ಎರಡು ಪಣಗಳು ಈ ಬಜೆಟಿನಲ್ಲಿ ಅಡಕವಾಗಿವೆ. ಮೊದಲನೆಯದು, ಮಧ್ಯಮ ವರ್ಗಕ್ಕೆ ಕೊಟ್ಟಿರುವ ತೆರಿಗೆ ರಿಯಾಯಿತಿಗಳು ಬಳಕೆ ಖರ್ಚುಗಳ ಭರಾಟೆಯನ್ನೇ ಹರಿಯ ಬಿಡುತ್ತವೆ, ಇದು ಬಳಕೆಯ ಬೇಡಿಕೆಯನ್ನು ಮತ್ತು ಜಿಡಿಪಿ ಬೆಳವಣಿಗೆಯನ್ನು ಪುನರುಜ್ಜೀವನಗೊಳಿಸುತ್ತದೆ ಎಂಬ ನಿರೀಕ್ಷೆ. ಇನ್ನೊಂದು, ಕಾರ್ಪೊರೇಟ್ ಲಾಭಗಳು ಹೆಚ್ಚುತ್ತಿರುವುದು ಮತ್ತು ಕಾರ್ಮಿಕರ ಗಳಿಕೆಗಳು ಮಾತ್ರ ಹೆಚ್ಚದೆ ಸ್ಥಗಿತ ಸ್ಥಿತಿಯಲ್ಲಿರುವುದು ಅರ್ಥವ್ಯವಸ್ಥೆಯಲ್ಲಿ ಬೇಡಿಕೆಯ ದೃಷ್ಟಿಯಿಂದ ಕೆಟ್ಟದ್ದು ಎಂದು ಆರ್ಥಿಕ ಸಮೀಕ್ಷೆ ಹೇಳಿದರೂ, ಕಾರ್ಪೊರೇಟ್ ವಲಯಕ್ಕೆ ಪ್ರೋತ್ಸಾಹ ಖಾಸಗಿ ಹೂಡಿಕೆಯನ್ನು ಪುನರುಜ್ಜೀವನಗೊಳಿಸಲು ಸಹಾಯ ಮಾಡುತ್ತದೆ ಎಂಬ ನಿರೀಕ್ಷೆ. ವಿಕಸಿತ
-ಡಾ.ಸಿ.ಪಿ.ಚಂದ್ರಶೇಖರ್
ಇದೇ ರೀತಿಯ ಪ್ರೋತ್ಸಾಹಕಗಳನ್ನು ವಿದೇಶಿ ಹೂಡಿಕೆದಾರರಿಗೂ ಅದು ‘ವಿಕಸಿತ ಭಾರತ’ವನ್ನು ತಲುಪಲು ಸಹಾಯ ಮಾಡುತ್ತದೆ ಎಂದು ವಿಸ್ತರಿಸುವುದು ಕೇವಲ ಭ್ರಮೆಯಷ್ಟೇ ಅಲ್ಲ, ಒಂದು ಅಪಾಯಕಾರಿ ಭ್ರಮೆ ಕೂಡ ಎನ್ನುತ್ತಾರೆ ಜವಹರಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ಮಾಜೀ ಅರ್ಥಶಾಸ್ತ್ರ ಪ್ರಾಧ್ಯಾಪಕ ರಾಗಿದ್ದ
ಡಾ..ಸಿ.ಪಿ. ಚಂದ್ರಶೇಖರ್ ವಿಕಸಿತ
( ಮೂಲ ಲೇಖನ ಕೃಪೆ: ದಿ ಹಿಂದು, ಫೆ.2)
ಇದನ್ನೂ ಓದಿ: Delhi Exit Polls: ಬಿಜೆಪಿ ಮೊದಲ ಸ್ಥಾನ, ಎಎಪಿಗೆ 2ನೇ ಸ್ಥಾನ
2024-25ರ ಅಧಿಕೃತ ಆರ್ಥಿಕ ಸಮೀಕ್ಷೆಯಲ್ಲಿಯೂ ಸಹ ಉಲ್ಲೇಖಿಸಲಾದ ಹಿನ್ನೆಲೆಯು, ತನ್ನ ಮೂರನೇ ಅವಧಿಯಲ್ಲಿ ನೆಲೆಗೊಳ್ಳುತ್ತಿರುವ ನರೇಂದ್ರ ಮೋದಿ ಸರ್ಕಾರಕ್ಕೆ 2025-26ರ ಬಜೆಟ್‌ನ ಸಂದರ್ಭದಲ್ಲಿ ಸವಾಲಾಗಿ ಪರಿಣಮಿಸಿದೆ. ಜನಗಳು ತಮಗೆ ಅಗತ್ಯವಾದ ಸರಕುಗಳನ್ನು ಕೊಳ್ಳುವ ಪ್ರಮಾಣ ಕಡಿಮೆಯಾಗುತ್ತಿರುವುದರಿಂದ ಅರ್ಥವ್ಯವಸ್ಥೇಯಲ್ಲಿ ಬಳಕೆಯ ಬೇಡಿಕೆ ಮಂದಗೊಳ್ಳುತ್ತಿದೆ. ಇದರಿಂದಾಗಿ, ಮತ್ತು ಸಾರ್ವಜನಿಕ ಬಂಡವಾಳ ವೆಚ್ಚ
ನಿಧಾನಗೊಳ್ಳುತ್ತಿರುವುದರಿಂದಾಗಿ ಆರ್ಥಿಕ ಬೆಳವಣಿಗೆಯ ವೇಗ ಇಳಿಮುಖಗೊಂಡಿದೆ. ವಿಕಸಿತ
ಖಾಸಗಿ ಹೂಡಿಕೆಯು ಈ ಮಂದಗತಿಯನ್ನು ಸರಿಹೊಂದಿಸುತ್ತಿಲ್ಲ. ಈ ನಡುವೆ, ಟ್ರಂಪ್ ಅಧಿಕಾರ ವಹಿಸಿಕೊಂಡ ಮೊದಲಿನ ಮತ್ತು ನಂತರದ ಜಾಗತಿಕ ಬೆಳವಣಿಗೆಗಳು ಮತ್ತು ಧೋರಣೆಗಳ ದಿಕ್ಕನ್ನು ನೋಡಿದರೆ ವಿದೇಶ ವ್ಯಾಪಾರವೂ ಹೆಚ್ಚೇನೂ ಸಹಾಯಕವಾಗುವಂತೆ ಕಾಣುತ್ತಿಲ್ಲ. . ಬೆಳವಣಿಗೆಯ ಕುಸಿತವನ್ನು ಹಿಮ್ಮೆಟ್ಟಿಸಬೇಕಾದರೆ ಮತ್ತು ‘ವಿಕಸಿತ ಭಾರತ 2047’ ಘೋಷಣೆ ಅಥವಾ 'ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರದ ಸ್ಥಾನಮಾನಕ್ಕೆ ಕೊಂಡೊಯ್ಯುವ ಮಹತ್ವಾಕಾಂಕ್ಷೆ ಎಂಬುದು ಬರೀ ಬೊಗಳೆಯಲ್ಲ ಎಂದಾಗಬೇಕಾದರೆ ಜನಗಳು ತಮಗೆ ಬೇಕಾದ ಸರಕು- ಸಾಮಗ್ರಿಗಳನ್ನು ಮತ್ತೆ ತಮಗೆ ಅಗತ್ಯವಾದ ಪ್ರಮಾಣದಲ್ಲಿ ಕೊಳ್ಳುವಂತಾಗುವುದು ಅಗತ್ಯವಾಗಿದೆ. ವಿಕಸಿತ
ಆದಾಯ ಅಸಮಾನತೆಯ ಅಂಶಗಳು
ಹೀಗೆ ಆಂತರಿಕವಾಗಿ ಸಾಮೂಹಿಕ ಬಳಕೆಯ ಸಾಮಗ್ರಿಗಳಿಗೆ ಬೇಡಿಕೆಯು ಸಮರ್ಪಕವಾಗಿ ಬೆಳೆಯದಿರುವುದೇ ಸಮಸ್ಯೆಯ ಪ್ರಧಾನ ಮೂಲವಾಗಿರುವಂತೆ ಕಾಣುತ್ತದೆ. ಸಾಲಗಳು ಹುಟ್ಟುಹಾಕಿದ ಆರ್ಥಿಕ ವಿಸ್ತರಣೆ ಸುಸ್ಥಿರವಾಗಿರಲಿಲ್ಲ.ಅದೀಗ ದುರ್ಬಲಗೊಂಡಿದೆ. ಆರ್ಥಿಕ ಸಮೀಕ್ಷೆಯು ಗಳಿಕೆಗಳ ಪ್ರವೃತ್ತಿಯನ್ನು ಕುರಿತ ವಿಭಾಗವು ಬೇಡಿಕೆಯು ಮಂದಗೊಳ್ಳುತ್ತಿರುವುದು ಏರುತ್ತಿರುವ ಆದಾಯ ಅಸಮಾನತೆಯ ಒಂದು ಪ್ರವೃತ್ತಿಯೇ ಆಗಿದೆ ಎಂದು ಸಾಕಷ್ಟು ನೇರ ಮಾತುಗಳಲ್ಲೇ ಗಮನಿಸಿದೆ. ಸ್ಥಿರ ಬೆಳವಣಿಗೆ ನಡೆಯಬೇಕಾದರೆ ಬಂಡವಾಳ ಮತ್ತು ಶ್ರಮದ ನಡುವೆ ಆದಾಯದ ನ್ಯಾಯಯುತ ಹಂಚಿಕೆ ಅಗತ್ಯ ಎಂಬ ತೀರ್ಮಾನಕ್ಕೆ ಈ ಸಮೀಕ್ಷೆ ಬರುತ್ತದೆ. ವಿಕಸಿತ
ಆದರೆ ವ್ಯಾಪಾರ-ಸ್ನೇಹಿ ಹೊಸ ಭಾರತದಲ್ಲಿ, 2023-24ರಲ್ಲಿ ಕಾರ್ಪೊರೇಟ್ ಲಾಭಗಳು ಕಳೆದ 15 ವರ್ಷಗಳಲ್ಲೇ ಕಾಣದ ಗರಿಷ್ಠ ಮಟ್ಟಕ್ಕೆ ಏರಿದವು, ಅದರಲ್ಲೂ ಈ ಲಾಭಗಳ ಬಹುಪಾಲು ಫಲವನ್ನು ಅನುಭವಿಸಿದವರು ಅತಿ ದೊಡ್ಡ ಕಂಪನಿಗಳು. ಆದರೆ ಅದೇ ಕಾರ್ಪೊರೇಟ್ ವಲಯದಲ್ಲಿ ಉದ್ಯೋಗ ಬೆಳವಣಿಗೆ ಸಪ್ಪೆಯಾಗಿತ್ತು ಮತ್ತು ಕೂಲಿ-ಸಂಬಳಗಳ ಬೆಳವಣಿಗೆ ಸಾಮಾನ್ಯ ಮಟ್ಟದ್ದಾಗಿತ್ತು. ವಿಕಸಿತ
ಈ ಪ್ರವೃತ್ತಿಗಳಿಂದಾಗಿ ಬಳಕೆ ಸಾಮಾನುಗಳಿಗೆ ಬೇಡಿಕೆಯಲ್ಲಿ ಇಳಿಕೆಯಾಗುತ್ತಿರುವುದನ್ನು ಸರಿಹೊಂದಿಸಲೆಂದು ಸರ್ಕಾರ ತಾನು ಮಾಡುವ ಬಂಡವಾಳ ವೆಚ್ಚಗಳನ್ನು ಹೆಚ್ಚಿಸಲು ಮುಂದಾಗಲಿಲ್ಲ. ಕೇಂದ್ರ ಬಜೆಟ್ ಗೆ ಸಂಬಂಧಿಸಿದಂತೆ “ವಾಸ್ತವಿಕ ಬಂಡವಾಳ ವೆಚ್ಚ ಎಂಬುದನ್ನು ಸಾಕಷ್ಟು ವಿಸ್ತರಿಸಿಯೇ ನಿರೂಪಿಸಲಾಗಿದೆ (ಇದು ಬಂಡವಾಳ ಸ್ವತ್ತುಗಳ ಸೃಷ್ಟಿಗೆ ರಾಜ್ಯಗಳಿಗೆ ಕೊಡುವ ಅನುದಾನ-ನೆರವುಗಳನ್ನು ಕೂಡ ಒಳಗೊಂಡಿದೆ). ಇದರಲ್ಲಿ
ಕೂಡ ಏರಿಕೆ 5% ರಷ್ಟು ಮಾತ್ರ. ಹಣದುಬ್ಬರವನ್ನು ಪರಿಗಣಿಸಿದರೆ ಇದು ಕುಸಿತವೇ ಆಗಿದೆ ಎಂಬುದನ್ನೇ ಸೂಚಿಸುತ್ತದೆ. 2024-25ರ ಬಜೆಟ್ ವಾಸ್ತವಿಕ ಬಂಡವಾಳ ವೆಚ್ಚ ₹12.5 ಲಕ್ಷ ಕೋಟಿಯಿಂದ ₹15 ಲಕ್ಷ ಕೋಟಿಗೆ ಅಥವಾ 20% ರಷ್ಟು ಏರಿಕೆಯಾಗಲಿದೆ ಎಂದು ಯೋಜಿಸಿತ್ತು. ಇದಕ್ಕೆ ಹೋಲಿಸಿದರೆ, ಪರಿಷ್ಕೃತ ಅಂಕಿ ಅಂಶವು
ತೀವ್ರ ಕುಸಿತವನ್ನು ಬಿಂಬಿಸುತ್ತದೆ. ವಿಕಸಿತ
ರಾಜ್ಯಗಳೊಂದಿಗೆ ಹಂಚಿಕೊಳ್ಳದ ಸೆಸ್‌ಗಳಿಂದ ಬರುವ ಆದಾಯ, ಸ್ಪೆಕ್ಟ್ರಮ್ ಮಾರಾಟದಿಂದ ಆದಾಯ, ಪುಷ್ಕಳ ನಗದು ಹೊಂದಿರುವ ಸಾರ್ವಜನಿಕ ವಲಯದ ಉದ್ಯಮಗಳಿಂದ ವಿಶೇಷ ಲಾಭಾಂಶಗಳು ಮತ್ತು ಭಾರತೀಯ ರಿಸರ್ವ್ ಬ್ಯಾಂಕ್‌ನಿಂದ ಸರ್ಕಾರಕ್ಕೆ ದೊಡ್ಡ ಪ್ರಮಾಣದಲ್ಲಿ ಹೆಚ್ಚುವರಿ ವರ್ಗಾವಣೆಗಳಂತಹ ಅಸಾಧಾರಣ ಆದಾಯಗಳು ಕೇಂದ್ರ ಸರಕಾರಕ್ಕೆ ಲಭ್ಯವಾಗಿದ್ದರೂ ಕೂಡ ಇಂತಹ ಕುಸಿತವಾಗಿದೆ. ವಸ್ತುತಃ, ತೆರಿಗೆ ವರಮಾನದಲ್ಲಿ ಕೊರತೆ ಮತ್ತು ಹಣಕಾಸು ಸಂಪ್ರದಾಯಶರಣತೆಯು ಸರ್ಕಾರವು ತನ್ನ ವೆಚ್ಚವನ್ನು ಕಡಿತಗೊಳಿಸುವಂತೆ ಮಾಡಿತು ಮತ್ತು ಇದು ಬಂಡವಾಳ ವೆಚ್ಚಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಿತು.
ಬೇಡಿಕೆ ತಗ್ಗಿದೆ ಎಂದರೆ ಖಾಸಗಿ ಲಾಭಗಳು ಉತ್ತಮಗೊಂಡಿದ್ದರೂ, ಖಾಸಗಿ ಹೂಡಿಕೆಯಲ್ಲಿಯೂ ಸಹ ಕೊರತೆ ಕಾಣಬಂದಿದೆ, ಇದು ಬೆಳವಣಿಗೆಯ ಕುಸಿತವನ್ನು ಉಲ್ಬಣಗೊಳಿಸಿದೆ ಎಂದರ್ಥ. ಆದ್ದರಿಂದ, ಕೇಂದ್ರ ಸರ್ಕಾರದ ಬಂಡವಾಳ ವೆಚ್ಚಗಳಲ್ಲಿ ಹೆಚ್ಚಳದ ಮೇಲೆ ಗಮನ ಕೇಂದ್ರೀಕರಿಸುವ ಮೂಲಕ, ಮತ್ತು ಮಧ್ಯಮ ಅವಧಿಯಲ್ಲಿ ಉದ್ಯೋಗ ಮತ್ತು ಕಡಿಮೆ ಹಾಗೂ ಮಧ್ಯಮ-ಆದಾಯದವರ ಗಳಿಕೆಗಳನ್ನು ಹೆಚ್ಚಿಸುವ ಕ್ರಮಗಳೊಂದಿಗೆ, ಜಿಡಿಪಿಯ ಅನುಪಾತದಲ್ಲಿ ಸರ್ಕಾರಿ ಖರ್ಚಿನ ಮಟ್ಟವನ್ನು ಹೆಚ್ಚಿಸುವುದು ಹಣಕಾಸು ಸಚಿವರ ಪ್ರಮುಖ ಕಾರ್ಯಭಾರವಾಗಬೇಕಿತ್ತು.
ವೋಟ್ ಬ್ಯಾಂಕ್ ಮಾನಸಿಕತೆ
ವೆಚ್ಚಗಳನ್ನು ಹೆಚ್ಚಿಸಬೇಕಾದರೆ ಹೆಚ್ಚುವರಿ ಸಂಪನ್ಮೂಲಗಳನ್ನು ಸಂಗ್ರಹಿಸಬೇಕು. ಆದರೂ ಬಜೆಟ್‌ನಲ್ಲಿ ಅದಕ್ಕೆ ಒತ್ತು ನೀಡಿದಂತೆ ಕಾಣುತ್ತಿಲ್ಲ. ತೆರಿಗೆ-ಸ್ನೇಹಿ ಕಾರ್ಪೊರೇಟ್‌ಗಳ ಬಗ್ಗೆ ಸಂಯಮ ಮತ್ತು ಬಹುಸಂಖ್ಯಾಕತೆಯ ಅಜೆಂಡಾವನ್ನು ಬಳಸಿ ಸಜ್ಜುಗೊಳಿಸಿದ ಮಧ್ಯಮವರ್ಗದ ವೋಟ್ ಬ್ಯಾಂಕನ್ನು ಕ್ರೋಡೀಕರಿಸಲು
ಕಟಿಬದ್ಧವಾಗಿರುವುದರಿಂದಾಗಿ, ತೆರಿಗೆ ಸೈರಣೆ ಮತ್ತು ರಿಯಾಯಿತಿಗಳು ಹಣಕಾಸು ನೀತಿಯ ಪ್ರಸಕ್ತ ಉದ್ದೇಶವಾಗಿರುವಂತೆ ಕಾಣುತ್ತದೆ. 2025-26ರ ಬಜೆಟ್ ಭಾಷಣದ ಭಾಗ ಬಿ ಯ ಪಂಚ್ ಆಗಿರುವ , ಮಧ್ಯಮ- ಆದಾಯದವರಿಗೆ ಗಮನಾರ್ಹ ನೇರ ತೆರಿಗೆ ಪ್ರಯೋಜನಗಳನ್ನು ಒದಗಿಸುವ ಪ್ರಕಟಣೆ ಬಜೆಟ್‍ನ ಕೊನೆಯ
ಭಾಗಕ್ಕೆ ಮೀಸಲಿಡಲಾಯಿತು. ತೆರಿಗೆ ಮುಕ್ತ ಆದಾಯದ ಮಟ್ಟವು ₹7 ಲಕ್ಷದಿಂದ ₹12.75 ಲಕ್ಷಕ್ಕೆ ಏರಿದೆ ಮತ್ತು ವಿವಿಧ ತೆರಿಗೆ ಸ್ಲ್ಯಾಬ್‌ಗಳಲ್ಲಿ ಪರಿಷ್ಕೃತ ದರಗಳು ಆದಾಯ ತೆರಿಗೆ ಪಾವತಿಸಬೇಕಾದವರಿಗೆ ಗಣನೀಯ ಪ್ರಯೋಜನಗಳನ್ನು ನೀಡುತ್ತವೆ. ಇದರ ಪರಿಣಾಮವಾಗಿ, ಸಚಿವರ ಪ್ರಕಾರ, ಸುಮಾರು ₹1 ಲಕ್ಷ ಕೋಟಿಗಳಷ್ಟು
ಸಂಭಾವ್ಯ ನೇರ ತೆರಿಗೆ-ಆದಾಯದ ನಷ್ಟವಾಗಿದೆ.
ಇದಲ್ಲದೆ, ಜಿಡಿಪಿಗೆ ಹೋಲಿಸಿದರೆ ಕೇಂದ್ರ ಸರ್ಕಾರದ ಸಾಲವನ್ನು ಸ್ಥಿರಪ್ರಮಾಣದಲ್ಲಿಡಲು ಸರಕಾರ ಬದ್ಧವಾಗಿರುವುದರ ಭಾಗವಾಗಿ, ಹಣಕಾಸು ಸಚಿವರು ವಿತ್ತೀಯ ಕೊರತೆ 2024-25ರಲ್ಲಿ ಜಿಡಿಪಿಯ 4.8% ಇದ್ದುದನ್ನು 2025-26ರಲ್ಲಿ 4.4% ಕ್ಕೆ ಕಡಿಮೆ ಮಾಡುವುದಾಗಿ ಭರವಸೆ ನೀಡಿದ್ದಾರೆ. ಹೀಗೆ ವರಮಾನಗಳ ತ್ಯಾಗ
ಮತ್ತು ಸಾಲದ ಮೇಲೆ ಸ್ವಯಂ-ನಿರ್ಬಂಧದ ಪರಿಣಾಮವಾಗಿ, 2025-26 ರ ಬಜೆಟ್ ಒಟ್ಟು ವೆಚ್ಚದಲ್ಲಿ ಪ್ರಸಕ್ತ ದರಗಳಲ್ಲಿ ಕೇವಲ 7% ಹೆಚ್ಚಳವನ್ನು ಯೋಜಿಸಿದೆ.
ಆದಾಗ್ಯೂ, 2024-25 ರ ಪರಿಷ್ಕೃತ ಅಂದಾಜುಗಳಿಗೆ ಹೋಲಿಸಿದರೆ ಬಂಡವಾಳ ವೆಚ್ಚವನ್ನು 17% ರಷ್ಟು ಏರಿಸುವುದಾಗಿ ಬಜೆಟ್ ಭರವಸೆ ನೀಡುತ್ತದೆ. ಸಾಮಾಜಿಕ ಕಲ್ಯಾಣದ ವೆಚ್ಚವನ್ನು ಕಡಿತ ಮಾಡಲು ಸರಕಾರ ಸಿದ್ಧವಿರುವುದರಿಂದಾಗಿ ಇಂತಹ ಲೆಕ್ಕಾಚಾರ ನಡೆದು ಹೋಗುತ್ತದೆ.. ರಾಷ್ಟ್ರೀಯ ಆಹಾರ ಭದ್ರತಾ
ಕಾಯ್ದೆಯಡಿಯಲ್ಲಿ ಹೆಚ್ಚಿಸಿದ ಸುರಕ್ಷತಾ ಜಾಲಕ್ಕಾಗಿ ಆಹಾರ ಸಬ್ಸಿಡಿ ಮೊತ್ತ 2022-23 ರಲ್ಲಿ ₹27.3 ಲಕ್ಷ ಕೋಟಿಯಿದ್ದದ್ದು 2024-25 ರಲ್ಲಿ ₹19.7 ಲಕ್ಷ ಕೋಟಿಗೆ ಇಳಿದಿದ್ದರೆ, 2025-26 ರಲ್ಲಿ ಇದು ಕೇವಲ ₹20.3 ಲಕ್ಷ ಕೋಟಿ ಎಂದು ಯೋಜಿಸಲಾಗಿದೆ. ಅದೇ ರೀತಿ, ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ವೆಚ್ಚವು 2022-23 ರಲ್ಲಿ ₹90.8 ಸಾವಿರ ಕೋಟಿಯಿಂದ 2024-25 ರಲ್ಲಿ ₹86 ಸಾವಿರ ಕೋಟಿಗೆ ಇಳಿದಿದ್ದು, ಈಗಲೂ ಅದೇ ಮಟ್ಟದಲ್ಲಿ ಉಳಿಯುವುದೆಂದು ನಿರೀಕ್ಷಿಸಲಾಗಿದೆ. ಮತ್ತು ಈ ಅಂಕಿಅಂಶಗಳೂ ಕೂಡ ಖಂಡಿತವಾಗಿಯೂ ಅಂತಿಮವಲ್ಲ, ಇನ್ನೂ ಕಡಿಮೆಯಾಗುವಂತೆ ಕಾಣುತ್ತದೆ.
“ದೇವರೇ, ಸರಕಾರೀ ದತ್ತಾಂಶಗಳ
ಸತ್ಯಾಂಶಗಳನ್ನು ಕಾಣುವ ಶಕ್ತಿ ಕೊಡು!”
ವ್ಯಂಗ್ಯಚಿತ್ರ: ಸಜಿತ್ ಕುಮಾರ್,
ಡೆಕ್ಕನ್ ಹೆರಾಲ್ಡ್
ಆಟವಾಡುತ್ತಿದ್ದರೂ, ತನ್ನೆಲ್ಲ ದಾವೆಗಳೂ ಕಾರ್ಯರೂಪಕ್ಕೆ ಬರುತ್ತವೆ ಎಂದು ಸರ್ಕಾರಕ್ಕೇ ಮನವರಿಕೆಯಾಗಿಲ್ಲ ಎಂಬುದು ಸ್ಪಷ್ಟ. ಹೀಗೆ ಎರಡು ಪಣಗಳು ಈ ಬಜೆಟಿನಲ್ಲಿ ಅಡಕವಾಗಿವೆ. ಮೊದಲನೆಯದು, ಮಧ್ಯಮ ವರ್ಗಕ್ಕೆ ಕೊಟ್ಟಿರುವ ತೆರಿಗೆ ರಿಯಾಯಿತಿಗಳು ಹೆಚ್ಚಿನ ಖರ್ಚುಗಳ ಭರಾಟೆಯನ್ನೇ ಹರಿಯ ಬಿಡುತ್ತವೆ, ಇದು ಬಳಕೆಯ ಬೇಡಿಕೆಯನ್ನು ಮತ್ತು ಜಿಡಿಪಿ ಬೆಳವಣಿಗೆಯನ್ನು ಪುನರುಜ್ಜೀವನಗೊಳಿಸುತ್ತದೆ ಎಂಬ ನಿರೀಕ್ಷೆ. ಇನ್ನೊಂದು, ಕಾರ್ಪೊರೇಟ್ ಲಾಭಗಳು ಹೆಚ್ಚುತ್ತಿರುವುದು ಮತ್ತು ಕಾರ್ಮಿಕರ ಗಳಿಕೆಗಳು ಮಾತ್ರ ಹೆಚ್ಚದೆ ಸ್ಥಗಿತ ಸ್ಥಿತಿಯಲ್ಲಿರುವುದು ಅರ್ಥವ್ಯವಸ್ಥೆಯಲ್ಲಿ ಬೇಡಿಕೆಯ ಮಟ್ಟಿಗೆ ಕೆಟ್ಟದ್ದು ಎಂದು ಆರ್ಥಿಕ ಸಮೀಕ್ಷೆ ಹೇಳಿದರೂ, ಕಾರ್ಪೊರೇಟ್ ವಲಯಕ್ಕೆ ಪ್ರೋತ್ಸಾಹ ಖಾಸಗಿ ಹೂಡಿಕೆಯನ್ನು ಪುನರುಜ್ಜೀವನಗೊಳಿಸಲು ಸಹಾಯ ಮಾಡುತ್ತದೆ ಎಂಬ ನಿರೀಕ್ಷೆ
ಅಪಾಯಕಾರಿ ಭ್ರಮೆ
ಹೀಗೆ, ದೇಶದೊಳಗೆ, ಹಣಕಾಸೇತರ ವಲಯದಲ್ಲಿ ವ್ಯಾಪಾರ-ವ್ಯವಹಾರ ಮಾಡುವುದನ್ನು ಸುಲಭ”ಗೊಳಿಸುವುದಕ್ಕಾಗಿ ನಿಯಂತ್ರಣ ವ್ಯವಸ್ಥೆಗಳ ಸುಧಾರಣೆಗೆ ಒತ್ತು ನೀಡಲಾಗಿದೆ. ಒಂದೆಡೆ ವ್ಯಾಪಾರ- ವ್ಯವಹಾರಕ್ಕೆ ಸ್ವಾತಂತ್ರ್ಯದಿಂದಾಗಿ ಉಂಟಾಗುವ ಆದಾಯದ ಅಸಮಾನತೆಯು ಅರ್ಥವ್ಯವಸ್ಥೆಯಲ್ಲಿ ಬೇಡಿಕೆಯನ್ನು
ಕುಗ್ಗಿಸುತ್ತದೆ ಮತ್ತು ಖಾಸಗಿ ಹೂಡಿಕೆಯನ್ನು ಮಿತಿಗೊಳಿಸುತ್ತದೆ ಎಂದು ಗುರುತಿಸುವಾಗಲೇ, ಇನ್ನೊಂದೆಡೆ ಉತ್ಪಾದನಾ ಸಾಮರ್ಥ್ಯವನ್ನು ಪೂರ್ಣವಾಗಿ ಬಳಕೆ ಮಾಡದಿದ್ದರೂ ಸಹ ಹೆಚ್ಚೆಚ್ಚು ಲಾಭಗಳನ್ನು ಪೇರಿಸುವುದು ಅಭ್ಯಾಸವಾಗಿ ಬಿಟ್ಟಿರುವ ಕಾರ್ಪೊರೇಟ್‍ಗಳಿಗೆ ಸ್ವಾತಂತ್ರ್ಯವು ಹೂಡಿಕೆಯನ್ನು ಉತ್ತೇಜಿಸುತ್ತದೆ ಎಂಬ ನಂಬಿಕೆಯ ವೈರುಧ್ಯಪೂರ್ಣ ನಿಲುವು, ಆರ್ಥಿಕ ಸಮೀಕ್ಷೆಯಲ್ಲಿ ಢಾಳಾಗಿ ಕಂಡುಬಂದಿದೆ. ಇದು ಬಜೆಟ್‌ನಲ್ಲಿಯೂ ಕಂಡುಬರುತ್ತಿದೆ.
ಇದೇ ರೀತಿಯ ಪ್ರೋತ್ಸಾಹಕಗಳನ್ನು ವಿದೇಶಿ ಹೂಡಿಕೆದಾರರಿಗೂ ವಿಸ್ತರಿಸಲಾಗುತ್ತಿದೆ. ವಿಮಾ ವಲಯದಲ್ಲಿ ವಿದೇಶಿ ಮಾಲೀಕತ್ವದ ಮಿತಿಯನ್ನು 74% ರಿಂದ 100% ಕ್ಕೆ ಹೆಚ್ಚಿಸಲಾಗಿದೆ. ಲಾಭ ಗಳಿಸುವಾಗ ಇಂತಹ ವಿದೇಶಿ ಕಂಪನಿಗಳು ಗ್ರಾಹಕರೊಂದಿಗೆ ನಿರ್ದಯವಾಗಿ ವರ್ತಿಸಬಹುದು ಎಂಬುದಕ್ಕೆ ಪುರಾವೆಗಳಿದ್ದರೂ ಈ ಕ್ರಮಕೈಗೊಳ್ಳಲಾಗಿದೆ. ದ್ವಿಪಕ್ಷೀಯ ಹೂಡಿಕೆ ಸಂಧಿಯನ್ನು ಇನ್ನಷ್ಟು ಹೂಡಿಕೆದಾರ-ಸ್ನೇಹಿ ಮಾಡಲು ಭಾರತದ ದ್ವಿಪಕ್ಷೀಯ ಹೂಡಿಕೆ “ಮಾದರಿ”ಯನ್ನು ದುರ್ಬಲಗೊಳಿಸುವುದಾಗಿಯೂ ಸರ್ಕಾರ ಭರವಸೆ ನೀಡಿದೆ. ಹೂಡಿಕೆ ಸಂಧಿಗಳು ಕಡಿಮೆ ಅಭಿವೃದ್ಧಿ ಹೊಂದಿದ ದೇಶಗಳಲ್ಲಿನ ಸಂಸ್ಥೆಗಳು ಮತ್ತು ಸರಕಾರಗಳನ್ನು ಬಹುರಾಷ್ಟ್ರೀಯ ವ್ಯಾಪಾರೀ ಸಮೂಹಗಳ ಸುಲಿಗೆಗೆ ಒಳಪಡಿಸುವ ಸಾಧನಗಳಾಗಿವೆ. ಇಂತಹವರಿಗೆ, ಹಾಗೆ ಮಾಡಲು
ಸ್ವಾತಂತ್ರ್ಯವನ್ನು, ಅದು ವಿಕಸಿತ್ ಭಾರತವನ್ನು ತಲುಪಿಸಲು ಸಹಾಯ ಮಾಡುತ್ತದೆ ಎಂಬ ಆಧಾರದ ಮೇಲೆ ಒಂದು ಕಟು ಜಾಗತಿಕ ಆರ್ಥಿಕ ವಾತಾವರಣದಲ್ಲಿ ಕೊಡುವುದು ಕೇವಲ ಭ್ರಮೆಯಷ್ಟೇ ಅಲ್ಲ, ಒಂದು ಅಪಾಯಕಾರಿ ಭ್ರಮೆ ಕೂಡ.
ಇದನ್ನೂ ನೋಡಿ: ನೈತಿಕ ನಿಷ್ಠಾವಂತ, ತಾತ್ವಿಕ ಹೃದಯವಂತ ಜಿ.ಸಿ. ಬಯ್ಯಾರೆಡ್ಡಿ – ಬರಗೂರು ರಾಮಚಂದ್ರಪ್ಪ Janashakthi Media