ಡಿವೈಎಫ್ಐ 12ನೇ ರಾಜ್ಯ ಸಮ್ಮೇಳನದ ಲಾಂಛನ ಬಿಡುಗಡೆ

ಮಂಗಳೂರು :  ಡಿವೈಎಫ್ಐನ 12ನೇ ರಾಜ್ಯ ಸಮ್ಮೇಳನದ ಲಾಂಛನ ಬಿಡುಗಡೆ ಕಾರ್ಯಕ್ರಮ ಮಂಗಳೂರಿನ ವಿಕಾಸ ಕಛೇರಿಯಲ್ಲಿನಡೆಯಿತು. ಡಿವೈಎಫ್ಐ

ಮುಖ್ಯ ಅತಿಥಿಯಾಗಿ ಭಾಗಿಯಾಗಿದ್ದ ಜನಪದ ವಿದ್ವಾಂಸ ಡಾ. ಗಣನಾಥ ಶೆಟ್ಟಿ ಎಕ್ಕಾರು ಮಾತನಾಡುತ್ತಾ, ಇಂದು ದೇಶದ ಪ್ರಗತಿ ಎಂದರೆ ಆರ್ಥಿಕ ಪ್ರಗತಿ ಎಂದಿದೆ. ನಿಜಕ್ಕೂ ಅಭಿವೃದ್ಧಿ ಎಂದರೆ ಜನರ ಜೀವನ ಮಟ್ಟದಲ್ಲಿ ಆಗಬೇಕಿತ್ತು. ಆದರೆ ಭಾರತದ ಜನತೆಯ ಬದುಕಿನ ಬದಲಾವಣೆ ಕನಸ್ಸಾಗಿಯೇ ಉಳಿದಿದೆ.‌ ಕಡು ಬಡತನದ 150 ದೇಶಗಳ ಪಟ್ಟಿಯಲ್ಲಿ ಭಾರತ 112 ನೇ ಸ್ಥಾನದಲ್ಲಿದೆ ಆದರೆ ಕಳೆದ 9 ವರ್ಷದಲ್ಲಿ ದೇಶವು ಸಂಪೂರ್ಣ ಪ್ರಗತಿ ಸಾಧಿಸಿದೆ ಎಂಬ ಕೇಂದ್ರ ಸರ್ಕಾರದ ಸುಳ್ಳುಗಳ ಜೊತೆಗೆ ದೇಶದ ಯುವಜನರನ್ನು ಕೋಮುವಾದೀಕರಗೊಳಿಸಿ ಏಕ ಸಂಸ್ಕೃತಿಯನ್ನು ಹೇರುತ್ತಾ ಭಾರತದ ಬಹುತ್ವವನ್ನು ಒಡೆಯುವ ಪ್ರಯತ್ನಗಳು ಸಾಗಿವೆ ಎಂದು ಕಳವಳ ವ್ಯಕ್ತಪಡಿಸಿದರು.

ಕಳೆದ ಚುನಾವಣಾ ಸಂದರ್ಭದಲ್ಲಿ ಪುಲ್ವಾಮಾ ದಾಳಿ ಮತ್ತು ಈ ಚುನಾವಣೆಗೆ ರಾಮಮಂದಿರವನ್ನು ಜನರ ಮುಂದಿರಿಸಿ ಈ ಮಧ್ಯೆ ನಡೆದ ಕೇಂದ್ರದ ಅನೇಕ ಹಗರಣಗಳ ಚರ್ಚೆ ಗೌನವಾಗಿದೆ. ಇಂತಹ ಜನರ ಬದುಕಿನ ವಿಚಾರದ ಗಂಭೀರ ಚರ್ಚೆಗಳು ಡಿವೈಎಫ್ಐ ಸಮ್ಮೇಳನದ ಭಾಗವಾಗಿ ನಡೆಯಲಿ. ದೇಶದ ಜಾತ್ಯಾತೀತತೆಯನ್ನು ಬಯಸುವ ಬಹುತ್ವವನ್ನು ಬೆಂಬಲಿಸುವ ಜನತೆ ಈ ದುರಿತ ಕಾಲದಲ್ಲಿ ನಿರಾಸೆಗೊಳ್ಳುವ ಅಗತ್ಯವಿಲ್ಲ. ಭಾರತ ಪ್ರಕಾಶಿಸುತ್ತಿದೆ ಎಂದು ಸುಳ್ಳನ್ನು ವ್ಯಾಪಕವಾಗಿ ಬಿತ್ತರಿಸಿದ ವಾಜಪೇಯಿ ಸರ್ಕಾರವನ್ನು ಜನತೆ ಸೋಲಿಸಿದ ಇತಿಹಾಸ ನಮ್ಮ ಮುಂದಿದೆ, ಆ ನಿಟ್ಟಿನಲ್ಲಿ ಯುವ ಜನತೆ ತೊಡಗಬೇಕು ಎಂದು ಕರೆ ನೀಡಿದರು. ಡಿವೈಎಫ್ಐ

ಇದನ್ನೂ ಓದಿಉಳ್ಳಾಲ | ಕಲ್ಲಡ್ಕ ಭಟ್ ವಿರುದ್ಧ ಪ್ರತಿಭಟಿಸಿದವರ ಮೇಲೆ ಸ್ವಯಂ ಪ್ರೇರಿತ ಎಫ್‌ಐಆರ್‌ ದಾಖಲಿಸಿದ ಕಾಂಗ್ರೆಸ್ ಸರ್ಕಾರ!

ಡಿವೈಎಫ್ಐ ರಾಜ್ಯ ಅಧ್ಯಕ್ಷರಾದ ಮುನೀರ್ ಕಾಟಿಪಳ್ಳ ರಾಜ್ಯ ಸಮ್ಮೇಳನದ ಲಾಂಛನವನ್ನು ಬಿಡುಗಡೆಗೊಳಿಸಿ ಮಾತನಾಡುತ್ತಾ ಸೌಹಾರ್ದತೆ, ಸಾಮರಸ್ಯ ಇಂದು ದೇಶದಲ್ಲಿ ಬಹುದೊಡ್ಡ ಬೆದರಿಕೆಯನ್ನು ಎದುರಿಸುತ್ತಿದೆ. ಘನತೆಯ ಬದುಕನ್ನು ಜನತೆ ಕಳೆದುಕೊಳ್ಳುತ್ತಿದೆ. ಶಿಕ್ಷಣ, ಆರೋಗ್ಯಕ್ಕಾಗಿ ನಾವು ಯಾರ್ಯಾರಿಗೋ ಕೈ ಚಾಚುವ ದಯನೀಯ ಸ್ಥಿತಿ ಇಂದು ನಮ್ಮದಾಗಿದೆ. ಚುನಾವಣೆಗಳ ಫಲಿತಾಂಶದಿಂದ ಬದಲಾವಣೆಗಳು ಬರುವುದಿಲ್ಲ. ಕರ್ನಾಟಕದಲ್ಲಿ ಜಾತ್ಯಾತೀತರೆನಿಸಿಕೊಂಡ ಪಕ್ಷಗಳು ಕೂಡ ಕೋಮುವಾದದ ವಿರುದ್ಧದ ಸೈದ್ಧಾಂತಿಕ ಹೋರಾಟದಲ್ಲಿ ಸೋತಿದೆ. ಆದರೆ ಡಿವೈಎಫ್ಐ ಜನತೆಯನ್ನು ಎಚ್ಚರಿಸುವ ಕಾರ್ಯದಲ್ಲಿ ಸೋತಿಲ್ಲ ಎಂದರು.

ವೇದಿಕೆಯಲ್ಲಿ ಸಮ್ಮೇಳನದ ಸ್ವಾಗತ ಸಮಿತಿಯ ಸಂಘಟನಾ ಕಾರ್ಯದರ್ಶಿ ಸುನೀಲ್ ಕುಮಾರ್ ಬಜಾಲ್, ಡಿವೈಎಫ್ಐ ಜಿಲ್ಲಾಧ್ಯಕ್ಷರಾದ ಬಿ.ಕೆ ಇಮ್ತಿಯಾಜ್, ಡಿವೈಎಫ್ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್, ಸ್ವಾಗತ ಸಮಿತಿಯ ಮಹಾ ಪೋಷಕರಾದ ಡಾ ವಸಂತ ಕುಮಾರ್ , ಕೆ ಯಾದವ ಶೆಟ್ಟಿ, ಫ್ಲೆವಿ ಕ್ರಾಸ್ತಾ , ಉಪಸ್ಥಿತರಿದ್ದರು. ಡಿವೈಎಫ್ಐ ಜಿಲ್ಲಾ ಕೋಶಾಧಿಕಾರಿ ಮನೋಜ್ ವಾಮಂಜೂರು ವಂದಿಸಿದರು. ಡಿವೈಎಫ್ಐ

ಈ ವಿಡಿಯೋ ನೋಡಿಮಂಗಳೂರು ಪೊಲೀಸರ ಕಡಿವಾಣ ಕಲ್ಲಡ್ಕ ಪ್ರಭಾಕರ್‌ ಭಟ್‌ ಕೈಯಲ್ಲಿದೆ – ಬಿ.ಕೆ. ಇಮ್ತಿಯಾಝ್ ಡಿವೈಎಫ್ಐ

Donate Janashakthi Media

Leave a Reply

Your email address will not be published. Required fields are marked *