ಬಾಲಕಿಯ ಮೇಲೆ ಅತ್ಯಾಚಾರ – ಕೊಲೆ: ಮರಣೋತ್ತರ ಪರೀಕ್ಷೆ ವೇಳೆ ಕಣ್ಣೀರಿಟ್ಟ ವೈದ್ಯರು

ಯೋಧ್ಯೆ: ನಗರದಲ್ಲಿ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಲಾಗಿದ್ದೂ, ಮರಣೋತ್ತರ ಪರೀಕ್ಷೆ ವೇಳೆ ಬಾಲಕಿಯ ಸ್ಥಿತಿ ನೋಡಿ ವೈದ್ಯರು ಕಣ್ಣೀರಿಟಿದ್ದಾರೆ. ಸೋಮವಾರದಂದು ಬಾಲಕಿ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.

ಪೊಲೀಸರ ಮುಂದೆ ಅತ್ಯಾಚಾರ ಆರೋಪಿಗಳಾದ ದಿಗ್ವಿಜಯ್ ಸಿಂಗ್ ಅಲಿಯಾಸ್ ಬಾಬಾ, ಹರಿರಾಮ್ ಕೋರಿ ಮತ್ತು ವಿಜಯ್ ಸಾಹು ತಮ್ಮ ಅಪರಾಧಗಳನ್ನು ಒಪ್ಪಿಕೊಂಡಿದ್ದಾರೆ.

ಸಾಮಾನ್ಯವಾಗಿ ವೈದ್ಯರು ನಿತ್ಯ ನೂರಾರು ಸಾವುಗಳನ್ನು ನೋಡುತ್ತಾರೆ, ಎಷ್ಟೋ ಮಂದಿಯ ಮರಣೋತ್ತರ ಪರೀಕ್ಷೆಯನ್ನು ನಡೆಸುತ್ತಾರೆ. ಮನಸ್ಸು ಗಟ್ಟಿ ಮಾಡಿಕೊಳ್ಳದಿದ್ದರೆ ಅವರು ಆ ವೃತ್ತಿಯಲ್ಲಿ ಮುಂದುವರೆಯಲು ಸಾಧ್ಯವಿಲ್ಲ, ಆದರೆ ಬಾಲಕಿ ಮರಣೋತ್ತರ ಪರೀಕ್ಷೆ ನಡೆಸುವಾಗ ಅವರು ಕಣ್ಣೀರು ಹಾಕಿದ್ದಾರೆ.

ಇದನ್ನೂ ಓದಿ: ಕೋಮು ವೈಷಮ್ಯ ಬಿತ್ತುವ ಶಿಕ್ಷಕನ ಭಾಷಣ ರದ್ದುಗೊಳಿಸಿದ ಸಮಾಜ ಕಲ್ಯಾಣ ಇಲಾಖೆ

ಆಕೆಯ ಸಾವಿಗೆ ಅತಿಯಾದ ರಕ್ತಸ್ರಾವವೇ ಕಾರಣ ಎಂಬುದು ಮರಣೋತ್ತರ ಪರೀಕ್ಷೆಯಲ್ಲಿ ತಿಳಿದುಬಂದಿದೆ. ಪೊಲೀಸ್ ಮೂಲಗಳು ಹೇಳುವಂತೆ ಇಬ್ಬರು ವೈದ್ಯರ ತಂಡವು ಮರಣೋತ್ತರ ಪರೀಕ್ಷೆ ನಡೆದಿದೆ. ಬಾಲಕಿಯ ದೇಹದ ಮೇಲೆ 30 ಸಣ್ಣ ಹಾಗೂ ದೊಡ್ಡ ಗಾಯಗಳಿದ್ದವು. ಸಂತ್ರಸ್ತೆಯ ಎರಡೂ ಬದಿಗಳಲ್ಲಿ 24 ಪಕ್ಕೆಲುಬುಗಳಲ್ಲಿ 14 ಮುರಿದಿವೆ.

ಆಕೆಯ ಖಾಸಗಿ ಅಂಗಕ್ಕೆ ಕ್ರೂರವಾಗಿ ಇರಿದಿದ್ದಾರೆ. ಎರಡಕ್ಕೂ ಹೆಚ್ಚು ವ್ಯಕ್ತಿಗಳು ಸೇರಿ ಆಕೆಯನ್ನು ಕೊಲೆ ಮಾಡಿದ್ದಾರೆ. ಈ ವರದಿಯಲ್ಲಿ ಅವರು ಪೊಲೀಸರಿಗೆ ನೀಡಿದ್ದಾರೆ. ಘಟನೆಯ ಆರೋಪಿ ದಿಗ್ವಿಜಯ್ ಸಿಂಗ್ ಹೇಳಿಕೆ ನೀಡಿದ್ದು, ನಾವು ಆಕೆಯ ಹಿಂದೆ ಓಡಿ ಹೋಗಿ ಹೊಲದಲ್ಲಿ ಆಕೆಯನ್ನು ಹಿಡಿದಿದ್ದೆವು, ಕೋಲಿನಿಂದ ಆಕೆಯ ತಲೆಗೆ ಮೊದಲು ಪೆಟ್ಟು ಕೊಟ್ಟೆವು, ಆಕೆ ಯಾವಾಗ ಸತ್ತಿದ್ದಾಳೆ ಎಂಬುದು ನಮಗೆ ತಿಳಿದಿಲ್ಲ.

ಹುಡುಗಿ ಸತ್ತಿರುವುದು ತಡವಾಗಿ ನಮಗೆ ಅರ್ಥವಾಗಿತ್ತು. ನಾವು ಆಕೆಯ ಜತೆ ಒಂದು ಗಂಟೆಗಳ ಕಾಲ ಕ್ರೂರವಾಗಿ ವರ್ತಿಸಿದ್ದೆವು, ಆಕೆಯ ದುಪಟ್ಟಾವನ್ನು ಬಾಯಿಗೆ ತುಂಬಿಸಿದ್ದೆವು, ಆಕೆ ವಿರೋಧಿಸುತ್ತಲೇ ಇದ್ದಳು, ನಾವೆಲ್ಲರೂ ಕುಡಿದಿದ್ದೆವು, ಆದ್ದರಿಂದ ಕೋಪಗೊಂಡು ಆಕೆಗೆ ಹೊಡಿದಿದ್ದೆವು ಎಂದು ಹೇಳಿದ್ದಾನೆ.

ಇದನ್ನೂ ನೋಡಿ: ವಿಮಾನ ನಿಲ್ದಾಣಕ್ಕೆ ಭೂಮಿ ಕಳೆದುಕೊಂಡ ಸಂತ್ರಸ್ತ ರೈತರಿಂದ ಪ್ರತಿಭಟನೆ Janashakthi Media

Donate Janashakthi Media

Leave a Reply

Your email address will not be published. Required fields are marked *