ಮೇ 26ರಿಂದ ಟ್ವಿಟ್ಟರ್‌, ಫೇಸ್‌ಬುಕ್‌ ಇನ್‌ಸ್ಟಾಗ್ರಾಂ ಸ್ಥಗಿತ?

ನವದೆಹಲಿ: ಸಾಮಾಜಿಕ ಮಾಧ್ಯಮಗಳಾದ ಟ್ವಿಟರ್, ಫೇಸ್‌ಬುಕ್, ಇನ್‌ಸ್ಟಾಗ್ರಾಂಗೆ ಕೇಂದ್ರ ಸರ್ಕಾರ ಹಾಗೂ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯವು ಪರಿಷ್ಕರಿಸಿರುವ  ಡಿಜಿಟಲ್ ಮೀಡಿಯಾ ತಿದ್ದುಪಡಿ ನಿಯಮಗಳನ್ನು ಅವುಗಳು ಇದುವರೆಗೂ ಪಾಲನೆ ಮಾಡದಿರುವ ಪರಿಣಾಮವಾಗಿ ಭಾರತದಲ್ಲಿ ಸಾಮಾಜಿಕ ಜಾಲಾತಾಣಗಳು ಸ್ಥಗಿತಗೊಳ್ಳುವ ಭೀತಿ ಎದುರಾಗಿದೆ.

ಭಾರತದಲ್ಲಿ ಸಾಮಾಜಿಕ ಮಾಧ್ಯಮಕ್ಕೆ ಸಂಬಂಧಿಸಿದಂತೆ ಸರಕಾರವು ಹೊರಡಿಸಿರುವ ಹೊಸ ನಿಯಮಗಳ ಪ್ರಕಾರ ಫೆಬ್ರವರಿ 25 ರಂದು ಸಾಮಾಜಿಕ ಮಾಧ್ಯಮಗಳಾದ ಟ್ವಿಟರ್, ಫೇಸ್‌ಬುಕ್, ಇನ್‌ಸ್ಟಾಗ್ರಾಂಗಳಿಗೆ ನೊಟೀಸ್ ನೀಡಲಾಗಿದೆ. ಜೊತೆಗೆ 3 ತಿಂಗಳು ಕಾಲಾವಕಾಶ ನೀಡಲಾಗಿತ್ತು. ಆದರೆ ಇದುವರೆಗೂ ನಿಯಮ ಒಪ್ಪಿಕೊಂಡಿಲ್ಲ. ಇದೇ ಧೋರಣೆ ಮುಂದವರಿದರೆ ಮೇ 26ಕ್ಕೆ ಭಾರತದಲ್ಲಿ ಇವು ಸ್ಥಗಿತಗೊಳ್ಳಲಿದೆ ಎಂಬ ಮೂಲಗಳು ದೃಢಪಡಿಸಿವೆ.

ಇದನ್ನು ಓದಿ: ಬಿಜೆಪಿ ಎಂಪಿ ಗೌತಮ್‌ ಗಂಭೀರ್‌ ವಿರುದ್ಧ ತನಿಖೆಗೆ ಹೈಕೋರ್ಟ್‌ ಆದೇಶ

ಸುದ್ದಿ ತಾಣಗಳು ಮತ್ತು ಒಟಿಟಿ ಪ್ಲಾಟ್‌ಫಾರ್ಮ್‌ಗಳಿಗೆ ಹೊಸದಾದ ಮಾರ್ಗಸೂಚಿಯನ್ನು ಕೇಂದ್ರ ಸರಕಾರವು ಫೆಬ್ರವರಿಯಲ್ಲಿ ಜಾರಿಗೆ ತಂದಿದೆ. ಈ ನಿಯಮವನ್ನು ಅನುಸರಿಸಲು ಮೇ 26ರ ಅಂತಿಮ ಗಡುವನ್ನು ನೀಡಲಾಗಿದೆ. ಇನ್ನೆರಡು ದಿನದಲ್ಲಿ ಈ ನಿಯಮ ಪಾಲಿಸಲು ನಿರಾಕರಿಸಿದರೆ, ಸಾಮಾಜಿಕ ಮಾಧ್ಯಮ ಕಂಪನಿಗಳ  ಸೇವೆಗಳ ಮೇಲೆ  ಕಾನೂನು ಪ್ರಕಾರ ಕ್ರಿಮಿನಲ್ ಕ್ರಮಕ್ಕೆ ಎದುರಿಬೇಕಾಗಿದೆ ಎಂದು ತಿಳಿದುಬಂದಿದೆ.

ಹೊಸ ನಿಯಮದ ಅಡಿಯಲ್ಲಿ, ಮೇಲ್ವಿಚಾರಣಾ ಕಾರ್ಯವಿಧಾನವು ರಕ್ಷಣಾ, ವಿದೇಶಾಂಗ ವ್ಯವಹಾರಗಳು, ಗೃಹ, ಮಾಹಿತಿ ಮತ್ತು ತಂತ್ರಜ್ಞಾನ, ಕಾನೂನು, ಐಟಿ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯಗಳ ಪ್ರತಿನಿಧಿಗಳನ್ನು ಒಳಗೊಂಡ ಸಮಿತಿಯನ್ನು ಒಳಗೊಂಡಿರುತ್ತದೆ. ಈ ಸಮಿತಿ  ಬಯಸಿದರೆ ನೀತಿ ಸಂಹಿತೆಯ ಉಲ್ಲಂಘನೆಯ ದೂರುಗಳ ಮೇಲೆ ವಿಚಾರಣೆಯ ನಡೆಸಲು ಸಾಧ್ಯವಿದೆ.

ಭಾರತ ಮೂಲದ ಅಧಿಕಾರಿಗಳ ನೇಮಕ, ಅವರ ಹೆಸರು ಮತ್ತು ಸಂಪರ್ಕ ವಿಳಾಸ, ದೂರು ಪರಿಹಾರ, ಆಕ್ಷೇಪಾರ್ಹ ವಿಷಯದ ಮೇಲ್ವಿಚಾರಣೆ, ಅನುಸರಣೆ ವರದಿ ಮತ್ತು ಆಕ್ಷೇಪಾರ್ಹ ವಿಷಯವನ್ನು ತೆಗೆದುಹಾಕಲು ಹೊಸ ನಿಯಮ ಹೇಳುತ್ತದೆ.

Donate Janashakthi Media

Leave a Reply

Your email address will not be published. Required fields are marked *