ನುಹ್ (ಹರಿಯಾಣ): ರಾಜ್ಯದ ನುಹ್ ಜಿಲ್ಲೆಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ(ಮನರೇಗಾ)ಯಡಿ ಕೈಗೊಳ್ಳವ ಕೆಲಸದಲ್ಲಿ ಮೃತರ ಹೆಸರಿನಲ್ಲಿ ಉದ್ಯೋಗ ಚೀಟಿಯನ್ನು ಸೃಷ್ಠಸಿ ಲಕ್ಷಾಂತರ ರೂಪಾಯಿ ದೂಚುತ್ತಿದ್ದ ಜಾಲವನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.
ಪಂಚಾಯತ್ ಮತ್ತು ನೀರಾವರಿ ಇಲಾಖೆಯ ನೌಕರರು, ಇಬ್ಬರು ಬ್ಯಾಂಕ್ ಅಧಿಕಾರಿಗಳು ಸೇರಿದಂತೆ ಒಂಬತ್ತು ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದೆ. ಈ ಸಂಬಂಧ ಸ್ಥಳೀಯ ಗ್ರಾಮಸ್ಥ ಸುಖ್ಬೀರ್ ಸಿಂಗ್ ಅವರು ಸರ್ಕಾರದ ಸಾರ್ವಜನಿಕ ಕುಂದುಕೊರತೆಗಳು ಮತ್ತು ಹರಿಯಾಣ ಮುಖ್ಯಮಂತ್ರಿಗಳಿಗೆ ದೂರು ಸಲ್ಲಿಸಿದ್ದರು, ಸುಮಾರು ಎರಡು-ಮೂರು ವರ್ಷಗಳ ಹಿಂದೆ ಸಾವನ್ನಪ್ಪಿದ ಜನರಿಗೆ ಹಣ ಬಿಡುಗಡೆ ಮಾಡಿರುವ ಬಗ್ಗೆ ಉಲ್ಲೇಖಿಸಿದ್ದಾರೆ.
ಉದ್ಯೋಗ ಚೀಟಿ ಮಾಡಿಸಿ ಅಕ್ರಮವಾಗಿ ಬ್ಯಾಂಕ್ ಖಾತೆ ತೆರೆಯುವ ಮೂಲಕ ಭಾರೀ ಅವ್ಯವಹಾರ ನಡೆಯುತ್ತಿದೆ ಎಂದು ಅಕ್ರಮ ದಂಧೆಯ ಬಗ್ಗೆ ವಿವರಿಸಿರುವ ಸುಖ್ಭೀರ್ ಅವರ ದೂರಿನ ಮೇರೆಗೆ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ತನಿಖೆಗಾಗಿ ತಂಡ ರಚಿಸಿದರು ಮತ್ತು ಬ್ಲಾಕ್ ಅಭಿವೃದ್ಧಿ ಮತ್ತು ಪಂಚಾಯತ್ ಕಚೇರಿ ಮತ್ತು ನೀರಾವರಿ ಇಲಾಖೆಯ ಅಧಿಕಾರಿಗಳು ಮತ್ತು ನೌಕರರು ಏಳು ಜನರು ಉದ್ಯೋಗ ಚೀಟಿಗಳನ್ನು ತಯಾರಿಸಿದ್ದಾರೆ ಮತ್ತು ಈ ವ್ಯಕ್ತಿಗಳಿಗೆ ಇಂದ್ರಿ ಮತ್ತು ಖೇಡ್ಲಿ ಕಂಕನರ್ ನಲ್ಲಿ ಕೆಲಸ ಮಾಡುವುದನ್ನು ತೋರಿಸಿದ್ದಾರೆ ಎಂಬುದು ಖಾತರಿಯಾಗಿತ್ತು ಸುಮಾರು 21,28,651 ರೂಪಾಯಿಗಳ ಅವ್ಯವಹಾರ ನಡೆದಿರುವುದು ಬೆಳಕಿಗೆ ಬಂದಿದೆ.
ಆರೋಪಿಗಳಲ್ಲಿ ಜೂನಿಯರ್ ಎಂಜಿನಿಯರ್, ನೀರಾವರಿ ಇಲಾಖೆಯ ಉಪವಿಭಾಗಾಧಿಕಾರಿ, ಲೆಕ್ಕಪರಿಶೋಧಕ ಮತ್ತು ಬ್ಯಾಂಕ್ ಅಧಿಕಾರಿ ಸೇರಿದ್ದಾರೆ. ಎಲ್ಲಾ ಒಂಬತ್ತು ಆರೋಪಿಗಳ ವಿರುದ್ಧ ಸೆಕ್ಷನ್ 406 (ಕ್ರಿಮಿನಲ್ ನಂಬಿಕೆಯ ಉಲ್ಲಂಘನೆ), 420 (ವಂಚನೆ), 467 (ಮೌಲ್ಯಯುತ ಭದ್ರತೆಯ ನಕಲಿ), 468 (ವಂಚನೆಯ ಉದ್ದೇಶಕ್ಕಾಗಿ ನಕಲಿ), 471 (ನಕಲಿ ದಾಖಲೆ ಬಳಸಿ), 120- ಅಡಿಯಲ್ಲಿ ಎಫ್ ಐಆರ್ ದಾಖಲಿಸಲಾಗಿದೆ.
ರೋಜಕ ಮೆಯೋ ಪೊಲೀಸ್ ಠಾಣೆಯಲ್ಲಿ ಪ್ರಕರಣದಾಖಲಾಗಿದ್ದು ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ನುಹ್ ಜಿಲ್ಲಾ ಎಸ್‍ಪಿ ವರುಣ್ ಸಿಂಗ್ಲಾ ಹೇಳಿದ್ದಾರೆ.