ಎರಡು ದಿನಗಳ ಮುಷ್ಕರ ಯಶಸ್ವಿ: ದೇಶಾದ್ಯಂತ 20 ಕೋಟಿ ಕಾರ್ಮಿಕರು ಭಾಗಿ

ನವದೆಹಲಿ: ಕಾರ್ಮಿಕರ ಎರಡು ದಿನಗಳ ರಾಷ್ಟ್ರವ್ಯಾಪಿ ಸಾರ್ವತ್ರಿಕ ಮುಷ್ಕರ (ಮಾರ್ಚ್‌ 28-29) ಭಾರೀ ಯಶಸ್ಸು‌ ಕಂಡಿದೆ ಎರಡು ದಿನಗಳ‌‌ ಮುಷ್ಕರ ಯಶಸ್ವಿಗೊಳಿಸಲು ಕಾರಣರಾದ ಕಾರ್ಮಿಕರಿಗೆ ಹಾಗೂ ಅವರಿಗೆ ಬೆಂಬಲಿಸಿದ  ರೈತರು, ವಿದ್ಯಾರ್ಥಿಗಳು, ಯುವಕರು, ಮಹಿಳೆಯರಿಗೆ‌ ಕೇಂದ್ರ ಕಾರ್ಮಿಕ ಸಂಘಗಳ‌ ಜಂಟಿ‌ ಸಮಿತಿ‌(ಜೆಸಿಟಿಯು)ಯು ಅಭಿನಂದನೆ ಸಲ್ಲಿಸಿದೆ.

ಕೇಂದ್ರ ಟ್ರೇಡ್ ಯೂನಿಯನ್ಸ್ ಮತ್ತು ಸ್ವತಂತ್ರ ವಲಯ ಒಕ್ಕೂಟಗಳು ಮತ್ತು ಸಂಘಗಳ ಜಂಟಿ ವೇದಿಕೆಯು ಹೇಳಿಕೆಯನ್ನು ಬಿಡುಗಡೆಗೊಳಿಸಿದ್ದು, ಎರಡು ದಿನಗಳ ಈ ಮುಷ್ಕರವನ್ನು ದೇಶಾದ್ಯಂತ ಎಲ್ಲಾ ವಲಯಗಳ, ಸಂಘಟಿತ ಮತ್ತು ಅಸಂಘಟಿತ‌ ಕಾರ್ಮಿಕರು  ವಿವಿಧ ಸರ್ಕಾರಿ ಇಲಾಖೆಗಳು,  ಸಾರ್ವಜನಿಕ ವಲಯ, ಖಾಸಗಿ ಸಂಸ್ಥೆಗಳು, ಸಣ್ಣ-ಮಧ್ಯಮ-ಸೂಕ್ಷ್ಮ ಉದ್ಯಮಗಳು, ಗ್ರಾಮೀಣ ಮತ್ತು ನಗರ ಕಾರ್ಮಿಕರು, ವಿವಿಧ ರೀತಿಯಲ್ಲಿ ಭಾಗವಹಿಸಿ, ಸಾರ್ವತ್ರಿಕ ಮುಷ್ಕರದಲ್ಲಿ ಭವ್ಯವಾದ ಯಶಸ್ಸನ್ನು ಸಾಧಿಸಿದಲು ಕಾರಣರಾಗಿದ್ದಾರೆ ಹಲವು ಕಡೆ  ಎಲ್ಲಾ ಎಸ್ಮಾ, ಬೆದರಿಕೆ ಮತ್ತು ನ್ಯಾಯಲಯದ ಮತ್ತು ಇತರೆ ಮತ್ತು ಎಲ್ಲಾ ರೀತಿಯ ಅಡೆತಡೆಗಳನ್ನು ಎದುರಿಸಿಯೂ ಸುಮಾರು 20 ಕೋಟಿ ಶ್ರಮಜೀವಿಗಳು‌ ಈ‌‌ ಮುಷ್ಕರದಲ್ಲಿ ಭಾಗಿಯಾಗಿಯಾಗಿರುವುದು ಸಾಕ್ಷಿಯಾಗಿದೆ ಎಂದು ತಿಳಿಸಿದ್ದಾರೆ.

ಇದನ್ನು ಓದಿ: ಮಾರ್ಚ್‌ 28ರಂದು ದೇಶವ್ಯಾಪಿ ಮೊದಲ ದಿನದ ಮುಷ್ಕರಕ್ಕೆ ಕಾರ್ಮಿಕ ವರ್ಗದ ಅದ್ಭುತ ಸ್ಪಂದನೆ

ಬ್ಯಾಂಕುಗಳು, ವಿಮಾ ಕಂಪನಿಗಳಲ್ಲಿನ ಕಾರ್ಮಿಕರು ಮತ್ತು ಉದ್ಯೋಗಿಗಳು ಭಾರತದಲ್ಲಿ ಎಲ್ಲಿಯೂ ತಮ್ಮ ಕೆಲಸದ ಸ್ಥಳಗಳಿಗೆ ಪ್ರವೇಶಿಸಲಿಲ್ಲ. ಕಲ್ಲಿದ್ದಲು, ವೈಜಾಗ್ ಸ್ಟೀಲ್, ತೈಲ ಮತ್ತು ಎಲ್‌ಪಿಜಿ ಸ್ಥಾವರಗಳು, ಪವರ್‌ಗ್ರಿಡ್, ತಾಮ್ರ, ಟೆಲಿಕಾಂ ವಲಯ, ಸಿಮೆಂಟ್ ವಲಯದ ಕಾರ್ಮಿಕರು ಮಾರ್ಚ್ 28ರ ಬೆಳಿಗ್ಗೆಯಿಂದ ದೊಡ್ಡ ರೀತಿಯಲ್ಲಿ ಮುಷ್ಕರದಲ್ಲಿ ಭಾಗಿಯಾದರು.

ಮಹಾರಾಷ್ಟ್ರ ಸೇರಿದಂತೆ ಎಲ್ಲಾ ರಾಜ್ಯಗಳಲ್ಲಿ ವಿದ್ಯುತ್ ನೌಕರರು ಮುಷ್ಕರ ನಡೆಸಿದರು, ಅಲ್ಲಿ ಸರ್ಕಾರವು ಎಸ್ಮಾವನ್ನು ಜಾರಿಗೊಳಿಸಿತು. ಟುಟಿಕೋರಿನ್ ಮತ್ತು ಪಾರಾದೀಪ್‌ನಲ್ಲಿ ಬಂದರು ಕಾರ್ಮಿಕರು ಸಹ ಕೆಲಸಕ್ಕೆ ಹಾಜರಾಗಿರಲಿಲ್ಲ. ಕೇರಳ ರಾಜ್ಯದಲ್ಲಿ ಒಕ್ಕೂಟಗಳು ಮಾರ್ಚ್ 27-28ರ ಮಧ್ಯರಾತ್ರಿಯಿಂದಲೇ ಮುಷ್ಕರವನ್ನು ಪ್ರಾರಂಭಿಸಿದವು.  ರೈಲ್ವೆ ಮತ್ತು ರಕ್ಷಣಾ ವಲಯದ ಉದ್ಯೋಗಿಗಳು ದೇಶಾದ್ಯಂತ ಒಂದು ಸಾವಿರಕ್ಕೂ ಹೆಚ್ಚು ಸ್ಥಳಗಳಲ್ಲಿ ತೀವ್ರ ಪ್ರದರ್ಶನಗಳನ್ನು ಆಯೋಜಿಸಿದ್ದಾರೆ ಎಂದು ವರದಿಯಾಗಿದೆ.

ಅಂಗನವಾಡಿ, ಆಶಾ, ಮಧ್ಯಾಹ್ನದ ಊಟ ಮತ್ತು ಗೃಹ ಕಾರ್ಮಿಕರು, ಕಟ್ಟಡ ನಿರ್ಮಾಣ, ಬೀಡಿ ಮತ್ತು ಕೃಷಿ ಕಾರ್ಮಿಕರು, ಬೀದಿ ಬದಿ ವ್ಯಾಪಾರಿಗಳು ಮುಷ್ಕರದಲ್ಲಿ ಪಾಲ್ಗೊಂಡು ನೂರಾರು ಸ್ಥಳಗಳಲ್ಲಿ ಪ್ರಮುಖ ಸ್ಥಳಗಳಲ್ಲಿ ಮತ ಪ್ರದರ್ಶನ, ರಸ್ತೆ ತಡೆ, ರೈಲು ತಡೆ, ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು. ಹರಿಯಾಣದ ರಸ್ತೆ ಸಾರಿಗೆ ನೌಕರರು ಮಾರ್ಚ್ 28 ರಂದು ಮುಂಜಾನೆ ಡಿಪೋಗಳಲ್ಲಿ ಪಿಕೆಟಿಂಗ್ ಮಾಡುವ ಮೂಲಕ ತಮ್ಮ ಮುಷ್ಕರವನ್ನು ಪ್ರಾರಂಭಿಸಿದರು, ಎಸ್ಮಾವನ್ನು ಧಿಕ್ಕರಿಸಿ 29ರಂದು ಧರಣಿ ಮುಂದುವರೆಸಿದರು.

ಇದನ್ನು ಓದಿ: ಅಖಿಲ ಭಾರತ ಮುಷ್ಕರ: ರಾಜ್ಯದ ವಿವಿಧೆಡೆ ಕಾರ್ಮಿಕ ಸಂಘಟನೆಗಳಿಂದ ಪ್ರತಿಭಟನೆ

ಮಹಾರಾಷ್ಟ್ರ, ಕರ್ನಾಟಕ, ತಮಿಳುನಾಡು, ತೆಲಂಗಾಣ ಮತ್ತು ಹರಿಯಾಣದಲ್ಲಿ ಎರಡು ದಿನಗಳಂದು ಅನೇಕ ಎಂಎನ್‌ಸಿಗಳು ಸೇರಿದಂತೆ ಖಾಸಗಿ ವಲಯದ ಕೈಗಾರಿಕಾ ಘಟಕಗಳು ಬೃಹತ್ ಮುಷ್ಕರಕ್ಕೆ ಸಾಕ್ಷಿಯಾದವು. ಅಸ್ಸಾಂ, ಹಿಮಾಚಲ ಪ್ರದೇಶ, ಉತ್ತರಾಖಂಡ ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ಜಲವಿದ್ಯುತ್ ಯೋಜನೆಗಳು ಬೃಹತ್ ಮುಷ್ಕರಕ್ಕೆ ಸಾಕ್ಷಿಯಾಗಿದೆ.

ತಮಿಳುನಾಡು, ಕೇರಳ, ಪುದುಚೇರಿ, ಆಂಧ್ರಪ್ರದೇಶ, ತೆಲಂಗಾಣ, ತ್ರಿಪುರಾ, ಅಸ್ಸಾಂ, ಹರಿಯಾಣ, ಜಾರ್ಖಂಡ್ ಮತ್ತು ಇತರ ರಾಜ್ಯಗಳ ಹಲವು ಜಿಲ್ಲೆಗಳಲ್ಲಿ ಬಂದ್ ರೀತಿಯ ಪರಿಸ್ಥಿತಿ ನಿರ್ಮಾಣವಾಗಿದ್ದವು. ಗೋವಾ, ಕರ್ನಾಟಕ, ಮಹಾರಾಷ್ಟ್ರ, ಛತ್ತೀಸ್‌ಗಢ, ಪಂಜಾಬ್, ಬಿಹಾರ, ರಾಜಸ್ಥಾನ, ಪಶ್ಚಿಮ ಬಂಗಾಳ, ಮೇಘಾಲಯ ಮತ್ತು ಅರುಣಾಚಲ ಪ್ರದೇಶ ರಾಜ್ಯಗಳ ಕೈಗಾರಿಕಾ ಪ್ರದೇಶಗಳಲ್ಲಿ ಮುಷ್ಕರದ ಬಿಸಿ ಗಣನೀಯವಾಗಿತ್ತು. ಸಿಕ್ಕಿಂನಲ್ಲೂ ಭದ್ರತಾ ಸಿಬ್ಬಂದಿ ಮುಷ್ಕರ ನಡೆಸಿದ್ದಾರೆ.

ದೆಹಲಿ, ಹಿಮಾಚಲ ಪ್ರದೇಶ, ಗುಜರಾತ್, ಜಮ್ಮು ಮತ್ತು ಕಾಶ್ಮೀರದಲ್ಲಿನ ಕೈಗಾರಿಕಾ ಪ್ರದೇಶಗಳಲ್ಲಿ ಮುಷ್ಕರವಾಗಿರುವ ವರದಿಯಾಗಿದೆ. ತಮಿಳುನಾಡಿನ 300 ಸ್ಥಳಗಳಲ್ಲಿ 50,000 ಸರ್ಕಾರಿ ನೌಕರರು ಕೇಂದ್ರ ಸರ್ಕಾರಿ ಕಚೇರಿಗಳನ್ನು ಮುತ್ತಿಗೆ ಹಾಕಿದರು.  ಅಂಚೆ ಇಲಾಖೆ, ಆದಾಯ ತೆರಿಗೆ ಲೆಕ್ಕ ಪರಿಶೋಧನೆ, ಜಿಎಸ್‌ಐ ಮತ್ತಿತರ ಕೇಂದ್ರ ಸರ್ಕಾರಿ ನೌಕರರು ಕೂಡ ಮುಷ್ಕರದಲ್ಲಿ ಪಾಲ್ಗೊಂಡಿದ್ದಾರೆ. ಮೀನುಗಾರರು ಕೂಡ ಸಮುದ್ರಕ್ಕೆ ಇಳಿಯಲಿಲ್ಲ.

ಕಾರ್ಮಿಕ ಬೇಡಿಕೆಗಳಿಗೆ ಬೆಂಬಲದೊಂದಿಗೆ ತಮ್ಮ ಆರು ಬೇಡಿಕೆಗಳಿಗೆ ಒತ್ತಾಯಿಸಿ ಮುಷ್ಕರದ ಪರವಾಗಿ, ಸಂಯುಕ್ತ ಕಿಸಾನ್ ಮೋರ್ಚಾ(ಎಸ್‌ಕೆಎಂ)ದ ನಿರ್ಧಾರದಂತೆ ಗ್ರಾಮೀಣ ಪ್ರದೇಶದಲ್ಲಿ ರೈತರು ಸಜ್ಜುಗೊಂಡಿದ್ದರು. ರೈತರು ಮತ್ತು ಕೃಷಿ ಕಾರ್ಮಿಕರು ಮುಷ್ಕರ ನಿರತ ಕಾರ್ಮಿಕರೊಂದಿಗೆ ಅನೇಕ ರಾಷ್ಟ್ರೀಯ ಹೆದ್ದಾರಿಗಳು ಸೇರಿದಂತೆ ರಸ್ತೆ ತಡೆ ಮತ್ತು ರೈಲು ತಡೆಯನ್ನು ಸಕ್ರಿಯವಾಗಿ ಸಂಘಟಿಸುವಲ್ಲಿ ಭಾಗವಹಿಸಿದರು.

ಇದನ್ನು ಓದಿ: ಭಾರತ ಉಳಿಸಿ-ಜನತೆಯನ್ನು ರಕ್ಷಿಸಿ: ಮಾರ್ಚ್ 28-29 ಅಖಿಲ ಭಾರತ ಸಾರ್ವತ್ರಿಕ ಮಹಾ ಮುಷ್ಕರ

ಧರಣಿ ನಿರತರ ನೇತೃತ್ವ ವಹಿಸಿದ್ದವರು ಹಾಗೂ ಪ್ರತಿಭಟನಾಕಾರರನ್ನು ಉದ್ದೇಶಿಸಿ ರಾಷ್ಟ್ರೀಯ ಹಾಗೂ ರಾಜ್ಯ ಮಟ್ಟದ ಮುಖಂಡರು ಸರ್ಕಾರದ ಕಾರ್ಮಿಕ ವಿರೋಧಿ, ರೈತ ವಿರೋಧಿ, ಜನ ವಿರೋಧಿ ನೀತಿಗಳ ಬಗ್ಗೆ ಮಾತನಾಡಿದರು. ರಾಷ್ಟ್ರೀಯ ಸಂಪನ್ಮೂಲಗಳು ಮತ್ತು ಮೂಲಸೌಕರ್ಯ ಸೇರಿದಂತೆ ರಾಷ್ಟ್ರೀಯ ಆಸ್ತಿಗಳು ಎಲ್ಲವನ್ನೂ ಬಿಜೆಪಿ ನೇತೃತ್ವದ ಸರ್ಕಾರ ಮಾರಾಟಕ್ಕೆ ಇಟ್ಟಿದೆ ಎಂದು ಅವರು ಆರೋಪಿಸಿದ್ದಾರೆ. ಭಾರತೀಯ ಮತ್ತು ವಿದೇಶಿ ಸಂಸ್ಥೆಯ ಕಾರ್ಪೊರೇಟ್‌ಗಳ ಪ್ರಯೋಜನಗಳಿಗಾಗಿ ಕೇಂದ್ರದಲ್ಲಿ  ರಾಷ್ಟ್ರೀಯ ಸಂಪತ್ತನ್ನು ಸೃಷ್ಟಿಸುವ ಕಾರ್ಮಿಕ ವರ್ಗವನ್ನು ಕಾರ್ಮಿಕ ಕಾನೂನುಗಳಲ್ಲಿನ ಕಠೋರ ಬದಲಾವಣೆಗಳು, ಅವರ ಟ್ರೇಡ್ ಯೂನಿಯನ್‌ಗಳನ್ನು ದುರ್ಬಲಗೊಳಿಸುವುದು, ಮುಷ್ಕರ ಮಾಡುವ ಹಕ್ಕನ್ನು ಕಸಿದುಕೊಳ್ಳುವುದು, ಫ್ಯಾಕ್ಟರಿ ತಪಾಸಣೆಗಳನ್ನು ತೆಗೆದುಹಾಕುವುದು ಇತ್ಯಾದಿಗಳೊಂದಿಗೆ ರಕ್ಷಣೆಯಿಲ್ಲದಂತೆ ಮಾಡಲಾಗುತ್ತಿದೆ. ಕಾರ್ಮಿಕರ ಧ್ವನಿಯನ್ನು ಹತ್ತಿಕ್ಕಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಿರುದ್ಯೋಗ ಮಟ್ಟವು ಶೇಕಡಾ 12ಕ್ಕೆ ತಲುಪಿದೆ ಮತ್ತು ಸರ್ಕಾರದ ಸ್ವಂತ ಅಂಕಿಅಂಶಗಳ ಪ್ರಕಾರ ನಿರುದ್ಯೋಗಿಗಳಲ್ಲಿ 25 ವರ್ಷಕ್ಕಿಂತ ಕಡಿಮೆ ವಯಸ್ಸಿನ ಯುವಕರು ಹೆಚ್ಚಿನವರು ಎಂದು ತಮ್ಮ ಆತಂಕವನ್ನು ವ್ಯಕ್ತಪಡಿಸಿದರು. ಐದು ರಾಜ್ಯಗಳ ಚುನಾವಣೆಯ ನಂತರ ಪೆಟ್ರೋಲ್, ಡೀಸೆಲ್ ಮತ್ತು ಗ್ಯಾಸ್ ಬೆಲೆಗಳು ಮತ್ತೊಮ್ಮೆ ಏರಿಕೆಯಾಗುತ್ತಿವೆ. ಎಲ್ಲಾ ಮೂಲಸೌಕರ್ಯ ಪಿಎಸ್‌ಯುಗಳನ್ನು ವಾಸ್ತವಿಕವಾಗಿ ಖಾಸಗಿ ಕಾರ್ಪೊರೇಟ್‌ಗಳಿಗೆ ಹಸ್ತಾಂತರಿಸಲು ರಾಷ್ಟ್ರೀಯ ಹಣಗಳಿಕೆಯ ಪೈಪ್‌ಲೈನ್ ಯೋಜನೆಯನ್ನು ಮುನ್ನಲೆಗೆ ತರಲಾಗಿದೆ. ಐದು ರಾಜ್ಯಗಳ ಚುನಾವಣೆಯ ಫಲಿತಾಂಶಗಳ ನಂತರದಲ್ಲಿ ಕೇಂದ್ರ ಸಾರ್ವಜನಿಕ ವಲಯದ ಉದ್ಯಮಗಳ ಭೂಮಿಯನ್ನು ಮಾರಾಟ ಮಾಡುವ ನೀತಿಯನ್ನು ಹೊರತರಲಾಗಿದೆ.

ಬಡ್ಡಿದರ  ಕಾರ್ಮಿಕರ ಭವಿಷ್ಯ ನಿಧಿಯನ್ನು ಶೇ 8.5 ರಿಂದ 8.1 ಕ್ಕೆ ಇಳಿಸಲಾಗಿದೆ. ಬ್ಯಾಂಕ್‌ಗಳ ಖಾಸಗೀಕರಣದ ಬಗ್ಗೆ ತೀವ್ರವಾಗಿ ಮಾತನಾಡಲಾಗುತ್ತಿದೆ. ಎಲ್‌ಐಸಿ ನಿಧಿಯ ಗಣನೀಯ ಭಾಗವನ್ನು ಮಾರಾಟ ಮಾಡಲಾಗುತ್ತಿದೆ. ಕೃಷಿ ಕಾನೂನುಗಳ ಕುರಿತು ಸುಪ್ರೀಂ ಕೋರ್ಟ್ ಸಮಿತಿಯ ವರದಿಯ ಮಾತುಕತೆ ಗಾಳಿಯಲ್ಲಿದೆ.

ದೆಹಲಿಯಲ್ಲಿ ಎಲ್ಲಾ ಕಾರ್ಮಿಕ ಒಕ್ಕೂಟಗಳು ಜಂತರ್ ಮಂತರ್‌ನಲ್ಲಿ ಮಾರ್ಚ್ 29, 2022 ರಂದು ಕೇಂದ್ರ ಟ್ರೇಡ್ ಯೂನಿಯನ್‌ಗಳ (ಸಿಟಿಯುಎಸ್‌) ಕೇಂದ್ರ ನಾಯಕರ ನೇತೃತ್ವದಲ್ಲಿ ಪ್ರತಿಭಟನಾ ಪ್ರದರ್ಶನವನ್ನು ಆಯೋಜಿಸಿದ್ದವು.

ಸಭೆಯನ್ನು ಉದ್ದೇಶಿಸಿ ಮಾತನಾಡಿದವರಲ್ಲಿ ಅಮರ್‌ಜೀತ್ ಕೌರ್(ಎಐಟಿಯುಸಿ), ಹರ್ಭಜನ್ ಸಿಂಗ್ ಸಿಧು(ಎಚ್‌ಎಂಎಸ್), ತಪನ್ ಸೇನ್ (ಸಿಐಟಿಯು), ಆರ್‌ ಕೆ ಶರ್ಮಾ (ಎಐಯುಟಿಯುಸಿ), ಜಿ ದೇವರಾಜನ್ (ಟಿಯುಸಿಸಿ), ಲತಾ (ಎಸ್‌ಇಡಬ್ಲ್ಯುಎ), ರಾಜೀವ್ ದಿಮ್ರಿ (ಎಐಸಿಸಿಟಿಯು), ಮೋಹನ್ (ಎಲ್‌ಪಿಎಫ್‌), ಸುರೇಶ್ ದಾಗರ್ (ಯುಟಿಯುಸಿ), ಸಂತೋಷ್ (ಎಂಇಸಿ), ನರೇಂದರ್ (ಐಸಿಟಿಯು).ಮೊದಲಾದವರಿದ್ದರು.

ರಾಜ್ಯಸಭಾ ಸದಸ್ಯ ಬಿನೋಯ್ ವಿಶ್ವಂ ಮತ್ತು ಎಸ್‌ಕೆಎಂ ಪರವಾಗಿ ಹನ್ನಾನ್ ಮೊಲ್ಲಾ ಸಹ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ರಾಷ್ಟ್ರವನ್ನು ವಿಫಲಗೊಳಿಸಿದ್ದಲ್ಲದೆ, ಭಾರತದ ಮೂಲ ಮೌಲ್ಯಗಳಿಗೆ ಹಾನಿಯುಂಟುಮಾಡುವ ಕೆಟ್ಟ ವಿಭಜಕ ಕಾರ್ಯಸೂಚಿಯನ್ನು ಸಡಿಲಿಸಲು ಬಿಡುತ್ತಿರುವ ಕೇಂದ್ರದ ದಬ್ಬಾಳಿಕೆಯ ಆಡಳಿತದ ವಿರುದ್ಧ ತೀವ್ರ ಹೋರಾಟವನ್ನು ಮಾಡಲು ಕಾರ್ಮಿಕ-ರೈತರ ಐಕ್ಯತೆಯನ್ನು ಬಲಪಡಿಸುವುದು ಈ ಸಂದರ್ಭದ ಅವಶ್ಯಕ ಬೇಡಿಕೆಯಾಗಿದೆ ಎಂದು ಸಂಘಟಕರು ಗುರುತಿಸಿದರು.

ವೈವಿಧ್ಯಮಯ ಧಾರ್ಮಿಕ ನಂಬಿಕೆಗಳು, ಸಂಸ್ಕೃತಿಗಳು, ಭಾಷೆಗಳನ್ನು ಹೊಂದಿರುವ ಭಾರತೀಯ ಜನರ ಸಂವಿಧಾನ ಮತ್ತು ಸಾಮರಸ್ಯದ ಜೀವನ ಇದನ್ನು ಐಕ್ಯತೆಯೊಂದಿಗೆ ಗಟ್ಟಿಗೊಳಿಸಲು ಈ‌ ಹೋರಾಟ ಒಂದು‌ ಸ್ಪೂರ್ತಿ ನೀಡಿದೆ ಐಎನ್‌ಟಿಯುಸಿ, ಎಐಟಿಯುಸಿ, ಹೆಚ್‌ಎಂಎಸ್‌, ಸಿಐಟಿಯು, ಎಐಯುಟಿಯುಸಿ, ಟಿಯುಸಿಸಿ, ಸೇವಾ, ಎಐಸಿಸಿಟಿಯು, ಎಲ್‌ಪಿಎಫ್‌, ಯುಟಿಯುಸಿ, ಮತ್ತು ಸ್ವತಂತ್ರ ವಲಯದ ಒಕ್ಕೂಟಗಳು-ಸಂಘಗಳು ತಿಳಿಸಿವೆ.

Donate Janashakthi Media

Leave a Reply

Your email address will not be published. Required fields are marked *