ರೈತರ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ವೈದ್ಯರ ತಂಡ, ಆಮ್ಲಜನಕಗಳು

ನವದೆಹಲಿ: ದೆಹಲಿ ಗಡಿಗಳಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆ ಮುಂದುವರೆದಿದೆ. ಜೊತೆಯಲ್ಲಿ ಅವರೊಂದಿಗೆ ಹೊಸ ಸೇರ್ಪಡೆಯೆಂಬಂತೆ ಕೋವಿಡ್‌ ತುರ್ತು ಪರಿಸ್ಥಿತಿಗಳನ್ನು ನಿಭಾಯಿಸಲು ಎಲ್ಲಾ ಸಿದ್ಧತೆಗಳೊಂದಿಗೆ ಹೋರಾಟವು ಮುಂದುವರೆದಿದೆ.

ಟಿಕ್ರಿ ಮತ್ತು ಸಿಂಗು ಗಡಿಗಳಲ್ಲಿ ಈಗಾಗಲೇ ಕೋವಿಡ್‌ ಸಾಂಕ್ರಾಮಿಕ ರೋಗ ಹರಡದಂತೆ ತಡೆಯಲು ಸೂಕ್ತವಾದ ಸಿದ್ದತೆಗಳನ್ನು ಮಾಡಿಕೊಳ್ಳಲು ಸಲಹೆಗಳನ್ನು ನೀಡಲಾಗುತ್ತಿದೆ. ಪ್ರತಿಭಟನೆಯ ಸ್ಥಳಗಳಲ್ಲಿ ಈಗ ಕೋವಿಡ್‌ ನಿವಾರಣೆಗಾಗಿ ಬಳಸು ಆಕ್ಸಿಜನ್‌ ಗಳು, ವೈದ್ಯಕೀಯ ತಂಡ ಉಳಿಯುವಂತ ಸೂಕ್ತ ವ್ಯವಸ್ಥೆಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಕಿಸಾನ್‌ ಯೂನಿಯನ್‌ ಒಕ್ಕೂಟದ ಮುಖಂಡರು ಹೇಳಿದ್ದಾರೆ.

ಇದನ್ನು ಓದಿ: ಮನರೇಗಾ ಕೆಲಸ ಕಡಿತ: ಪರಿಹಾರಕ್ಕೆ ಆಗ್ರಹಿಸಿ ಹಕ್ಕೊತ್ತಾಯ

ಪ್ರತಿಭಟನೆ ಆರಂಭದಿಂದಲೂ ನಾವು ಕೇಂದ್ರ ಸರಕಾರದ ಜನವಿರೋಧಿ ಪ್ರಮುಖ ಮೂರು ಕೃಷಿ ಕಾಯ್ದೆಗಳ ರದ್ದತಿಗಾಗಿ ಆಗ್ರಹಿಸುತ್ತಿದ್ದೇವೆ. ಅದರೊಂದಿಗೆ ಈಗ ನಾವು ಕೋವಿಡ್‌ ಪರಿಸ್ಥಿತಿಗಳ ಬಗ್ಗೆ ಮತ್ತು ಅದನ್ನು ದೃಢವಾಗಿ ಎದುರಿಸಲು ಬೇಕಾದ ಮುನ್ನೆಚ್ಚರಿಕೆಗಳನ್ನು ಕೈಗೊಳ್ಳಬೇಕಾದ ವಿಚಾರಗಳನ್ನು ಸಹ ಭಾಷಣಗಳಲ್ಲಿ ವ್ಯಕ್ತಪಡಿಸುತ್ತಿದ್ದೇವೆ ಎಂದು ಭಾರತೀಯ ಕಿಸಾನ್‌ ಯೂನಿಯನ್‌ ಮುಖ್ಯಸ್ಥ ಜೋಗಿಂದರ್‌ ಸಿಂಗ್‌ ಹೇಳಿದರು.

ವೈದ್ಯರು ನಮಗೆ ಸೂಕ್ತವಾದ ಮುನ್ನೆಚ್ಚರಿಕೆ ವಹಿಸಿರಿ. ಸದಾ ಬಿಸಿನೀರು ಕುಡಿಯಿರಿ ಮತ್ತು ಗಂಟಲನ್ನು ಸದಾ ಒದ್ದೆಯಾಗಿಟ್ಟುಕೊಳ್ಳಿ, ಉಪವಾಸ ಮಾಡದಿರಿ ಮತ್ತು ಚಹಾ ತಯಾರಿಸುವಾಗ ಏಲಕ್ಕಿ, ಶುಂಠಿ ಸೇರಿದಂತೆ ವಿವಿಧ ಗಿಡಮೂಲಿಕೆಗಳನ್ನು ಬಳಸಲು ಸಲಹೆ ನೀಡಿದ್ದಾರೆ ಎಂದು ಮತ್ತೊಬ್ಬ ರೈತ ಮುಖಂಡ ಜಗ್ಗೀರ್‌ ಸಿಂಗ್‌ ಹೇಳಿದ್ದಾರೆ.

ಇದನ್ನು ಓದಿ: ಆರೋಗ್ಯ ಬಿಕ್ಕಟ್ಟಿನ ನಡುವೆ ಲಸಿಕೆ ಬೆಲೆಯಲ್ಲೂ ಹಗರಣ!

ಪ್ರತಿದಿನ 5-6 ಬಾರಿ ಕೋವಿಡ್‌ ಸುರಕ್ಷತೆಯ ಬಗ್ಗೆ ಎಲ್ಲರಿಗೂ ತಿಳಿಸಲಾಗುತ್ತಿದೆ.

“ಪ್ರತಿಭಟನಾ ನಿರತರಲ್ಲಿ ಯಾರಾದರೂ ಅನಾರೋಗ್ಯಕ್ಕೆ ಒಳಗಾದರೆ ತಕ್ಷಣ ವೈದ್ಯರ ತಂಡ ಹಾಜರಾಗುತ್ತದೆ. ಇದರಿಂದಾಗಿ ವ್ಯಕ್ತಿಗೆ ಯಾವುದೇ ಕೋವಿಡ್ ನಂತಹ ಲಕ್ಷಣಗಳು ಇದೆಯೋ ಇಲ್ಲವೋ ಎಂದು ತಕ್ಷಣದಲ್ಲೇ ತಿಳಿಯುತ್ತದೆ” ಎಂದು ಸಂಘಟನೆಯ ಉಪಾಧ್ಯಕ್ಷ ವಸಂತ್ ಸಿಂಗ್ ಕೋಥಾ ಗುರು ಕಾ ಹೇಳಿದರು. ಇದರಿಂದ “ನಾವು ಪ್ರತಿದಿನ ಪ್ರತಿಭಟನಾ ಸ್ಥಳಕ್ಕೆ ಸ್ಯಾನಿಟೈಸರ್‌ ನ್ನು ಸಿಂಪಡಿಸುತ್ತಿದ್ದೇವೆ ಮತ್ತು ಸೊಳ್ಳೆಗಳ ಸಂತಾನೋತ್ಪತ್ತಿಯಾಗದಂತೆ ತಡೆಯಲಾಗುತ್ತಿದೆ. ಎಲ್ಲರೂ ಸಾಮೂಹಿಕವಾಗಿ ಇದರಲ್ಲಿ ಭಾಗವಹಿಸುತ್ತಿದ್ದಾರೆʼʼ ಎಂದು ಹೇಳಿದರು.

ಡಿಸೆಂಬರ್‌ನಿಂದ ಇದುವರೆಗೆ ಟಿಕ್ರಿಗಳಲ್ಲಿ ನಡೆಯುತ್ತಿರುವ ಪ್ರತಿಭಟನಾ ಸ್ಥಳಕ್ಕೆ ತಂಡೋಪತಂಡವಾಗಿ ರೈತರು ಆಗಮಿಸುತ್ತಿದ್ದಾರೆ. ಇದುವರೆಗೆ 13 ತಂಡಗಳು ಭಾಗವಹಿಸಿವೆ ಎಂದು ನಿವೃತ್ತ ಸಿವಿಲ್ ಸರ್ಜನ್ ಡಾ. ದಲೇರ್ ಸಿಂಗ್ ಮುಲ್ತಾನಿ ಹೇಳಿದರು.

“ನಾವು ಕೋವಿಡ್ ಹರಡುವಿಕೆಯ ಬಗ್ಗೆ ಕಾಳಜಿ ವಹಿಸುತ್ತಿದ್ದೇವೆ ಮತ್ತು ವೈರಸ್ ಹರಡುವಿಕೆಯ ವಿರುದ್ಧ ಅನುಸರಿಸಬೇಕಾದ ಎಲ್ಲಾ ವಿಷಯಗಳ ಬಗ್ಗೆ ಈಗಾಗಲೇ ಕಾರ್ಯಕರ್ತರಿಗೆ ಅರಿವು ಮೂಡಿಸಿದ್ದೇವೆ. ಯಾವುದೇ ತುರ್ತು ಪರಿಸ್ಥಿತಿ ಎದುರಾದಲ್ಲಿ ಕೂಡಲೇ ಸಹಾಯ ಕೈಗೊಳ್ಳುತ್ತೇವೆ. ಪ್ರತಿಭಟನಾಕಾರರು ಇಲ್ಲಿಯವರೆಗೆ ಸುರಕ್ಷಿತವಾಗಿರುವುದರಿಂದ ಇಲ್ಲಿ ಹೆಚ್ಚಿನ ವ್ಯವಸ್ಥೆಗಳ ಅಗತ್ಯವಿಲ್ಲ ಮತ್ತು ಪ್ರತಿಯೊಬ್ಬರೂ ಮಾಸ್ಕ್‌ ಧರಿಸಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ಬಗ್ಗೆ ನಾವೆಲ್ಲಾ ಗಮನ ನೀಡಲಾಗಿದೆʼʼ ಎಂದು ಡಾ. ದಲೇರ್ ಸಿಂಗ್ ಮುಲ್ತಾನಿ  ಹೇಳಿದರು.

ಇದನ್ನು ಓದಿ: ಕೋವಿಡ್‌ ಬಿಕ್ಕಟ್ಟು: ದೇಶದಲ್ಲಿ 23 ಕೋಟಿ ಜನ ಬಡತನ ರೇಖೆಗಿಂತ ಕೆಳಗಿದ್ದಾರೆ

ಮತ್ತೊಬ್ಬ ಹೋರಾಟದ ಮುಖಂಡರಾದ “ನಮ್ಮ ರಾಷ್ಟ್ರೀಯ ನಾಯಕರ ಸಲಹೆಯಂತೆ ಹೋರಾಟದ ಸ್ಥಳಕ್ಕೆ 9000 ದಿಂದ 10,000ಕ್ಕೆ ಮೀರದಂಗೆ ರೈತರು ಸೇರುತ್ತಿದ್ದಾರೆ. ಕೋವಿಡ್‌ ಇಲ್ಲದಿದ್ದರೆ, ಪಂಚಾಬ್‌ನಿಂದಲೇ ನಾವು ಪ್ರತಿದಿನ 50 ಸಾವಿರಕ್ಕೂ ಹೆಚ್ಚಿನ ರೈತರು ಆಗಮಿಸುತ್ತಿದ್ದರುʼʼ ಎಂದು ಹೇಳಿದರು.

“ಸಿಂಗು ಗಡಿಯಲ್ಲಿ, ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ) ತಾತ್ಕಾಲಿಕ ಆಸ್ಪತ್ರೆಯನ್ನು ಸ್ಥಾಪಿಸಿದೆ ಅಲ್ಲದೆ ಕೋಕಿಡ್‌-19 ಬಗ್ಗೆ ಜನರಿಗೆ ಅರಿವು ಮೂಡಿಸಲಾಗುತ್ತಿದೆ ಎಂದು ಬಿಕು (ದೋಬಾ) ಪ್ರಧಾನ ಕಾರ್ಯದರ್ಶಿ ಸತ್ನಮ್ ಸಿಂಗ್ ಸಾಹ್ನಿ ಹೇಳಿದರು. ಸಿಂಗುವಿನಲ್ಲಿ ಹಲವಾರು ಆರೋಗ್ಯ ಶಿಬಿರಗಳನ್ನು ಸ್ಥಾಪಿಸಲಾಗಿದೆ. ಇಲ್ಲಿ ಯಾವುದೇ ಕಾಯಿಲೆ ಕಾಣಿಕೊಳ್ಳದಂತೆ ಎಚ್ಚರಿಕೆ ವಹಿಸಲಾಗಿದೆ. ಪ್ರತಿಭಟನಾ ಪ್ರದೇಶವನ್ನು ನೈರ್ಮಲ್ಯ ಮತ್ತು ಸ್ವಚ್ಛತೆಯ ಕಡೆ ಗಮನ ಹರಿಸಲಾಗುತ್ತಿದೆ ಮತ್ತು ಪ್ರತಿಭಟನೆಯು ಮುಂದುವರೆದಿದೆ.

“ಕೋವಿಡ್ಹೆಚ್ಚಿನ ಅಪಾಯಗಳು ಇದ್ದರೂ ಸಹಪ್ರತಿಭಟನಾಕಾರರನ್ನುರೈತರುನಿರ್ಲಕ್ಷಿಸುತ್ತಿರುವಕೇಂದ್ರಕ್ಕೆನಾಚಿಕೆಗೇಡಿನಸಂಗತಿ.ಆದರೆಕೋವಿಡ್ಹರಡುವಿಕೆಯುರೈತರಿಗೆತಮ್ಮನಿಜವಾದಹಕ್ಕುಗಳನ್ನುಪಡೆಯುವುದನ್ನುತಡೆಯಲುಸಾಧ್ಯವಿಲ್ಲ.ಪ್ರತಿಭಟನೆಯಲ್ಲಿಭಾಗವಹಿಸಲುದೋಬಾಪ್ರದೇಶದ 200 ವಾಹನಗಳು ದೆಹಲಿ ಗಡಿಪ್ರದೇಶವನ್ನು ತಲುಪಿದವು.

ರೈತರು ಮತ್ತಷ್ಟು ದೃಢತೆಯಿಂದ ಪ್ರತಿಭಟನೆ ಮುಂದುವರೆಸಿದ್ದು ಕೋವಿಡ್‌ ನಂತಹ ಯಾವುದೇ ಸಾಂಕ್ರಾಮಿಕ ರೋಗದ ಹೊರತಾಗಿಯೂ ರೈತರು ಒಂದು ಹೆಜ್ಜೆಯನ್ನು ಹಿಂದಕ್ಕೆ ಇರುವುದಿಲ್ಲ ಎಂಬ ಆತ್ಮವಿಶ್ವಾಸವನ್ನು ಪ್ರತಿಭಟನಾಕಾರರು ವ್ಯಕ್ತಪಡಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *