– ಸಂಧ್ಯಾ ಸೊರಬ
175 ವರ್ಷಗಳ ಇತಿಹಾಸದ ಜೊತೆಗೆ ಜಿಐ ಟ್ಯಾಗ್ ಹೊಂದಿರುವ ಬಹುತೇಕರ ಬಾಯಿಯಲ್ಲಿ ನೀರೂರಿಸುವ ಧಾರವಾಡ ಪೇಡಾ ಅಂದರೆ, ನಮ್ಮ ಧಾರವಾಡ ಪೇಡಾ. ಧಾರವಾಡದ ಎಮ್ಮೆಗಳಿಂದಲೇ ಸಂಗ್ರಹಿಸುವ ಹಾಲಿನಿಂದ ತಯಾರಾಗುವ ಈ ಧಾರವಾಡ ಪೇಡಾದ ಈ ಪ್ರಸಿದ್ಧಿ ಸಿಹಿ ತಿಂಡಿಯ ವಿಷಯವಷ್ಟೇ ಅಲ್ಲ, ಇತ್ತ ರಾಜ್ಯ ರಾಜಕಾರಣದಲ್ಲಿಯೂ ಉತ್ತರ ಕರ್ನಾಟಕದ ಕೇಂದ್ರ ಸ್ಥಾನವಾದ ಧಾರವಾಡ ಜಿಲ್ಲಾ ರಾಜಕಾರಣವೂ ತನ್ನದೇ ಆದ ವಿಶೇಷತೆಗಳಿಂದ ಕೂಡಿದೆ. ಇದರ ಜಿಲ್ಲಾ ರಾಜಕಾರಣದಲ್ಲಿ ವರ್ಷಗಳಿಂದ ಲಿಂಗಾಯತ ಸಮುದಾಯದ ಅಸ್ತಿತ್ವದ ಜೊತೆಗೆ ಪ್ರಾತಿನಿಧ್ಯವನ್ನು ಈ ಲೋಕಸಭಾ ಕ್ಷೇತ್ರ ಕಾಯ್ದುಕೊಂಡಿರುವುದು ವಿಶೇಷವೇ ಸರಿ.
ಧಾರವಾಡ ಲೋಕಸಭಾ ಕ್ಷೇತ್ರ ಸಾಮಾನ್ಯ ಕ್ಷೇತ್ರವಾಗಿದ್ದು, ಉತ್ತರ ಕರ್ನಾಟಕದಲ್ಲಿ ರಾಜಕೀಯವಾಗಿ ಲಿಂಗಾಯತರು ದಟ್ಟ ಪ್ರಭಾವ ಹೊಂದಿರುವ ಹಿನ್ನೆಲೆಯಲ್ಲಿ ಬಹುತೇಕ ಪಕ್ಷಗಳು 4 ದಶಕಕ್ಕೂ ಹೆಚ್ಚು ಸಮಯದಿಂದ ಬಹುತೇಕ ಪಕ್ಷಗಳು ಲೋಕಸಭಾ ಚುನಾವಣೆಯಲ್ಲಿ ಲಿಂಗಾಯತ ಅಭ್ಯರ್ಥಿಗಳಿಗೆ ಮಣೆ ಹಾಕಿವೆ. ಇದೇ ಮೊದಲ ಸಲ ರಾಷ್ಟ್ರೀಯ ಪಕ್ಷಗಳು ಸಹ ಲಿಂಗಾಯತ ಅಭ್ಯರ್ಥಿಯನ್ನು ಕಣಕ್ಕಿಳಿಸಿಲ್ಲ. ಧಾರವಾಡ ವೈವಿಧ್ಯಮಯ ಜನಸಮೂದಾಯವನ್ನು ಪ್ರತಿಬಿಂಬಿಸುತ್ತದೆ ಮತ್ತು ಕರ್ನಾಟಕದ ನಿರ್ಣಾಯಕ ಕ್ಷೇತ್ರವಾಗಿ ಉಳಿದಿದೆ.
ಧಾರವಾಡ ಕ್ಷೇತ್ರವು ನವಲಗುಂದ, ಕುಂದಗೋಳ, ಧಾರವಾಡ, ಹುಬ್ಬಳ್ಳಿ-ಧಾರವಾಡ-ಪೂರ್ವ, ಹುಬ್ಬಳ್ಳಿ-ಧಾರವಾಡ ಕೇಂದ್ರ, ಹುಬ್ಬಳ್ಳಿ-ಧಾರವಾಡ-ಪಶ್ಚಿಮ, ಕಲ್ಘಟಗಿ, ಶಿಗ್ಗಾಂವ ಸೇರಿದಂತೆ 8 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ.
ಧಾರವಾಡ ಲೋಕಸಭೆ ಕ್ಷೇತ್ರ ತನ್ನದೇ ಆದ ಇತಿಹಾಸ ಹೊಂದಿದೆ. ಡಾ.ಸರೋಜಿನಿ ಮಹಿಷ ಹಿಡಿದುಕೊಂಡು ಅನೇಕ ಘಟಾನುಘಟಿಗಳು ಲೋಕಸಭೆ ಚುನಾವಣೆಗೆ ಆಯ್ಕೆ ಆಗಿದ್ದವರು
2002 ರಲ್ಲಿ ರಚನೆಯಾದ ಡಿಲಿಮಿಟೇಷನ್ ಕಮಿಷನ್ ಆಫ್ ಇಂಡಿಯಾದ ಶಿಫಾರಸುಗಳ ಆಧಾರದ ಮೇಲೆ 2008 ರಲ್ಲಿ ಸಂಸತ್ತಿನ ಕ್ಷೇತ್ರಗಳ ಕ್ಷೇತ್ರವಾರು ಪುನರ್ವಿಂಗಡನೆಯ ಭಾಗವಾಗಿ 2008 ರಲ್ಲಿ ಧಾರವಾಡ ಲೋಕಸಭಾ ಕ್ಷೇತ್ರವನ್ನು ರಚಿಸಲಾಯಿತು.
2008ರಲ್ಲಿ ಕ್ಷೇತ್ರ ಪುನರ್ ರಚನೆಗೊಂಡು, ಧಾರವಾಡ ಕ್ಷೇತ್ರವಾಗಿ ರೂಪುಗೊಂಡಿತು. 2009ರಲ್ಲಿ ಮಂಜುನಾಥ ಕುನ್ನೂರು, 2014 ಮತ್ತು 2019ರಲ್ಲಿ ವಿನಯ ಕುಲಕರ್ಣಿ ಅವರನ್ನು ಕಾಂಗ್ರೆಸ್ ಕಣಕ್ಕಿಳಿಸಿತ್ತು.
ಇದನ್ನು ಓದಿ : ಪ್ರಜ್ವಲ್ ಪ್ರಕರಣ; ಪ್ರಧಾನಿ ಮೋದಿ ಹಾಗೂ ದೇವೇಗೌಡರ ಕುಟುಂಬವೇ ನೇರ ಹೊಣೆ: ಸಂಸದ ಡಿ.ಕೆ.ಸುರೇಶ್ ವಾಗ್ದಾಳಿ
ಲೋಕಸಭಾ ಕ್ಷೇತ್ರದ ಚುನಾವಣಾ ಇತಿಹಾಸವನ್ನು ನೋಡುವುದಾದರೆ, ಇದೀಗ 2024ರಲ್ಲಿ ಮತದಾರರು ತಮ್ಮ ಮತದ ಶಕ್ತಿಯನ್ನು ತೋರಿಸಲು ಇನ್ನಷ್ಟು ಉತ್ಸುಕರಾಗಿದ್ದಾರೆ. ಧಾರವಾಡ ಲೋಕಸಭಾ ಕ್ಷೇತ್ರದ 2024 ಅಭ್ಯರ್ಥಿಗಳ ಪಟ್ಟಿಗೆ ಸಂಬಂಧಿಸಿದಂತೆ ಬಿಜೆಪಿಯಿಂದ ಬ್ರಾಹ್ಮಣ ಅಭ್ಯರ್ಥಿ ಪ್ರಹ್ಲಾದ್ ಜೋಶಿ ಪ್ರಮುಖ ಅಭ್ಯರ್ಥಿಗಳಾಗಿದ್ದಾರೆ.
ಕಾಂಗ್ರೆಸ್‌ನಿಂದ ಕುರುಬ ಸಮಾಜದ ವಿನೋದ್ ಅಸೂಟಿ ಕಣಕ್ಕಿಳಿದಿದ್ದಾರೆ. ಬಿಜೆಪಿಯು ಹಾಲಿ ಸಂಸದ, ಬ್ರಾಹ್ಮಣ ಸಮುದಾಯದ ಪ್ರಹ್ಲಾದ ಜೋಶಿ ಮತ್ತು ಕಾಂಗ್ರೆಸ್ ಪಕ್ಷ ಕುರುಬ ಸಮುದಾಯದ ವಿನೋದ ಅಸೂಟಿ ಅವರನ್ನು ಕಣಕ್ಕಿಳಿಸಿವೆ. ಪ್ರಹ್ಲಾದ್ ಜೋಶಿಯ ವಿರುದ್ಧ ತಿರುಗಿಬಿದ್ದಿರುವ “ಧಿಂಗಾಲೇಶ್ವರ ಸ್ವಾಮೀಜಿ” ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿ, ಬಳಿಕ ಬದಲಾದ ರಾಜಕೀಯ ಬೆಳವಣಿಗೆಯಲ್ಲಿ ನಾಮಪತ್ರವನ್ನು ಹಿಂಪಡೆದು ಕಾಂಗ್ರೆಸ್‌ಗೆ ಬೆಂಬಲ ಸೂಚಿಸಿದ್ದಾರೆ.
ಕ್ಷೇತ್ರದಲ್ಲಿ ಬಿಜೆಪಿ, ಐಎನ್‌ಸಿ ಪ್ರಮುಖ ಪಕ್ಷಗಳು. 2019 ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಪ್ರಲ್ಹಾದ್ ಜೋಶಿ 205,072 ಮತಗಳ ಅಂತರದಿಂದ ಗೆದ್ದರು. ಪ್ರಲ್ಹಾದ್ ಜೋಶಿ ಅವರು 684,837 ಮತಗಳನ್ನು 56.00% ಮತಗಳನ್ನು ಪಡೆದರು ಮತ್ತು 479,765 ಮತಗಳನ್ನು (39.51%) ಪಡೆದ ಕಾಂಗ್ರೆಸ್‌ನ ವಿನಯ್ ಕುಲಕರ್ಣಿ ಅವರನ್ನು ಸೋಲಿಸಿದರು. 2014 ರ ಲೋಕಸಭಾ ಚುನಾವಣೆಯಲ್ಲಿ, ಬಿಜೆಪಿಯಿಂದ ಪ್ರಲ್ಹಾದ್ ಜೋಶಿ ಅವರು ಸ್ಥಾನವನ್ನು ಗೆದ್ದರು ಮತ್ತು 52.37% ಮತಗಳ ಹಂಚಿಕೆಯೊಂದಿಗೆ 545,395 ಮತಗಳನ್ನು ಪಡೆದರು. INC ಅಭ್ಯರ್ಥಿ ವಿನಯ್ ಕುಲಕರ್ಣಿ 431,738 ಮತಗಳನ್ನು (41.45%) ಪಡೆದು ರನ್ನರ್ ಅಪ್ ಆದರು. ಪ್ರಲ್ಹಾದ್ ಜೋಶಿ ಅವರು ವಿನಯ್ ಕುಲಕರ್ಣಿ ಅವರನ್ನು 113,657 ಮತಗಳ ಅಂತರದಿಂದ ಸೋಲಿಸಿದರು.
ಧಾರವಾಡ ಕ್ಷೇತ್ರದಲ್ಲಿ ಒಟ್ಟು 17,27,311 ಮತದಾರರು ಇದ್ದಾರೆ. 2019ರಲ್ಲಿ ಒಟ್ಟು 12,13,505 ಮತದಾರರು ಇದ್ದರು. 2019ರಲ್ಲಿ ಕ್ಷೇತ್ರದಲ್ಲಿ ಶೇ. 70.25% ರಷ್ಟು ಮತದಾನ ನಡೆದಿತ್ತು.
2019ರ ಲೋಕಸಭೆ ಚುನಾವಣೆಯಲ್ಲಿ 5 ಲಕ್ಷ ಇದ್ದ ಲಿಂಗಾಯ ಮತದಾರರು ಇದೀಗ 2024 ಚುನಾವಣೆ ಹೊತ್ತಿಗೆ 6 ಲಕ್ಷ 20 ಸಾವಿರದವರೆಗೂ ಆಗಿದೆ. ಇದು ಸಹಜವಾಗಿ ಲೋಕಸಭಾ ಚುನಾವಣೆಯಲ್ಲಿ ಲಿಂಗಾಯತ ಮತದಾರರು ಈ ಬಾರಿ ದೊಡ್ಡಮಟ್ಟದಲ್ಲಿ ನಿರ್ಣಯಕರಾಗಲಿದ್ದಾರೆ ಎನ್ನುವ ಲೆಕ್ಕಾಚಾರಗಳು ಮೂಡಿವೆ. ಆದರೆ, 40 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಧಾರವಾಡ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಲಿಂಗಾಯತ ಸಮುದಾಯಕ್ಕೆ ಟಿಕೇಟ್ ಸಿಕ್ಕಿಲ್ಲ ಅನ್ನೋದು ಗಮನಾರ್ಹ. ಹಳೆಯ ಚುನಾವಣಾ ಟೇಬಲ್ಸ್ ಲಗತ್ತಿಸುವುದು.
ಇದನ್ನು ನೋಡಿ : ಚಿತ್ರದುರ್ಗ : ಒಳ ಏಟಿನ ಪೆಟ್ಟು ಬಿಜೆಪಿಗಾ? ಕಾಂಗ್ರೆಸ್‌ಗೆ Janashakthi Media