ನವದೆಹಲಿ: ಜೀವನಶೈಲಿ ಸಂಬಂಧಿತ ರೋಗಗಳಾದ ಹೃದಯಾಘಾತ ಮತ್ತು ಪಾರ್ಶ್ವವಾಯು ಚಿಕಿತ್ಸೆಯನ್ನು ಆಯುಷ್ಮಾನ್ ಭಾರತ್ ಯೋಜನೆಗೆ ಸೇರಿಸಲು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಈ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿರುವ ದೇವೇಗೌಡರು, ಈ ರೋಗಗಳಿಂದ ಬಳಲುತ್ತಿರುವ ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡಲು ಆಯುಷ್ಮಾನ್ ಭಾರತ್ ಯೋಜನೆ ವ್ಯಾಪ್ತಿಯನ್ನು ವಿಸ್ತರಿಸುವ ಅಗತ್ಯವನ್ನು ಉಲ್ಲೇಖಿಸಿದ್ದಾರೆ.
ಇದನ್ನು ಓದಿ: ಇನ್ವೆಸ್ಟ್ ಕರ್ನಾಟಕ 2025| ನೈಜ ಕೈಗಾರಿಕಾ ಬೆಳವಣಿಗೆ ಒತ್ತು ನೀಡದೇ, ಪ್ರಚಾರಗಿಟ್ಟಿಸುವ ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶ
ದೇವೇಗೌಡರು ತಮ್ಮ ಪತ್ರದಲ್ಲಿ, ಹೃದಯಾಘಾತ ಮತ್ತು ಪಾರ್ಶ್ವವಾಯು ದೇಶಾದ್ಯಂತ ಹೆಚ್ಚುತ್ತಿರುವುದನ್ನು ಗಮನಿಸಿ, ಈ ರೋಗಗಳಿಗೆ ತಕ್ಷಣದ ಮತ್ತು ಸಮಗ್ರ ಚಿಕಿತ್ಸೆಯ ಅಗತ್ಯವಿದೆ ಎಂದು ಹೇಳಿದ್ದಾರೆ. ಆಯುಷ್ಮಾನ್ ಭಾರತ್ ಯೋಜನೆಯು ಈಗಾಗಲೇ ಹಲವಾರು ಆರೋಗ್ಯ ಸೇವೆಗಳನ್ನು ಒಳಗೊಂಡಿದ್ದು, ಈ ರೋಗಗಳ ಚಿಕಿತ್ಸೆಯನ್ನು ಸೇರಿಸುವ ಮೂಲಕ, ಯೋಜನೆಯ ಪ್ರಯೋಜನವನ್ನು ಹೆಚ್ಚಿನ ಜನತೆಗೆ ತಲುಪಿಸಲು ಸಾಧ್ಯವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಹೃದಯಾಘಾತ ಮತ್ತು ಪಾರ್ಶ್ವವಾಯು ಚಿಕಿತ್ಸೆಯ ವೆಚ್ಚವು ಸಾಮಾನ್ಯ ಜನತೆಗೆ ಭಾರವಾಗುತ್ತದೆ. ಆಯುಷ್ಮಾನ್ ಭಾರತ್ ಯೋಜನೆ ಈ ಚಿಕಿತ್ಸೆಯನ್ನು ಒಳಗೊಂಡರೆ, ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಇದು ದೊಡ್ಡ ಸಹಾಯವಾಗುತ್ತದೆ. ದೇವೇಗೌಡರ ಈ ಮನವಿ ಕೇಂದ್ರ ಸರ್ಕಾರದಿಂದ ಅನುಮೋದನೆ ಪಡೆಯುವುದರಿಂದ, ದೇಶದ ಆರೋಗ್ಯ ಸೇವೆಯಲ್ಲಿ ಮಹತ್ವದ ಬದಲಾವಣೆಯನ್ನು ತರಬಹುದು
ಇದನ್ನು ಓದಿ: “ದ್ವೇಷಕಾರಲು ‘ಪಾಕಿಸ್ತಾನ’ ಎಂಬ ಪದವನ್ನು ಚತುರತೆಯಿಂದ ಹೆಣೆದಿದ್ದಾರೆ”