ಫ್ಯಾಕ್ಟ್‌ಚೆಕ್: ಹಿಂದೂಗಳಿಂದ ಚಪ್ಪಲಿ ಕ್ಲೀನ್ ಮಾಡಿಸುತ್ತೇನೆಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆನ್ನುವುದಕ್ಕೆ ಆಧಾರಗಳಿಲ್ಲ!

ದೇಶದ ಪ್ರಮುಖ ವಿರೋಧ ಪಕ್ಷದ ನಾಯಕಿ ಮಮತಾ ಬ್ಯಾನರ್ಜಿ ಅವರು, ಮುಸ್ಲಿಮರು ಮತ್ತು ದಲಿತರು ಒಗ್ಗಟ್ಟಾದರೆ ಹಿಂದೂಗಳ ಕೈಯಲ್ಲಿ ಚಪ್ಪಲಿ ಕ್ಲೀನ್ ಮಾಡಿಸುತ್ತೇವೆ ಎಂದು ಹೇಳಿದ್ದಾಗಿ ಪ್ರತಿಪಾದಿಸಿ ಹಲವಾರು ಹಿಂದಿ ಪತ್ರಿಕೆಗಳ ಕಟ್ಟಿಂಗ್‌ಗಳು ಇರುವ ಚಿತ್ರವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಚಿತ್ರದಲ್ಲಿ ಇರುವ ಪೇಪರ್ ಕಟ್ಟಿಂಗ್‌ಗಳಲ್ಲಿ ವಿಪಕ್ಷಗಳ ಹಲವು ನಾಯಕರ ಬಗ್ಗೆ ಮಾತನಾಡಿದ್ದಾರೆನ್ನುವ ಹೆಡ್‌ಲೈನ್‌ಗಳು ಹಿಂದಿಯಲ್ಲಿ ಇದ್ದು, ಅದನ್ನು ಕನ್ನಡಕ್ಕೆ ಅನುವಾದ ಮಾಡಿ, ಅವರೆಲ್ಲರೂ ಹಿಂದೂ ವಿರೋಧಿ ಹೇಳಿಕೆ ನೀಡಿದ್ದಾರೆ ಎಂಬಂತೆ ಬಿಂಬಿಸಲಾಗುತ್ತಿದೆ. ಫ್ಯಾಕ್ಟ್‌ಚೆಕ್

ಮುಖ್ಯವಾಗಿ ವಾಟ್ಸಪ್ ಮತ್ತು ಫೇಸ್‌ಬುಕ್‌ನಲ್ಲಿ ಈ ಚಿತ್ರವನ್ನು ಹಂಚಲಾಗುತ್ತಿದೆ. ವೈರಲ್ ಮಾಡುತ್ತಿರುವವರಲ್ಲಿ ಬಿಜೆಪಿ ಅಭಿಮಾನಿಗಳು ಮತ್ತು ಕಾರ್ಯಕರ್ತರೆ ಮುಂಚೂಣಿಯಲ್ಲಿದ್ದಾರೆ. Dharmendra Kumar P ಎಂಬ ಬಿಜೆಪಿ ಬೆಂಬಲಿಗ ಫೇಸ್‌ಬುಕ್ ಖಾತೆಯೊಂದು ಸಮಾಲೋಚನೆ ಎಂಬ ಫೇಸ್‌ಬುಕ್ ಗ್ರೂಪ್‌ನಲ್ಲಿ ಇದನ್ನು ಹಂಚಿಕೊಂಡಿದ್ದಾರೆ.

ವೈರಲ್ ಚಿತ್ರದ ಜೊತೆಗೆ ಬರಹ ಕೂಡಾ ಇದ್ದು, ಮಮತಾ ಬ್ಯಾನರ್ಜಿ ಅವರು, “ಮುಸ್ಲಿಮರು ಮತ್ತು ದಲಿತರು ಒಂದಾದರೆ ಹಿಂದೂಗಳ ಕೈಯಲ್ಲಿ ಚಪ್ಪಲಿ ಕ್ಲೀನ ಮಾಡಿಸುತ್ತೇವೆ” ಎಂದು ಹೇಳಿದ್ದಾಗಿ ವೈರಲ್ ಸಂದೇಶ ಪ್ರತಿಪಾದಿಸುತ್ತದೆ.

ಫ್ಯಾಕ್ಟ್‌ಚೆಕ್ | ವಿಪಕ್ಷಗಳ ನಾಯಕರು ಹೇಳಿಕೆಯನ್ನು ತಪ್ಪಾಗಿ ಬಿಂಬಿಸಿ ಸುಳ್ಳು ಹರಡುತ್ತಿರುವ ಬಿಜೆಪಿ ಬೆಂಬಲಿಗರು | FactCheck | BJP supporters are spreading lies by misrepresenting the statement of opposition leaders
ವೈರಲ್ ಪೋಸ್ಟ್‌ನ ಪೂರ್ತಿ ಹೇಳಿಕೆಯ ಫ್ಯಾಕ್ಟ್‌ಚೆಕ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ.

ಫೇಸ್‌ಬುಕ್‌ನಲ್ಲಿ ಇದನ್ನು ಹಲವಾರು ಜನರು ಹಂಚುತ್ತಿದ್ದು ಅವುಗಳನ್ನು ಇಲ್ಲಿ ನೀವು ನೋಡಬಹುದಾಗಿದೆ. ವಾಟ್ಸಪ್‌ನಲ್ಲಿ ಕೂಡಾ ಇದನ್ನು ಬಿಜೆಪಿ ಬೆಂಬಲಿಗರು ಹಂಚುದ್ದಾರೆ. ಈ ಬಗ್ಗೆ ಫ್ಯಾಕ್ಟ್‌ಚೆಕ್ ಮಾಡುವಂತೆ ಜನಶಕ್ತಿ ಮೀಡಿಯಾದ ಫ್ಯಾಕ್ಟ್‌ಚೆಕ್‌ ವಾಟ್ಸಪ್‌ ಗ್ರೂಪ್‌ಗೆ ವಿನಂತಿಗಳು ಬಂದಿವೆ. ಜನಶಕ್ತಿ ಫ್ಯಾಕ್ಟ್‌ಚೆಕ್ ವಾಟ್ಸಪ್‌ ಗ್ರೂಪ್‌ ಸೇರಲು ಇಲ್ಲಿ ಕ್ಲಿಕ್ ಮಾಡಿ.

ಫ್ಯಾಕ್ಟ್‌ಚೆಕ್ | ವಿಪಕ್ಷಗಳ ನಾಯಕರು ಹೇಳಿಕೆಯನ್ನು ತಪ್ಪಾಗಿ ಬಿಂಬಿಸಿ ಸುಳ್ಳು ಹರಡುತ್ತಿರುವ ಬಿಜೆಪಿ ಬೆಂಬಲಿಗರು | FactCheck | BJP supporters are spreading lies by misrepresenting the statement of opposition leaders

ಇದನ್ನೂ ಓದಿ: ಫ್ಯಾಕ್ಟ್‌ಚೆಕ್ | ಈ ವೈರಲ್ ವಿಡಿಯೊದಲ್ಲಿ ತೆವಳುತ್ತಿರುವವರು ಮುಸ್ಲಿಂ ಅಲ್ಲ, ಅದು ಯುಪಿಯದ್ದೂ ಅಲ್ಲ!

ಫ್ಯಾಕ್ಟ್‌ಚೆಕ್:

ವೈರಲ್ ಚಿತ್ರ ಮತ್ತು ಬರಹಗಳಲ್ಲಿ ಒಟ್ಟು 5 ರಾಜಕಾರಣಿಗಳ ಹೇಳಿಕೆಯ ಬಗ್ಗೆ ಹೇಳಲಾಗಿದೆ. ಅದರಲ್ಲಿ ಮಮತಾ ಬ್ಯಾನರ್ಜಿ “ಮುಸ್ಲಿಮರು ಮತ್ತು ದಲಿತರು ಒಂದಾದರೆ ಹಿಂದೂಗಳ ಕೈಯಲ್ಲಿ ಚಪ್ಪಲಿ ಕ್ಲೀನ್ ಮಾಡಿಸುತ್ತೇವೆಎಂದು ಹೇಳಿದ್ದಾರೆ ಎಂದು ಪ್ರತಿಪಾದಿಸಲಾಗಿದೆ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿರುವ ಮಮತಾ ಬ್ಯಾನರ್ಜಿ ಅವರು ಈ ರೀತಿಯಾಗಿ ಹೇಳಿದ್ದಾರೆಯೆ ಎಂದು ನಾವು ಇಂಟರ್‌ನೆಟ್‌ನಲ್ಲಿ ಹುಡುಕಾಡಿದಾಗ, ಈ ರೀತಿಯ ವರದಿ ನಮಗೆ ಎಲ್ಲೂ ಪತ್ತೆಯಾಗಿಲ್ಲ.

ಅನೇಕ ಕೀ ವರ್ಡ್‌ಗಳನ್ನು ಬಳಸಿ ನಾವು ಇಂಗ್ಲಿಷ್, ಬಂಗಾಳಿ ಹಾಗೂ ಹಿಂದಿ ಪತ್ರಿಕೆಗಳ ವರದಿಯನ್ನು ಇಂಟರ್‌ನೆಟ್‌ನಲ್ಲಿ ಹುಡುಕಿದ್ದೇವೆ. ಆದರೆ ಈ ರೀತಿಯಾಗಿ ಮಮತಾ ಬ್ಯಾನರ್ಜಿ ಹೇಳಿರುವ ಬಗ್ಗೆ ನಮಗೆ ಎಲ್ಲೂ ಸುಳಿವು ಸಿಕ್ಕಿಲ್ಲ. 

ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿರುವ ಮಮತಾ ಬ್ಯಾನರ್ಜಿ ಅವರು ಈ ಹೇಳಿಕೆಯನ್ನು ನೀಡಿದ್ದರೆ, ಪ್ರಮುಖ ಪತ್ರಿಕೆಗಳು ಅದನ್ನು ಖಂಡಿತಾ ವರದಿ ಮಾಡಿರುತ್ತಿದ್ದವು. ಆದರೆ ಅಂತಹ ಯಾವುದೆ ವರದಿಗಳು, ಹೇಳಿಕೆಗಳು ನಮಗೆ ಲಭ್ಯವಾಗಿಲ್ಲ. ಹೀಗಾಗಿ ಮಮತಾ ಬ್ಯಾನರ್ಜಿ ಅವರು ಈ ಹೇಳಿಕೆ ನೀಡಿದ್ದಾರೆ ಎಂಬುವುದು ಆಧಾರ ರಹಿತವಾಗಿದೆ ಹಾಗೂ ವೈರಲ್ ಚಿತ್ರವೂ ಎಡಿಟ್ ಮಾಡಿರುವಂತೆ ಇದೆ. ಇದನ್ನೂ ಓದಿ: ಫ್ಯಾಕ್ಟ್‌ಚೆಕ್ | ಆರೆಸ್ಸೆಸ್‌ ಅನ್ನು ನಿಷೇಧಿಸಿತೆ ಕೆನಡಾ ಸರ್ಕಾರ?

ಒಟ್ಟಿನಲ್ಲಿ ಹೇಳಬೇಕಾದರೆ, ಮಮತಾ ಬ್ಯಾನರ್ಜಿ ಅವರು ಹಿಂದೂ ವಿರೋಧಿ ಹೇಳಿಕೆ ನೀಡಿದ್ದಾರೆ ಎಂದು ಸಮಾಜಿಕ ಮಾಧ್ಯಮಗಳಲ್ಲಿ ಬಿಜೆಪಿ ಬೆಂಬಲಿಗರು ವೈರಲ್ ಮಾಡುತ್ತಿರುವ ಹೇಳಿಕೆಯು ಆಧಾರ ರಹಿತವಾಗಿದ್ದು, ಒಂದು ವೇಳೆ ಅವರ ಈ ರೀತಿಯಾಗಿ ಹೇಳಿದ್ದರೆ ಯಾವುದಾದರೂ ಪತ್ರಿಕೆಗಳಲ್ಲಿ ವರದಿಯಾಗಿರುತ್ತಿತ್ತು. ಆದರೆ ಈ ಬಗ್ಗೆ ಯಾವುದೆ ವರದಿಯು ಪತ್ತೆ ಆಗಿಲ್ಲ ಹಾಗೂ ವೈರಲ್ ಚಿತ್ರವೂ ಎಡಿಟ್ ಮಾಡಿರುವಂತೆ ಇದೆ.


ಯಾವುದೆ ವಿಡಿಯೊ, ಚಿತ್ರ ಅಥವಾ ಸುದ್ದಿಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚುವ ಮುಂಚೆ ಅದು ಸತ್ಯವೆ ಎಂದು ದಯವಿಟ್ಟು ಖಚಿತಪಡಿಸಿಕೊಳ್ಳಿ. ಅವುಗಳ ಬಗ್ಗೆ ನಿಮಗೆ ಸಂಶಯವಿದ್ದರೆ ಜನಶಕ್ತಿ ಮೀಡಿಯಾದ +916361984022 ಈ ನಂಬರ್‌ಗೆ ಕಳುಹಿಸಿ. ನಾವು ಅದನ್ನು ಫ್ಯಾಕ್ಟ್‌ಚೆಕ್ ಮಾಡುತ್ತೇವೆ.


 ವಿಡಿಯೊ ನೋಡಿ: ದೇಶವನ್ನು ಆಳವಾಗಿ ಘಾಸಿಗೊಳಿಸಿದ ಎರಡು ಘಟನೆಗಳು Janashakthi Media

 

Donate Janashakthi Media

Leave a Reply

Your email address will not be published. Required fields are marked *