ಬೆಂಗಳೂರು: ಬೆಂಗಳೂರಿನಲ್ಲಿ ಆಸ್ತಿ, ಮನೆ ಖರೀದಿ ಮಾಡೋರಿಗೆ ಮೈಯೆಲ್ಲಾ ಕಣ್ಣಾಗಿರಬೇಕು ಎಂದು ಸ್ನಾಪ್‌ಡ್ರಾಫ್‌ನಲ್ಲಿನ ಉತ್ಪನ್ನದ ಹಿರಿಯ ನಿರ್ದೇಶಕ ರಾಮನಾಥ್ ಶೆಣೈ ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರಲ್ಲಿ ಆಸ್ತಿ, ಮನೆ, ಸೈಟ್ ಖರೀದಿಸೋದು ದೊಡ್ಡ ಸವಾಲು. ಹಣಕಾಸನ್ನು ಹೇಗೆ ಹೊಂದಿಸೋದು ಅನ್ನೋದಕ್ಕಿಂತ ಆಸ್ತಿ ಪತ್ರ ಸರಿ ಇದೆಯೇ, ಜನ ಒಳ್ಳೆಯವರ, ಏನಾದಾರೂ ಸ್ಪ್ಯಾಮ್ ಇದೆಯೇ ಅನ್ನೋ ಹತ್ತಾರು ಸವಾಲುಗಳು ಎದುರಾಗುತ್ತವೆ. ದಿನಬೆಳಗಾದ್ರೆ ಸೈಟ್ ಖರೀದಿಸಲು ದುಡ್ಡ ಕೊಟ್ಟು ಮೋಸ ಹೋದ್ವಿ, ಬೇರೆಯವರ ಆಸ್ತಿಯನ್ನು ನಮಗೆ ಮಾರಿದ್ದಾರೆ ಅನ್ನೋ ಘಟನೆಗಳನ್ನು ನೋಡ್ತಾನೇ ಇರ್ತೀವಿ. ಹೀಗೆ ಮನೆ, ಸೈಟ್ ವಿಚಾರದಲ್ಲಿ ಸ್ಕ್ಯಾಮ್ ಮಾಡೋದನ್ನೇ ಕೆಲವರು ಬಂಡವಾಳ ಮಾಡಿಕೊಂಡಿದ್ದಾರೆ.
ಸ್ನಾಪ್‌ಡ್ರಾಫ್‌ನಲ್ಲಿನ ಉತ್ಪನ್ನದ ಹಿರಿಯ ನಿರ್ದೇಶಕ ರಾಮನಾಥ್ ಶೆಣೈ ಅವರು ಹಂಚಿಕೊಂಡ ಘಟನೆಯು ಈ ವಿಷಯದ ಮೇಲೆ ಬೆಳಕು ಚೆಲ್ಲುತ್ತದೆ. ನಗರದಲ್ಲಿ ಆಸ್ತಿ, ಮನೆ ಖರೀದಿ ಮಾಡೋರಿಗೆ ಮೈಯೆಲ್ಲಾ ಕಣ್ಣಾಗಿರಬೇಕು ಎಂಬ ಎಚ್ಚರಿಕೆಯನ್ನು ಇವರು ನೀಡಿದ್ದಾರೆ.
ಶೆಣೈ ಅವರು X ನಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದು, ಬೆಂಗಳೂರಿನಲ್ಲಿ ಅಪಾರ್ಟ್‌ಮೆಂಟ್‌ಗಾಗಿ ಹುಡುಕಾಟ ನಡೆಸುತ್ತಿದ್ದಾಗ ಅವರಿಗಾದ ಅನುಭವ ಹಂಚಿಕೊಂಡಿದ್ದಾರೆ. ನಾನು ಸ್ವಲ್ಪ ಯಾಮಾರಿದ್ರೂ ನನ್ನ ಹಣ ಕಳೆದುಕೊಳ್ತಿದೆ, ಹೇಗೋ ಅನುಮಾನ ಬಂದದ್ದರಿಂದ ಬಚಾವಾದ ಎಂದು ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಮನೆ, ಅಪಾರ್ಟ್‌ಮೆಂಟ್, ಆಸ್ತಿ ಖರೀದಿಸೋರಿಗೆ ಇದೊಂದು ಪಾಠವಾಗಿರಬೇಕು ಅನ್ನೋ ಉದ್ದೇಶದಿಂದ ತಮಗಾದ ಮೋಸದ ಘಟನೆಯನ್ನು ಹಂಚಿಕೊಂಡಿದ್ದಾರೆ.
ಶೆಣೈ ಅವರು X ನಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದು, ಬೆಂಗಳೂರಿನಲ್ಲಿ ಅಪಾರ್ಟ್‌ಮೆಂಟ್‌ಗಾಗಿ ಹುಡುಕಾಟ ನಡೆಸುತ್ತಿದ್ದಾಗ ಅವರಿಗಾದ ಅನುಭವ ಹಂಚಿಕೊಂಡಿದ್ದಾರೆ. ನಾನು ಸ್ವಲ್ಪ ಯಾಮಾರಿದ್ರೂ ನನ್ನ ಹಣ ಕಳೆದುಕೊಳ್ತಿದೆ ಹೇಗೋ ಅನುಮಾನ ಬಂದದ್ದರಿಂದ ಬಚಾವಾದೇ ಎಂದು ಪೋಸ್ಟ್‌ನಲ್ಲಿ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಮನೆ, ಅಪಾರ್ಟ್ ಮೆಂಟ್, ಆಸ್ತಿ ಖರೀದಿಸೋರಿಗೆ ಇದೊಂದು ಪಾಠವಾಗಿರಬೇಕು ಅನ್ನೋ ಉದ್ದೇಶದಿಂದ ತಮಗಾದ ಮೋಸದ ಘಟನೆಯನ್ನು ಹಂಚಿಕೊಂಡಿದ್ದಾರೆ.
ಇದನ್ನೂ ಓದಿ : ಬೆಂಗಳೂರು: ಪತ್ನಿಯನ್ನ ಶಂಕಿಸಿ ಆಕೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಪತಿ ತಾನು ಆತಹತ್ಯೆಗೆ ಯತ್ನ
ರಾಮನಾಥ್ ಶೆಣೈ ಅವರು ಸುಮಾರು ವರ್ಷದಿಂದ ಮನೆ ಹುಡುತ್ತಿದ್ದರು, ಹಾಗೇ ಈ ಬಾರಿ ಮನೆಯ ಹುಡುಕಲು ಜನಪ್ರಿಯ ರಿಯಲ್ ಎಸ್ಟೇಟ್ ಪ್ಲಾಟ್‌ಫಾರ್ಮ್ ಆಗಿರುವ 99 ಎಕರೆಯಲ್ಲಿ ಲಾಗಿನ್ ಆದರು. ಏಜೆಂಟ್, ಬೋಕ ಕಾಟ ತಪ್ಪಿಸಿಕೊಳ್ಳಲು ಮಾಲೀಕರಿಂದ ನೇರವಾಗಿ ಪಟ್ಟಿ ಮಾಡಲಾದ ಮನೆಗಳನ್ನು ನೋಡ್ತಿದ್ದರು.
ಈ ವೇಳೆ ಅವರಿಗೆ ಕೋರಮಂಗಲದ ಪ್ರೆಸ್ಟೀಜ್ ಪೈನ್‌ವುಡ್‌ನಲ್ಲಿ ವಿಶೇಷವಾಗಿ ಆಕರ್ಷಕವಾದ 3 BHK ಅಪಾರ್ಟ್‌ಮೆಂಟ್ ಲಭ್ಯವಾಗಿತ್ತು. ಎರಡು ತಿಂಗಳ ಠೇವಣಿಯೊಂದಿಗೆ ತಿಂಗಳಿಗೆ 5 30,000 ಬೆಲೆ ಇತ್ತು. ಇದು ಶೆಣೈ ಅವರಿಗೆ ಉತ್ತಮವಾಗಿ ಕಂಡು ಬಂದಿತ್ತು. ಸರಿ ಇದನ್ನೇ ನೋಡೋಣ ಅಂತಾ ಅಲ್ಲೇ ಇದ್ದ ಮನೆ ಮಾಲೀಕರ ನಂಬರ್‌ಗೆ ಕಾಲ್ ಮಾಡಿದ್ದಾರೆ.
ಇವರಿಗೆ ಸಿಕ್ಕ ಆ ಮಾಲೀಕ ನಿರರ್ಗಳವಾಗಿ ಇಂಗ್ಲಿಷ್ ಮಾತಾಡ್ತಿದ್ರು ಮತ್ತು ವೃತ್ತಿಪರರಾಗಿ ಕಾಣಿಸಿಕೊಂಡರು. ಕೆಲಸದ ನಿಮಿತ್ತ ಮಂಗಳೂರಿಗೆ ಬಂದಿದ್ದೇನೆ ಎಂದ ಆ ಸ್ಕ್ಯಾಮರ್, ವೀಕೆಂಡ್‌ನಲ್ಲಿ ಮನೆ ತೋರಿಸುವುದಾಗಿ ಹೇಳಿದರು. ಇದೇ ವೇಳೆ 25,000 ಟೋಕನ್ ಅಡ್ವಾನ್ಸ್ ಕೊಡಬೇಕಾಗಿ ಶೆಣೈ ಅವರಿಗೆ ಆ ವ್ಯಕ್ತಿ ಕೇಳಿದ್ದನು.
ಇದನ್ನು ಕೇಳಿದಾಗೆ ಶೆಣೈ ಅವರಿಗೆ ಅನುಮಾನ ಬಂತು. ಶೆಣೈ ಕೂಡ ಮಂಗಳೂರಿನವರಾಗಿದ್ದರಿಂದ ಎಲ್ಲಿದ್ದೀರಿ ಅಂತೆಲ್ಲಾ ಕೇಳಿದ್ದಾರೆ. ಆದರೆ ಆ ವ್ಯಕ್ತಿ ಸ್ವಲ್ಪ ಅನುಮಾನ ಬರುವಂತೆ ಉತ್ತರಿಸಿದ್ದ. ಅದಾಗ್ಯೂ ಶೆಣೈ ಯುಪಿಐ ಪಾವತಿ ವಿವರಗಳನ್ನು ತೆಗೆದುಕೊಂಡರು.
ಆತ ಕೊಟ್ಟ “UPI ಐಡಿ ಬೆಸವಾಗಿತ್ತು, ಇದು ನನ್ನ ಅನುಮಾನಗಳನ್ನು ಜಾಸ್ತಿ ಮಾಡಿತು’ ಎಂದು ಶೆಣೈ, ಪೋಸ್ಟ್‌ನಲ್ಲಿ ತಿಳಿಸಿದ್ದಾರೆ. ಮಾಲೀಕನ ವೇಷದಲ್ಲಿದ್ದ ಆ ವ್ಯಕ್ತಿ ಟೋಕನ್ ಹಣ ಹಾಕಿ ಅಂತಾ ಮೇಲಿಂದ ಮೇಲೆ ಕೇಳುತ್ತಿದ್ದ ಮನೆ ತೋರಿಸಲು ಭೇಟಿ ಶುಲ್ಕಾ ಅಂತಾ ತಮ್ಮ ಸ್ನೇಹಿತನಿಗೆ ಮೋಸ ಮಾಡಿದ್ದು ನೆನಪಿಸಿಕೊಂಡ ಶೆಣೈ ಅವರು ಇದು ಯಾಕೋ ಸರಿ ಇಲ್ಲಾ ಅಂತಾ ತಿಳಿದು ವಿಚಾರಿಸಿದಾಗ ಆತ ಮಾಲೀಕನಲ್ಲ ಅಂತಾ ಗೊತ್ತಾಗಿದೆ.
ಈ ಘಟನೆಯ ಬೆನ್ನಲ್ಲೇ ಶೆಣೈ, ಬೇರೆಯವರಿಗೆ ಎಚ್ಚರದಿಂದಿರಲು ಘಟನೆಯನ್ನು ಹಂಚಿಕೊಂಡಿದ್ದಾರೆ. “ಆಸ್ತಿಯನ್ನು ಭೌತಿಕವಾಗಿ ನೋಡದೆ ಮತ್ತು ಮಾಲೀಕರು ಅಥವಾ ಉಸ್ತುವಾರಿಯನ್ನು ವೈಯಕ್ತಿಕವಾಗಿ ಭೇಟಿಯಾಗದೆ ಯಾವುದೇ ಟೋಕನ್ ಮೊತ್ತ, ಬಾಡಿಗೆ ಅಥವಾ ಠೇವಣಿ ವರ್ಗಾಯಿಸಬೇಡಿ” ಎಂದು ಅವರು ಎಚ್ಚರಿಸಿದ್ದಾರೆ.
ಆಸ್ತಿ ವಿವರಗಳನ್ನು ಪರಿಶೀಲಿಸುವುದು, ಮಾಲೀಕರನ್ನು ವೈಯಕ್ತಿಕವಾಗಿ ಭೇಟಿ ಮಾಡುವುದು ಮತ್ತು ಮುಂಗಡ ಪಾವತಿ ವಿನಂತಿಗಳ ಬಗೆ, ಜಾಗರೂಕರಾಗಿರುವುದು ಮೋಸ ಹೋಗದಂತೆ ನಮ್ಮನ್ನು ರಕ್ಷಿಸುತ್ತದೆ ಎಂದಿದ್ದಾರೆ.
ಇದನ್ನೂ ನೋಡಿ : ಒಂದು ದೇಶ, ಒಂದು ಚುನಾವಣೆ | ಒಂದು… ಒಂದು.. ಎನ್ನುವುದರ ಹಿಂದೆ ದೇಶಕ್ಕೆ ಕಾದಿದೆ ಅಪಾಯ – ಡಾ.ಸಿದ್ದನಗೌಡ ಪಾಟೀಲ್