ನವದೆಹಲಿ: ಕಳೆದ 13 ವರ್ಷಗಳಿಂದ ಕೋಮಾ ಸ್ಥಿತಿಯಲ್ಲಿ ಇದ್ದ ಯುವಕ ಹರೀಶ್ ರಾಣಾಗೆ ಕುಟುಂಬಸ್ಥರು ಮತ್ತು ಬಂಧುಗಳು ಭಾವುಕವಾಗಿ ವಿದಾಯ ಹೇಳಿದ ಘಟನೆ ಗಮನ ಸೆಳೆದಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ ಈ ದೃಶ್ಯ ಕಂಡುಬಂದಿದೆ. ದಯಾಮರಣ
ಹರೀಶ್ ರಾಣಾ 2013ರಲ್ಲಿ ಪಂಜಾಬ್ ವಿಶ್ವವಿದ್ಯಾಲಯದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾಗ ವಸತಿ ಗೃಹದ ನಾಲ್ಕನೇ ಮಹಡಿಯಿಂದ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ಈ ಅಪಘಾತದ ನಂತರ ಅವರಿಗೆ ತೀವ್ರ ಮೆದುಳು ಗಾಯವಾಗಿದ್ದು, ಅವರು ದೀರ್ಘಕಾಲದಿಂದ ಸಸ್ಯಾವಸ್ಥೆ (vegetative state) ಯಲ್ಲೇ ಇದ್ದರು.
ಇತ್ತೀಚೆಗೆ ಸುಪ್ರೀಂ ಕೋರ್ಟ್ ಅವರ ಪ್ರಕರಣವನ್ನು ಪರಿಗಣಿಸಿ, ಗೌರವಯುತ ಮರಣದ ಹಕ್ಕಿನ ಆಧಾರದ ಮೇಲೆ ಜೀವಾಧಾರ ಚಿಕಿತ್ಸೆ ಹಿಂಪಡೆಯಲು ವೈದ್ಯರಿಗೆ ಅನುಮತಿ ನೀಡಿತ್ತು. ಈ ಹಿನ್ನೆಲೆಯಲ್ಲಿ ಅವರನ್ನು ದೆಹಲಿಯ ಏಮ್ಸ್ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ದಯಾಮರಣ
ಇದನ್ನೂ ಓದಿ : ಸಿಎಂ ಬದಲಾವಣೆ ಕುರಿತು ಯಾವುದೇ ನಿರ್ಧಾರ ಇಲ್ಲ: ಕೆ.ಸಿ. ವೇಣುಗೋಪಾಲ್
ಆಸ್ಪತ್ರೆಗೆ ಕರೆದೊಯ್ಯುವ ಮೊದಲು ಕುಟುಂಬಸ್ಥರು ಮತ್ತು ಪರಿಚಿತರು ರಾಣಾಗೆ ವಿದಾಯ ಹೇಳಿದ ದೃಶ್ಯ ಭಾವುಕತೆಯನ್ನು ಮೂಡಿಸಿದೆ. ವಿಡಿಯೋದಲ್ಲಿ ಬ್ರಹ್ಮಕುಮಾರಿ ಸಂಸ್ಥೆಯೊಬ್ಬರು ಅವರಿಗೆ ತಿಲಕ ಇಟ್ಟು ಪ್ರಾರ್ಥನೆ ಮಾಡುವುದೂ ಕಾಣುತ್ತದೆ. “ಎಲ್ಲರನ್ನೂ ಕ್ಷಮಿಸಿಬಿಡು, ಎಲ್ಲರಿಗೂ ಕ್ಷಮೆ ಕೇಳು… ಈಗ ಹೊರಡುವ ಸಮಯ” ಎಂದು ಅವರು ಹೇಳುತ್ತಿರುವ ದೃಶ್ಯ ಗಮನ ಸೆಳೆಯಿತು.
ವೈದ್ಯರ ತಂಡದ ಮೇಲ್ವಿಚಾರಣೆಯಲ್ಲಿ ಪ್ಯಾಲಿಯೇಟಿವ್ ಕೇರ್ ಪ್ರಕ್ರಿಯೆ ಮುಂದುವರಿಯಲಿದ್ದು, ವೈದ್ಯಕೀಯ ಹಾಗೂ ಕಾನೂನು ನಿಯಮಾವಳಿಗಳನ್ನು ಪಾಲಿಸಿಕೊಂಡು ಜೀವಾಧಾರ ಚಿಕಿತ್ಸೆಯನ್ನು ಕ್ರಮೇಣ ಹಿಂಪಡೆಯಲಾಗುತ್ತದೆ ಎಂದು ತಿಳಿದುಬಂದಿದೆ.
ಈ ನಿರ್ಧಾರ ಕುಟುಂಬಕ್ಕೆ ಭಾರೀ ಭಾವನಾತ್ಮಕ ಕ್ಷಣವಾಗಿದ್ದು, ತಮ್ಮ ಮಗನ ನೋವನ್ನು ವರ್ಷಗಳ ಕಾಲ ನೋಡಿರುವುದು ತುಂಬಾ ಕಷ್ಟಕರವಾಗಿತ್ತು ಎಂದು ರಾಣಾ ಅವರ ತಂದೆ ತಿಳಿಸಿದ್ದಾರೆ.
ಇದನ್ನೂ ನೋಡಿ : ಸಾಮ್ರಾಜ್ಯಶಾಹಿ ಸಖ್ಯತೆ ಬೇಡ: ಶಾಂತಿಗಾಗಿ ಮೇಣದ ಬತ್ತಿ ಪ್ರತಿಭಟನೆ Janashakthi Media
