ಟೆಕ್ರಿ ಗಡಿಗಳಲ್ಲಿ ಶಾಶ್ವತ ಮನೆ ನಿರ್ಮಿಸಿದ ರೈತರ ಆಂದೋಲನ

ನವದೆಹಲಿ : ರಾಷ್ಟ್ರದ ರಾಜಧಾನಿಯ ಗಡಿಗಳಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆಯು ಮತ್ತಷ್ಟು ತೀವ್ರತೆಯನ್ನು ಪಡೆಯುತ್ತಿದ್ದು, ದೀರ್ಘಾವಧಿ ನಡೆಯಲಿರುವ ಈ ಧರಣಿಯನ್ನು ಮತ್ತಷ್ಟು ತೀವ್ರಗೊಳಿಸಲು ಹರಿಯಾಣದ ಟಿಕ್ರಿ ಗಡಿಯಲ್ಲಿ 2000 ಮನೆಗಳನ್ನು ಪ್ರತಿಭಟನಾಕಾರರು ನಿರ್ಧರಿಸದ್ಧಾರೆಂದು ಎಎನ್‌ಐ ಸುದ್ಧಿಸಂಸ್ಥೆ ವರದಿ ಮಾಡಿದೆ.

ಕೇಂದ್ರದ ಬಿಜೆಪಿ ಸರಕಾರ ಜಾರಿಗೊಳಿಸಲು ಹೊರಟಿರುವ ಕೃಷಿ ಕಾನೂನುಗಳನ್ನು ರದ್ದುಪಡಿಸಬೇಕೆಂದು ತೀವ್ರರೀತ ಹೋರಾಟದಲ್ಲಿ ತೊಡಗಿರುವ ರೈತರು ಈಗಾಗಲೇ ಶಾಶ್ವತವಾದ 25 ಇಟ್ಟಿಗೆ ಮನೆಗಳನ್ನು ನಿರ್ಮಿಸಿದ್ದಾರೆ.

ಪ್ರತಿಭಟನಾ ಧರಣಿಯು ಐದು ತಿಂಗಳುಗಳಿಂದ ನಡೆಯುತ್ತಿದ್ದು ಕಿಸಾನ್‌ ಸಂಘರ್ಷ ಸಮಿತಿಯು ಹೋರಾಟ ಮುಂದುವರೆದಿದೆ  ಟಿಕ್ರಿ ಗಡಿಯಲ್ಲಿ ಈಗಾಗಲೇ ಸುಮಾರು 25 ಮನೆಗಳನ್ನು ನಿರ್ಮಿಸಲಾಗಿದೆ. ಇದಕ್ಕಾಗಿ ಸುಮಾರು 20 ರಿಂದ 25 ಸಾವಿರ ವೆಚ್ಚಾಗಿದೆ. ಕೇವಲ ನಿರ್ಮಾಣ ಸಾಮಗ್ರಿಗಳಿಗಾಗಿ ಮಾತ್ರ ಹಣ ಪಾವತಿ ಮಾಡಿದ್ದು, ನಿರ್ಮಾಣ ಕೆಲಸದಲ್ಲಿ ತೊಡಗಿರುವ ಕಾರ್ಮಿಕರು ಇದಕ್ಕೆ ಕೂಲಿಯನ್ನು ಪಡೆದಿರುವುದಿಲ್ಲ.

ನವೆಂಬರ್‌ 26ರಿಂದ ಚಳಿಗಾಲದಲ್ಲಿ ಪ್ರಾರಂಭವಾದ ಪ್ರತಿಭಟನೆಯನ್ನು ಛಿದ್ರಗೊಳಿಸಲು ದೊಡ್ಡ ಮಟ್ಟದ ನಿರ್ಬಂಧಗಳನ್ನು ಹೇರಿತು. ರೈತರ ಆಂದೋಲನ ದೆಹಲಿ ಪ್ರವೇಶಿಸದಂತೆ ರಸ್ತೆಗಳನ್ನು ಅಗೆದರು, ಮೊಳೆಗಳನ್ನು ಹೊಡೆದರು. ಅಂತರ್ಜಾಲ, ವಿದ್ಯುತ್‌ ಸಂಪರ್ಕವನ್ನು ಸಹ ಕಡಿತಗೊಳಿಸಿದರು. ಇವುಗಳೆಲ್ಲವನ್ನು ಮೆಟ್ಟಿ ಕೇಂದ್ರದ ಕೃಷಿ ಕಾಯ್ದೆಗಳನ್ನು ರದ್ದುಪಡಿಸಬೇಕೆಂದು ನಡೆಯುತ್ತಿರುವ ರೈತರ ಬೃಹತ್‌ ಆಂದೋಲವನ್ನು ಮತ್ತಷ್ಟು ತೀವ್ರಗೊಳಿಸಿರುವ ಪ್ರತಿಭಟನಾಕಾರರು ಧರಣಿ ಸ್ಥಳಗಳಲ್ಲಿ ಶಾಶ್ವತವಾದ ಮನೆಗಳನ್ನು ನಿರ್ಮಿಸಲು ಮುಂದಾಗಿದ್ದಾರೆ.

ರಾಕೇಶ್‌ ಟಿಕಾಯತ್‌ ರವರು ಮಾತನಾಡಿ ಪ್ರತಿಪಕ್ಷಗಳು ಹೋರಾಟಕ್ಕೆ ದೊಡ್ಡ ಮಟ್ಟದ ಬೆಂಬಲ ನೀಡುತ್ತಿಲ್ಲ. ಏಕೆಂದರೆ, ಈ ಹಿಂದೆ ಅವರು ಅನುಸರಿಸುತ್ತಿರುವ ನೀತಿಗಳನ್ನು ಈಗಿನ ಸರಕಾರ ಮಾಡುತ್ತಿದೆ. ಅಲ್ಲದೆ, ನರೇಂದ್ರ ಮೋದಿ ಸರಕಾರವು ಪ್ರತಿಪಕ್ಷದ ಕೆಲವು ನಾಯಕರ ಮೇಲೆ ಗುರಿಯಾಗಿಸಬಹುದೆಂಬ ಭಯ ಮತ್ತು ತನಿಖೆ ಕೈಗೊಳ್ಳಬಹುದೆಂಬ ಹಿನ್ನೆಲೆಯಲ್ಲಿ ಪ್ರತಿಪಕ್ಷಗಳು ಬೆಂಬಲ ನೀಡುತ್ತಿಲ್ಲವೆಂದರು.

ರಾಜಸ್ಥಾನದ ಜೋಧಪುರದಲ್ಲಿ ನಡೆದ ಮಹಾಪಂಚಾಯತ್‌ ನಲ್ಲಿ ಮಾತನಾಡಿದ ಭಾರತೀಯ ಕಿಸಾನ್‌ ಯೂನಿಯನ್‌ ಮುಖಂಡರು ಸರಕಾರದೊಂದಿಗಿನ ಮಾತುಕತೆಯ ಬಗ್ಗೆ ಪ್ರಸ್ತಾಪಿಸುತ್ತಾ ದೇಶದಲ್ಲಿ ಸರಕಾರವೇ ಇಲ್ಲ. ಇಬ್ಬರು ವ್ಯಕ್ತಿಗಳ ಕೈಯಲ್ಲಿ ಇಡೀ ಆಡಳಿತ ವ್ಯವಸ್ಥೆ ನಿಂತಿದೆ. ನಮ್ಮ ಹೋರಾಟ ಕೇಂದ್ರ ಸರಕಾರವು ಜಾರಿಗೊಳಿಸಲು ಹೊರಟಿರುವ ಕಾರ್ಪೋರೇಟ್‌ ಪರವಾದ ಕೃಷಿ ಕಾನೂನುಗಳನ್ನು ವಾಪಸ್ಸು ಪಡೆಯುವವರೆಗೂ ಮುಂದುವರೆಯಲಿದೆ ಎಂದು ಆರೋಪಿಸಿದರು.

Donate Janashakthi Media

Leave a Reply

Your email address will not be published. Required fields are marked *