ಬೆಂಗಳೂರು: ದೇಶದಲ್ಲಿ ಕೇಂದ್ರದ ಮೋದಿ ಸರ್ಕಾರ ರಾಜಕೀಯ ಉದ್ದೇಶಕ್ಕಾಗಿ ಚುನಾವಣಾ ಆಯೋಗವನ್ನು ತನ್ನ ಕೈಗೊಂಬೆಯಾಗಿಸಿಕೊಂಡು ಮತದಾರರ ವಿಶೇಷ ತೀವ್ರ ಪರಿಷ್ಕರಣೆ (ಎಸ್.ಐ.ಆರ್) ಯನ್ನು ಜಾರಿ ಮಾಡುತ್ತಿರುವ ನಿಟ್ಟಿನಲ್ಲಿ ಎಸ್.ಐ.ಆರ್ ನ್ನು ವಿರೋಧಿಸುವ ಸಮಾನ ಮನಸ್ಕ ಎಡ ಮತ್ತು ಪ್ರಜಾಸತ್ತಾತ್ಮಕ ಪಕ್ಷಗಳನ್ನು ಒಳಗೊಂಡು ಎಸ್.ಐ.ಆರ್. ನ ಸಾಧಕ-ಬಾಧಕಗಳ ಕುರಿತು ವಿಚಾರ ಮಂಡನೆ-ಸಂವಾದ ಕಾರ್ಯಕ್ರಮವನ್ನು ಸಿಪಿಐ(ಎಂ) ಆಯೋಜಿಸುತ್ತಿದೆ.
ಎಸ್.ಐ.ಆರ್. ನ ಸಾಧಕ-ಬಾಧಕಗಳ ಕುರಿತು ವಿಚಾರ ಮಂಡನೆ-ಸಂವಾದ ಕಾರ್ಯಕ್ರಮವು ನವೆಂಬರ್ 27ರ ಸಂಜೆ 4 ಗಂಟಗೆ ನಗರದ ಶಾಸಕ ಭವನ 1ರಲ್ಲಿ ನಡೆಯಲಿದೆ ಎಂದು ಬೆಂಗಳೂರು ಉತ್ತರ ಜಿಲ್ಲಾ ಸಮೀತಿಯ ಕಾರ್ಯದರ್ಶಿ ಎನ್ ಪ್ರತಾಪ್ ಸಿಂಹ ಹಾಗೂ ಬೆಂಗಳೂರು ದಕ್ಷಿಣ ಜಿಲ್ಲಾ ಸಮೀತಿಯ ಕಾರ್ಯದರ್ಶಿ ಬಿ.ಎನ್ ಮಂಜುನಾಥ್ ತಿಳಿಸಿದ್ದಾರೆ.
ಇದನ್ನೂ ಓದಿ: ಅಂಗವೈಕಲ್ಯ ಮಗನಿಗೆ ಪರೀಕ್ಷೆ ಪ್ರವೇಶ ಪತ್ರ ನೀಡುತ್ತಿಲ್ಲ: ಪೋಷಕರು ಪ್ರತಿಭಟನೆ
ಈ ಕಾರ್ಯಕ್ರಮದ ವಿಷಯ ಮಂಡನೆಯನ್ನು ವಿಧಾನ ಪರಿಷತ್ ಸದಸ್ಯರು ಹಾಗೂ ಕಾಂಗ್ರೆಸ್ ಮುಖಂಡರಾದ ಬಿ. ಕೆ. ಹರಿಪ್ರಸಾದ್, ಎಎಪಿ ರಾಜ್ಯ ಅಧ್ಯಕ್ಷರಾದ ಮುಖ್ಯಮಂತ್ರಿ ಚಂದ್ರು, ಸಿ.ಪಿ.ಐ(ಎಂ) ರಾಜ್ಯ ಕಾರ್ಯದರ್ಶಿ ಡಾ. ಪ್ರಕಾಶ್ ಕೆ, ಸಿ.ಪಿ.ಐ ರಾಜ್ಯ ಕಾರ್ಯದರ್ಶಿ ಸಾತಿ ಸುಂದರೇಶ್, ಸಿ.ಪಿ.ಐ(ಎಂ.ಎಲ್) ಲಿಬರೇಷನ್ ರಾಜ್ಯ ಕಾರ್ಯದರ್ಶಿ ಕ್ಲಿಪ್ಟನ್ ಡಿ ರೊಜಾರಿಯೊ, ಎಸ್.ಯು.ಸಿ.ಐ(ಸಿ) ಬೆಂ.ಜಿಲ್ಲಾ ಕಾರ್ಯದರ್ಶಿ ಶ್ರೀರಾಮ್, ಶಾಸಕ ಹಾಗೂ ಸರ್ವೋದಯ ಕರ್ನಾಟಕದ ದರ್ಶನ್ ಪುಟ್ಟಣ್ಣಯ್ಯ, ಬಿ.ಎಸ್.ಪಿ ನಾಯಕ ಮಾರಸಂದ್ರ ಮುನಿಯಪ್ಪ, ಡಿ.ಎಂ.ಕೆ ರಾಜ್ಯ ಅಧ್ಯಕ್ಷರಾದ ರಾಮಸ್ವಾಮಿ.ಎನ್ ಮಾಡಲಿದ್ದಾರೆ.

ಕಾರ್ಯಕ್ರಮದ ಸ೦ವಾದದಲ್ಲಿ ಕಾತ್ಯಾಯಿನಿ ಚಾಮರಾಜ್, ಬಿ. ಶ್ರೀಪಾದ್ ಭಟ್, ಡಿ.ಶಿವಶಂಕರ್ ಭಾಗವಹಿಸಲಿದ್ದಾರೆ.
ಇದನ್ನೂ ನೋಡಿ: ಕರ್ನಾಟಕಕ್ಕೆ ಕಾಲಿಟ್ಟ SIR |NRC ಜಾರಿಗಾಗಿ ಹಿಂಬಾಗಿಲಿನ ಪ್ರಯತ್ನ – ಕೆ. ಪ್ರಕಾಶ್ Janashakthi Media
