ಶ್ರೀನಿವಾಸಪುರ: ಶ್ರೀನಿವಾಸಪುರದ ಪ್ರವಾಸಿ ಮಂದಿರದಲ್ಲಿ ಅಖಿಲ ಭಾರತ ಕಿಸಾನ್ ಸಭಾದ ರಾಷ್ಟ್ರ ಕಾರ್ಯದರ್ಶಿಗಳಾದ ವಿಜಯ ಕೃಷ್ಣನ್ ಹಾಗೂ ಕರ್ನಾಟಕ ಪ್ರಾಂತ ರೈತ ಸಂಘದ ನೇತೃತ್ವದಲ್ಲಿ ಜನವರಿ 6ರಂದು ಸುದ್ದಿಗೋಷ್ಠಿ ನಡೆಸಲಾಯಿತು.
ಈ ಸಂದರ್ಭದಲ್ಲಿ ಶ್ರೀನಿವಾಸಪುರ ತಾಲೂಕಿನ ಪಾತ್ರದಲ್ಲಿ, ದೊಡ್ಡಮಲದೊಡ್ಡಿ, ಕೆತಗಾನಹಳ್ಳಿ, ಶಿವಪುರ ಸೇರಿದಂತೆ ಇತರೆ ಅನೇಕ ಗ್ರಾಮಗಳಿಗೆ ಭೇಟಿ ನೀಡಿದ ನಾಯಕರು, ಭೂಸಂತ್ರಸ್ತ ರೈತರನ್ನು ನೇರವಾಗಿ ಭೇಟಿಯಾಗಿ ಅವರ ಸಂಕಷ್ಟಗಳು, ನೋವು–ನಲಿವುಗಳನ್ನು ಆಲಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಜುಕೃಷ್ಣನ್ ಅವರು, ಅರಣ್ಯ ಇಲಾಖೆ ಅನುಸರಿಸುತ್ತಿರುವ ನೀತಿಗಳು ಹಾಗೂ ಸರ್ಕಾರದ ನಿರ್ಲಕ್ಷ್ಯ ಧೋರಣೆಯನ್ನು ತೀವ್ರವಾಗಿ ಖಂಡಿಸಿದರು. ಅರಣ್ಯ ಇಲಾಖೆಯ ಸ್ವಂತ ನೀತಿಗಳ ಪ್ರಕಾರ 70 ವರ್ಷಗಳ ಕಾಲ ಅರಣ್ಯ ಭೂಮಿಯಲ್ಲಿ ನಿರಂತರವಾಗಿ ಕೃಷಿ ಮಾಡುತ್ತಿರುವ ರೈತರಿಗೂ ಹಕ್ಕುಪತ್ರ ನೀಡುವ ವ್ಯವಸ್ಥೆ ಇದೆ. ಆದರೆ ವಾಸ್ತವದಲ್ಲಿ 50 ವರ್ಷಗಳಿಗೂ ಹೆಚ್ಚು ಕಾಲ ಕೃಷಿ ಮಾಡಿಕೊಂಡು ಬಂದಿರುವ ರೈತರ ಮೇಲೆ ದೌರ್ಜನ್ಯ ನಡೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: ಕೋಲಾರ | ಮಧ್ಯವರ್ತಿಗಳ ಹಾವಳಿಗೆ ಬ್ರೇಕ್ ಸಾರ್ವಜನಿಕರು ಮನೆಯಲ್ಲೇ ಕುಳಿತು ಕೇಸ್ ಪ್ರಗತಿ ವೀಕ್ಷಿಸಬಹುದು
ರೈತರು ತಮ್ಮ ರಕ್ತ–ಬೆವರು ಸುರಿಸಿ ಬೆಳೆಸಿದ ಮರಗಳನ್ನು ಯಾವುದೇ ನೋಟಿಸ್ ನೀಡದೆ, ರಾತ್ರೋರಾತ್ರಿ ಕಳ್ಳರಂತೆ ಬಂದು ಜೆಸಿಬಿ ಯಂತ್ರಗಳ ಮೂಲಕ ಅಕ್ರಮವಾಗಿ ಕಡಿದು ಹಾಕಲಾಗುತ್ತಿದೆ. ಇದರಿಂದ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗುತ್ತಿದ್ದು, ರೈತರ ಬದುಕು ಸಂಪೂರ್ಣವಾಗಿ ನಾಶವಾಗುತ್ತಿದೆ ಎಂದು ಹೇಳಿದರು. ಅಲ್ಲದೇ ಬೆಳೆದು ನಿಂತಿರುವ ಬೆಳೆಗಳನ್ನು ಸರ್ವನಾಶ ಮಾಡಲಾಗುತ್ತಿದ್ದು, ರೈತರ ಒಪ್ಪಿಗೆ ಇಲ್ಲದೆ ಸಿಮೆಂಟ್ ಪಿಲ್ಲರ್‌ಗಳನ್ನು ಅಳವಡಿಸಿ ಭೂಮಿಯನ್ನು ವಶಪಡಿಸಿಕೊಳ್ಳುವ ಗೂಂಡಾಗಿರಿ ನಡೆಯುತ್ತಿದೆ ಎಂದು ಆರೋಪಿಸಿದರು.
ಕರ್ನಾಟಕ ಪ್ರಾಂತ ರೈತ ಸಂಘದ ನಾಯಕರು ಮಾತನಾಡಿ, ಅರಣ್ಯ ಇಲಾಖೆ ಹಾಗೂ ಸರ್ಕಾರ ರೈತರ ಹಿತಾಸಕ್ತಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿರುವುದು ಅತ್ಯಂತ ಖಂಡನೀಯ. ಈ ದೌರ್ಜನ್ಯ ತಕ್ಷಣ ನಿಲ್ಲಿಸದಿದ್ದರೆ ಹಾಗೂ ಭೂಸಂತ್ರಸ್ತ ರೈತರಿಗೆ ನ್ಯಾಯ ಸಿಗದಿದ್ದರೆ, ರಾಜ್ಯಮಟ್ಟದಲ್ಲಿ ಉಗ್ರ ಹೋರಾಟ ನಡೆಸಲು ರೈತ ಸಂಘಗಳು ಸಿದ್ಧವಾಗಿವೆ ಎಂದು ಎಚ್ಚರಿಕೆ ನೀಡಿದರು.
ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ, ಅರಣ್ಯ ಮತ್ತು ಕಂದಾಯ ಇಲಾಖೆಗೆ ಸಮಸ್ಯೆಗಳನ್ನು ಪರಿಹರಿಸಿ ರೈತರು ಹೆಸರಿನಲ್ಲಿರುವ ಪ್ರಾಣಿಗಳಲ್ಲಿ ಆರ್ ಟಿ ಸಿ ಕಾಲಂ ನಲ್ಲಿ ಅರಣ್ಯ ತೆಗೆಯಬೇಕೆಂದು ಮತ್ತು ರೈತರಿಗೆ ಆಗಿರುವ ನಷ್ಟವನೂ ಅರಣ್ಯ ಇಲಾಖೆಯವರೆ ಬೆರೆಸಬೇಕು,ಅಕ್ರಮ ಮರ ಕಡಿತ, ಬೆಳೆ ನಾಶ ಮತ್ತು ಪಿಲ್ಲರ್ ಅಳವಡಿಕೆ ಕಾರ್ಯಗಳನ್ನು ತಕ್ಷಣ ನಿಲ್ಲಿಸಬೇಕೆಂದು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಅಖಿಲ ಭಾರತ ಕಿಸಾನ್ ಸಭಾ ಪ್ರಧಾನ ಕಾರ್ಯದರ್ಶಿಗಳಾದ ವಿಜುಕೃಷ್ಣನ್ ,ಅಖಿಲ ಭಾರತ ಕಿಸಾನ್ ಸಭಾದ ಉಪಾಧ್ಯಕ್ಷರಾದ ಪ್ರೀಜ ಮೇಡಂ ಹಾಗೂ ಜಂಟಿ ಕಾರ್ಯದರ್ಶಿಗಳಾದ ವಲ್ಸನ್, ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷರು ಸೂರ್ಯನಾರಾಯಣ, ರಾಜ್ಯ ಜಂಟಿ ಕಾರ್ಯದರ್ಶಿ ಎನ್ ಎಲ್ ಭಾರತ್ ರಾಜ್ ,ಮಾವು ಬೆಳೆಗಾರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷರಾದ ಚಿನ್ನಪ್ಪ ರೆಡ್ಡಿ, ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷರಾದ ಟಿ ಎಮ್ ವೆಂಕಟೇಶ್ , ಪ್ರಧಾನ ಕಾರ್ಯದರ್ಶಿ ಪಾತಕೋಟ ನವೀನ್ ಕುಮಾರ್, ಉಪಾಧ್ಯಕ್ಷರಾದ ಗಂಗಮ್ಮ ಮತ್ತು ಲಾಯರ್ ವೆಂಕಟೇಶ್, ತಾಲ್ಲೂಕು ಅಧ್ಯಕ್ಷ ಸೋಮಶೇಖರ ಗೌಡ , ಪ್ರಧಾನ ಕಾರ್ಯದರ್ಶಿ ಸೈಯದ್ ಫಾರುಖ್, ತಾಲ್ಲೂಕು ಮುಖಂಡರಾದ ಜಿ ಮಂಜುಳಾ, ಎನ್ ವೀರಪ್ಪರೆಡ್ಡಿ, ಶಂಕರಪ್ಪ,ಚಲಪತಿ, ಮುನಿರಾಜು , ಆರ್ ವೆಂಕಟೇಶ್ , ಭೂಸಂತ್ರಸ್ತ ಹೋರಾಟ ಸಮಿತಿ ಮುಖಂಡರಾದ ಕೇತಗಾನಹಳ್ಳಿ ನಾಗರಾಜ್ , ದ್ವಾರಸಂದ್ರ ಮುನಿವೆಂಕಟಪ್ಪ , ಇನ್ನೂ ಹಲವು ರೈತ ಮುಖಂಡರಿದ್ದರು.
ಇದನ್ನೂ ನೋಡಿ: ಕೋಗಿಲು ಪ್ರಕರಣ : ಬಡವರ ಕೂಗು ಕೇಳದಾಯಿತೆ ಸರಕಾರ Janashakthi Media
