ಪ್ರತಿ ತರಗತಿಯಲ್ಲೂ ಪರಿಸರ ಪಾಠ: ಸಚಿವ ಈಶ್ವರ ಖಂಡ್ರೆ ಸಲಹೆ

ಬೆಂಗಳೂರು: ಪ್ರತಿ ವಿದ್ಯಾರ್ಥಿಯೂ ಸಸಿ ನೆಟ್ಟು ಬೆಳಸಲು, ಎಲ್ಲ ವಿದ್ಯಾರ್ಥಿಗಳಲ್ಲೂ ಪ್ರಕೃತಿ, ಪರಿಸರ ಪ್ರೀತಿ ಮೂಡಿಸಲು 6 ರಿಂದ 12ನೇ ತರಗತಿಯವರೆಗೆ ಪಾಠಗಳಲ್ಲಿ ಪರಿಸರದ ವಿಷಯ ಅಳವಡಿಸಬೇಕು ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಸಲಹೆ ನೀಡಿದ್ದಾರೆ. ಪರಿಸರ

ಇದನ್ನೂ ಓದಿ:ಆನೆ-ಮಾನವ ಸಂಘರ್ಷ ತಡೆಗೆ ಸರ್ಕಾರ ಕ್ರಮ : ಸಚಿವ ಈಶ್ವರ್ ಖಂಡ್ರೆ

ಚಾಮರಾಜಪೇಟೆ ಬಳಿಯ ಹಳೆಕೋಟೆ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ಸೋಮವಾರ ಸೆ-11 ರಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ಜತೆ ಗಿಡ ನೆಡುವ ಮೂಲಕ ಬಜೆಟ್‌ನಲ್ಲಿ ಘೋಸಿಸಿದ್ದ ಸಸ್ಯ ಶ್ಯಾಮಾಲಾ ಯೋಜನೆಗೆ ಚಾಲನೆ ನೀಡಿದರು.

ಕಲ್ಯಾಣ ಕರ್ನಾಟಕದ ಶಾಲೆಗಳಿಗೆ ತಲಾ 100, ಇತರೆ ಸರ್ಕಾರಿ ಶಾಲೆಗಳಿಗೆ ತಲಾ 50 ಸಸಿಗಳನ್ನು ನೀಡಲು ತೀರ್ಮಾನಿಸಲಾಗಿದೆ. ಮಕ್ಕಳೇ ಸಸಿ ನೆಡಲಿದ್ದಾರೆ. ಸಸಿಗಳಿಗೆ ಅವರ ಹೆಸರನ್ನೇ ಇಡಲಾಗುವುದು. ನೆಟ್ಟ ಸಸಿಯ ಘೋಷಣೆಯ ಹೊಣೆ ಆ ಮಕ್ಕಳಿಗೇ ವಹಿಸಲಾಗುವುದು.ಪ್ರಸಕ್ತ ವರ್ಷ ಐದು ಕೋಟಿ ಸಸಿ ನೆಡಲು ತೀರ್ಮಾನಿಸಿದ್ದು, ಜುಲೈ-1 ರಿಂದ ಇಲ್ಲಿಯವರೆಗೆ ನಾಲ್ಕು ಕೋಟಿ ಸಸಿ ನೆಡಲಾಗಿದೆ ಎಂದು ಹೇಳಿದರು.

ಮಧು ಬಂಗಾರಪ್ಪ ಮಾತನಾಡಿ, ಅರಣ್ಯ ಇಲಾಖೆ 50 ಲಕ್ಷ ಸಸಿಗಳನ್ನು ನೀಡಿದೆ, ಇನ್ನೂ 10 ಲಕ್ಷ ಸಸಿಗಳನ್ನು ಪೂರೈಸಬೇಕು ಎಂದು ಮನವಿ ಮಾಡಿದರು.

 

Donate Janashakthi Media

Leave a Reply

Your email address will not be published. Required fields are marked *