“ಕೃಷಿ ಉಳಿಸಿ-ಪ್ರಜಾಪ್ರಭುತ್ವ ಉಳಿಸಿ” ಕರೆಗೆ ದುಡಿಯುವ ಜನರ ಭಾರೀ ಬೆಂಬಲ: ಎಐಕೆಎಸ್‍ ಅಭಿನಂದನೆ

ಜೂನ್‍ 26ರ “ಕೃಷಿ ಉಳಿಸಿ-ಪ್ರಜಾಪ್ರಭುತ್ವ ಉಳಿಸಿ” ಕರೆಗೆ ದೇಶಾದ್ಯಂತ ದುಡಿಯುವ ಜನರಿಂದ ಭಾರೀ ಸಂಪದನೆ ದೊರೆತಿದೆ. ಸುಮಾರಾಗಿ ಎಲ್ಲ ರಾಜಭವನಗಳ ಮುಂದೆ ಲಕ್ಷಾಂತರ ಜನರು ಪ್ರತಿಭಟನೆ ನಡೆಸಿದ್ದಾರೆ. ಸಂಯುಕ್ತ ಕಿಸಾನ್ ‍ಮೋರ್ಚಾ, ಅಖಿಲ ಭಾರತ ಕಿಸಾನ್ ಸಂಘರ್ಷ ಸಮನ್ವಯ ಸಮಿತಿ ಮತ್ತು ಕೇಂದ್ರೀಯ ಕಾರ್ಮಿಕ ಸಂಘಟನೆಗಳ ಎಲ್ಲ ಘಟಕಗಳು ಇದರಲ್ಲಿ ಭಾಗವಹಿಸಿದ್ದು, ಎಲ್ಲರಿಗೂ ಅಖಿಲ ಭಾರತ ಕಿಸಾನ್ ಸಭಾ ಹಾರ್ದಿಕ  ಅಭಿನಂದನೆ ಸಲ್ಲಿಸಿದೆ.

ದಿಲ್ಲಿ ಗಡಿಗಳಲ್ಲಿ ರೈತರ ಐತಿಹಾಸಿಕ ಹೋರಾಟಕ್ಕೆ ಏಳು ತಿಂಗಳು ಆಗಿರುವ ಸಂದರ್ಭದಲ್ಲಿ, ಮೋದಿ ನೇತೃತ್ವದ ಬಿಜೆಪಿ-ಆರೆಸ್ಸೆಸ್ ಸರಕಾರದ ಅಘೋಷಿತ ತುರ್ತು ಪರಿಸ್ಥಿತಿಯ ವಿರುದ್ಧ ಸಂಯುಕ್ತ ಕಿಸಾನ್ ಮೋರ್ಚಾ ಈ ಕಾರ್ಯಾಚರಣೆಗೆ ಕರೆ ನೀಡಿತ್ತು. ಕೇಂದ್ರೀಯ ಕಾರ್ಮಿಕ ಸಂಘಟನೆಗಳ ಜಂಟಿ ವೇದಿಕೆ ಇದನ್ನು ಬೆಂಬಲಿಸಿತ್ತು.

ಇದನ್ನು ಓದಿ: ಕೇಂದ್ರ ಸರ್ಕಾರದ ಕೃಷಿ ಕರಾಳ ಮಸೂದೆ ವಿರುದ್ಧ ರೈತರಿಂದ ಬೃಹತ್‌ ಪ್ರತಿಭಟನೆ

ಸುಮಾರಾಗಿ ಎಲ್ಲ ರಾಜ್ಯಗಳಲ್ಲಿ ‘ರಾಜಭವನ ಚಲೋ’ ಮಾತ್ರವಲ್ಲದೆ, ಸಾವಿರಾರು ಜಿಲ್ಲೆಗಳು, ತಹಸೀಲುಗಳು ಮತ್ತು ಗ್ರಾಮಗಳಲ್ಲಿಯೂ ಈ ಪ್ರತಿಭಟನಾ ಕಾರ್ಯಾಚರಣೆ ನಡೆದಿದೆ ಎಂದು ಎಐಕೆಎಸ್‍ ಹೇಳಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಈ ಬಗ್ಗೆ ವ್ಯಾಪಕ ಪ್ರಚಾರವೂ ನಡೆಯಿತು. ಮುಖ್ಯಧಾರೆಯ ಮಾಧ್ಯಮಗಳೂ ಈ ಕಾರ್ಯಾಚರಣೆಯನ್ನು ಗಮನಿಸದೆ ಇರಲು ಸಾಧ್ಯವಾಗಲಿಲ್ಲ  ಎಂದು ಎಐಕೆಎಸ್ ಹೇಳಿದೆ.

ಈ ಭಾರೀ ಯಶಸ್ವಿ ಕಾರ್ಯಾಚರಣೆಯಲ್ಲಿ ಎಐಕೆಎಸ್‍ ಘಟಕಗಳಲ್ಲದೆ, ಸಿಐಟಿಯು, ಎಐಎಡಬ್ಲ್ಯುಯು, ಎಐಡಿಡಬ್ಲ್ಯುಎ, ಡಿವೈಎಫ್‍ಐ ಮತ್ತು ಎಸ್‍ಎಫ್‍ಐ ಘಟಕಗಳೂ ದೊಡ್ಡ ಪಾತ್ರ ವಹಿಸಿವೆ ಎಂದು ಅವರನ್ನು ವಿಶೇಷವಾಗಿ ಅಭಿನಂದಿಸುತ್ತ ಎಐಕೆಎಸ್ ಪ್ರಧಾನ ಕಾರ್ಯದರ್ಶಿ ಹನ್ನನ್ ಮೊಲ್ಲ,  ಈ ಹೋರಾಟ ಮೋದಿ ಸರಕಾರದ ಕಾರ್ಪೊರೇಟ್‍-ಪರ, ಜನವಿರೋಧಿ, ಸರ್ವಾಧಿಕಾರಶಾಹೀ , ಕೋಮುವಾದಿ ಮತ್ತು ಫ್ಯಾಸಿಸ್ಟ್‍ ತೆರನ ಆಳ್ವಿಕೆಯ ವಿರುದ್ಧ ಗೆಲುವು ಸಾಧಿಸುವ ವರೆಗೂ ಈ ಹೋರಾಟ ಇನ್ನಷ್ಟು ಹೆಚ್ಚಿನ ಶಕ್ತಿಯೊಂದಿಗೆ ಮುಂದುವರೆಯುತ್ತದೆ ಎಂದು ಹೇಳಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *