ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು “ಭಾರತ ಮಾತೆ”ಗೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿ ಬಿಜೆಪಿಯ ಅಧಿಕೃತ ಟ್ವಿಟರ್ (X) ಖಾತೆ 18 ಸೆಕೆಂಡಿನ ವಿಡಿಯೊವೊಂದನ್ನು ಅಪ್‌ಲೋಡ್ ಮಾಡಿದೆ. ವಿಡಿಯೊದಲ್ಲಿ ರಾಹುಲ್ ಗಾಂಧಿ ಅವರು, “ಯಾರು ಈ ಭಾರತ ಮಾತೆ, ಏನಿದು?” ಎಂದು ಹೇಳುತ್ತಾರೆ. ಇದಕ್ಕೆ ಟ್ವಿಟರ್‌ನಲ್ಲಿ ಪ್ರತಿಕ್ರಿಯಿಸಿರುವ ಬಿಜೆಪಿ, “ಜೋರ್ಜ್ ಸೋರೊಸ್ ಅವರ ಕೈಗೊಂಬೆ ಅವರೊಂದಿಗೆ ಕೇಳಿ” ಎಂದು ಹೇಳಿದೆ.
ಈ ವಿಡಿಯೊವನ್ನು ಬಿಜೆಪಿ ನಾಯಕರು ಸೇರಿದಂತೆ ಬೆಂಬಲಿಗರು ಕೂಡಾ ಅದೇ ಪ್ರತಿಪಾದನೆಯೊಂದಿಗೆ ಹಂಚಿಕೊಂಡಿದ್ದಾರೆ. ಬಿಜೆಪಿಯ ಉಚ್ಚಾಟಿತ ನಾಯಕ, ಪಕ್ಷದ ದೆಹಲಿಯ ಮಾಜಿ ವಕ್ತಾರ ನವೀನ್ ಕುಮಾರ್ ಜಿಂದಾಲ್ ಅವರು ಈ ವೀಡಿಯೊವನ್ನು ಟ್ವೀಟ್ ಮಾಡಿದ್ದು, “ವಿದೇಶಿ ಮಹಿಳೆಯ ಹೊಟ್ಟೆಯಿಂದ ಜನಿಸಿದ ಮಗು ಮಾತ್ರ ಭಾರತ್ ಮಾತೆ ಯಾರು ಎಂದು ಕೇಳುತ್ತಾರೆ” ಎಂದು ರಾಹುಲ್ ಗಾಂಧಿ ಅವರನ್ನು ಅವಮಾನಿಸಿದ್ದಾರೆ. (ಆರ್ಕೈವ್ ಮಾಡಿದ ಲಿಂಕ್ ಇಲ್ಲಿದೆ) ಇದನ್ನೂ ಓದಿ: ಫ್ಯಾಕ್ಟ್‌ಚೆಕ್ | ಹಿಂದೂಗಳ ವ್ಯಾಪಾರ ಬಹಿಷ್ಕರಿಸುವಂತೆ ಬೆಂಗಳೂರಿನಲ್ಲಿ ಮುಸ್ಲಿಮರು ಕರೆ ನೀಡಿಲ್ಲ
ये भारत माता है कौन, है क्या, asks puppet of George Soros. Shameful. pic.twitter.com/8S3UVBCrJP
— BJP (@BJP4India) November 19, 2023
ಇಷ್ಟೆ ಅಲ್ಲದೆ ಉತ್ತರ ಪ್ರದೇಶ ಬಿಜೆಪಿ ಯುವ ಘಟಕದ ಸಾಮಾಜಿಕ ಮಾಧ್ಯಮ ಮುಖ್ಯಸ್ಥೆ ರಿಚಾ ರಾಜ್‌ಪೂತ್, ಬಿಜೆಪಿ ಮುಂಬೈ ವಕ್ತಾರ ಸುರೇಶ್ ನಖುವಾ, ಬಿಜೆಪಿ ದೆಹಲಿ, ಬಿಜೆಪಿ ಛತ್ತೀಸ್‌ಗಢ ಮತ್ತು ಹಲವಾರು ರಾಜಕಾರಣಿಗಳು ಮತ್ತು ಬೆಂಬಲಿಗರು ಸೇರಿದಂತೆ ಹಲವಾರು ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳು ಇದೇ ಹೇಳಿಕೆಯೊಂದಿಗೆ ವೀಡಿಯೊವನ್ನು ವೈರಲ್ ಮಾಡಿವೆ.
ಫ್ಯಾಕ್ಟ್‌ಚೆಕ್:
ಈ ವಿಡಿಯೊ ಬಗ್ಗೆ ಖ್ಯಾತ ಫ್ಯಾಕ್ಟ್‌ಚೆಕ್ ವೆಬ್‌ಸೈಟ್ ಆಲ್ಟ್ ನ್ಯೂಸ್ ಹುಡುಕಾಡಿದ್ದು, ಈ ವೇಳೆ ಅವರಿಗೆ ನವೆಂಬರ್ 19 ರ ಅಮರ್ ಉಜಾಲಾ ವರದಿಯೊಂದು ಲಭ್ಯವಾಗಿದೆ. ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ಕೇರಳದಲ್ಲಿ ಬುರ್ಖಾ ಧರಿಸದ ಕಾರಣಕ್ಕೆ ಹಿಂದೂ ಮಹಿಳೆಯನ್ನು ಮುಸ್ಲಿಂ ಮಹಿಳೆಯರು ಬಸ್ ಏರದಂತೆ ತಡೆದರು ಎಂಬುದು ಸುಳ್ಳು
ಈ ವರದಿಯ ಪ್ರಕಾರ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ರಾಜಸ್ಥಾನದ ಬುಂಡಿಯಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡುತ್ತಾ ಈ ಪ್ರಶ್ನೆ ಕೇಳಿದ್ದರು. ಇದಕ್ಕೆ ಅವರೇ ಉತ್ತರಿಸುತ್ತಾ, “ಈ ದೇಶದ ಜನರು ಭಾರತ ಮಾತೆಯಾಗಿದ್ದಾರೆ. ಈ ಭೂಮಿಯೇ ಭಾರತಮಾತೆ, ಈ ಘೋಷಣೆಯನ್ನು ಪ್ರತಿಧ್ವನಿಸುವ ಪ್ರತಿಯೊಬ್ಬ ವ್ಯಕ್ತಿಯೂ ಭಾರತಮಾತೆಯಾಗಿದ್ದಾರೆ” ಎಂದು ಹೇಳಿದ್ದರು.
ರಾಹುಲ್ ಗಾಂಧಿ ಅವರು ಮಾಡಿರುವ ಈ ಭಾಷಣದ ಪೂರ್ತಿ ಆವೃತ್ತಿ ಕೂಡಾ ಯೂಟ್ಯೂಬ್‌ನಲ್ಲಿ ಲಭ್ಯವಿದೆ. ಈ ವೀಡಿಯೊ ಪ್ರಾರಂಭವಾಗಿ 0:52 ರಾಹುಲ್ ಗಾಂಧಿ ಅವರು ಬಿಜೆಪಿ ವೈರಲ್ ಮಾಡಿರುವ ಕ್ಲಿಕ್‌ನ ಹೇಳಿಕೆ ನಮಗೆ ಸಿಗುತ್ತದೆ.
ಅದರಲ್ಲಿ ಅವರು, “ಚಂದನಾ ಅವರು ‘ಭಾರತ್ ಮಾತಾ ಕಿ ಜೈ’ ಎಂಬ ಘೋಷಣೆಯನ್ನು ಕೂಗಿಸಿದರು. ಆದರೆ ಪ್ರಶ್ನೆಯೇನೆಂದರೆ, ಎಲ್ಲರೂ ಈ ಘೋಷಣೆಯನ್ನು ಕೂಗುತ್ತಾರೆ. ‘ಭಾರತ್ ಮಾತಾ ಕೀ ಜೈ’ ಎಂಬ ಘೋಷಣೆ ನಮಗೆ ಆಗಾಗ್ಗೆ ಕೇಳುತ್ತೇವೆ. ಆದರೆ ಈ ಭಾರತ ಮಾತೆ ಯಾರು? ಅದು ಏನು ?. ಪ್ರಶ್ನೆಯಿದೆ, ಈ ಜೈ ಹೇಳಿಕೆಯನ್ನು ನಾನು ಸೇರಿದಂತೆ ಎಲ್ಲರೂ ಕೂಗುತ್ತಾರೆ. ಈ ಭಾರತಮಾತೆ ಯಾರು? ನೋಡಿ, ಭಾರತ ಮಾತೆ ಎಂದರೆ ಈ ಭೂಮಿಯಾಗಿದೆ. ಅಲ್ಲವೆ? ಭಾರತ ಮಾತೆ ಎಂದರೆ ಈ ದೇಶದ ಜನರಾಗಿದ್ದಾರೆ, ಅಲ್ಲವೆ? ನಿಮ್ಮ ಸಹೋದರರು, ಸಹೋದರಿಯರು, ತಂದೆ-ತಾಯಿ, ಬಡವರು, ಶ್ರೀಮಂತರು, ವೃದ್ಧರು, ಈ ಭಾರತ ಮಾತೆಯ ಘೋಷಣೆ ಅನುರಣಿಸುವ ಎಲ್ಲರೂ ಭಾರತ ಮಾತೆಯಾಗಿದ್ದಾರೆ.” ಎಂದು ಹೇಳುತ್ತಾರೆ. ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ಪ್ರಧಾನಿ ಮೋದಿ ಭಾರತೀಯರಿಗೆ 3 ತಿಂಗಳ ಉಚಿತ ರೀಚಾರ್ಜ್ ನೀಡುತ್ತಿದ್ದಾರೆ ಎಂಬುದು ಸುಳ್ಳು!
ಒಟ್ಟಾರೆಯಾಗಿ ಹೇಳುವುದಾದರೆ, ಬಿಜೆಪಿ ಮತ್ತು ಅದರ ನಾಯಕರು ರಾಹುಲ್ ಗಾಂಧಿಯವರು ಭಾರತ ಮಾತೆಯನ್ನು ಅವಮಾನಿಸಿದ್ದಾರೆ ಎಂದು ಆರೋಪಿಸಿ, ವಿಡಿಯೊ ಒಂದರ ಕ್ಲಿಪ್ ಅನ್ನು ಕಟ್ ಸುಳ್ಳು ಹೇಳಿಕೆಯೊಂದಿಗೆ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ವಾಸ್ತವದಲ್ಲಿ, ಭಾರತ ಮಾತೆ ಎಂದರೇನು ಎಂದು ಪ್ರಶ್ನಿಸಿದ ನಂತರ, ಈ ನೆಲ ಮತ್ತು ಅದರ ಜನರೇ ಭಾರತ ಮಾತೆಯಾಗಿದ್ದಾರೆ ಎಂದು ರಾಹುಲ್ ಗಾಂಧಿ ಭಾಷಣದಲ್ಲಿ ಪ್ರತಿಪಾದಿಸಿದ್ದಾರೆ.
ಯಾವುದೆ ವಿಡಿಯೊ, ಚಿತ್ರ ಅಥವಾ ಸುದ್ದಿಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚುವ ಮುಂಚೆ ಅದು ಸತ್ಯವೆ ಎಂದು ದಯವಿಟ್ಟು ಖಚಿತಪಡಿಸಿಕೊಳ್ಳಿ. ಅವುಗಳ ಬಗ್ಗೆ ನಿಮಗೆ ಸಂಶಯವಿದ್ದರೆ ಜನಶಕ್ತಿ ಮೀಡಿಯಾದ +916361984022 ಈ ನಂಬರ್‌ಗೆ ಕಳುಹಿಸಿ. ನಾವು ಅದನ್ನು ಫ್ಯಾಕ್ಟ್‌ಚೆಕ್ ಮಾಡುತ್ತೇವೆ.
ಇದನ್ನೂ ಓದಿ: ಫ್ಯಾಕ್ಟ್‌ಚೆಕ್ | ಪೊಲೀಸರಿಗೆ ಥಳಿಸುತ್ತಿರುವ ಈ ವಿಡಿಯೊ ರಾಜಸ್ಥಾನದಲ್ಲ; ಥಳಿಸುತ್ತಿರುವವರು ಮುಸ್ಲಿಂ ಗುಂಪಲ್ಲ
ಫ್ಯಾಕ್ಟ್‌ಚೆಕ್ | ಪೊಲೀಸರಿಗೆ ಥಳಿಸುತ್ತಿರುವ ಈ ವಿಡಿಯೊ ರಾಜಸ್ಥಾನದಲ್ಲ; ಥಳಿಸುತ್ತಿರುವವರು ಮುಸ್ಲಿಂ ಗುಂಪಲ್ಲ