ಈ ಸೆ.11 ನೆನಪಿದೆಯೇ ?

ಸೆ.11, ಜಗತ್ತು ಅಮೇರಿಕದ ಮೇಲಿನ ಧಾಳಿಯಿಂದ ದಿಗ್ಭ್ರಮೆಗೊಂಡ‌ ದಿನ.

ಆದರೆ ಅದೇ ದಿನವೇ, ಇಪ್ಪತ್ತು ವರ್ಷಗಳ ಹಿಂದೆ ಅಮೆರಿಕದ ಸಿಐಎ ನೊಬೆಲ್ ಪ್ರಶಸ್ತಿ ವಿಜೇತ ಸಾಹಿತಿ ನೆರೂಡಾನ ಪ್ರಿಯ ಚಿಲಿಯ ಪ್ರಜಾಪ್ರಭುತ್ವವನ್ನು ಹೊಂದ ದಿನ ಹಾಗೂ ಅವರ ಪ್ರಿಯ ಮಿತ್ರ ಅಲೆಂಡೆಯವರನ್ನು ಕೊಂದ ದಿನ.

ಜಗತ್ತಿನ ಮೊತ್ತ‌ಮೊದಲ ಚುನಾಯಿತ ಕಮ್ಯೂನಿಸ್ಟ್ ಸರ್ಕಾರ, ಚುನಾಯಿತವಾಗಬಾರದೆಂದು ಸಿಐಎ ಮತ್ತು‌ ಅಮೆರಿಕದ ಮತ್ತು ವಿಶ್ವದ‌ ಅತಿ ದೊಡ್ಡ ಟೆಲಿಫೋನ್ ಕಂಪನಿ, ತಾಮ್ರ ಗಣಿಗಳ ಮಾಲೀಕ ಐಟಿಟಿ ಕಂಪನಿ, ಯುನೈಟೆಡ್ ಫ್ರೂಟ್ ಕಂಪನಿ ಮತ್ತಿತರರು ಸೇರಿ ದುಡ್ಡಿನ ಹೊಳೆ ಹರಿಸಿ ದೊಡ್ಡ ಸಂಚು ಮಾಡಿದರು. ಪತ್ರಿಕೆಗಳ ಮೂಲಕ ದೊಡ್ಡ ಅಪಪ್ರಚಾರ ನಡೆಸಿದರು.

ಆದರೆ ಅಲ್ಲಿಯವರೆಗೆ ಚಿಲಿಯನ್ನು ಆಳಿದ ಅಮೆರಿಕದ ಗುಲಾಮ ಸರ್ಕಾರಗಳು ಜನರನ್ನು ಸಂಕಟದ ಕೂಪದಲ್ಲಿ ತಳ್ಳಿದ್ದರು. ಅದರ ವಿರುದ್ಧ ಕಮ್ಯೂನಿಸ್ಟ್ ಪಕ್ಷ ನಡೆಸಿದ ಹೋರಾಟಗಳು ಹಾಗೂ ಒದಗಿಸಿದ‌ ಪರಿಹಾರಗಳು ಅದನ್ನು ಮತ್ತು ಅದರ ನಾಯಕ ಸಾಲ್ವಡಾರ್ ಅಲೆಂಡೆಯನ್ನು ಅತ್ಯಂತ ಜನಪ್ರಿಯವಾಗಿಸಿತ್ತು.

ಇದನ್ನು ಓದಿ: ಚಿಲಿ : ಹೊಸ ಸಂವಿಧಾನ ರಚನೆಗೆ ಭಾರೀ ಬೆಂಬಲ

ಅಲೆಂಡೆ ಚುನಾಯಿತರಾಗಿ ಅಧ್ಯಕ್ಷರಾದರು. ತಕ್ಷಣವೇ ಜನರ ಮೇಲಿನ ತೆರಿಗೆ ಹೊರೆ, ಬೆಲೆ ಇಳಿಕೆಗಳ ಮೂಲಕ ಜನಪ್ರಿಯವಾದರು. ಇದರಿಂದ ಅಮೆರಿಕವನ್ನು ಆಳುವ ಕಾರ್ಪೊರೇಟ್‌ಗಳಿಗೆ ಬಹಳ ಭಯವಾಯಿತು.

ಈ ಸರ್ಕಾರವನ್ನು ಬೀಳಿಸಲು ಇನ್ನಿಲ್ಲದ‌ ಪ್ರಯತ್ನ ನಡೆಸಲಾಯಿತು. ಪತ್ರಿಕೆಗಳು ಮಾತ್ರವಲ್ಲದೆ ಜನರ ದಂಗೆ, ಅಕ್ರಮ ಮುಷ್ಕರಗಳಿಗೆ ಅಮೆರಿಕದ ಹಣ ಚೆಲ್ಲುವ ಮೂಲಕ ಸಾಧ್ಯವಾಗದಾಗ ಮಿಲಿಟರಿ ದಂಗೆ ಎಬ್ಬಿಸಲು ಅಲ್ಲಿಯ ಸೇನಾನಾಯಕನಿಗೆ ಆಸೆ, ಅಮಿಷಗಳನ್ನೊಡ್ಡಿ ಮಿಲಿಟರಿ ದಂಗೆಗೆ ಪ್ರೇರೇಪಿಸಲಾಯಿತು.

ಆಸ್ಟ್ರೇಲಿಯಾದ ಗುಪ್ತಚರ ಸಂಸ್ಥೆಯೂ ಅಮೇರಿಕದ ಸಿಐಎ ಸಂಚಿನಲ್ಲಿ ಪಾಲ್ಗೊಳಿಸಲಾಯಿತು. ಕೊನೆಗೆ ಸೆ.11ರಂದು ಮಿಲಿಟರಿ ಪಡೆ ಪಿನೋಚೆಟ್ ಎಂಬ ಸೇನಾಧಿಕಾರಿಯ ನೇತೃತ್ವದಲ್ಲಿ ಅಧ್ಯಕ್ಷರ ಬಂಗಲೆಗೆ ಮುತ್ತಿಗೆ ಹಾಕಿ ವಶಪಡಿಸಿಕೊಂಡಿತು. ಅಧ್ಯಕ್ಷರನ್ನು ಕೊಲೆಗೈದಿತು. ‌ಮುಂದೆ 25 ವರ್ಷಗಳ‌ ಕಾಲ ನಿರಂತರವಾಗಿ ಸಾವಿರಾರು ಜನರ ಕೊಲೆ, ಸುಲಿಗೆ, ದೌರ್ಜನ್ಯಗಳಲ್ಲಿ ಲಕ್ಷಾಂತರ ಜನರು ಪಾಡುಪಟ್ಟರು. ಮತ್ತೆ ಪ್ರಜಾಪ್ರಭುತ್ವ ಚಳುವಳಿಯಿಂದ ಸ್ಥಾಪನೆಯಾದ ಮೇಲೆ ಪಿನೊಚೆಟ್‌ಗೆ ನ್ಯಾಯಾಲಯ ಶಿಕ್ಷೆ ವಿಧಿಸಿತು‌.

ಮುಂದೆ ಕೆಲ ವಾರಗಳ ನಂತರ ಚುನಾಯಿತನಾದ ಆಸ್ಟ್ರೇಲಿಯಾದ ಹೊಸ ಅಧ್ಯಕ್ಷ ತಮ್ಮ ದೇಶದ ಗುಪ್ತಚರ ಪಡೆ ಈ ಸಂಚಿನಲ್ಲಿ ಭಾಗವಹಿಸಲು ವಿರೋಧ ವ್ಯಕ್ತಪಡಿಸಿದುದಕ್ಕೆ ಸಿಐಎ ಸಂಚು ನಡೆಸಿ ಆಸ್ಟ್ರೇಲಿಯಾ ಅಧ್ಯಕನನ್ನೇ ಅಧಿಕಾರದಿಂದ ಕಿತ್ತೊಗೆಯಲಾಯಿತು.

ಇದನ್ನು ಓದಿ: ಚಿಲಿಯಲ್ಲಿ ಅಲೆಂದೆ ಮತ್ತೆ ನಗೆ ಬೀರಿದ್ದಾರೆ

ಅಂದಿನಿಂದ ಹಲವು ಕಾಲ ವಿಶ್ವದ ಜನಮಾನಸದ ಭಾಗವಾಗಿದ್ದ ಈ ಘಟನೆ ಮತ್ತು‌ ನಂತರದ ಕ್ರೌರ್ಯವನ್ನು ‌ಪೂರ್ಣ ಮರೆಸಲಾಗಿದೆ.

ಈ ಸೆಪ್ಟೆಂಬರ್ 11 ಬಹಳ ಜನರಿಗೆ ಇಂದು‌ ನೆನಪಿನಲ್ಲಿಯೇ ?

ಕ್ಯೂಬಾದ ಅಧ್ಯಕ್ಷ ಕ್ಯಾಸ್ಟ್ರೋರವರು, ಶಾಂತಿಯುತವಾಗಿ, ಪ್ರಜಾಪ್ರಭುತ್ವ ಮಾರ್ಗದಲ್ಲಿ ಅಧಿಕಾರಕ್ಕೆ ಬರುವ ಜನಪ್ರಿಯತೆ ಕಮ್ಯೂನಿಸ್ಟ್ ಪಕ್ಷಗಳಿಗಿದೆ. ಆದರೆ‌ ಅಮೆರಿಕದ ನೇತೃತ್ವದ ಕಾರ್ಪೊರೇಟ್ ಕೂಟ ಆ ಮಾರ್ಗದಲ್ಲಿ ಅಧಿಕಾರ ಪಡೆಯುವುದನ್ನು ತಡೆಯುವ ಎಲ್ಲಾ ಪ್ರಯತ್ನ ಮಾಡುತ್ತದೆ. ಅಧಿಕಾರಕ್ಕೆ ಬಂದ ನಂತರವೂ ಬೀಳಿಸುವುದು ಖಚಿತ. ಆದ್ದರಿಂದ ಜನರದೇ ಆದ ಒಂದು ಸೈನ್ಯ ಪಡೆ, ಅಮೆರಿಕದ ಕುತಂತ್ರ, ಸೈನ್ಯ ಧಾಳಿಯನ್ನು ಎದುರಿಸಬಲ್ಲ ಪಡೆ ಬಹಳ ಬಹಳ ಮುಖ್ಯ ಎಂದು ಎಚ್ಚರಿಸಿದ್ದರಂತೆ.

ಜಿ.ಎನ್.ನಾಗರಾಜ್

Donate Janashakthi Media

Leave a Reply

Your email address will not be published. Required fields are marked *