ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆಯಡಿ 5 ನಗರ ಪಾಲಿಕೆ ವಿಭಜನೆ

ಬೆಂಗಳೂರು: ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ (ಜಿಬಿಎ) ಅಡಿ ಗ್ರೇಟರ್ ಬೆಂಗಳೂರು ಪ್ರದೇಶವನ್ನು (ಬಿಬಿಎಂಪಿ) 5 ನಗರ ಪಾಲಿಕೆಯನ್ನಾಗಿ ವಿಭಜಿಸಿ ರಾಜ್ಯ ಸರ್ಕಾರ, ಜುಲೈ 19ರಂದು ರಾಜ್ಯಪತ್ರದಲ್ಲಿ ಪ್ರಕಟಿಸಿದೆ. ಈ ಮೂಲಕ ಗ್ರೇಟರ್ ಬೆಂಗಳೂರು ಪ್ರದೇಶವು ಅಧಿಕೃತವಾಗಿ ಅಸ್ತಿತ್ವಕ್ಕೆ ಬಂದಂತಾಗಿದೆ.

ಜನಸಂಖ್ಯೆ ವಿಸ್ತೀರ್ಣ, ಜನಸಂಖ್ಯಾ ಸಾಂದ್ರತೆ, ಆದಾಯ, ಕೃಷಿಯೇತರ ಚಟುವಟಿಕೆಗಳಲ್ಲಿನ ಉದ್ಯೋಗದ ಶೇಕಡಾವಾರು, ಆರ್ಥಿಕ ಪ್ರಾಮುಖ್ಯತೆ ಮತ್ತು ಪ್ರದೇಶದಲ್ಲಿ ಲಭ್ಯವಿರುವ ಮೂಲಸೌಕರ್ಯ ಸೌಲಭ್ಯ ಆಧಾರದಲ್ಲಿ ಗ್ರೇಟರ್ ಬೆಂಗಳೂರು ಪ್ರದೇಶವನ್ನು 5 ನಗರ ಪಾಲಿಕೆಗಳಾಗಿ ವಿಗಂಡಿಸಲಾಗಿದೆ. ‘ಬೆಂಗಳೂರು ಪಶ್ಚಿಮ ನಗರ ಪಾಲಿಕೆ’, ‘ಬೆಂಗಳೂರು ದಕ್ಷಿಣ ನಗರ ಪಾಲಿಕೆ’, ‘ಬೆಂಗಳೂರು ಉತ್ತರ ನಗರ ಪಾಲಿಕೆ’, ‘ಬೆಂಗಳೂರು ಪೂರ್ವ ನಗರ ಪಾಲಿಕೆ’ ಮತ್ತು ‘ಬೆಂಗಳೂರು ಕೇಂದ್ರ ನಗರಪಾಲಿಕೆ’ ಎಂದು ನಾಮಕರಣ ಮಾಡಲಾಗಿದೆ.

ನಗರಪಾಲಿಕೆ ಹೆಸರು, ಗಡಿ ಹೆಸರು ಮತ್ತು ಗಡಿ ವಿವರಣೆಯನ್ನೂ ಸಹ ಅಧಿಕೃತ ಗೆಜೆಟ್‌ನಲ್ಲಿ ಪ್ರಕಟವಾಗಿದೆ. ಇದಕ್ಕೆ ಸಂಬಂಧಪಟ್ಟಂತೆ ನಾಗರಿಕರು ತಮ್ಮ ಆಕ್ಷೇಪಣೆ ಅಥವಾ ಸಲಹೆಯನ್ನು ಮುಂದಿನ 30 ದಿನದೊಳಗೆ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ, ಕೊಠಡಿ ಸಂಖ್ಯೆ 436, 4ನೇ ಮಹಡಿ, ವಿಕಾಸ ಸೌಧ, ಬಿ.ಆರ್. ಅಂಬೇಡ್ಕರ್ ವೀದಿ, ಬೆಂಗಳೂರು-01 ಇಲ್ಲಿನ ವಿಳಾಸಕ್ಕೆ ಸಲ್ಲಿಸಬಹುದು. ಆಡಳಿತ

ಇದನ್ನೂ ಓದಿ: ಭಾರತ ವರಮಾನ ಸಮಾನತೆಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ ಎಂಬ ವಿಶ್ವಬ್ಯಾಂಕ್ ಸುಳ್ಳು | ಟಿ. ಎಸ್. ವೇಣುಗೋಪಾಲ

ಬಿಬಿಎಂಪಿ ‘ಗ್ರೇಟರ್ ಬೆಂಗಳೂರು’ ಆಗಿ ಕಳೆದ ಮೇ 15ರಂದು ವಿಧ್ಯುಕ್ತ ಆರಂಭ ಕಂಡಿದೆ. ಪೂರ್ಣ ಪ್ರಮಾಣದಲ್ಲಿ ರೂಪುಗೊಳ್ಳಲು ಸೆ .15ರ ಗಡುವು ವಿಧಿಸಲಾಗಿದೆ. ಆ ವೇಳೆಗೆ ಬಿಬಿಎಂಪಿಗೆ ಚುನಾವಣೆ ನಡೆದು 5 ವರ್ಷ ಪೂರ್ಣಗೊಳ್ಳುವ (2020ರ ಸೆ. 10) ಕಾರಣ ಹೊಸ ಪಾಲಿಕೆಗಳನ್ನು ಅಸ್ತಿತ್ವಕ್ಕೆ ತಂದು ಚುನಾಯಿತ ಸರ್ಕಾರ ಸ್ಥಾಪಿಸುವ ಆಶಯವನ್ನು ಸರ್ಕಾರ ಹೊಂದಿದೆ. ಆಡಳಿತ

ಇತ್ತೀಚೆಗೆ ಬೆಂಗಳೂರು ನಗರ ಅಭಿವೃದ್ಧಿ ಸಚಿವರೂ ಆದ ಡಿಸಿಎಂ ನೇತೃತ್ವದಲ್ಲಿ ನಡೆದಿದ್ದ ಸಭೆಯಲ್ಲಿ 5 ಪಾಲಿಕೆಗಳನ್ನು ರಚಿಸಲು ನಿರ್ಧರಿಸಲಾಗಿತ್ತು. ಆಡಳಿತ ದೃಷ್ಟಿಯಿಂದ ಐದು ಪಾಲಿಕೆಗಳಿಗೆ ಸಮಾನ ಆದಾಯ, ಅನುದಾನ ಹಂಚಿಕೆ, ಸಂಪನ್ಮೂಲ ಕ್ರೋಡೀಕರಣ, ನಿರ್ವಹಣಾ ಹೊಣೆ ವಹಿಸಲು ಉನ್ನತಾಧಿಕಾರಿಗಳ ಸಮಿತಿ ರೂಪುರೇಷೆ ಸಿದ್ಧಪಡಿಸಬೇಕಿದೆ.

ಮುಖ್ಯವಾಗಿ ಗ್ರೇಟರ್ ಬೆಂಗಳೂರು ಪ್ರದೇಶದಲ್ಲಿ (ಜಿಬಿಎ) ಬದಲಾವಣೆ ಆಗದ ಕಾರಣ ನೂತನ ಪಾಲಿಕೆಗಳನ್ನು ಜನಸಂಖ್ಯೆ ಆಧರಿಸಿ ವಾರ್ಡ್ ನಿಗದಿಪಡಿಸುವ ಕಸರತ್ತಿಗೂ ಚಾಲನೆ ದೊರೆತಿದೆ. ಹಾಲಿ ಬಿಬಿಎಂಪಿ ವ್ಯಾಪ್ತಿಯಲ್ಲೇ ಹೊಸ ಕಾರ್ಪೋರೇಷನ್‌ಗಳನ್ನು ಪುನರ್‌ವಿಂಗಡಿಸಲು ಹೆಚ್ಚಿನ ಕಷ್ಟವಾಗದು. ಕೆಲವೊಂದು ತಾಂತ್ರಿಕ ಹಾಗೂ ಹಣಕಾಸಿಗೆ ಸಂಬಂಧಿಸಿದ ತಗಾದೆ ಉಂಟಾದರೂ ಅದನ್ನು ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಪರಿಹಾರ ಕಂಡುಕೊಳ್ಳಲಾಗುತ್ತದೆ. ಕರಡು ಪ್ರತಿಗೆ ಸಾರ್ವಜನಿಕರಿಂದ ಆಕ್ಷೇಪಣೆ ಆಹ್ವಾನಿಸಿ ಅನುಷ್ಠಾನ, ಯೋಗ್ಯ ಸಲಹೆಗಳನ್ನು ಸೇರ್ಪಡೆ ಮಾಡಿಕೊಂಡು ಅಂತಿಮ ಅಧಿಸೂಚನೆ ಹೊರಡಿಸಲಾಗುತ್ತದೆ.

ಐದೂ ಪಾಲಿಕೆಗೆ ಬೆಂಗಳೂರು ಹೆಸರು
ಗ್ರೇಟರ್ ಬೆಂಗಳೂರು ಕಾಯ್ದೆ ಅಡಿಯಲ್ಲಿ ರಚನೆಯಾದ ಐದು ಹೊಸ ಪಾಲಿಕೆಗಳು ‘ಬೆಂಗಳೂರು’ ಹೆಸರು ಹೊಂದಿವೆ. ಪ್ರತಿಪಕ್ಷ, ಕೆಲ ಸಂಘಟನೆಗಳು ಬೆಂಗಳೂರನ್ನು ವಿಭಜಿಸಲಾಗುತ್ತಿದೆ ಎಂಬ ಆರೋಪದಿಂದ ಪಾರಾಗಲು ಸರ್ಕಾರ ಈ ಉಪಾಯ ಕಂಡುಕೊಂಡಿದೆ. ಹಾಗಾಗಿ, ಬೆಂಗಳೂರು ಉತ್ತರ, ದಕ್ಷಿಣ, ಪೂರ್ವ, ಪಶ್ಚಿಮ ಹಾಗೂ ಕೇಂದ್ರ ಎಂದು ಹೆಸರುಗಳಿಂದ ನೂತನ ಪಾಲಿಕೆಗಳನ್ನು ಗುರುತಿಸಲಾಗುತ್ತಿದೆ.

ಯಾವ ಕ್ಷೇತ್ರ ಯಾವ ಪಾಲಿಕೆ ವ್ಯಾಪ್ತಿಗೆ?
* ಬೆಂಗಳೂರು ಉತ್ತರ: ಯಲಹಂಕ, ಬ್ಯಾಟರಾಯನಪುರ, ದಾಸರಹಳ್ಳಿ, ಯಶವಂತಪುರ, ಆರ್.ಆರ್. ನಗರ
* ಬೆಂಗಳೂರು ದಕ್ಷಿಣ: ಜಯನಗರ, ಚಿಕ್ಕಪೇಟೆ, ಶಾಂತಿನಗರ, ಬಿಟಿಎಂ ಲೇಔಟ್, ಬೊಮ್ಮನಹಳ್ಳಿ, ಬೆಂಗಳೂರು ದಕ್ಷಿಣ
* ಬೆಂಗಳೂರು ಪೂರ್ವ: ಸರ್ವಜ್ಞನಗರ, ಸಿ.ವಿ.ರಾಮನ್ ನಗರ, ಕೆ.ಆರ್.ಪುರ, ಮಹದೇವಪುರ
* ಬೆಂಗಳೂರು ಪಶ್ಚಿಮ: ಆರ್.ಆರ್. ನಗರ, ಗೋವಿಂದರಾಜನಗರ, ವಿಜಯನಗರ, ಚಾಮರಾಜಪೇಟೆ, ಬಸವನಗುಡಿ, ಪದ್ಮನಾಭನಗರ.
* ಬೆಂಗಳೂರು ಕೇಂದ್ರ: ಗಾಂಧಿನಗರ, ಶಿವಾಜಿನಗರ, ಪುಲಿಕೇಶಿನಗರ, ಹೆಬ್ಬಾಳ, ಮಲ್ಲೇಶ್ವರ, ರಾಜಾಜಿನಗರ, ಮಹಾಲಕ್ಷ್ಮೀ ಲೇಔಟ್.

ಇದನ್ನೂ ನೋಡಿ: ವಿಶ್ವ ಹಾವುಗಳ ದಿನ | ಆತಂಕ ಬಿಡಿ ಜೀವವೈವಿಧ್ಯತೆ ಕಾಪಾಡಿ Janashakthi Media #WorldSnakeDay

Donate Janashakthi Media

Leave a Reply

Your email address will not be published. Required fields are marked *