ರಾಜ್ಯದ ಜನರಿಗೆ ಕರೆಂಟ್ ಶಾಕ್ : ದರ ಹೆಚ್ಚಳಕ್ಕೆ ಪ್ರಸ್ತಾಪ

ಬೆಂಗಳೂರು : ರಾಜ್ಯದಲ್ಲಿ ದರ ಏರಿಕೆಯದೇ ಸದ್ದು. ಅಗತ್ಯ ವಸ್ತುಗಳು, ಅಡುಗೆ ಅನಿಲ, ತರಕಾರಿ ಹೀಗೆ ಜನಸಾಮಾನ್ಯರ ದಿನಬಳಕೆಯ ಅಗತ್ಯ ವಸ್ತುಗಳ ದರ ಏರುತ್ತಲೇ ಇದೆ. ಈಗ ಆ ಸಾಲಿಗೆ ವಿದ್ಯತ್‌ ದರ ಹೆಚ್ಚಳ ಸೇರಿ ಕೊಳ್ಳುತ್ತಿದೆ. ರಾಜ್ಯ ಸರಕಾರ ನೀಡುತ್ತಿರುವ ದರ ಏರಿಕೆಯ ಶಾಕ್‌ ಗೆ ಜನ ಸಾಮಾನ್ಯವರು ಬವಣೆ ಪಡೆವಂತಾಗಿದೆ.

ಬೇಸಿಗೆಗೂ ಮುನ್ನವೇ ರಾಜ್ಯದ ಜನತೆಗೆ ವಿದ್ಯುತ್ ದರ ಏರಿಕೆ ಬಿಸಿ ತಟ್ಟಲಿದೆ. ಯುನಿಟ್‌ಗೆ 1 ರೂ. 50 ಪೈಸೆ ಹೆಚ್ಚಳಕ್ಕೆ ಕೆಇಆರ್‌ಸಿಗೆ ಬೆಸ್ಕಾಂ ಅಧಿಕಾರಿಗಳು ಪ್ರಸ್ತಾವನೆ ಸಲ್ಲಿಸಿದ್ದಾರೆ. ಹೀಗಾಗಿ ಶೀಘ್ರದಲ್ಲೇ ವಿದ್ಯುತ್ ದರ ಹೆಚ್ಚಳವಾಗುವ ಸಾಧ್ಯತೆ ಇದೆ.

ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಗ್ರಾಹಕರು ಕಂಗಾಲಾಗಿದ್ದಾರೆ. ಈ ಬೆನ್ನಲ್ಲೇ ಇದೀಗ ಗ್ರಾಹಕರಿಗೆ ಮತ್ತೊಂದು ಶಾಕ್ ಎದುರಾಗಲಿದೆ. ರಾಜ್ಯದ ವಿದ್ಯುತ್ ಸರಬರಾಜು ಕಂಪನಿಗಳಾದ ಬೆಸ್ಕಾಂ, ಮೆಕ್ಕಾಂ, ಚೆಕ್ಕಾಂ ಸೇರಿದಂತೆ ಇತರೆ ಕಂಪನಿಗಳು ಪ್ರತಿ ಬಾರಿಯಂತೆ ಈ ವರ್ಷವೂ ದರ ಹೆಚ್ಚಳಕ್ಕೆ ಪ್ರಸ್ತಾವನೆ ಸಲ್ಲಿಸಿವೆ. ನಷ್ಟದ ನೆಪವೊಡ್ಡಿ ಬೆಸ್ಕಾಂ ವ್ಯಾಪ್ತಿಯಲ್ಲಿ 1 ರೂ 50 ಪೈಸೆ ಹೆಚ್ಚಳ ಮಾಡುವಂತೆ ಬೆಸ್ಕಾಂ ಪ್ರಸ್ತಾವನೆ ಸಲ್ಲಿಸಿದೆ. ಕಳೆದ ಬಾರಿ 1 ರೂ 39 ಪೈಸೆ ಪ್ರಸ್ತಾವನೆ ಇಟ್ಟಿತ್ತು. ಇದೀಗ ಮತ್ತೆ ಈ ಬಾರಿ 1 ರೂ 50 ಪೈಸೆ ಹೆಚ್ಚಳಕ್ಕೆ ಪ್ರಸ್ತಾಪ ಸಲ್ಲಿಸಿದೆ. ಸದ್ಯ ಈಗ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ(KERC) ದರ ಹೆಚ್ಚಳಕ್ಕೆ ಗ್ರೀನ್ ಸಿಗ್ನಲ್ ನೀಡುತ್ತಾ? ಎಂಬ ಪ್ರಶ್ನೆ ಎದ್ದಿದೆ.

KERC ಸಾಧಕ ಬಾಧಕಗಳನ್ನ ಪರಿಶೀಲನೆ ಮಾಡಿ ದರ ಪರಿಷ್ಕರಣೆ ಮಾಡಲಿದೆ. ಬೆಸ್ಕಾಂ ಪ್ರಸ್ತಾವನೆಗೆ KERC ಒಪ್ಪಿಗೆ ಕೊಟ್ಟರೆ ಜನರಿಗೆ ದರ ಹೆಚ್ಚಳದ ಬಿಸಿ ತಟ್ಟಲಿದೆ.

ಯಾವ ವರ್ಷ ಎಷ್ಟೆಷ್ಟು ದರ ಪರಿಷ್ಕರಣೆಯಾಗಿತ್ತು?
2009 ರಲ್ಲಿ ಪ್ರತಿ ಯೂನಿಟ್ಗೆ 34 ಪೈಸೆ ಹೆಚ್ಚಳ
2010 ರಲ್ಲಿ ಪ್ರತಿ ಯೂನಿಟ್ಗೆ 30 ಪೈಸೆ ಹೆಚ್ಚಳ
2011 ರಲ್ಲಿ ಪ್ರತಿ ಯೂನಿಟ್ಗೆ 28 ಪೈಸೆ ಹೆಚ್ಚಳ
2012 ರಲ್ಲಿ ಪ್ರತಿ ಯೂನಿಟ್ಗೆ 13 ಪೈಸೆ ಹೆಚ್ಚಳ
2013 ರಲ್ಲಿ ಪ್ರತಿ ಯೂನಿಟ್ಗೆ 13 ಪೈಸೆ ಹೆಚ್ಚಳ
2017 ರಲ್ಲಿ ಪ್ರತಿ ಯೂನಿಟ್ಗೆ 48 ಪೈಸೆ ಹೆಚ್ಚಳ
2019 ರಲ್ಲಿ ಪ್ರತಿ ಯೂನಿಟ್ಗೆ 35 ಪೈಸೆ ಹೆಚ್ಚಳ
2020 ರಲ್ಲಿ ಪ್ರತಿ ಯೂನಿಟ್ಗೆ 30 ಪೈಸೆ ಹೆಚ್ಚಳ

ದರ ಹೆಚ್ಚಳಕ್ಕೆ ಕಾರಣ : ವಿದ್ಯುತ್‌ ದರ ಹೆಚ್ಚಳಕ್ಕೆ ಸರಕಾರ ಕೊಡ್ತಾ ಇರುವ ಕಾರಣಗಳತ್ತ ನಾವು ಕಣ್ಣು ಹಾಯಿಸೋಣ, ಅದಕ್ಕೆ ಅವರು ಕೋಡ್ತಾ ಇರುವ ಕಾರಣ ಏನು ಅಂದ್ರೆ ವಿದ್ಯುತ್‌ ಖರೀದಿ ದರ ಏರಿಕೆ ಹೆಚ್ಚಾಗಿದೆ. ಹಾಗಾಗಿ ದರ ಹೆಚ್ಚಳ ಮಾಡ್ತಾ ಇದ್ದೀವಿ ಅಂತ ಸರಕಾರ ಹೇಳ್ತಾ ಇದೆ. ಒಟ್ಟು ರಾಜ್ಯದಲ್ಲಿ 11 ಉದ್ದಿಮೆಗಳು ವಿದ್ಯುತ್‌ನ್ನು ಉತ್ಪಾದನೆ ಮಾಡ್ತಾ ಇವೆ. ನಮ್ಮ ರಾಜ್ಯದಲ್ಲಿ ಉತ್ಪಾದನೆಯಾಗುವ ವಿದ್ಯುತ್ ಪ್ರಮಾಣ 30,000 ಮೆಗಾವ್ಯಾಟ್, ನಮ್ಮಲ್ಲಿರುವ ಬೇಡಿಕೆ ಪ್ರಮಾಣ 8000 ದಿಂದ 10,500 ಮೆಗಾವ್ಯಾಟ್ ಇದೆ. ನಾವೇ ವಿದ್ಯುತ್ ಅನ್ನು ಮಾರುವಂತಹ ಸದೃಢ ಸ್ಥಿತಿಯಲ್ಲಿ ಇದ್ದೇವೆ, ಹೀಗಿದ್ದಾಗ ನಷ್ಟ ಆಗೋಕೆ ಹೇಗೆ ಸಾಧ್ಯ? ಇವರು ಎಲ್ಲಿಂದ ಖರೀಧಿ ಮಾಡ್ತಾರೆ? ಗೊತ್ತಿಲ್ಲ ಸರಕಾರವೇ ಅದಕ್ಕೆ ಉತ್ತರವನ್ನು ಕೊಡಬೇಕಿದೆ. ಉದ್ದಿಮೆಗಳು ನಷ್ಟವನ್ನು ಅನುಭವಿಸಿದ್ದರೆ ಅದಕ್ಕೆ ಸರಕಾರದ ನಿರ್ಲಕ್ಷ್ಯವೇ ಕಾರಣವಾಗಿದೆ.

ದರ ಹೆಚ್ಚಳಕ್ಕೆ ವಿರೋಧ : ದರ ಹೆಚ್ಚಳಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ರಾಜ್ಯ ಸರಕರಾದ ಖಾಸಗೀಕರಣದ ನೀತಿಗಳಿಂದಾಗಿ ಇಂದು ವಿದ್ಯುತ್ ದರ ಹೆಚ್ಚಾಗಲು ಕಾರಣವಾಗಿದೆ. ರೈತರು, ಸಣ್ಣ ಕೈಗಾರಿಕೆಗಳು, ಬಡಜನರಿಗೆ ಇನ್ನಷ್ಟು ಸಂಕಷ್ಟಗಳು ಎದುರಾಗಲಿವೆ. ಕೊರೊನಾ, ಲಾಕ್ಡೌನ್ ಹಾಗೂ ಅತೀವೃಷ್ಟಿ ಮಳೆಹಾನಿಯಿಂದ ಸಂಕಷ್ಟ ಎದುರಿಸುತ್ತಿದ್ದ ಜನರಿಗೆ ಈಗ ವಿದ್ಯುತ್ ದರ ಏರಿಕೆಯ ಸಂಕಷ್ಟವನ್ನು ಎದುರಿಸಲಿದ್ದಾರೆ. ಸರಕಾರ ಸಾರ್ವಜನಿಕರ ವಿರೊಧವನ್ನು ಪರಿಗಣಿಸಿ ವಿದ್ಯತ್ ದರ ಏರಿಸುವ ಪ್ರಸ್ತಾಪವನ್ನು ಕೈ ಬಿಡಬೇಕು ಎಂದು ಜನಪರ ಸಂಘಟನೆಗಳು ಆಗ್ರಹಿಸಿವೆ.

Donate Janashakthi Media

Leave a Reply

Your email address will not be published. Required fields are marked *