ಧಾರವಾಡ| ಹಿಂದೂ ಕೋಡ್ ಬಿಲ್ ಮತ್ತು ಬಾಬಾಸಾಹೇಬರು” ಶೀರ್ಷಿಕೆಯಲ್ಲಿ ಲೇಖನ ಸ್ಪರ್ಧೆ -ಗಣಕರಂಗ ಆಯೋಜನೆ

ಧಾರವಾಡ :“ಹಿಂದೂ ಕೋಡ್ ಬಿಲ್ ಮತ್ತು ಬಾಬಾಸಾಹೇಬರು” ಶೀರ್ಷಿಕೆಯಲ್ಲಿ ಲೇಖನ ಸ್ಪರ್ಧೆಯನ್ನು ಗಣಕರಂಗ ಸಂಸ್ಥೆಯು ಆಯೋಜಿಸುತ್ತಿದೆ.

ಇದನ್ನೂ ಓದಿ: ಬೆಂಗಳೂರ | ಸೇವಾ ನಿರತ ಶಿಕ್ಷರಿಗೂ ಟಿಇಟಿ ಕಡ್ಡಾಯ ; ಶಿಕ್ಷಣ ತಜ್ಙರ ಅಸಮಾಧಾನ

ಸ್ವತಂತ್ರ ಭಾರತದ ಆರಂಭಿಕ ಪ್ರಜಾಪ್ರಭುತ್ವ – ಮೊಳಕೆಯೊಡೆಯುತ್ತಿದ್ದ ಕಾಲಮಾನದ ಸಂಗತಿಗಳನ್ನು ವಿವಿಧ ಮೂಲಗಳಿಂದ ಸಂಗ್ರಹಿಸಿದ ಗಮನ ಸೆಳೆಯುವ, ಉತ್ತಮ ಶೈಲಿಯ  ಲೇಖನವನ್ನು ಕನ್ನಡದಲ್ಲಿ ಸಿದ್ಧಪಡಿಸಿ ಕಳಿಸಲು ಸೆಪ್ಟೆಂಬರ್ 18, 2025 ಕೊನೆಯ ದಿನಾಂಕವಾಗಿದೆ. ನಗದು ಬಹುಮಾನದೊಂದಿಗೆ ಪುಸ್ತಕ, ಪ್ರಮಾಣಪತ್ರ ನೀಡಲಾಗುವುದು. ನಗದು ಬಹುಮಾನ ಪಥಮ ರೂ.2500,  ದ್ವಿತೀಯ ರೂ.1500, ಮತ್ತು ತೃತೀಯ ರೂ.1000, ಮತ್ತು ಐವರಿಗೆ ಮೆಚ್ಚುಗೆ ಬಹುಮಾನವಾಗಿ ಪುಸ್ತಕ ಪ್ರಮಾಣ ಪತ್ರ ನೀಡಿ ಗೌರವಿಸಲಾಗುವುದು ಎಂದು ಪ್ರಕಟಣೆಯಲ್ಲಿ ಗಣಕರಂಗ ಮುಖ್ಯಸ್ಥ ಸಿದ್ದರಾಮ ಹಿಪ್ಪರಗಿ ತಿಳಿಸಿದ್ದಾರೆ.

ವಿಶೇಷವಾಗಿ ಭಾಗವಹಿಸಿದ ಎಲ್ಲರಿಗೂ ಪ್ರೋತ್ಸಾಹದಾಯಕವಾಗಿ ಇ-ಪ್ರಮಾಣಪತ್ರ ನೀಡಲಾಗುವುದು. ಉತ್ತಮ ಲೇಖನಗಳ ಸಂಕಲನವನ್ನು ಗಣಕರಂಗ ಪ್ರಕಾಶನದಿಂದ ಪುಸ್ತಕರೂಪದಲ್ಲಿ ಪ್ರಕಟಿಸಲಾಗುವುದು. ಸ್ಪರ್ಧೆಯ ನಿಯಮಗಳು, ಲೇಖನದ ಗಾತ್ರ ಮತ್ತು ಲೇಖನ ಕಳಿಸುವ ಇಮೇಲ್ ಇತ್ಯಾದಿಗಳ ಸಂಪೂರ್ಣ ಮಾಹಿತಿಗಾಗಿ 9845109480(2), 9740691429 (d), 7353359966 (ಗಣಕರಂಗ) ಸಂಪರ್ಕಿಸಲು ಕೋರಲಾಗಿದೆ.

ಇದನ್ನೂ ನೋಡಿ: ವಚನಾನುಭವ – 32 ಕಟ್ಟಿದ ಲಿಂಗವ ಬಿಟ್ಟು ಹೋದವರಿಗೆ ಲಟ ಲಟ ಹೊಡೆ ಎಂದು ಅಂಬಿಗರ ಚೌಡಯ್ಯ ಹೇಳಿದ್ದು ಯಾಕೆ? Janashakthi

Donate Janashakthi Media

Leave a Reply

Your email address will not be published. Required fields are marked *