ಕೊಪ್ಪಳ: ಕಾಂಗ್ರೆಸ್ ಸರ್ಕಾರ ಅನುಷ್ಟಾನಕ್ಕೆ ತಂದ ಶಕ್ತಿ ಯೋಜನೆಯಡಿಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಕಲ್ಪಿಸುವ ಯೋಜನೆಗೆ ಭಾರೀ ಸ್ಪಂದನೆ ವ್ಯಕ್ತವಾಗುತ್ತಿದೆ. ಸಹಸ್ರಾರು ಮಹಿಳಾ ಪ್ರಯಾಣಿಕರು ಉಚಿತವಾಗಿ ಸುಕ್ಷೇತ್ರಗಳಿಗೆ ಭೇಟಿ ನೀಡುತ್ತಿದ್ದಾರೆ. ಕೆಲವೆಡೆ ಪ್ರಯಾಣಿಕರು ಹಾಗೂ ಬಸ್ ಚಾಲಕ-ನಿರ್ವಹಕರ ನಡುವೆ ಗಲಾಟೆಗಳು ನಡೆಯುತ್ತಿರುವ ಪ್ರಕರಣಗಳು ವರದಿಯಾಗುತ್ತಿವೆ. ಇದರ ನಡುವೆ ಮಹಿಳಾ ಪ್ರಯಾಣಿರೊಬ್ಬರು. ಬಸ್ ನಿಲ್ಲಿಸಲಿಲ್ಲವೆಂದು ಮಳೆಯೊಬ್ಬರು ಆಕ್ರೋಶಗೊಂಡು ಬಸ್ಗೆ ಕಲ್ಲೆಸೆದಿರುವ ಘಟನೆ ಘಟನೆ ತಾಲ್ಲೂಕಿನ ಹೊಸ ಲಿಂಗಾಪುರ (ಹುಲಿಗಿ ಕ್ರಾಸ್) ಬಳಿ (ಜೂನ್ 25) ಸಂಜೆ ನಡೆದಿದೆ.
ಇಳಕಲ್ ಬಳಿ ಪಾಪನಳ್ಳಿ ಗ್ರಾಮದ ಲಕ್ಷ್ಮೀ ಎಂಬುವವರು ಹುಲಿಗೆಮ್ಮ ದೇವಿ ದರ್ಶನ ಪಡೆಯಲು ಬಂದಿದ್ದರು. ಬಸ್‌ಗಾಗಿ ಹುಲಿಗಿ ಕ್ರಾಸ್ ಬಳಿ ಬಹಳಷ್ಟು ಹೊತ್ತಿನಿಂದ ಪರದಾಡುತ್ತಿದ್ದರು. ನನ್ನ ಮುಂದೆಯೇ ಅನೇಕ ಬಸ್‌ಗಳು ಹೋದರೂ ನಿಲ್ಲಿಸಲಿಲ್ಲ.ಮಳೆ ಕೂಡ ಬರುತ್ತಿತ್ತು. ಇಳಕಲ್ ಹೋಗುವ ಬಸ್‌ಗಾಗಿ ನಾಲ್ಕೈದು ತಾಸಿನಿಂದ ಕಾದಿದ್ದು,ಬಸ್ ನಿಲ್ಲಿಸದ ಕಾರಣ ಸಿಟ್ಟು ಬಂದು ಬಸ್ಸಿಗೆ ಕಲ್ಲು ಎಸೆದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:ಶಕ್ತಿ ಯೋಜನೆ ಬಗ್ಗೆ ಗೋ(ಮೋ)ದಿ ಮೀಡಿಯಾಗಳಿಗೆ ಯಾಕೆ ಸಿಟ್ಟು? ಇದು ಸ್ತ್ರೀ ವಿರೋಧಿ ಮನಸ್ಥಿತಿಯೇ?
ಬಸ್ ಚಾಲಕ ಮುನಿರಬಾದ್ ಪೊಲೀಸ್ ಠಾಣೆಗೆ ಮಹಿಳೆಯನ್ನು ಹಾಗು ಪ್ರಯಾಣಿಕರ ಸಮೇತವಾಗಿ ಬಸ್‌ನ್ನು ತೆಗೆದುಕೊಂಡು ಹೋಗಿ 5000 ಸಾವಿರ ದಂಡ ಕಟ್ಟಿಸಿಕೊಂಡು ವಾಪಸ್ ಕಳುಹಿಸಿದ್ದಾರೆ.ಈ ಬಸ್ ಹೊಸಪೇಟೆ ಡಿಪೋಕ್ಕೆ ಸೇರಿದಾಗಿದೆ. ಗಾಜು ಒಡೆದಿದ್ದಕ್ಕೆ 5000 ದಂಡ ಕಟ್ಟಬೇಕು,ಇಲ್ಲವಾದರೆ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಲಾಗುವುದು ಎಂದು ಬಸ್ ಡಿಪೋ ವ್ಯವಸ್ಥಾಪಕ ಎಚ್ಚರಿಕೆ ನೀಡಿದ ನಂತರ ಮಹಿಳೆ ಕ್ಷಮೆಯನ್ನು ಕೇಳಿ ದಂಡ ಕಟ್ಟಿದ್ದಾಳೆ ಎಂಬ ಮಾಹಿತಿ ಲಭ್ಯವಾಗಿದೆ.