5 ಮಂದಿಗೆ ಅಂಗಾಂಗ ದಾನ ಮಾಡಿದ 10 ತಿಂಗಳ ಪುಟಾಣಿ

ಕೊಚ್ಚಿ: ಇತ್ತೀಚೆಗೆ ಕೇರಳದಲ್ಲಿ ರಸ್ತೆ ಅಪಘಾತದಲ್ಲಿ  ಗಂಭೀರವಾಗಿ ಗಾಯಗೊಂಡು ಮಿದುಳು ನಿಷ್ಕ್ರಿಯವಾಗಿದ್ದ 10 ತಿಂಗಳ ಹೆಣ್ಣು ಮಗು ಅಲಿನ್ ಅಬ್ರಾಹಂಳ ಅಂಗಾಂಗಳನ್ನು ದಾನ ಮಾಡಲಾಗಿದೆ.

ಇನ್ನೂ ಅಂಬೆಗಾಲು ಇಡದ ಕಂದಮ್ಮ ಎಲ್ಲರ ಕಣ್ಣಂಚಲ್ಲಿ ನೀರು ತರಿಸಿ ಹೋದಳು. ಈ ಪ್ರಕರಣ ದೇಶದ ಗಮನ ಸೆಳೆದಿದ್ದು, ಅಲಿನ್ ಪೋಷಕರ ಸಮ್ಮತಿಯ ಮೇರೆಗೆ ಅಂಗಾಂಗಗಳನ್ನು ಕೇರಳದ ವಿವಿಧ ಆಸ್ಪತ್ರೆಗಳಿಗೆ ದಾನ ನೀಡಲಾಗಿದೆ. ಈ ಮೂಲಕ 10 ತಿಂಗಳ ಅಲಿನ್ ದೇಶದ ಅತ್ಯಂತ ಕಿರಿಯ ಅಂಗಾಂಗ ದಾನಿ ಎನಿಸಿಕೊಂಡಳು.

ಇದನ್ನೂ ಓದಿ : ಬೆಂಗಳೂರು | ಶಕ್ತಿ ಯೋಜನೆಯಲ್ಲಿ ಬದಲಾವಣೆ: ಆಧಾರ್‌ಗೆ ಬದಲು ಸ್ಮಾರ್ಟ್ ಕಾರ್ಡ್ ಜಾರಿ

ಫೆಬ್ರುವರಿ 5 ರಂದು ಅಲಿನ್ ತನ್ನ ತಂದೆ ಪಟ್ಟಣಂತಿಟ್ಟು ಜಿಲ್ಲೆಯ ಮಲ್ಲಪಳ್ಳಿಯ ಅರುಣ್ ಅಬ್ರಾಹಂ, ಅಮ್ಮ ಶೆರಿನ್ ಹಾಗೂ ಅಜ್ಜ, ಅಜ್ಜಿ ಜೊತೆ ಕಾರಿನಲ್ಲಿ ಕೊಟ್ಟಾಯಂನಿಂದ ತಿರುವಲ್ಲಕ್ಕೆ ತೆರಳುತ್ತಿದ್ದಳು. ಆದರೆ ಆ ದಿನ ಅಲಿನ್‌ ಬಾಳಲ್ಲಿ ವಿಧಿ ಅತ್ಯಂತ ಘೋರ ಆಟ ಆಡಿತ್ತು.

ಅಂದು ಮಧ್ಯಾಹ್ನ 2.30ಕ್ಕೆ ಅರುಣ್ ಚಲಾಯಿಸುತ್ತಿದ್ದ ಕಾರು ಕೊಟ್ಟಾಯಂನ ಪಲ್ಲಂ ಬಳಿ ಇನ್ನೊಂದು ಕಾರಿಗೆ ಮುಖಾಮುಖಿ ಡಿಕ್ಕಿಯಾಗಿತ್ತು. ಅಪಘಾತದಲ್ಲಿ ಅಲಿನ್‌ಗೆ ಗಂಭೀರ ಗಾಯವಾಗಿತ್ತು. ಆಕೆಯ ಪೋಷಕರು, ಅಜ್ಜ, ಅಜ್ಜಿ ಸಣ್ಣಪುಟ್ಟ ಗಾಯದಿಂದ ಬದುಕುಳಿದರು.

ವೈದ್ಯರ, ಪೋಷಕರ ಸತತ ಪ್ರಯತ್ನದಿಂದಲೂ ಅಲಿನ್ ಬದುಕುಳಿಯಲಿಲ್ಲ. ತಕ್ಷಣವೇ ಅಲಿನ್‌ಳನ್ನು ತಿರುವಲ್ಲದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೆ, ಮಿದುಳಿಗೆ ಹಾನಿಯಾಗಿದೆ ಎಂದು ವೈದ್ಯರು ಹೇಳಿದ್ದರಿಂದ ಕೊಚ್ಚಿಯ ಅಮೃತಾ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತಿತ್ತು. ಫೆಬ್ರುವರಿ 10 ರಂದು ಅಲಿನ್ ನಿಧನಳಾದಳು ಎಂದು ಅಮೃತಾ ಆಸ್ಪತ್ರೆಯ ವೈದ್ಯರು ಘೋಷಿಸಿದರು.

ಕಣ್ಣು, ಹೃದಯ, ಕಿಡ್ನಿ ಮತ್ತೀತರ ಉಪಯುಕ್ತ ಅಂಗಗಳನ್ನು ತಿರುವನಂತಪುರದ ಆಸ್ಪತ್ರೆಗಳಿಗೆ ದಾನ ಮಾಡಲಾಗಿದೆ. ತೀವ್ರ ದುಃಖದ ನಡುವೆಯೂ ಅಲಿನ್ ಪೋಷಕರು ಅಂಗಾಂಗ ದಾನಕ್ಕೆ ಸಮ್ಮತಿಸಿದರು. ಅಂಗಾಂಗಗಳ ರವಾನೆಗೆ ಕೊಚ್ಚಿ ಪೊಲೀಸರು ಜಿರೋ ಟ್ರಾಫಿಕ್ ವ್ಯವಸ್ಥೆ ಮಾಡಿದ್ದರು.

ಅನೇಕ ನೆಟ್ಟಿಗರು ಇಂತಹ ಕಠಿಣ ಪರಿಸ್ಥಿತಿಯಲ್ಲಿ ಅಲಿನ್‌ ಪೋಷಕರ ನಿರ್ಧಾರ ಅಚ್ಚರಿ ಮೂಡಿಸುವಂತದ್ದು ಎಂದಿದ್ದಾರೆ. ಅಲ್ಲದೇ ಇನ್ನೂ ಕೆಲವರು ಭಾರತದಲ್ಲಿ ಹೆಚ್ಚುತ್ತಿರುವ ರಸ್ತೆ ಅಪಘಾತಗಳ ಅಟ್ಟಹಾಸದ ಬಗ್ಗೆ ವ್ಯವಸ್ಥೆ, ಸರ್ಕಾರಗಳ ಬಗ್ಗೆ ಛೀಮಾರಿ ಹಾಕಿದ್ದಾರೆ.

ಇದನ್ನೂ ನೋಡಿ : ಸರ್ಕಾರಿ ಶಾಲೆ ಉಳಿಸಿ’ ಬೀದಿ ನಾಟಕ | “ಸಂಯೋಜನೆನಾ? ಶಾಲೆ ಮುಚ್ಚುವ ಯೋಜನೆನಾ? Janashakthi Media

Donate Janashakthi Media

Leave a Reply

Your email address will not be published. Required fields are marked *