ಕೆನಡಾದ ಸರ್ಕಾರಿ ಅಧಿಕಾರಿಯೊಬ್ಬರು ತಮ್ಮ ದೇಶದಲ್ಲಿ ಆರ್‌ಎಸ್‌ಎಸ್ (ಆರೆಸ್ಸೆಸ್) ಅನ್ನು ನಿಷೇಧಿಸಿದ ಬಗ್ಗೆ ಹೇಳುತ್ತಿದ್ದಾರೆ ಎಂದು ಪ್ರತಿಪಾದಿಸಿ ವ್ಯಕ್ತಿಯೊಬ್ಬರು ಮಾತನಾಡುತ್ತಿರುವ ವೀಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ‘ಖಾಲಿಸ್ತಾನಿ’ ಪ್ರತಿಪಾದಕ ಹರ್ದೀಪ್ ಸಿಂಗ್ ನಿಜ್ಜಾರ್ ಹತ್ಯೆಗೆ ಸಂಬಂಧಿಸಿ ಕೆನಡಾ ಮತ್ತು ಭಾರತದ ನಡುವೆ ರಾಜತಾಂತ್ರಿಕ ಉದ್ವಿಗ್ನತೆಯ ನಡುವೆ ಈ ವಿಡಿಯೊವನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.
ವೀಡಿಯೊದಲ್ಲಿ ವ್ಯಕ್ತಿಯು ಏನು ಹೇಳುತ್ತಿದ್ದಾರೆ? ಆರೆಸ್ಸೆಸ್ ಆರೆಸ್ಸೆಸ್
”ಎನ್‌ಸಿಸಿಎಂ ನಾಲ್ಕು ಹೆಚ್ಚುವರಿ ಕ್ರಮಗಳಿಗೆ ಕರೆ ನೀಡುತ್ತಿದೆ. ಭಾರತದಲ್ಲಿರುವ ಕೆನಡಾದ ರಾಯಭಾರಿಯನ್ನು ತಕ್ಷಣವೇ ಹಿಂಪಡೆಯುವುದು. ಕೆನಡಾದಲ್ಲಿರುವ ಭಾರತೀಯ ರಾಯಭಾರಿಯನ್ನು ಹೊರಹಾಕುವುದು. ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದ (ಸಿಇಪಿಎ) ಸೇರಿದಂತೆ ಆದರೆ ಸೀಮಿತವಾಗಿರದೆ ಉಭಯ ದೇಶಗಳ ನಡುವಿನ ವ್ಯಾಪಾರ ಮಾತುಕತೆಗಳನ್ನು ಸ್ಥಗಿತಗೊಳಿಸುವುದು ಫ್ರೀಜ್ ಮಾಡುವುದು. ಕ್ರಿಮಿನಲ್ ಕೋಡ್‌ನ ಅಡಿಯಲ್ಲಿ ಪಟ್ಟಿ ಮಾಡಲಾದ ನಿಬಂಧನೆಗಳ ಅಡಿಯಲ್ಲಿ RSS ಅನ್ನು ನಿಷೇಧಿಸುವುದು ಮತ್ತು ಕೆನಡಾದಿಂದ ಅದರ ಏಜೆಂಟ್‌ಗಳನ್ನು ತೆಗೆದುಹಾಕುವುದು” ಎಂದು ವ್ಯಕ್ತಿಯು ಹೇಳುತ್ತಾರೆ.
ಅದೇ ರೀತಿಯ ಪ್ರತಿಪಾದನೆ ಮಾಡಿ ಹಲವು ಸಮಾಜಿಕ ಮಾಧ್ಯಮ ಬಳಕೆದಾರರು ಈ ವಿಡಿಯೊವನ್ನು ಪೋಸ್ಟ್ ಮಾಡಿದ್ದಾರೆ. ಅದನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು.
ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ಬುರ್ಖಾ ಧರಿಸಿ ಮಹಿಳಾ ವಾಶ್‌ರೂಮ್‌ನಲ್ಲಿ ಮೊಬೈಲ್ ಚಿತ್ರೀಕರಣ ಮಾಡಿದ ಈ ವ್ಯಕ್ತಿ ಮುಸ್ಲಿಂ ಅಲ್ಲ
ಫ್ಯಾಕ್ಟ್‌ಚೆಕ್
ವಾಸ್ತವದಲ್ಲಿ ಕೆನಡಾದ ಸರ್ಕಾರವು ಆರೆಸ್ಸೆಸ್ ಅನ್ನು ನಿಷೇಧಿಸಿಲ್ಲ. ವಿಡಿಯೊದಲ್ಲಿ ಇರುವ ವ್ಯಕ್ತಿಯು ಕೆನಡಾದ ಸರ್ಕಾರಿ ಅಧಿಕಾರಿ ಅಲ್ಲ. ಅವರು ಎನ್‌ಸಿಸಿಎಂ ಎಂಬ ಲಾಭ ರಹಿತ ಸಂಸ್ಥೆಯ ಸಿಇಒ ಆಗಿದ್ದು, ಅವರ ಹೆಸರು ಸ್ಟೀಫನ್ ಬ್ರೌನ್ ಎಂದಾಗಿದೆ. ಕೆನಡಾ ಸರ್ಕಾರವು ಅವರ ಬೇಡಿಕೆಗೆ ಪ್ರತಿಕ್ರಿಯಿಸಿಲ್ಲ.
ವೀಡಿಯೊದಲ್ಲಿರುವ ವ್ಯಕ್ತಿ ತನ್ನ ಭಾಷಣ ಮಾಡುವಾಗ NCCM ಬಗ್ಗೆ ಹೇಳುತ್ತಾರೆ. ಈ ಕೀ ವರ್ಡ್ ಹಾಕಿ ಯೂಟ್ಯೂಬ್‌ನಲ್ಲಿ ಹುಡುಕಿದರೆ, NCCM ನ nccmtvನ ಯೂಟ್ಯೂಬ್ ಚಾನೆಲ್ ಲಭಿಸುತ್ತದೆ. ಈ ಚಾನೆಲ್‌ನಲ್ಲಿ ‘ವೈರಲ್’ ಆಗಿರುವ ಕ್ಲಿಪ್‌ನ ವಿಸ್ತೃತ ವಿಡಿಯೊವನ್ನು ಅಪ್‌ಲೋಡ್ ಮಾಡಲಾಗಿದೆ.
ಚಾನೆಲ್ ಅಪ್‌ಲೋಡ್ ಮಾಡಿರುವ ವಿಡಿಯೊ, ಎನ್‌ಸಿಸಿಎಂ ಮತ್ತು ವರ್ಲ್ಡ್ ಸಿಖ್ ಆರ್ಗನೈಸೇಶನ್ ಆಫ್ ಕೆನಡಾ (ಡಬ್ಲ್ಯುಎಸ್‌ಒ) ನಡೆಸಿದ ಪತ್ರಿಕಾಗೋಷ್ಠಿಯದ್ದಾಗಿದೆ. ಅಲ್ಲಿ ಎನ್‌ಸಿಸಿಎಂ ಸಂಸ್ಥೆಯ ಸಿಇಒ ಸ್ಟೀಫನ್ ಬ್ರೌನ್ ಮಾಡುತ್ತಿರುವ ಭಾಷಣವಾಗಿದೆ ಭಾರತದ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವುದು. ಚಾನೆಲ್ ಈ ವಿಡಿಯೊವನ್ನು ಸೆಪ್ಟೆಂಬರ್ 20 ರಂದು ಹಂಚಿಕೊಂಡಿದೆ.
ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ಜಿ20 ಕಾರ್ಯಕ್ರಮದ ವೇಳೆ ‘ರಘುಪತಿ ರಾಘವ ರಾಜಾ ರಾಮ್’ ಭಜನೆಯಿಂದ ‘ಅಲ್ಲಾಹ್’ ಪದ ಮೋದಿ ತೆಗೆದುಹಾಕಿದರೆ?
ವೈರಲ್ ವೀಡಿಯೊದಲ್ಲಿ ಇರುವ ನಾಲ್ಕು ಅಂಶಗಳು ಈ ವಿಡಿಯೊದಲ್ಲಿ ಇವೆ. ಜೊತೆಗೆ ಯೂಟ್ಯೂಬ್ ವೀಡಿಯೊದ ವಿವರಣೆಯಲ್ಲಿ ಈ ಅಂಶಗಳನ್ನು ಸಹ ಬರೆಯಲಾಗಿದೆ.
ಇಷ್ಟೆ ಅಲ್ಲದೆ, ವೈರಲ್ ಆಗಿರುವ ವಿಡಿಯೊದ ಕ್ಲಿಪ್‌ಅನ್ನು NCCM ನ ತನ್ನ ಅಧಿಕೃತ Instagram ಪೇಜ್‌ನಲ್ಲಿ ಅಪ್‌ಲೋಡ್ ಮಾಡಲಾಗಿದ್ದು, ಅಲ್ಲಿ ಕೂಡಾ ವಿವರಣೆಯನ್ನು ಬರೆಯಲಾಗಿದೆ.
ವಾಸ್ತವದಲ್ಲಿ NCCM ಒಂದು ಸ್ವತಂತ್ರ ಸಂಸ್ಥೆಯಾಗಿದ್ದು, ಈ ಬಗ್ಗೆ ಸಂಸ್ಥೆಯೆ ಸ್ವತಃ ಹೇಳಿಕೊಂಡಿದೆ. NCCM ತನ್ನ ಅಧಿಕೃತ ವೆಬ್‌ಸೈಟ್ ಅಲ್ಲಿ, ಎನ್‌ಸಿಸಿಎಂ ಸ್ವತಂತ್ರ, ಪಕ್ಷಾತೀತ ಮತ್ತು ಲಾಭರಹಿತ ಸಂಸ್ಥೆ ಎಂದು ಹೇಳಿದೆ. ಅಂದರೆ NCCM ಎಂಬುವುದು ಕೆನಡಾದ ಸರ್ಕಾರದ ಸಂಸ್ಥೆಯಲ್ಲ ಎಂಬುವುದು ದೃಢವವಾಗುತ್ತದೆ. ವೆಬ್‌ಸೈಟ್‌ನಲ್ಲಿ ಕೆನಡಾದಲ್ಲಿ ಆರೆಸ್ಸೆಸ್‌ನ ನೆಟ್‌ವರ್ಕ್ ಬಗ್ಗೆ ಬರೆಯಲಾದ ವರದಿಯೊಂದನ್ನು ಅದು ಪ್ರಕಟಿಸಿದೆ.
ಒಟ್ಟಿನಲ್ಲಿ ಹೇಳುವುದಾದರೆ, ಖಾಲಿಸ್ತಾನಿ ಪ್ರತಿಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯ ನಂತರ ವೈರಲ್ ಆಗಿರುವ ಈ ವಿಡಿಯೊ ಕ್ಲಿಪ್, ಕೆನಡಾ ಸರ್ಕಾರಿ ಅಧಿಕಾರಿಯದ್ದಲ್ಲ. ಅಲ್ಲಿನ ಸರ್ಕಾರಕ್ಕೊ ವಿಡಿಯೊದಲ್ಲಿರುವ ವ್ಯಕ್ತಿಗೊ ಸಂಬಂಧವಿಲ್ಲ. ವಿಡಿಯೊದಲ್ಲಿರುವ ವ್ಯಕ್ತಿಯು ಎನ್‌ಸಿಸಿಎಂ ಎಂಬ ಲಾಭ ರಹಿತ ಸಂಸ್ಥೆಯ ಸಿಇಒ ಆಗಿದ್ದು, ಅವರ ಹೆಸರು ಸ್ಟೀಫನ್ ಬ್ರೌನ್ ಎಂದಾಗಿದೆ. ಅವರು ಆರೆಸ್ಸೆಸ್ ಬ್ಯಾನ್ ಮಾಡಬೇಕು ಎಂದು ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸುವ ವಿಡಿಯೊ ಇದಾಗಿದೆ. ಅವರ ಆಗ್ರಹಕ್ಕೆ ಕೆನಡಾ ಸರ್ಕಾರ ಪ್ರತಿಕ್ರಿಯಿಸಿಲ್ಲ.
ಯಾವುದೆ ವಿಡಿಯೊ, ಚಿತ್ರ ಅಥವಾ ಸುದ್ದಿಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚುವ ಮುಂಚೆ ಅದು ಸತ್ಯವೆ ಎಂದು ದಯವಿಟ್ಟು ಖಚಿತಪಡಿಸಿಕೊಳ್ಳಿ. ಅವುಗಳ ಬಗ್ಗೆ ನಿಮಗೆ ಸಂಶಯವಿದ್ದರೆ ಜನಶಕ್ತಿ ಮೀಡಿಯಾದ +916361984022 ಈ ನಂಬರ್‌ಗೆ ಕಳುಹಿಸಿ. ನಾವು ಅದನ್ನು ಫ್ಯಾಕ್ಟ್‌ಚೆಕ್ ಮಾಡುತ್ತೇವೆ.
ವಿಡಿಯೊ ನೋಡಿ