ಒಂದು ಸೌಹಾರ್ದದ ಸಂಕೇತವಾಗಿ, ಪ್ರತಿದಿನ ಅರ್ಧ ಗಂಟೆ – ಸ್ಥಳೀಯ ಸಮಯ 21:00 ರಿಂದ 21:30 ರವರೆಗೆ – ತಮ್ಮ ಮೊಬೈಲ್ ಫೋನ್‌ಗಳನ್ನು ಆಫ್ ಮಾಡಬೇಕು ಎಂದು ಆಗ್ರಹಿಸುತ್ತ ‘ಸೈಲೆನ್ಸ್ ಫಾರ್ ಗಾಝಾ’ (ಗಾಝಾಕ್ಕಾಗಿ ಮೌನ) ಆಚರಿಸಿ ಎಂದು ಜಾಗತಿಕವಾಗಿ ಕರೆ ನೀಡಲಾಗಿದೆ. ಇಸ್ರೇಲ್
ಇತ್ತೀಚೆಗೆ ಬಿಡುಗಡೆಯಾದ ವಿಶ್ವಸಂಸ್ಥೆಯ ‘ಆಕ್ರಮಣದ ಆರ್ಥಿಕತೆಯಿಂದ ನರಮೇಧದ ಆರ್ಥಿಕತೆಗೆ’(ಫ್ರಮ್ ಎಕಾನಮಿ ಆಫ್ ಆಕ್ಯುಪೇಶನ್ ಟು ಎಕಾನಮಿ ಆಫ್ ಜೆನೊಸೈಡ್) ಎಂಬ ವರದಿ, ಗಾಜಾದ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ ವಿವಿಧ ಬಹುರಾಷ್ಟ್ರೀಯ ಕಾರ್ಪೊರೇಟ್‍ಗಳು ಹೇಗೆ ಶಾಮೀಲಾಗಿವೆ ಎಂಬುದನ್ನು ವಿವರಿಸುತ್ತದೆ. ಈ ಕಾರ್ಪೊರೇಟ್‍ಗಳ ದುಷ್ಟ ಪಾತ್ರವನ್ನು ಬಯಲಿಗೆಳೆಯಲಿಕ್ಕೆ ಮತ್ತು ಅವುಗಳನ್ನು ಜನರಿಗೆ ಜವಾಬುದಾರರನ್ನಾಗಿ ಮಾಡಲಿಕ್ಕೆ ಈ ಜಾಗತಿಕ ಕರೆಯನ್ನು ತಾನು ಅನುಮೋದಿಸುವುದಾಗಿ ಸಿಪಿಐ(ಎಂ) ಪೊಲಿಟ್‍ಬ್ಯುರೊ ಹೇಳಿದೆ.
ಇದನ್ನೂ ಓದಿ : ಎಸ್ ಎಲ್ ಭೈರಪ್ಪನವರದ್ದು ಅಬೌದ್ಧಿಕ ಮಾತು: ಡಾ ಎನ್. ಚಿನ್ನಸ್ವಾಮಿ ಸೋಸಲೆ
ಈ ಕಾರ್ಪೊರೇಟ್‍ಗಳು ನರಮೇಧಕ್ಕೆ ಅನುಕೂಲ ಮಾಡಿಕೊಡುವಾಗ, ನಮ್ಮ ಡಿಜಿಟಲ್ ಹೆಜ್ಜೆಗುರುತುಗಳಿಂದ ಪೋಷಣೆಯನ್ನು ಪಡೆಯುತ್ತವೆ. ಆದ್ದರಿಂದ ಪ್ರತಿದಿನ ನಿಗದಿತ ಸಮಯದಲ್ಲಿ ಅರ್ಧ ಗಂಟೆ ನಮ್ಮ ಮೊಬೈಲ್ ಫೋನ್‌ಗಳನ್ನು ಆಫ್ ಮಾಡುವುದು ಡಿಜಿಟಲ್ ಅಡ್ಡಿ ಒಡ್ಡುವ ಒಂದು ಸಣ್ಣದಾದರೂ ಶಕ್ತಿಯುತವಾದ ಕ್ರಿಯೆಯಾಗುತ್ತದೆ, ಇಸ್ರೇಲ್‌ನ ನರಮೇಧ ಮತ್ತು ಜನಾಂಗಭೇದ ನೀತಿಗೆ ಹಣಕಾಸು ಒದಗಿಸುವ ನಿಗಾವಣೆ ಬಂಡವಾಳಶಾಹಿಯ ವಿರುದ್ಧದ ಒಂದು ಪ್ರಹಾರವಾಗುತ್ತದೆ.
ದೇಶಾದ್ಯಂತ ಜನರು, ‘ನಿಮ್ಮ ಮೊಬೈಲ್ ಫೋನ್‌ಗಳನ್ನು ಆಫ್ ಮಾಡಿ ಮತ್ತು ಪ್ರತಿಭಟನಾ ಅವಧಿಯಲ್ಲಿ ಯಾವುದೇ ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಪೋಸ್ಟ್ ಮಾಡುವುದು, ಇಷ್ಟಪಡುವುದು ಅಥವಾ ಕಾಮೆಂಟ್ ಮಾಡುವುದನ್ನು ತಪ್ಪಿಸಿ’ ಎಂಬ ಮಾತನ್ನು ಪಸರಿಸುವ ಮೂಲಕ, ಈ ಡಿಜಿಟಲ್ ಪ್ರತಿರೋಧದಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು ಎಂದು ಸಿಪಿಐ(ಎಂ) ಕಳಕಳಿಯಿಂದ ಕೋರಿದೆ.
ಜಾಗತಿಕ ‘ಸೈಲೆನ್ಸ್ ಫಾರ್ ಗಾಜಾ’ ಅಭಿಯಾನಕ್ಕೆ ಸೇರುವ ಮೂಲಕ, ಪ್ಯಾಲೆಸ್ಟೀನಿಯನ್ ಜನರೊಂದಿಗೆ ಮತ್ತು ಇಸ್ರೇಲ್ ಹರಿಯ ಬಿಟ್ಟಿರುವ ಕ್ರೂರ, ನರಮೇಧದ ದಾಳಿಯ ವಿರುದ್ಧ ನಿಲ್ಲಬೇಕು ಎನ್ನುತ್ತ, ಈ ಸಾಮೂಹಿಕ ಮೌನವು ಕಾರ್ಪೊರೇಟ್‍ಗಳ ಶಾಮೀಲಿನಲ್ಲಿ ಭಾಗಿಯಾಗಲು ಧಿಕ್ಕಾರಪೂರ್ಣ ನಿರಾಕರಣೆಯಾಗಲಿ ಮತ್ತು ಯುದ್ಧ ಅಪರಾಧಗಳ ವಿರುದ್ಧದ ಧ್ವನಿಯನ್ನು ಮೌನಗೊಳಿಸಲು ಬಿಡುವುದಿಲ್ಲ ಎಂಬುದರ ಪ್ರಬಲ ಪ್ರತಿಪಾದನೆಯಾಗಲಿ ಎಂದು ಸಿಪಿಐ(ಎಂ) ಪೊಲಿಟ್‍ಬ್ಯುರೊ ಹಾರೈಸಿದೆ.
ಇದನ್ನೂ ನೋಡಿ : ಯುದ್ಧವೂ ಉದ್ಯಮವಾದಾಗ….! -ಡಾ.ಸಿದ್ದನಗೌಡ ಪಾಟೀಲ ವಿಶ್ಲೇಷಣೆಯಲ್ಲಿ Janashakthi Media
