ಎಚ್.ಆರ್. ನವೀನ್ ಕುಮಾರ್, ಹಾಸನ
ಜನ ಸಾಮಾನ್ಯರನ್ನು ಸುಲಿದು, ಅವರ ರಕ್ತ ಹೀರಿ ದೊಡ್ಡವರು ಮತ್ತಷ್ಟು ಕೊಬ್ಬಲು ಭಾರತದಲ್ಲಿ ಸುಲಿಗೆಯ ಹೆದ್ದಾರಿ ನಿರ್ಮಾಣವಾಗಿದೆ. ದೆಹಲಿಯ ಹಜರತ್ ನಿಜಾಮುದ್ದಿನ್ ರೈಲ್ವೇ ನಿಲ್ದಾಣದಲ್ಲಿ ವಾಹನಗಳ ಪಾರ್ಕಿಂಗ್ ನ ಟೆಂಡರನ್ನು ಕೇಂದ್ರ ಸರ್ಕಾರ ಖಾಸಗಿಯವರಿಗೆ ನೀಡಿದೆ. ಅವರು ಟೋಲ್ ಗೇಟ್ ಗಳನ್ನು ನಿರ್ಮಾಣ ಮಾಡಿಕೊಂಡು ಪಾರ್ಕಿಂಗ್ ಶುಲ್ಕ ವಸೂಲಿ ಮಾಡುತ್ತಿದ್ದಾರೆ.
ಆಟೋ, ಟ್ಯಾಕ್ಸಿ, ಓಲ, ಊಬರ್ ನ ಗಾಡಿಗಳು ಪ್ರವೇಶ ಪಡೆದ 8 ನಿಮಿಷಗಳ ವರೆಗರೆ ಪಾರ್ಕಿಂಗ್ ಮಾಡಿದರೆ 30 ರೂ ಕೊಡಬೇಕು.
8-15 ನಿಮಿಷಗಳ ವರೆಗೆ ಖಾಸಗಿ ವಾಹನಗಳು ಸೇರಿ ಯಾವುದೇ ವಾಹನಗಳನ್ನು ನಿಲ್ಲಿಸಿದರು 50 ರೂ ಕೊಡಬೇಕು. ಅರ್ಧ ಗಂಟೆಗಳವರೆಗೆ ನಿಲ್ಲಿಸಿದರೆ 200 ಕೊಡಬೇಕು.
ಇದೆಲ್ಲಾ ನಮಗೆ ಗೊತ್ತಾಗಿದ್ದು ಇಂದು ಬೆಳಿಗ್ಗೆ ದೆಹಲಿಯಿಂದ ಬೆಂಗಳೂರಿಗೆ ಪ್ರಯಾಣ ಆರಂಭಿಸಿದಾಗ. ನಾವು ದೆಹಲಿಯ ಮಂಡಿಹೌಸ್ ನ ಹರ್ಕಿಶನ್ ಸಿಂಗ್ ಸುರ್ಜಿತ್ ಭವನದಲ್ಲಿ ಉಳಿದಿದ್ದೆವು. ಅಲ್ಲಿಂದ ಹಜರತ್ ನಿಜಾಮಿದ್ದೀನ್ ರೈಲ್ವೇ ಸ್ಟೇಷನ್ ಗೆ ಆಟೋದಲ್ಲಿ ಹೋಗೋಣ ಎಂದು ಕೇಳಿದರೆ ಎಲ್ಲಾ ಆಟೋ ಡ್ರೈವರ್ ಗಳು ಹೆಚ್ಚುವರಿ 50 ರೂ ಕೇಳುತ್ತಿದ್ದರು. ಕೊನೆಗೆ ಒಬ್ಬ ಡ್ರೈವರ್ ಸರ್ ನೀವು 50 ರೂ ಹೆಚ್ಚುವರಿ ಕೊಡಬೇಡಿ ಆದರೆ ನಿಮ್ಮನ್ನು ವಸೂಲಿಮಾಡುವ ಟೂಲ್ ಗೇಟ್ ನ ಬಳಿಯೇ ಇಳಿಸುತ್ತೇನೆ. ನೀವು ಅಲ್ಲಿಂದ ಮುಂದೆ ನಿಲ್ದಾಣಕ್ಕೆ ಹೋಗಿ ಎಂದ.
ಆಟೋ, ಟ್ಯಾಕ್ಸಿ ಹತ್ತೋದೇ ಲೆಗೇಜ್ ಇರುತ್ತೆ ನಿಲ್ದಾಣದ ಹತ್ತಿರಕ್ಕೆ ಹೋದರೆ ಪ್ಲಾಟ್ ಫಾರಂ ಗೆ ಹೋಗಲು ಅನುಕೂಲವಾಗುತ್ತೆ ಅಂತ. ಆದರೆ ಈ ಸುಲಿಗೆಗೆ ಹೆದರಿ ಯಾರೂ ಈ ಕಡೆ ಬರುತ್ತಿಲ್ಲ. ಕೊನೆಗೆ ಬೇರೆ ದಾರಿ ಇಲ್ಲದೆ. ಕೈಯಲ್ಲಿ ಪುಸ್ತಕಗಳ ಬಂಡಲ್ ಇದ್ದರೂ ದೂರದಲ್ಲಿ ಇಳಿದು ನಡೆದು ಹೋಗಬೇಕಾಯಿತು.
ಇಂತಹ ಹಗಲು ದರೋಡೆ ದೇಶಾದ್ಯಂತ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಇದರ ವಿರುದ್ಧ ಜನ ಧ್ವನಿ ಎತ್ತದಿದ್ದರೆ ಇನ್ನು ಮುಂದೆ ಸಾರ್ವಜನಿಕವಾಗಿ ಉಸಿರಾಡುವ ಗಾಳಿಗೆ, ನಿಲ್ಲುವ ಜಾಗಕ್ಕೂ ಕಾಸು ವಸೂಲಿ ಮಾಡುವ ಕಾಲ ದೂರವಿಲ್ಲ. ನಮ್ಮಿಂದ ತೆರಿಗೆಯ ಹೆಸರಿನಲ್ಲಿ (GST) ಪ್ರತಿ ಕ್ಷಣ ವಸೂಲಿ ಮಾಡಿ ಅದರಿಂದಲೇ ರಾಷ್ಟೀಯ ಹೆದ್ದಾರಿಗಳನ್ನು ನಿರ್ಮಿಸಿ ಅದನ್ನು ನಿರ್ವಹಿಸಲು ಖಾಸಗಿಯವರಿಗೆ ಕೊಟ್ಟು ಅವರು ಪ್ರತೀ ದಿನ ವರ್ಷಾನುಗಟ್ಟಲೆ ಜನಸಾಮಾನ್ಯರಿಂದ ಸುಲಿಗೆ ಮಾಡಲು ಅವಕಾಶ ಮಾಡಿಕೊಡಲಾಗಿದೆ. ಇದೊಂದು ಲೂಟಿ ಸರ್ಕಾರವಲ್ಲದೆ ಬೇರೇನಲ್ಲ…