ಪ್ರಾಣಿಗಳು ಸಂಗೀತವನ್ನು ಆನಂದಿಸುತ್ತವೆಯೇ?

ಡಾ ಎನ್.ಬಿ.ಶ್ರೀಧರ
ಪ್ರಾಣಿಗಳು ಸಂಗೀತಕ್ಕೆ ಕೆಲವು ಪ್ರತಿಕ್ರಿಯೆಗಳನ್ನು ತೋರಿಸಬಹುದಾದರೂ, ಮಾನವರು ಮಾಡುವಂತೆಯೇ ಅವು ಅದನ್ನು ಆನಂದಿಸುತ್ತಾರೆಯೇ ಎಂದು ನಿರ್ಧರಿಸುವುದು ಒಂದು ಸವಾಲಿನ ಸಂಗತಿಯಾಗಿದೆ. ಅವು ಸಂಗೀತದ ಶಬ್ಧಕ್ಕೆ ನೀಡುವ ಪ್ರತಿಕ್ರಿಯೆಗಳು ಪ್ರತಿಕ್ರಿಯೆಗಳು ಶಬ್ದಗಳು, ಲಯಗಳು ಅಥವಾ ಸಂಗೀತವನ್ನು ನುಡಿಸುವ ಸಾಮಾಜಿಕ ಸನ್ನಿವೇಶದಂತಹ ಅಂಶಗಳಿಂದ ಪ್ರಭಾವಿತವಾಗಬಹುದು.

ಇಂದು ಫೇಸ್‌ಬುಕ್ಕಿನಲ್ಲಿ ಬಂದು ವೈರಲ್ ಆಗುತ್ತಿರುವ ಒಂದು ವಿಡಿಯೋ ನೋಡಿದೆ. ಅದರಲ್ಲಿ ದೇವಸ್ಥಾನದಲ್ಲಿನ ಮಲೆನಾಡು ಗಿಡ್ದ ಹಸು ಭಜನೆಯ ಸಂಗೀತಕ್ಕೆ ಹೆಜ್ಜೆ ಹಾಕುವಂತೆ ಕಂಡು ಬಂತು. ಅದು ಸಂಗೀತಕ್ಕೆ ಹೆಜ್ಜೆ ಹಾಕುತ್ತಿದೆಯೋ ಅಥವಾ ಇತರ ಸಮಸ್ಯೆಯಿಂದ ಆ ರೀತಿ ವರ್ತಿಸುತ್ತದೆಯೋ ಸರಿಯಾಗಿ ಅಧ್ಯಯನ ಮಾಡಿದರೆ ಮಾತ್ರ ತಿಳಿದೀತು. ಪ್ರಾಣಿಗಳು ಸಂಗೀತವನ್ನು ಹೇಗೆ ಅನುಭವಿಸುತ್ತವೆ ಮತ್ತು ಗ್ರಹಿಸುತ್ತವೆ ಎಂಬುದನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲು ಸವಾಲಾಗಿದ್ದರೂ, ಕೆಲವು ಪ್ರಾಣಿಗಳು ತಮ್ಮದೇ ಆದ ರೀತಿಯಲ್ಲಿ ಸಂಗೀತಕ್ಕೆ ಪ್ರತಿಕ್ರಿಯಿಸಬಹುದು ಮತ್ತು ಪ್ರಶಂಸಿಸಬಹುದು ಎಂದು ಸೂಚಿಸಲು ಕೆಲವೇ ಕೆಲವು ಅಧ್ಯಯನಗಳೀವೆ. ಆದಾಗ್ಯೂ, ಪ್ರಾಣಿಗಳ ಸಂಗೀತದ ಅನುಭವವು ಮನುಷ್ಯರಿಂದ ಭಿನ್ನವಾಗಿರುವುದಂತೂ ನಿಜ. ಏಕೆಂದರೆ ಪ್ರಣಿಗಳು ಮನುಷ್ಯನಂತೆ ಭಾವನಾತ್ಮಕ ಅಥವಾ ಸಾಂಸ್ಕೃತಿಕ ರೀತಿಯಲ್ಲಂತೂ ಸಂಗೀತವನ್ನು ಅರ್ಥೈಸುವುದಿಲ್ಲ.

ಪಕ್ಷಿಗಳು, ಡಾಲ್ಫಿನ್‌ಗಳು, ಆನೆಗಳು ಮತ್ತು ಮಂಗಗಳ ವರ್ಗಕ್ಕೆ ಸೇರಿದ ಕೆಲವು ಪ್ರಾಣಿಗಳು ಸಂಗೀತಕ್ಕೆ ಅವುಗಳ ವರ್ತನೆಯ ಮತ್ತು ಶಾರೀರಿಕ ಪ್ರತಿಕ್ರಿಯೆಗಳನ್ನು ಪ್ರದರ್ಶಿಸಬಹುದು ಎಂದು ಸಂಶೋಧನೆ ತೋರಿಸಿದೆ. ಉದಾಹರಣೆಗೆ, ಕೆಲವು ಪಕ್ಷಿಗಳು ಸಂಗೀತಕ್ಕೆ ಪ್ರತಿಕ್ರಿಯೆಯಾಗಿ ಹಾಡಬಹುದು ಮತ್ತು ಕೆಲವು ಶಬ್ದಗಳಿಗೆ ಒಡ್ಡಿಕೊಂಡಾಗ ಆನೆಗಳು ತೂಗಾಡುವುದನ್ನು ಅಥವಾ ಲಯಬದ್ಧವಾಗಿ ಚಲಿಸುವುದನ್ನು ನೋಡಲಾಗಿದ್ದರೂ ಸಹ ಇವು ಸಂಗೀತದ ಶಬ್ಧಕ್ಕೆ ಪ್ರತಿಕ್ರಿಯಿಸುತ್ತವೆಯೋ ಅಥವಾ ನಮ್ಮಂತೆ ಸಂಗೀತವನ್ನು ಆನಂದಿಸುತ್ತವೆಯೋ ಎಂಬುದು ನಿಖರವಾಗಿ ತಿಳಿದಿಲ್ಲ.

ಪ್ರಾಣಿಗಳ ಶ್ರವಣೇಂದ್ರಿಯ ವ್ಯವಸ್ಥೆಗಳು ಮತ್ತು ಅವುಗಳು ಸಂಗೀತಕ್ಕೆ ಸ್ಪಂಧಿಸುವ ರೀತಿಯಲ್ಲಿ ಬೆಳವಣಿಗೆ ಹೊಂದಿವೆಯೇ ಎಂಬುದು ಪ್ರಶ್ನಾರ್ಹ. ಆದ್ದರಿಂದ ಸಂಗೀತದಲ್ಲಿ ನಾವು ಆನಂದಿಸಬಹುದಾದ ಅಥವಾ ಭಾವನಾತ್ಮಕವಾಗಿ ನೃತ್ಯ ಇತ್ಯಾದಿಗಳ ಮೂಲಕ ಸ್ಪಂಧಿಸುವುದನ್ನು ಅವು ಅನುಭವಿಸುತ್ತವೆಯೋ ಇಲ್ಲವೋ ತಿಳಿಯದು. ಮಾನವನ ಸಂಗೀತದ ಅಸ್ವಾದದಲ್ಲಿ ಮಹತ್ವದ ಪಾತ್ರವನ್ನು ವಹಿಸುವ ಸಾಂಸ್ಕೃತಿಕ ಮತ್ತು ಭಾವನಾತ್ಮಕ ಅಂಶಗಳು ಪ್ರಾಣಿಗಳಿಗೆ ಅನ್ವಯಿಸುವುದಿಲ್ಲ.

ಸರಳವಾಗಿ ಹೇಳುವುದಾದರೆ, ಪ್ರಾಣಿಗಳು ಸಂಗೀತಕ್ಕೆ ಕೆಲವು ಪ್ರತಿಕ್ರಿಯೆಗಳನ್ನು ತೋರಿಸಬಹುದಾದರೂ, ಮಾನವರು ಮಾಡುವಂತೆಯೇ ಅವು ಅದನ್ನು ಆನಂದಿಸುತ್ತಾರೆಯೇ ಎಂದು ನಿರ್ಧರಿಸುವುದು ಒಂದು ಸವಾಲಿನ ಸಂಗತಿಯಾಗಿದೆ. ಅವು ಸಂಗೀತದ ಶಬ್ಧಕ್ಕೆ ನೀಡುವ ಪ್ರತಿಕ್ರಿಯೆಗಳು ಪ್ರತಿಕ್ರಿಯೆಗಳು ಶಬ್ದಗಳು, ಲಯಗಳು ಅಥವಾ ಸಂಗೀತವನ್ನು ನುಡಿಸುವ ಸಾಮಾಜಿಕ ಸನ್ನಿವೇಶದಂತಹ ಅಂಶಗಳಿಂದ ಪ್ರಭಾವಿತವಾಗಬಹುದು.

ಕೆಲವೊಂದು ಸಂಶೋಧನೆಗಳಲ್ಲಿ ಸಣ್ಣ ಸ್ವರದಲ್ಲಿರುವ ಸಂಗೀತ ಆಕಳುಗಳ ಹಾಲಿನ ಪ್ರಮಾಣವನ್ನು ತೊರೆಬಿಡುವುದನ್ನು ಸರಾಗ ಮಾಡುವುದರ ಮೂಲಕ ಸ್ವಲ್ಪ ಮಟ್ಟಿಗೆ ಹೆಚ್ಚಿಸಿತು ಎನ್ನಲಾಗಿದೆ. ಇದು ಅವುಗಳ ಮಿದುಳಿನಿಂದ ಬಿಡುಗಡೆಯಾಗುವ ಆಕ್ಸಿಟೋಸಿನ್ ಎಂಬ ಹಾರ್ಮೋನಿನ ಪರಿಣಾಮದಿಂದ ಎನ್ನಲಾಗಿದೆ. ನೈಲ್ ನದಿಯ ಮೊಸಳೆಗಳ ಮೇಲೆ ನಡೆಸಿದ ಸಂಶೋಧನೆಯೊಂದರ ಪ್ರಕಾರ ಅವುಗಳ ತಲೆಗೆ ಮೆದುಳಿನಿಂದ ಹೊರಡಿಸುವ ವಿವಿಧ ತರಂಗಗಳಲ್ಲಿ ಸಂಗೀತದಿಂದ ಆದ ಬದಲಾವಣೆಯನ್ನು ಗಮನಿಸಲಾಗಿದೆಯಂತೆ. ಆದರೆ ಇದು ಅವುಗಳ ಖುಷಿಯಿಂದ ಆದ ಬದಲಾವಣೆಯೋ ಅಥವಾ ಸಂಗೀತದ ಶಬ್ಧದಿಂದ ಆದ ಬದಲಾವಣೆಯೋ ತಿಳಿದಿಲ್ಲವಂತೆ. ಇದಲ್ಲದೇ ಸಮುದ್ರಚರಿ ಮೀನುಗಳ ಮೇಲೆಯೂ ಸಹ ಸಂಗೀತ ಪ್ರಯೋಗ ನಡೆದಿದೆ. ಬೆಕ್ಕುಗಳ ಸ್ವರದ ರೀತಿಯಲ್ಲಿಯೇ ಸಂಗೀತವನ್ನು ಹೊರಡಿಸಿದಾಗ ಅವು ಬೆಕ್ಕಸ ಬೆರಗಾಗಿದ್ದಿದೆ. ಇದು ನಾಯಿಗಳಿಗೂ ಸಹ ಅನ್ವಯವಾಗುತ್ತದೆ.

ಇದನ್ನೂ ಓದಿ: ದುರಂತ ಬದುಕಿನ ನಡುವೆ ಹಬ್ಬದ ಸಂಭ್ರಮ

2012ರಲ್ಲಿ ಶ್ವಾನಗಳ ಮೇಲೆ ಆದ ಅಧ್ಯಯನವೊಂದರಲ್ಲಿ ಶ್ವಾನಗಳಿಗೆಂದೇ ತಯಾರಿಸಿದ ಸಣ್ಣ ಹಿತಕರ ಸಂಗೀತವನ್ನು ಕೇಳಿ ಅವು ರಾತ್ರಿಯೆಲ್ಲಾ ಬೊಗಳುವುದನ್ನು ಕಡಿಮೆ ಮಾಡಿದವು ಎನ್ನಲಾಗಿದೆ. ಅದರಲ್ಲಿಯೂ ಸಹ ಶಾಸ್ತ್ರೀಯ ಸಂಗೀತದಿಂದ ಅವುಗಳ ನಿದ್ರಾವಧಿ ಜಾಸ್ತಿಯಾದರೆ ರಾಕ್ ಸಂಗೀತ ಅವುಗಳ ಬೊಗಳುವಿಕೆಯನ್ನು ಜಾಸ್ತಿ ಮಾಡಿತಂತೆ. ನಾಯಿಗಾಗಿಯೇ ಸಂಗೀತದ ಅಲ್ಬಂ ತಯಾರಿಸುವ ಅನೇಕ ಸಂಸ್ಥೆಗಳಿವೆ.

ಅನೇಕ ಪ್ರಾಣಿಗಳು ಪ್ರಕೃತಿಯಲ್ಲಿನ ನೀರಿನ ಜುಳು ಜುಳು ಶಬ್ಧ, ಕಾಡಿನ ಕೀಟಗಳ ಶಬ್ಧವನ್ನು ಹೊಂದಿದ ನೈಸರ್ಗಿಕವಾದ ಸಂಗೀತಕ್ಕೆ ಜಾಸ್ತಿ ಸ್ಪಂಧಿಸಿದವಂತೆ. ಆದರೆ ಹಾವಿನಂತ ಸರೀಸೃಪಗಳು ಪುಂಗಿಯ ನಾದಕ್ಕೆ ತಲೆತೂಗುವುದು ತಪ್ಪು ಕಲ್ಪನೆ. ಇವು ಪುಂಗಿಯ ಚಲನೆಯನ್ನು ಗಮನಿಸುತ್ತವೆಯೇ ಹೊರತು ಅದರಿಂದ ಹೊರಡುವ ನಾದವನ್ನಲ್ಲ.

ಅಷ್ಟಕ್ಕೂ ಅವು ಯಾವ ತರಂಗಾಂತರದ ಶಬ್ಧವನ್ನು ಇಷ್ಟಪಡುತ್ತವೆ? ಮನುಷ್ಯನ ಸಂಗೀತದ ವಿಧಗಳಾದ ಭಾರತೀಯ ಸಂಗೀತ, ಪಾಶ್ಚಾತ್ಯ ಸಂಗೀತ, ಗುಡ್ಡಗಾಡು ಜನರ ಸಂಗೀತಗಳಲ್ಲಿ ಯಾವ ಸಂಗೀತ ಅವುಗಳಿಗೆ ಹಿತವೆನ್ನಿಸುತ್ತದೆ ಎಂಬ ಬಗ್ಗೆ ಯಾವುದೇ ದಾಖಲೆ ಇಲ್ಲ. ಮನುಷ್ಯನ ಮೆದುಳಿನ ಬೆಳವಣಿಗೆಗೆ ಹತ್ತಿರವಿರುವ ಮಂಗಗಳ ಮೇಲೆ 2007 ರಲ್ಲಿ ನಡೆಸಿದ ಅಧ್ಯಯನದಲ್ಲಿ ಅವುಗಳಿಗೆ ವಿವಿಧ ಸಂಗೀತದ ಸ್ವರಗಳಾನ್ನು ಆಯ್ಕೆ ಮಾಡುವ ಅವಕಾಶ ನೀಡಿದಾಗ ಅವು ಮೌನ ಸಂಗೀತವನ್ನೇ ಇಷ್ಟ ಪಟ್ಟವಂತೆ. ಇದರಿಂದ ಪ್ರಾಣಿಗಳು ಮನುಷ್ಯ ಆನಂದ ಪಡುವ ಸಂಗೀತಕ್ಕಿಂತ ಮೌನವನ್ನೇ ಇಷ್ಟಪಡುವವು ಎಂಬುದನ್ನು ಊಹಿಸಲಾಯಿತು. ಆಡು, ಕುರಿ ಮತ್ತು ಹಂದಿಗಳ ಬೆಳವಣಿಗೆಯಲ್ಲಿ ಮನುಷ್ಯನು ಆನಂದಿಸುವ ವಿವಿಧ ಸಂಗೀತದಿಂದ ಯಾವುದೇ ದೈಹಿಕ ಬದಲಾವಣೆಗಳಾಗಲಿಲ್ಲ. ಕುದುರೆಗಳೂ ಸಹ ಸರಿಯಾಗಿ ಸ್ಪಂಧಿಸಲಿಲ್ಲ.

ಇದಕ್ಕೆ ತದ್ವಿರುದ್ಧವಾಗಿ 16 ಚಿಂಪಾಂಜಿಗಳ ಮೇಲೆ ನಡೆದ ಸಂಗೀತ ಪ್ರಯೋಗದಲ್ಲಿ ಅವು ದಕ್ಷಿಣ ಆಫ್ರಿಕಾದ ಮತ್ತು ಉತ್ತರಭಾರತದ ರಾಗ ಸಂಯೋಜಿತ ಸಂಗೀತವನ್ನು ಆನಂದಿಸಿದವಂತೆ. ಮನುಷ್ಯರೇ ಭಿನ್ನ ಭಿನ್ನ ರೀತಿಯಲ್ಲಿ ಸಂಗೀತವನ್ನು ಆಸ್ವಾದಿಸುವುದರಿಂದ ಪ್ರಾಣಿಗಳ ವಿಷಯವೆಲ್ಲಿ ಬಂತು? ಸಸ್ಥನಿಗಳ ವಿಷಯದಲ್ಲಿ ಒಂದಿಷ್ಟು ವಿಷಯ ತಿಳಿದಿದ್ದರೂ ಸಹ ಮೊಟ್ಟೆ ಇಡುವ ಪಕ್ಷಿಗಳ ಬಗ್ಗೆ ತಿಳಿದಿರುವುದು ಬಹಳ ಕಡಿಮೆ.

ಪ್ರಾಣಿಗಳು ಸಂವಹನಕ್ಕೆಂದು ಶಬ್ಧವನ್ನು ಬಳಸಿದರೂ ಸಹ ಅವು ಇದೇ ಶಬ್ಧಗಳ ಸಮ್ಮಿಳನದಿಂದ, ವಾದ್ಯಗಳಿಂದ ಹೊರಡಿಸುವ ಸಂಗೀತಕ್ಕೆ ಸ್ಪಂಧಿಸುವುದು ಒಗಟಾಗಿಯೇ ಇದೆ ಮತ್ತು ಅವುಗಳಿಗೆ ಮನುಷ್ಯ ಆನಂದಿಸುವ ಸಂಗೀತ ಅಷ್ಟೇನೂ ಹಿತವಿಲ್ಲ ಎಂಬುದೆಂತೂ ನಿಜ.

ವಿಡಿಯೋ  ನೋಡಿ: ಸರ್ಕಾರದ ಕಿವಿ ಹಿಂಡಿದ ಮಾಧ್ಯಮದ ಕತ್ತು ಹಿಸುಕುವ ಕೇಂದ್ರ ಸರ್ಕಾರ – ಸಿದ್ದನಗೌಡ ಪಾಟೀಲ್‌ ಜೊತೆ ಮಾತುಕತೆ

Donate Janashakthi Media

Leave a Reply

Your email address will not be published. Required fields are marked *