭಾರತದಾದ್ಯಂತ ಹೆಚ್ಚಿನ ರೈತರು ಮತ್ತು ರೈತ ಸಂಘಟನೆಗಳು ಪ್ರತಿಭಟನೆಯನ್ನು ತೀವೃಗೊಳಿಸಿದರು. ಸೆಪ್ಟೆಂಬರ್ 25, 2020 ರಂದು ಭಾರತದಾದ್ಯಂತದ ಈ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟಿಸಲು  ಮೊದಲ ಭಾರತ್ ಬಂದ್ ನ್ನು ಕರೆ ನೀಡಿದರು. ಪಂಜಾಬ್, ಹರಿಯಾಣ, ಉತ್ತರ ಪ್ರದೇಶ, ರಾಜಸ್ಥಾನ, ಮಹಾರಾಷ್ಟ್ರ,  ಕರ್ನಾಟಕ, ತಮಿಳುನಾಡು, ಆಂದ್ರಪ್ರದೇಶ್‌,  ಒಡಿಶಾ, ಕೇರಳ ಸೇರಿದಂತೆ ಇತರ ರಾಜ್ಯಗಳಲ್ಲಿ ಪ್ರತಿಭಟನೆಗಳು ತೀವೃಗೊಂಡವು.

ಇಷ್ಟೆಲ್ಲ ಪ್ರತಿರೋಧ ಬಂದರೂ ಕೇಂದ್ರ ಸರಕಾರ ತನ್ನ ನಿರ್ಧಾರದಿಂದ ಹಿಂದೆಸರಿಯೋದಿಲ್ಲ, ಕೃಷಿಕಾಯ್ದೆಗಳನ್ನು ವಾಪಸ್ಸ್‌ ಪಡೆಯಲು ಸಾಧ್ಯವಿಲ್ಲ ಎಂದು ಹೇಳಿದಾಗ ಪ್ರತಿಭಟನೆಯ ಕಾವು ಜೋರಾಗಿ ಆರಂಭವಾಗುತ್ತದೆ. ಎರಡು ತಿಂಗಳ ಪ್ರತಿಭಟನೆಯ ನಂತರ, ಮುಖ್ಯವಾಗಿ ಪಂಜಾಬ್‌, ರಾಜಸ್ಥಾನ ಮತ್ತು ಹರಿಯಾಣದಿಂದ ಬಂದ ರೈತರು ‘ದಿಲ್ಲಿ ಚಲೋ’ ಎಂಬ ಆಂದೋಲನವನ್ನು ಪ್ರಾರಂಭಿಸುತ್ತಾರೆ. ಲಕ್ಷಾಂತರ ರೈತರು  ರಾಷ್ಟ್ರದ ರಾಜಧಾನಿಯತ್ತ ಸಾಗುತ್ತಾರೆ.

ರೈತರು ದೆಹಲಿಗೆ ಪ್ರವೇಶಿಸುವುದನ್ನು ತಡೆಯಲು ಪೊಲೀಸರು ಜಲ ಫಿರಂಗಿಗಳನ್ನು ಮತ್ತು ಅಶ್ರುವಾಯು ಬಳಸುತ್ತಾರೆ. ರೈತರ ಮೇಲೆ ಕೇಂದ್ರ ಸರಕಾರ ನಡೆಸಿದ ದಾಳಿಯ ವಿರುದ್ಧ ದೇಶದ ತುಂಬೆಲ್ಲ ರೈತರು ಹೋರಾಟವನ್ನು ಆರಂಭಿಸುತ್ತಾರೆ. ಅಂದಾಜು 25 ಕೋಟಿಜನ ರೈತರ ಹೋರಾಟವನ್ನು ಬೆಂಬಲಿಸಿ ಪ್ರತಿಭಟನೆಯನ್ನು ನಡೆಸುತ್ತಾರೆ.  500 ಕ್ಕೂ ಹೆಚ್ಚು ರೈತ ಸಂಗಟನೆಗಳು ಸಂಯುಕ್ತ ಕಿಸಾನ್‌ ಮೋರ್ಚಾ ಎಂಬ ಹೆಸರಿನಲ್ಲಿ ಹೋರಾಟವನ್ನು ಆರಂಭಿಸುತ್ತವೆ.

ರೈತರು ದೆಹಲಿ ಪ್ರವೇಶ ಮಾಡದಂತೆ ಉದ್ದೇಶವನ್ನು ಇಟ್ಟುಕೊಂಡಿದ್ದ ಕೇಂದ್ರಸರಕಾರ ರೈತರನ್ನು ದೆಹಲಿಯತ್ತ ಬಿಡುವುದಿಲ್ಲ,  ಆಗ ರೈತರು ದೆಹಲಿಯ ಸಿಂಗು, ಟಿಕ್ರಿ ಮತ್ತು ಗಾಜಿಪುರ ಗಡಿಗಳಲ್ಲಿಯೇ ಟೆಂಟ್‌ ಹಾಕಿ ಕೃಷಿಕಾಯ್ದೆಯ ವಿರುದ್ದ ಆಕ್ರೋಶವನ್ನು ಪ್ರಖರಗೊಳಿಸುತ್ತಾರೆ. ಇಂಡಿಯಾ ಟುಡೆ ವರದಿಯ ಪ್ರಕಾರ ನವೆಂಬರ್ 30 ರಂದು, ಅಂದಾಜು 20 ಮತ್ತು 30 ಲಕ್ಷ  ರೈತರು ದೆಹಲಿಗೆ ಹೋಗುವ ದಾರಿಯಲ್ಲಿ ವಿವಿಧ ಗಡಿ ಬಿಂದುಗಳಲ್ಲಿ ಸೇರಿಕೊಳ್ಳುತ್ತಾರೆ, ಸಾವಿರಾರು ಟ್ರ್ಯಾಕ್ಟರ್‌ ಗಳು ಅಲ್ಲಿ ಜಮಾವಣೆಗೊಳ್ಳುತ್ತವೆ. ಮಹಿಳಾ ರೈತರು ಹೋರಾಟಕ್ಕೆ ಸಾಥ್‌ ನೀಡುತ್ತಾರೆ. ರೈತರ ಹೋರಾಟ ಬಲಗೊಳ್ಳುತ್ತಿದ್ದಂತೆ ಕೇಂದ್ರ ಸರಕಾರ ಡಿಸೆಂಬರ್ 4 ರಂದು ಮೊದಲ ಮಾತುಕತೆಯನ್ನು ನಡೆಸುತ್ತೆ, ಸಭೆ ವಿಫಲವಾಗುತ್ತೆ,  ಡಿಸೆಂಬರ್ 8 ರಂದು ದೇಶಾದ್ಯಂತ ಮತ್ತೊಂದು  ಮುಷ್ಕರವನ್ನು ರೈತರು ನಡೆಸುತ್ತಾರೆ. ಡಿಸೆಂಬರ್ 12 ರಿಂದ, ರೈತರು ಟೋಲ್ ಪ್ಲಾಜಾಗಳಿಗೆ ಮುತ್ತಿಗೆ ಹಾಕಿತ್ತಾರೆ.

ರೈತರ ಹೋರಾಟ ಇನ್ನಷ್ಟು ತೀವ್ರಗೊಳ್ಳುತ್ತಿದೆ. ಪಂಜಾಬ್‌, ಉತ್ತರ ಪ್ರದೇಶ, ಉತ್ತರಾಖಂಡ ಹಾಗೂ ಮಹಾರಾಷ್ಟ್ರದಿಂದ ರೈತರು ತಂಡೋಪತಂಡವಾಗಿ ದೆಹಲಿ ಗಡಿಭಾಗದತ್ತ ಸಾಗಿಬರುತ್ತಾರೆ. ತಮ್ಮ ಜೊತೆ ಆಹಾರ ಧಾನ್ಯ ಹಾಗೂ ಅಗತ್ಯ ಸಾಮಗ್ರಿಗಳನ್ನು ಹೊತ್ತುಕೊಂಡು ಹೋಗ್ತಾರೆ, ಪಶ್ಚಿಮ ಬಂಗಾಲದಲ್ಲಿ 20ಸಾವಿರಕ್ಕೂ ಹೆಚ್ಚು ಹಳ್ಳಿಗಳಲ್ಲಿ ಜಾಥಗಳು ನಡೆದಿವೆ, ಇದೇ ರೀತಿ ತ್ರಿಪುರ, ತಮಿಳುನಾಡು, ಬಿಹಾರ, ಆಂಧ್ರಪ್ರದೇಶ,ತೆಲಂಗಾಣ, ಉತ್ತರಾಖಂಡ, ಛತ್ತೀಸ್ಗಡ,  ಮಧ್ಯಪ್ರದೇಶ, ಕರ್ನಾಟಕದಲ್ಲಿ ಸಾವಿರಾರು ರೈತರು, ಕೃಷಿ ಕೂಲಿಕಾರರು, ಆದಿವಾಸಿಗಳು, ದಿಲ್ಲಿಯ ಪ್ರತಿಭಟನೆಗಳ ಭಾಗವಾಗುತ್ತಾರೆ.  ಡಿಸೆಂಬರ್‌ 21 ರಂದು ಮಹಾರಾಷ್ಟ್ರದಿಂದ 3000 ಕ್ಕೂ ಹೆಚ್ಚು ರೈತರು ಆಲ್‌ ಇಂಡಿಯಾ ಕಿಸಾನ್‌ ಸಭಾ ನೇತೃತ್ವದಲ್ಲಿ ದೆಹಲಿಯವರೆಗೆ ಪಾದಯಾತ್ರೆಯನ್ನು ನಡೆಸುತ್ತಾರೆ. 1300 ಕಿ.ಮೆ ಗಳ ಈ ಜಾಥಾದ ನೇತೃತ್ವವನ್ನು ಎಐಕೆಎಸ್‌ ನ ರಾಷ್ಟ್ರಾಧ್ಯಕ್ಷರಾದ ಅಶೋಕ ಧಾವಳೆ ಸೇರಿದಂತೆ ಸಾವಿರಾರು ರೈತ ಮುಖಂಡರು ನೇತೃತ್ವವನ್ನು ವಹಿಸುತ್ತಾರೆ.

ಮಹಾರಾಷ್ಟ್ರ ದಿಂದ ದೆಹಲಿಯವೆರೆಗೆ ಎಐಕೆಎಸ್‌ ನೇತೃತ್ವದಲ್ಲಿ ನಡೆದ ಜಾಥಾ

ಜನವರಿ 26, 2021 ರಂದು, ಗಣರಾಜ್ಯೋತ್ಸವ ದಿನದಂದು ಟ್ರ್ಯಾಕ್ಟರ್‌ ಪರೇಡ್‌ ನಡೆಸುತ್ತಾರೆ.  ಸಾವಿರಾರು ಟ್ರಾಕ್ಟರ್ ಗಳ ಪರೇಡ್‌ ನಡೆಯುತ್ತೆ. ಲಕ್ಷಾಂತರ ರೈತರು ಈ ಪರೇಡ್‌ ನಲ್ಲಿ ಭಾಗವಹಿಸುತ್ತಾರೆ.  ಅದರಲ್ಲಿ ಒಂದು ಗುಂಪು ಐತಿಹಾಸಿಕ ಕೆಂಪು ಕೋಟೆಯನ್ನು ಪ್ರವೇಶಿಸಿ  ಸಿಖ್‌ ಧ್ವಜವನ್ನು ಕೆಂಪು ಕೋಟೆಯ ಮೇಲೆ ಹಾರಿಸುವ ಕ್ರಿಯೆ ನಡೆಯಿತು.ನಟ ದೀಪ್‌ ಸಿಧು ಆ ಧ್ವಜವನ್ನು ಹಾರಿಸಿದ್ದು ಎಂಬ ಆರೋಪ ಕೇಳಿ ಬರುತ್ತದೆ.  ರೈತ ಮುಖಂಡರು ದೀಪ್‌ ಸಿಧುಗೂ ರೈತರ ಹೋರಾಟಕ್ಕೂ ಸಂಭಧವಿಲ್ಲ ಎಂದು ಸಪ್ಷ್ಪಡಿಸುತ್ತಾರೆ. ಆತ ಬಿಜೆಪಿಗೆ ಸೇರಿದ ವ್ಯಕ್ತಿ, ಹೋರಾಟವನ್ನು ಹತ್ತಿಕ್ಕುವುದಕ್ಕಾಗಿ ಕೇಂದ್ರ ಸರಕಾರ ಈ ರೀತಿಯ ಪಿತೂರಿಯನ್ನು ಮಾಡಿದೆ ಎಂದು ರೈತರು ಆರೋಪಿಸುತ್ತಾರೆ.   2019 ರ ಲೋಕಸಭಾ ಚುನಾವಣೆಯಲ್ಲಿ ಗುರುದಾಸ್‌ಪುರದಿಂದ ಬಿಜೆಪಿ ಯಿಂದ ಸ್ಪರ್ಧಿಸಿದ್ದ ಸನ್ನಿ ಡಿಯೋಲ್ ಪರ ಪ್ರಚಾರವನ್ನು ನಡೆಸಿದ್ದು, ಮೋದಿ, ಅಮಿತ್‌‌ ಷಾ ರವರ ಜೊತೆಗಿನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪೋಟೊ, ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತವೆ.

ದೆಹಲಿಯ ಮೂರು ಗಡಿಗಳಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರ ಶಿಬಿರಗಳ ಸುತ್ತ ಫೆಬ್ರವರಿ ತಿಂಗಳಲ್ಲಿ  ಹೋರಾಟವನ್ನು ಹತ್ತಿಕ್ಕುವುದಕ್ಕಾಗಿ ಮತ್ತು ರೈತರ ಹೋರಾಟಕ್ಕೆ ಜನರು ಬಾರದಂತೆ  ಕಾಂಕ್ರೀಟ್‌ ಸುರಿದು, ಒಂದು ಅಡಿಗೂ ಹೆಚ್ಚು ಉದ್ದದ ಮೊನಚಾದ ಸಾವಿರಾರು ಸರಳುಗಳನ್ನು ನೆಡಲಾಯಿತು. ರೈತರ ಶಿಬಿರಗಳ ಸುತ್ತ ಹಲವು ಸುತ್ತಿನ ಮುಳ್ಳುತಂತಿ ಬೇಲಿಗಳನ್ನು ನಿರ್ಮಿಸಲಾಯಿತು.. ದೆಹಲಿ-ಉತ್ತರಪ್ರದೇಶ ಗಡಿಯ ಗಾಜಿಪುರದಲ್ಲಿ ರೈತರ ಶಿಬಿರದ ಸುತ್ತ ಮೂರು ಅಡಿಗೂ ಹೆಚ್ಚು ಎತ್ತರದ ಕಾಂಕ್ರೀಟ್‌ ಬ್ಲಾಕ್‌ಗಳನ್ನು ಜೋಡಿಸಿ, ಮಧ್ಯೆ ಕಾಂಕ್ರೀಟ್ ಸುರಿದರು.. ರೈತರು ಪ್ರತಿಭಟನೆ ನಡೆಸುತ್ತಿರುವ ಸ್ಥಳದ ಸುತ್ತ ಸಾವಿರಾರು ಸರಳುಗಳನ್ನು ನೆಡಲಾಯಿತು.. ಅವುಗಳ ಹಿಂದೆ ಹತ್ತಾರು ಬ್ಯಾರಿಕೇಡ್‌ಗಳನ್ನು ಜೋಡಿಸಿ, ಅವುಗಳ ಸುತ್ತ ಕಂದಕಗಳನ್ನು ತೋಡಲಾಗಿದೆ. ಅವುಗಳ ಹೊರಗೆ ಟ್ರಕ್‌-ಟಿಪ್ಪರ್‌ಗಳನ್ನು ನಿಲ್ಲಿಸಲಾಗಿದೆ. ಆಹಾರ, ನೀರು, ಅಂತರ್ಜಾಲ ಸೇವೆ, ಶೌಚಾಲಯ ವ್ಯವಸ್ಥೆ ಎಲ್ಲವನ್ನೂ ನಿಲ್ಲಿಸಿ ಹೊರ ಹೋಗದಂತೆ ಯಾರೂ ಒಳಬರದಂತೆ  ಕ್ರೂರ ವ್ಯವಸ್ಥೆಯನ್ನು ಕೇಂದ್ರ ಸರಕಾರ ಸೃಷ್ಟಿ ಮಾಡುತ್ತದೆ.

 

ಮಾರ್ಚ್‌ 26 ರಂದು ರೈತರ ಹೋರಾಟಕ್ಕೆ ನಾಲ್ಕು ತಿಂಗಳು ತುಂಬಿದ ಪ್ರಯುಕ್ತ ಮತ್ತೆ ಭಾರತ್‌ ಬಂದ್‌ ನಡೆಸಲಾಗುತ್ತದೆ. ಮೊದಲಿನಂತೆ ಆಗಲೂ ಕೂಡ ದೇಶವ್ಯಾಪಿ ಉತ್ತಮ ಬೆಂಬಲ ವ್ಯಕ್ತವಾಗುತ್ತದೆ. ಮಹಾಪಂಚಾಯತ್‌ ಗಳ ಮೂಲಕ ರೈತರ  ಹೋರಾಟವನ್ನು ಹಳ್ಳಿ ಹಳ್ಳಿಗೆ ಕೊಂಡೊಯ್ಯುವ ಕೆಲಸ ನಡೆಯುತ್ತಿದೆ. ಇವತ್ತಿಗೂ ದೆಹಲಿಯಲ್ಲಿ ಕೃಷಿಕಾಯ್ದೆವಿರುದ್ಧ ರೈತರು ಹೋರಾಟ ನಡೆಸುತ್ತಿದ್ದಾರೆ. ಕೋವಿಡ್‌ ನಿಯಮಗಳನ್ನು ಜಾರಿ ಮಾಡುವ ಮೂಲಕ ಮಾದರಿಯ ಚಳುವಳಿಯನ್ನು ನಡೆಸಲಾಗುತ್ತಿದೆ.

ಹೋರಾಟದಲ್ಲಿ ಪ್ರಮುಖವಾಗಿ ಗಮನ ಸೆಳೆದ್ದು, ಲಂಗರ್  ಅಂದರೆ  ಊಟದ ಮನೆ, ದಿನದ ಇಪ್ಪತ್ತನಾಲ್ಕು ಗಂಟೆಯೂ ಕೆಲಸ ಮಾಡುವ ಹಲವಾರು ಲಂಗರ್‌ಗಳು, ತಾತ್ಕಾಲಿಕ ಅಡಿಗೆಮನೆಗಳು, ವ್ಯವಸ್ಥೆಗೊಂಡಿವೆ. ದೆಹಲಿ ಪೊಲೀಸರು ರೈತರನ್ನು ರಾಜಧಾನಿಗೆ ಪ್ರವೇಶಿಸುವುದನ್ನು ನಿರ್ಬಂಧಿಸಿದಾಗ ಈ ‘ಲಂಗರುಗಳು’ ಹುಟ್ಟಿಕೊಂಡವು. ಅವು ಜಾತಿ, ವರ್ಗ ಅಥವಾ ಧರ್ಮದ ಭೇದವಿಲ್ಲದೆ ಉಚಿತ ಆಹಾರವನ್ನು ಒದಗಿಸುವ ಕೆಲಸವನ್ನು ಮಾಡಿದವು.

ಇನ್ನೂ ಟ್ರ್ಯಾಕ್ಟರ್‌ ಗಳನ್ನು ಮನೆಗಳಾಗಿ ಪರಿವರ್ತಿಸಿಕೊಂಡರು, ದೊಡ್ಡದಾದ ಪ್ಲಾಸ್ಟಿಕ್‌ ಟಾರ್ಪಲ್‌ ಗಳಿಂದ ಮನೆಗಳನ್ನು ನಿರ್ಮಿಸಿಕೊಂಡರು, ಅಗತ್ಯವಾದ ವಿದ್ಯುತ್‌ ಸೌಲಭ್ಯವನ್ನು ಅವರು ಪಡೆದುಕೊಂಡರು. ಇಲ್ಲಿ ಅವರು ವಿದ್ಯತನ್ನು ಕಳ್ಳತನ ಮಾಡಲಿಲ್ಲ. ಬದಲಾಗಿ ವಿದ್ಯತ್‌ ಇಲಾಖೆಯ ಸಹಾಯವನ್ನು ಪಡೆದು ಮೀಟರ್‌ ಅಳವಡಿಸಿಕೊಂಡಿದ್ದಾರೆ, ಮೀಟರ್‌ ಗೆ ಬಂದ್‌ ಬಿಲ್ಲನ್ನು ಕಡ್ಡಾಯವಾಗಿ ಪಾವತಿ ಮಾಡುತ್ತಿದ್ದಾರೆ.  ಆ ಮೂಲಕ ಸ್ವಾಭಿಮಾನದ ಹೋರಾಟ ನಡೆಯುತ್ತಿದೆ.

ಇದನ್ನೂ ಓದಿ : ದೆಹಲಿ ರೈತ ಹೋರಾಟಕ್ಕೆ ಹೆಚ್ಚುತ್ತಿದೆ ಜನ ಬೆಂಬಲ

ವಿರೋಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಹೋರಾಟದ ದಿಕ್ಕನ್ನು ತಪ್ಪಿಸಲು ಪ್ರಯತ್ನ ನಡೆಸಿದಾಗ ಸಿಂಗ್ ಗಡಿಯಲ್ಲಿ, ರೈತರು ಪ್ರತಿಭಟನಾ ಸ್ಥಳದಲ್ಲಿ ಕಣ್ಣಿಡಲು ಎಂಟು ಸಿಸಿಟಿವಿ ಕ್ಯಾಮೆರಾಗಳನ್ನು ಸ್ಥಾಪಿಸಿದ್ದಾರೆ, ” ಈಗ ಸಾಕಷ್ಟು ಜನರು ಬರುತ್ತಿರುವುದರಿಂದ. ಹೊರಗಿನ ಉದ್ದೇಶಗಳನ್ನು ಹೊಂದಿರುವ ಜನರು ಕುತಂತ್ರ ರಚಿಸಲು ಪ್ರಯತ್ನಿಸುವ ಘಟನೆಗಳನ್ನು ತಿಳಿಯುವದಕ್ಕೆ ಇವು ಸಹಾಯ ಮಾಡುತ್ತಿವೆ. ಅಧ್ಯಯನಕ್ಕಾಗಿ ಪುಸ್ಕಗಳನ್ನು ಇಡಲಾಗುತ್ತಿದೆ. ಮಾಧ್ಯಮಗಳು ಹೋರಾಟದ ಅಪಪ್ರಚಾರಕ್ಕೆ ಮುಂದಾದಾಗ ಸ್ವತ: ಫೇಸ್ಬುಕ್‌ ಹಾಗೂ ಯೂಟ್ಯೂಬ್‌ ಮೂಲಕ ಹೋರಾಟದ ಪ್ರಚಾರವನ್ನು ಆರಂಭಿಸುತ್ತಾರೆ. ಫೆಸ್ಬುಕ್‌ ತಾತ್ಕಾಲಿಕವಾಗಿ ಸ್ತಗಿತವಾದಾಗ ಫೆಸ್ಬುಕ್‌ ವಿರುದ್ಧ ಹೋರಾಟ ನಡೆಸಲಾಗುತ್ತದೆ. ಮತ್ತೆ ಪೇಸ್ಬುಕ್‌ ಪೇಜ್‌ ಕ್ರೀಯಾಶೀಲಗೊಳ್ಳುತ್ತದೆ.

ಕೃಷಿಕಾಯ್ದೆಯ ವಿರುದ್ಧ ಹೋರಾಟ ನಡೆಸಿದ ರೈತರಲ್ಲಿ ಇಲ್ಲಿಯವರೆಗೆ 320 ಜನ ರೈತರು ಹುತಾತ್ಮರಾಗಿದ್ದಾರೆ. ರೈತರ ಹೋರಾಟಕ್ಕೆ ಅಂತರಾಷ್ಟ್ರೀಯ ಮಟ್ಟದಲ್ಲೂ ಮನ್ನಣೆ ಸಿಕ್ಕಿದೆ. ಬಾಲಿವುಡ್‌ ನಟರೂ, ಪಾಪ್‌ ಗಾಯಕರೂ ಹೋರಾಟವನ್ನು ಬೆಂಬಲಿಸಿ ಭಾರತ ಸರಕಾರದ ನಡೆಯನ್ನು ವಿರೋಧಿಸಿದ್ದರು.  ವಿರೋಧಿಗಳು ಪ್ರತಿಭಟನೆಯ ಬಗ್ಗೆ ಅಪಪ್ರಚಾರಕ್ಕಾಗಿ ವಿವಿಧ ಬಣ್ಣಗಳನ್ನು ಬಳೆಯಲು ಪ್ರಯತ್ನವನ್ನು ನಡೆಸದರು. ಖಲಿಸ್ತಾನಿಗಳ ಹೋರಾಟ ಎಂದು ಅಪಪ್ರಚಾರ ಮಾಡಿದರು. ಈ ಎಲ್ಲಾ ಅಪಪ್ರಚಾರಗಳನ್ನು ಮೆಟ್ಟಿನಿಂತ ರೈತರು ಕೃಷಿ ಉಳಿವಿಗಾಗಿ ದೊಡ್ಡ ಚಳುವಳಿ ನಡೆಸುತ್ತಿದ್ದಾರೆ.

ಇದನ್ನೂ ಓದಿ : ಕೆಂಪುಕೋಟೆಯಲ್ಲಿ ದಾಂಧಲೆ ನಡೆಸಿದ್ದ ಪ್ರಮುಖ ಆರೋಪಿ ದೀಪ್ ಸಿಧು ಬಂಧನ

ಕೇಂದ್ರ ಸರಕಾರ ರೈತರೊಟ್ಟಿಗೆ 12 ಬಾರಿ ಸಭೆ ನಡೆಸಿದೆ. ಸಭೆಗಳು ವಿಫಲಗೊಂಡಿವೆ. ಸುಪ್ರೀಂಕೋರ್ಟ್‌ ಮಧ್ಯಪ್ರವೇಶದಿಂದಾಗಿ 18 ತಿಂಗಳೂ ಕಾಯ್ದೆಗಳನ್ನು ತಾತ್ಕಾಳೀಖೌಆಗಿ ತಡೆಹಿಡಯಲಾಗಿದೆ. ಕಾಯ್ದೆ ರದ್ದಾಗುವವರೆಗೂ ಹೋರಾಟವನ್ನು ಹಿಂತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ರೈತರು ಕೇಂದ್ರಕ್ಕೆ ಖಡಕ್‌ ಎಚ್ಚರಿಕೆಯನ್ನು ಕೊಟ್ಟಿದ್ದಾರೆ. ಸಂಯುಕ್ತ ಕಿಸಾನ್‌ ಮೋರ್ಚಾ ಇದೇ ಮೇ 10 ರಂದು ದೆಹಲಿಯ ಸಿಂಘು ಗಡಿಯಲ್ಲಿ `ರೈತರ ರಾಷ್ಟ್ರೀಯ ಸಮಾವೇಶ’ವನ್ನು ಹಮ್ಮಿಕೊಂಡಿದೆ.

ಭಾರತದ ಮೊದಲ ಸ್ವಾತಂತ್ರ್ಯ ಸಂಗ್ರಾಮ ಆರಂಭವಾದದ್ದು ಮೇ 10, 1857 ರಂದು. ರೈತರ ನಾಯಕತ್ವದಲ್ಲಿ ನಡೆದ ಈ ಸ್ವಾತಂತ್ಯ್ರ ಸಂಗ್ರಾಮದಲ್ಲಿ ರೈತರ ಭಾಗವಹಿಸುವಿಕೆ ಗಮನಾರ್ಹವಾಗಿತ್ತು. ಈ ನಿಟ್ಟಿನಲ್ಲಿ ಅದೇ ದಿನದಂದೂ ರಾಷ್ಟ್ರೀಯ ರೈತ ಸಮಾವೇಶವನ್ನು ಎಸ್‌ಕೆಎಂ ಆಯೋಜಿಸಿದೆ.  ರೈತರ ಜೊತೆ ಸರಕಾರ ಆಟವಾಡುವುದರ ಬದಲು ಕೃಷಿಕಾಯ್ದೆಯನ್ನು ರದ್ದು ಮಾಡಿ ಕೃಷಿಯನ್ನು ಹಾಗೂ ರೈತರನ್ನು ಉಳಿಸಲು ಮುಂದಾಗಬೇಕಿದೆ.

Donate Janashakthi Media

Leave a Reply

Your email address will not be published. Required fields are marked *