ಕಂದಾಯ ಇಲಾಖೆ: ನಕಲಿ ಸ್ಟ್ಯಾಂಪ್ ಪೇಪರ್‌ಗಳ ಹಾವಳಿ ತಡೆಗೆ ಎ. 1ರಿಂದ ಡಿಜಿಟಲ್ ಪಾವತಿ ಪದ್ದತಿ ಜಾರಿಗೆ

ಬೆಂಗಳೂರು: ನಕಲಿ ಸ್ಟ್ಯಾಂಪ್ ಪೇಪರ್‌ಗಳ  ಹಾವಳಿ ಹೆಚ್ಚುತ್ತಿರುವುದನ್ನು ಪತ್ತೆ ಹಚ್ಚಿರುವ ಕಂದಾಯ ಇಲಾಖೆಯು ಎ. 1ರಿಂದ ಡಿಜಿಟಲ್ ಪಾವತಿ ಪದ್ದತಿ ಜಾರಿಗೆ ನಿರ್ಧರಿಸಿದ್ದು, ಸಬ್‌ ರಿಜಿಸ್ಟ್ರಾರ್‌ಗಳ ವಿಶೇಷ ಅಧಿಕಾರವನ್ನು ಮೊಟಕುಗೊಳಿಸಲು ಕಾನೂನು ತಿದ್ದುಪಡಿಗೆ ನಿರ್ಧರಿಸಿದೆ.

ನೋಂದಣಿಯೇತರ ಒಡಂಬಡಿಕೆಗಳಿಗಾಗಿ ಬಳಸುವ ಸ್ಟ್ಯಾಂಪ್ ಪೇಪರ್‌ಗಳ ನಕಲಿ ಹಾವಳಿ ಹೆಚ್ಚುತ್ತಿದೆ. ಸುಮಾರು 54 ಬಗೆಯ ನೋಂದಣಿಯೇತರ ಒಡಂಬಡಿಕೆ ಗಳಿಗಾಗಿ ಸ್ಟ್ಯಾಂಪ್ ಪೇಪರ್‌ಗಳು ಬಳಕೆಯಾಗುತ್ತವೆ. ಮನೆ, ವಾಣಿಜ್ಯ ಮಳಿಗೆ ಒಪ್ಪಂದ ಪತ್ರ, ಸಾಲ, ಟೆಂಡರ್‌, ಸಾಮಗ್ರಿ ಸರಬರಾಜು ಸಹಿತ ಅನೇಕ ವಿಧದ ದಸ್ತಾವೇಜುಗಳು, ಎಸ್ಕಾಂಗಳಿಂದ ಗೃಹಬಳಕೆ ಹಾಗೂ ವಾಣಿಜ್ಯ ವಿದ್ಯುತ್ ಸಂಪರ್ಕ ಸೇರಿ ಸರಕಾರದ ಜತೆಗೆ ನಡೆಸುವ ಎಲ್ಲ ವಿಧದ ಒಡಂಬಡಿಕೆ ಸಂದರ್ಭದಲ್ಲಿ ಸ್ಟ್ಯಾಂಪ್ ಪೇಪರ್ ಅಗತ್ಯವಾಗಿ ಬೇಕಾಗುತ್ತದೆ.

ಇದನ್ನೂ ಓದಿ : ಸಮಗ್ರ, ಸಮೃದ್ಧ, ಸೌಹಾರ್ದ ಕರ್ನಾಟಕಕ್ಕಾಗಿ ಡಿಸೆಂಬರ್ 29 ರಿಂದ ಸಿಪಿಐ(ಎಂ) 24 ನೇ ರಾಜ್ಯಸಮ್ಮೇಳನ

ಆದರೆ “ತೆಲಗಿ ಛಾಪಾ ಕಾಗದ ಹಗರಣ’ ಮಾದರಿಯಲ್ಲಿ ಒಂದು ದಶಕದಿಂದ ಸ್ಟ್ಯಾಂಪ್ ಪೇಪರ್‌ಗಳ ಕಲರ್ ಝರಾಕ್ಸ್ ತೆಗೆದು ಅದಕ್ಕೆ ಸಬ್ ರಿಜಿಸ್ಟ್ರಾರ್‌ಗಳ ಸೀಲು-ಸಹಿ ಹಾಕಿ ಸರಕಾರದ ಆದಾಯಕ್ಕೆ ದೋಖಾ ಮಾಡುತ್ತಿರುವುದನ್ನು ಕಂದಾಯ ಇಲಾಖೆ ಪತ್ತೆ ಹಚ್ಚಿದೆ.

ಇದರಿಂದ ರಾಜ್ಯದ ಬೊಕ್ಕಸಕ್ಕೆ ಸುಮಾರು 3ರಿಂದ 4 ಸಾವಿರ ಕೋಟಿ ರೂ.ಗೂ ಮೇಲ್ಪಟ್ಟು ವಾರ್ಷಿಕ ಆದಾಯ ನಷ್ಟವಾಗುತ್ತಿದೆ ಎಂದು ಆಡಿಟ್ ಸಂದರ್ಭದಲ್ಲಿ ಅಂದಾಜಿಸಲಾಗಿದ್ದು, ಡಿಜಿಟಲ್ ಪಾವತಿ ವ್ಯವಸ್ಥೆ ಜಾರಿಗೆ ತಂದು ಚಲನ್ ನೀಡುವ ಮೂಲಕ ಸ್ಟ್ಯಾಂಪ್ ಪೇಪರ್ ದುರ್ಬಳಕ ತಡೆಯುವ ಬಗ್ಗೆ ಕಂದಾಯ ಇಲಾಖೆ ನಿರ್ಧರಿಸಿದ. ಸಚಿವ ಕೃಷ್ಣ ಬೈರೇಗೌಡ ಅವರೇ ಖುದ್ದಾಗಿ ಈ ವ್ಯವಸ್ಥೆ ಜಾರಿ ಬಗ್ಗೆ ಚಿಂತನೆ ನಡೆಸಿದ್ದು, ಎ. 1ರಿಂದ ಅನುಷ್ಠಾನಕ್ಕೆ ಬರುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ನೋಡಿ : ಅಂಬೇಡ್ಕರ್ ನಮಗೆ ವ್ಯಸನ‌ ಅಲ್ಲ, ನಿತ್ಯ ಸ್ಮರಣೆ! -ಸಂತೋಷ್ ಲಾಡ್ Janashakthi Media

Donate Janashakthi Media

Leave a Reply

Your email address will not be published. Required fields are marked *