ಕಾರ್ಮಿಕರ ರಾಷ್ಟ್ರೀಯ ಸಮಾವೇಶದ ಕರೆ ನೀಡಿದ ದೇಶವ್ಯಾಪಿ ಸಾರ್ವತ್ರಿಕ ಮುಷ್ಕರ ಫೆಬ್ರವರಿ 23-24, 2022ರಂದು

ನವದೆಹಲಿ : ಕೇಂದ್ರ ಕಾರ್ಮಿಕ ಸಂಘಟನೆಗಳು ಮತ್ತು ಸ್ವತಂತ್ರ ವಲಯವಾರು ಅಖಿಲ ಭಾರತ ಒಕ್ಕೂಟಗಳು ಮತ್ತು ಸಂಘಗಳ ಜಂಟಿ ವೇದಿಕೆಯು ಡಿಸೆಂಬರ್ 3, 2021 ರಂದು ದೆಹಲಿಯಲ್ಲಿ ಸಭೆ ಸೇರಿದೇಶಾದ್ಯಂತ 2 ದಿನಗಳ ಸಾರ್ವತ್ರಿಕ ಮುಷ್ಕರದ ದಿನಾಂಕಗಳನ್ನು ಅಂತಿಮಗೊಳಿಸಿತು. ಕೇಂದ್ರದ  ಬಿಜೆಪಿ ಸರ್ಕಾರದ ಜನವಿರೋಧಿ, ಕಾರ್ಮಿಕ ವಿರೋಧಿ ಮತ್ತು ರಾಷ್ಟ್ರವಿರೋಧಿ ವಿಧ್ವಂಸಕ ಧೋರಣೆಗಳ ವಿರುದ್ಧ 11ನೇ ನವೆಂಬರ್ 2021 ರಂದು ನವದೆಹಲಿಯಲ್ಲಿ ನಡೆದ ಕಾರ್ಮಿಕರ ರಾಷ್ಟ್ರೀಯ ಸಮಾವೇಶವು ಘೋಷಿಸಿದಂತೆಸಂಸತ್ತಿನ ಬಜೆಟ್ ಅಧಿವೇಶನದ ವೇಳೆಯಲ್ಲಿ 23-24 ಫೆಬ್ರವರಿ 2022 ರಂದು ದೇಶಾದ್ಯಂತ 2 ದಿನಗಳ ಸಾರ್ವತ್ರಿಕ ಮುಷ್ಕರ ನಡೆಯಲಿದೆ.

ಜನರನ್ನು ಉಳಿಸಿ ಮತ್ತು ದೇಶವನ್ನು ಉಳಿಸಿ” ಎಂಬುದು ಮುಷ್ಕರದ ಪ್ರಮುಖ ಘೋಷಣೆಯಾಗಿದೆ.

ಈ ಸಭೆಯಲ್ಲಿ ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌.ಕೆ.ಎಂ.) ನಾಯಕತ್ವದೊಂದಿಗೆ ಸಂಯೋಜಿಸಿ ಪೂರ್ವಸಿದ್ಧತಾ ಸಾರ್ವಜನಿಕ ಸಭೆಗಳನ್ನು ನಡೆಸಲು ನಿರ್ಧರಿಸಲಾಯಿತು, ವಿಶೇಷವಾಗಿ, 2022 ರ ಆರಂಭದಲ್ಲಿ ಚುನಾವಣೆಗೆ ಹೋಗುವ ರಾಜ್ಯಗಳಲ್ಲಿ,ಎಸ್‌.ಕೆ.ಎಂ.ನ “ಮಿಷನ್ ಉತ್ತರಪ್ರದೇಶ” ಮತ್ತು ” ಮಿಷನ್ ಉತ್ತರಾಖಂಡ್” ಕರೆಯನ್ನು ಬಲಪಡಿಸಲು ಸಂಯೋಜನಾ ಸಭೆಗಳನ್ನು ನಡೆಸಲಾಗುವುದು. ಕೃಷಿ ಕಾಯ್ದೆಗಳನ್ನು ರದ್ದುಗೊಳಿಸಿದ ನಂತರ ಎಸ್‌.ಕೆ.ಎಂ. ನಿರ್ಧರಿಸಿರುವಕಾರ್ಯಕ್ರಮಗಳು ಮತ್ತು ಹೋರಾಟಗಳಿಗೆ ತನ್ನ ನಿರಂತರ ಸಕ್ರಿಯ ಬೆಂಬಲವನ್ನು ಜಂಟಿ ವೇದಿಕೆಯು ಪುನರುಚ್ಚರಿಸಿತು.

ಜಂಟಿ ವೇದಿಕೆಯ ರಾಜ್ಯ ಘಟಕಗಳು ವಿವಿಧ ಸ್ವರೂಪಗಳಲ್ಲಿ ಜಂಟಿಯಾಗಿ ತೀವ್ರ ಪ್ರಚಾರವನ್ನು ನಡೆಸುತ್ತವೆ – ಉದಾಹರಣೆಗೆ ರಾಜ್ಯ ಸಮಾವೇಶಗಳು, ಮಾನವ ಸರಪಳಿಗಳು, ಪಂಜಿನ ಮೆರವಣಿಗೆಗಳು, ಸಹಿ ಅಭಿಯಾನಗಳು, ವಲಯ ಮತ್ತು ಪ್ರದೇಶ ಆಧಾರಿತ ಜಂಟಿ ಪ್ರಚಾರಾಂದೋಲನ ಇತ್ಯಾದಿಗಳ ಮೂಲಕ ಸರ್ಕಾರದ ಕಾರ್ಮಿಕ ವಿರೋಧಿ, ರೈತ ವಿರೋಧಿ, ಜನವಿರೋಧಿ, ಕಾರ್ಪೊರೇಟ್ ಪರ ಮತ್ತು ರಾಷ್ಟ್ರ ವಿರೋಧಿ ವಿಧ್ವಂಸಕ ಧೋರಣೆಗಳ ಪರಿಣಾಮಗಳನ್ನು ಬಯಲಿಗೆಳೆಯುತ್ತವೆ. ಈ ಧೋರಣೇಗಳು ಸಮಸ್ತ ಜನತೆಯ ಜೀವನ ಮತ್ತು ಜೀವನೋಪಾಯಗಳನ್ನು ಮತ್ತು ದೇಶದ ಆರ್ಥಿಕತೆಯನ್ನು ದುರಂತದ ಅಂಚಿಗೆ ತಂದು ನಿಲ್ಲಿಸಿವೆ ಎಂದಿರುವ ಜಂಟಿ ವೇದಿಕೆಯ ಘಟಕಗಳ ಮುತುವರ್ಜಿಯಿಂದ ಈ ಪ್ರಶ್ನೆಗಳ ಮೇಲೆ ಈಗಾಗಲೇ ಅನೇಕ ಹೋರಾಟಗಳು ಮತ್ತು ಆಂದೋಲನಗಳು ಅನೇಕ ಕ್ಷೇತ್ರಗಳಲ್ಲಿ ನಡೆಯುತ್ತಿವೆ.

ಬ್ಯಾಂಕ್ ಸಂಘಗಳ ಐಕ್ಯ ವೇದಿಕೆ(ಯುಎಫ್‍ಬಿಯು)ಯ ಡಿಸೆಂಬರ್ 16-17 ರ ಬ್ಯಾಂಕ್‌ಗಳಲ್ಲಿ ಎರಡು ದಿನಗಳ ದೇಶವ್ಯಾಪಿ ಮುಷ್ಕರದ ನಿರ್ಧಾರವನ್ನು ಮತ್ತು 1 ನೇ ಫೆಬ್ರವರಿ 2022 ರಂದು ವಿದ್ಯುತ್ ನೌಕರರ ಜಂಟಿ ವೇದಿಕೆಯ ಮುಷ್ಕರದ ನಿರ್ಧಾರವನ್ನುಜಂಟಿ ವೇದಿಕೆಯು ಸ್ವಾಗತಿಸಿದೆ ಮತ್ತು ಬೆಂಬಲಿಸಿದೆ.ಇವೆರಡೂ ಖಾಸಗೀಕರಣದ ಕ್ರಮದ ವಿರುದ್ಧ ಮತ್ತು ಆ ದಿಕ್ಕಿನಲ್ಲಿ ಶಾಸಕೀಯ ನಡೆಗಳನ್ನು ವಿರೋಧಿಸುವ ಕಾರ್ಯಾಚರಣೆಗಳು ಎಂದು ಜಂಟಿ ವೇದಿಕೆ ವರ್ಣಿಸಿದೆ.

ಈ ಐಕ್ಯ ಹೋರಾಟವು ಜನರ ಹಕ್ಕುಗಳು ಮತ್ತು ಜೀವನ/ಜೀವನೋಪಾಯಗಳನ್ನು ಉಳಿಸಲು ಮಾತ್ರವಲ್ಲದೆ ದೇಶದ ಅರ್ಥವ್ಯವಸ್ಥೆಯನ್ನು ಮತ್ತು ಇಡೀ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಮತ್ತು ಒಟ್ಟಾರೆಯಾಗಿ ಸಮಾಜವನ್ನು ಆಡಳಿತದಲ್ಲಿರುವ ನಿರಂಕುಶ ಶಕ್ತಿಗಳುಖಾಸಗಿ ದೇಶೀಯ ಮತ್ತು ವಿದೇಶಿಕಾರ್ಪೊರೇಟ್ ಗಳಸಕ್ರಿಯ ಬೆಂಬಲದೊಂದಿಗೆ ಸೃಷ್ಟಿಸಿರುವ ವಿಪತ್ತು ಮತ್ತು ವಿನಾಶದಿಂದ ಉಳಿಸಲಿಕ್ಕಾಗಿ, ಮತ್ತು ವಿನಾಶಕಾರಿ ಧೋರಣೆಗಳ ಆಳ್ವಿಕೆಯನ್ನು ಮತ್ತು ಆಡಳಿತದಲ್ಲಿನ ಅವುಗಳ ರಾಜಕೀಯ ನಿರ್ವಾಹಕರನ್ನು ನಿರ್ಣಾಯಕವಾಗಿಸೋಲಿಸಲಿಕ್ಕಾಗಿ ಎಂದಿರುವ ಜಂಟಿ ವೇದಿಕೆ, “ದುರಹಂಕಾರಿ ಮೋದಿ ಸರ್ಕಾರವನ್ನು 3 ಕೃಷಿ ಕಾನೂನುಗಳನ್ನು ರದ್ದುಗೊಳಿಸಲುಬಲವಂತಪಡಿಸುವ ಮೂಲಕ ರೈತ ಚಳವಳಿ ಐತಿಹಾಸಿಕ ವಿಜಯವನ್ನು ಪಡೆದುಕೊಂಡಿದೆ.

ಈಗ ಎಲ್ಲ ದುಡಿಯುವ ಜನ ವಿಭಾಗಗಳು ಜೀವನ ಮತ್ತು ಜೀವನೋಪಾಯ, ಉದ್ಯೋಗ, ಬಡತನ ಮತ್ತು ಹಸಿವಿನ ಆತಂಕಕಾರಿ ತೀವ್ರತೆ, ಪ್ರಜಾಪ್ರಭುತ್ವದ ಮೇಲಿನ ಮತ್ತು ಜನರ ಐಕ್ಯತೆಯ ಮೇಲಿನ ದಾಳಿಗಳಪ್ರಕ್ರಿಯೆಯನ್ನು ನಿಲ್ಲಿಸಲು, ಆಮೂಲಕ ನಮ್ಮ ಪ್ರೀತಿಯ ದೇಶವನ್ನು ವಿನಾಶದಿಂದ ಉಳಿಸಲು ತಮ್ಮ ಐಕ್ಯ ಮಧ್ಯಪ್ರವೇಶವನ್ನು ಮತ್ತಷ್ಟು ಹೆಚ್ಚಿಸಬೇಕು” ಎಂದು ಕರೆ ನೀಡಿದೆ.“ದೇಶದ ಎಲ್ಲ ರಾಜಕೀಯ ಪಕ್ಷಗಳು ‘ಎಲ್ಲಾ ನಾಗರಿಕರಿಗೆ ಕೆಲಸದ ಹಕ್ಕು, ಜೀವನ ವೇತನ, ಗುಣಮಟ್ಟದ ಉಚಿತ ಆರೋಗ್ಯ ಪಾಲನೆ ಮತ್ತು ಶಿಕ್ಷಣ-ಸೌಕರ್ಯ ಮತ್ತು ಎಲ್ಲಾ ನ್ಯಾಯಬದ್ಧ ಸಾಂವಿಧಾನಿಕ ಹಕ್ಕುಗಳ ರಕ್ಷಣೆ’ ಯನ್ನು ಒಂದು ದೃಢ ಬದ್ಧತೆಯಾಗಿ 2022 ರಲ್ಲಿ ಬರುವ ವಿಧಾನಸಭಾ ಚುನಾವಣೆಗಳು ಮತ್ತು 2024ರಲ್ಲಿ ನಡೆಯಬೇಕಾಗಿರುವ ಚುನಾವಣೆಗಳತಮ್ಮ ರಾಜಕೀಯ ಪ್ರಣಾಳಿಕೆಗಳಲ್ಲಿ ಅಳವಡಿಸಬೇಕು ಮತ್ತು ಅವರು ಅಧಿಕಾರಕ್ಕೆ ಬಂದರೆ ತಮ್ಮ ಆಶ್ವಾಸನೆಗಳನ್ನು ಈಡೇರಿಸುವುದಾಗಿ ಮತ್ತು ಕಾರ್ಮಿಕರು, ರೈತರು ಮತ್ತು ದೇಶದ ಎಲ್ಲಾ ಜನರ ಬೇಡಿಕೆಗಳನ್ನು ಬೆಂಬಲಿಸುವುದಾಗಿ ಸಾರ್ವಜನಿಕವಾಗಿ ಪ್ರಮಾಣವಚನ ಸ್ವೀಕರಿಸಬೇಕು ಎಂದು ನಾವು ಒತ್ತಾಯಿಸಬೇಕಾಗಿದೆ.

“ಇತ್ತೀಚಿಗೆ 3 ಕೃಷಿ ಕಾನೂನುಗಳನ್ನು ರದ್ದುಗೊಳಿಸಿರುವುದು ಮತ್ತು ಪೆಟ್ರೋಲ್/ಡೀಸೆಲ್ ಮೇಲಿನ ಕೇಂದ್ರ ತೆರಿಗೆಗಳಲ್ಲಿ ಅಲ್ಪ ಪ್ರಮಾಣದ ಕಡಿತವುರೈತರ ದೀರ್ಘಾವಧಿಯ ಐಕ್ಯದೃಢ ಹೋರಾಟಗಳ ಜೊತೆಗೆ ದುಡಿಯುವ ಜನರು ಮತ್ತು ಜನರ ದೇಶವ್ಯಾಪಿ ಸೌಹಾರ್ದಕಾರ್ಯಾಚರಣೆಗಳು ಹಾಗೂ ಹೆಚ್ಚುತ್ತಿರುವ ಜನಾಕ್ರೋಶ ಮತ್ತು ಅಸಂತೋಷವನ್ನು ಕಂಡು ಕೈಗೊಂಡಿರುವ ಕ್ರಮಗಳು. ಇದು ಇತ್ತೀಚಿನ ಉಪಚುನಾವಣೆಯಲ್ಲಿ ಕೇಂದ್ರದಲ್ಲಿ ಆಡಳಿತ ಪಕ್ಷವು ಎದುರಿಸಿದ ಸೋಲಿನ ಪ್ರತಿಫಲನ ಮತ್ತು ಪ್ರತಿಕ್ರಿಯೆಯಾಗಿದೆ.  ಆದ್ದರಿಂದ, ಜನವಿರೋಧಿ ನೀತಿಗಳು ಮತ್ತು ಆಳ್ವಿಕೆಯನ್ನು ಎದುರಿಸುವ ಮತ್ತು ಸೋಲಿಸುವ ದೃಢನಿರ್ಧಾರದ ಐಕ್ಯ ಹೋರಾಟವನ್ನು ತೀವ್ರಗೊಳಿಸುವುದು ನಮ್ಮ ಮುಂದಿರುವ ಮಾರ್ಗವಾಗಿದೆ” ಎನ್ನುತ್ತ  ಮುಂಬರುವ ಎರಡು ದಿನಗಳ ದೇಶವ್ಯಾಪಿ ಸಾರ್ವತ್ರಿಕ ಮುಷ್ಕರ ಆ ಸಂಕಲ್ಪವನ್ನು ಪ್ರದರ್ಶಿಸಲಿ” ಎಂದು ಜಂಟಿ ವೇದಿಕೆ ಹಾರೈಸಿದೆ.

ವಿಶೇಷವಾಗಿ ಈ ಕೆಳಗಿನ  ಹಕ್ಕೊತ್ತಾಯಗಳನ್ನು ಜಂಟಿ ವೇದಿಕೆ ಪುನರುಚ್ಛರಿಸಿದೆ:· ಕಾರ್ಮಿಕ ಸಂಹಿತೆಗಳನ್ನು ರದ್ದುಗೊಳಿಸಬೇಕು; ಅಗತ್ಯರಕ್ಷಣಾಸೇವೆಗಳಕಾಯ್ದೆಯನ್ನುರದ್ದುಗೊಳಿಸಬೇಕು;· ಕೃಷಿ ಕಾನೂನುಗಳನ್ನು ರದ್ದುಪಡಿಸಿದ ನಂತರಸಂಯುಕ್ತ ಕಿಸಾನ್ ಮೋರ್ಚಾ ಮುಂದಿಟ್ಟಿರುವ 6 ಬೇಡಿಕೆಗಳನ್ನು ಸ್ವೀಕರಿಸಬೇಕು;· ಯಾವುದೇ ರೂಪದಲ್ಲಿ ಖಾಸಗೀಕರಣ ಬೇಡ ಮತ್ತು ಎನ್‍.ಎಂ.ಪಿ.(ನಗದೀಕರಣಯೋಜನೆ) ರದ್ದಾಗಬೇಕು.·  ಆದಾಯ ತೆರಿಗೆ ವ್ಯಾಪ್ತಿಯ ಹೊರಗಿರುವ ಕುಟುಂಬಗಳಿಗೆ ತಿಂಗಳಿಗೆ ರೂ 7500 ಆದಾಯ ಮತ್ತು ಆಹಾರಬೆಂಬಲ;·  ಮನರೇಗಕ್ಕೆಹಣ ನೀಡಿಕೆಯಲ್ಲಿ ಹೆಚ್ಚಳ ಮತ್ತು ನಗರ ಪ್ರದೇಶಗಳಿಗೆ ಉದ್ಯೋಗ ಖಾತರಿ ಯೋಜನೆಯ ವಿಸ್ತರಣೆಮಾಡಬೇಕು;· ಎಲ್ಲಾ ಅನೌಪಚಾರಿಕ ವಲಯದ ಕಾರ್ಮಿಕರಿಗೆ ಸಾರ್ವತ್ರಿಕ ಸಾಮಾಜಿಕ ಭದ್ರತೆ;·  ಅಂಗನವಾಡಿ, ಆಶಾ, ಮಧ್ಯಾಹ್ನದ ಊಟ ಮತ್ತು ಇತರ ಯೋಜನಾ ಕಾರ್ಯಕರ್ತರಿಗೆ ಶಾಸನಬದ್ಧ ಕನಿಷ್ಠ ವೇತನ ಮತ್ತು ಸಾಮಾಜಿಕ ಭದ್ರತೆ;·  ಸಾಂಕ್ರಾಮಿಕದ ಮಧ್ಯೆ ಜನರಿಗೆ ಸೇವೆ ಸಲ್ಲಿಸುತ್ತಿರುವ ಮುಂಚೂಣಿಯ ಕಾರ್ಯಕರ್ತರಿಗೆ ಸರಿಯಾದ ರಕ್ಷಣೆ ಮತ್ತು ವಿಮಾ ಸೌಲಭ್ಯಗಳು;· ರಾಷ್ಟ್ರೀಯ ಅರ್ಥವ್ಯವಸ್ಥೆಯನ್ನು ಪುನರುಜ್ಜೀವನ ಮತ್ತು ಪುನರ್ ವ್ಯವಸ್ಥೆಗೊಳಿಸಲಿಕ್ಕಾಗಿ ಸಂಪತ್ತು ತೆರಿಗೆ ಇತ್ಯಾದಿಗಳ ಮೂಲಕ ಶ್ರೀಮಂತರಿಗೆ ತೆರಿಗೆ ವಿಧಿಸಿ ಕೃಷಿ, ಶಿಕ್ಷಣ, ಆರೋಗ್ಯ ಮತ್ತು ಇತರ ಮಹತ್ವದ ಸಾರ್ವಜನಿಕ ಉಪಯುಕ್ತತೆಗಳಲ್ಲಿ ಸಾರ್ವಜನಿಕ ಹೂಡಿಕೆಯ ಹೆಚ್ಚಳ;· ಪೆಟ್ರೋಲಿಯಂ ಉತ್ಪನ್ನದ ಮೇಲಿನ ಕೇಂದ್ರ ಅಬಕಾರಿ ಸುಂಕದಲ್ಲಿ ಗಣನೀಯ ಕಡಿತ ಮತ್ತು ಬೆಲೆ ಏರಿಕೆಯನ್ನು ತಡೆಯಲು ಮೂರ್ತಸರಿಪಡಿಕೆ ಕ್ರಮ;·         ಗುತ್ತಿಗೆ ಕಾರ್ಮಿಕರು, ಸ್ಕೀಮ್ ಕಾರ್ಮಿಕರನ್ನು ಖಾಯಂಗೊಳಿಸಬೇಕು ಮತ್ತು ಎಲ್ಲರಿಗೂ ಸಮಾನ ಕೆಲಸಕ್ಕೆ ಸಮಾನ ವೇತನ ದೊರಕಬೇಕು;·  ರಾಷ್ಟ್ರೀಯ ಪಿಂಚಣಿ ಯೋಜನೆ(ಎನ್‍.ಪಿ.ಎಸ್.) ರದ್ದತಿ ಮತ್ತು ಹಳೆಯ ಪಿಂಚಣಿ ವ್ಯವಸ್ಥೆಯ ಮರುಸ್ಥಾಪನೆಯಾಗಬೇಕು; ನೌಕರರ ಪಿಂಚಣಿ ಯೋಜನೆಯಡಿ ಕನಿಷ್ಠ ಪಿಂಚಣಿಯಲ್ಲಿ ಗಣನೀಯ ಹೆಚ್ಚಳವಾಗಬೇಕು.

ಈ ಆಗ್ರಹಗಳು ಮತ್ತು ಈಗಾಗಲೇ ಕೇಂದ್ರೀಯ ಕಾರ್ಮಿಕ ಸಂಘಟನೆಗಳು ಮತ್ತು ಒಕ್ಕೂಟಗಳು/ಸಂಘಗಳ ಜಂಟಿ ವೇದಿಕೆ ರೂಪೀಕರಿಸಿರುವ ಇತರ ಬೇಡಿಕೆಗಳಮೇಲೆ ಐಕ್ಯ ಹೋರಾಟವನ್ನು ತೀಕ್ಷ್ಣಗೊಳಿಸಲು, ಹಾಗೂಜನರನ್ನು ಉಳಿಸಲು ಮತ್ತು ದೇಶವನ್ನು ಉಳಿಸಲು ಸಂಸತ್ತಿನ ಬಜೆಟ್ ಅಧಿವೇಶನದ ವೇಳೆ  23-24 ಫೆಬ್ರವರಿ 2022 ರ 2-ದಿನಗಳ ದೇಶವ್ಯಾಪಿ ಸಾರ್ವತ್ರಿಕ ಮುಷ್ಕರಕ್ಕೆ ಸಿದ್ಧತೆ ಆರಂಭಿಸಬೇಕು ಎಂದು ಜಂಟಿ ವೇದಿಕೆಯಲ್ಲಿರುವ  ಐ.ಎನ್.ಟಿ.ಯು.ಸಿ., ಎ.ಐ.ಟಿ.ಯು.ಸಿ., ಎಚ್.ಎಂ.ಎಸ್., ಸಿ.ಐ.ಟಿ.ಯು.,ಎ.ಐ.ಯು.ಟಿ.ಯು,ಸಿ., ಟಿ.ಯು.ಸಿ.ಸಿ., ಎಸ್.ಇ ಡಬ್ಲ್ಯೂ.ಎ., ಎ.ಐ.ಸಿ.ಸಿ.ಟಿ ಯು..ಎಲ್.ಪಿ.ಎಫ್. ಮತ್ತು ಯು.ಟಿ.ಯು.ಸಿ.ಕರೆ ನೀಡಿವೆ.

Donate Janashakthi Media

Leave a Reply

Your email address will not be published. Required fields are marked *