NPS ರದ್ದುಪಡಿಸಿ OPS ಮರುಸ್ಥಾಪಿಸುವಂತೆ‌‌ ಆಗ್ರಹಿಸಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರು ದೆಹಲಿ ಚಲೋ

ನವದೆಹಲಿ: ಅಖಿಲ ಭಾರತ ರಾಜ್ಯ ಸರ್ಕಾರಿ ನೌಕರರ ಒಕ್ಕೂಟ ಮತ್ತು, ರಾಷ್ಟ್ರೀಯ ಅಂಚೆ ನೌಕರರ ಸಂಘ, ಭಾರತೀಯ ಶಾಲಾ ಶಿಕ್ಷಕರ ಸಂಘ (STFI),‌ ಅಖಿಲ ಭಾರತ ರಾಜ್ಯ ಸರ್ಕಾರಿ ಪಿಂಚಣಿದಾರರ ಒಕ್ಕೂಟ ಹಾಗೂ ಕೇಂದ್ರ ಸರ್ಕಾರಿ ನೌಕರರ ಸಂಘಟನೆಗಳು ಜಂಟಿಯಾಗಿ ಕೇಂದ್ರ ಮತ್ತು ರಾಜ್ಯ‌ ಸರ್ಕಾರಗಳನ್ನು PFRDA ಕಾಯ್ದೆ ಮತ್ತು NPS ರದ್ದುಪಡಿಸಿ OPS ಮರುಸ್ಥಾಪಿಸುವಂತೆ‌‌, ವೇತನ ಪರಿಷ್ಜರಣೆಯನ್ನು ಕೂಡಲೇ ಜಾರಿಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ನವದೆಹಲಿಯ ರಾಮಲೀಲಾ ಮೈದಾನದಲ್ಲಿ ರಾಷ್ಟ್ರಮಟ್ಟದ ಪ್ರತಿಭಟನಾ ಕಾರ್ಯಕ್ರಮವನ್ನು ನವೆಂಬರ್- 3 ರಂದು ಹಮ್ಮಿಕೊಂಡಿದ್ದವು. ಬೇಡಿಕೆಗಳ 

ಇದನ್ನೂ ಓದಿ:ಸರ್ಕಾರಿ ನೌಕರರ ಬೇಡಿಕೆಗಳು ಸಂಪೂರ್ಣ ಈಡೇರದೇ ಮುಷ್ಕರ ಹಿಂಪಡೆದಿರುವುದು ಖಂಡನೀಯ

 ಕರ್ನಾಟಕ ರಾಜ್ಯದ ವಿವಿಧ ಜಿಲ್ಲೆಗಳಿಂದ ಸುಮಾರು 200 ನೌಕರರು  ದೆಹಲಿ ಚಲೋ  ಪ್ರತಿಭಟನೆಯಲ್ಲಿ  ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೂಟ (ಎಕೆಎಸ್‌ಜಿಇಎಫ್) (ರಿ) ರಾಜ್ಯಾಧ್ಯಕ್ಷ ಜೈಕುಮಾರ ಹೆಚ್.ಎಸ್‌. ಅವರು ಮಾತನಾಡಿ ಕೇಂದ್ರ ಸರ್ಕಾರವು ದೇಶದ ಎಲ್ಲ ವಲಯಗಳಲ್ಲೂ ನವ ಉದಾರವಾದಿ ಆರ್ಥಿಕ ನೀತಿಗಳನ್ನು ಜಾರಿಗೊಳಿಸುತ್ತಿದ್ದು ರಾಜ್ಯ ಸರ್ಕಾರಗಳೂ ಸಹ ಅದೇ ನೀತಿಗಳನ್ನು ಅನುಸರಿಸುವ ಅನಿವಾರ್ಯತೆಗೆ ಸಿಲುಕಿವೆ. ನೌಕರ-ವಿರೋಧಿ ನೀತಿಗಳಾದ PFRDA (Pension Fund Regulatory and Development Authority) ಕಾಯಿದ ಮೂಲಕ ಷೇರು ಮಾರುಕಟ್ಟೆ ಆಧಾರಿತ NPS ಪದ್ಧತಿ, ಕಾಲಕಾಲಕ್ಕೆ ವೇತನ ಪರಿಷ್ಕರಣೆ ಮಾಡದೇ ಇರುವುದು, ಆಡಳಿತ ಸುಧಾರಣೆ ನೆಪದಲ್ಲಿ ಹುದ್ದೆಗಳ ಕಡಿತ, ಖಾಲಿ ಹುದ್ದೆಗಳನ್ನು ಭರ್ತಿ ಮಾಡದೇ ಇರುವುದು, ಬದಲಿಗೆ ಹೊರಗುತ್ತಿಗೆ/ಗುತ್ತಿಗೆ ಅರೆಕಾಲಿಕ ಆಧಾರದಲ್ಲಿ ನೇಮಕ ಮಾಡುವುದು, ಸಾರ್ವಜನಿಕ ಉದ್ದಿಮೆಗಳ ಖಾಸಗೀಕರಣ, ತುಟ್ಟಿಭತ್ಯೆ ತಡೆಹಿಡಿದಿರುವುದು, ಇಂತಹ ನೀತಿಗಳನ್ನು ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಗಳ ಮೇಲೆ ಬಲವಂತವಾಗಿ ಹೇರುತ್ತಿದೆ. ದೇಶದಲ್ಲಿ ಉದ್ಯೋಗ ಸೃಷ್ಟಿಯಲ್ಲಿ ಹಾಗೂ ಮಾದರಿ ಉದ್ಯೋಗದಾತ ಸಂಸ್ಥೆಯಾಗಿ ಸರ್ಕಾರದ ಪಾತ್ರ ಬಹು ಮುಖ್ಯವಾದರೂ ಅದರಿಂದ ಕೇಂದ್ರ ಸರ್ಕಾರವು ಹಿಂದೆ ಸರಿಯುತ್ತಿದೆ. ದೇಶಾದ್ಯಂತ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಹಾಗೂ ಸಾರ್ವಜನಿಕ ಉದ್ದಿಮೆಗಳಲ್ಲಿ ಒಟ್ಟಾರೆ 60 ಲಕ್ಷ ಹುದ್ದೆಗಳು ಖಾಲಿಯಿದ್ದರೂ ಭರ್ತಿ ಮಾಡದೇ ಹೊರಗುತ್ತಿಗೆ ಗುತ್ತಿಗೆ ಅರೆಕಾಲಿಕ ಆಧಾರದಲ್ಲಿ ನೇಮಕ ಮಾಡಿಕೊಳ್ಳಲಾಗುತ್ತಿದೆ. ರಾಜ್ಯ ಸರ್ಕಾರಗಳಿಗೆ ತೆರಿಗೆ ಸಂಗ್ರಹದಲ್ಲೂ ಸೀಮಿತ ಅವಕಾಶಗಳು ಮಾತ್ರವಿದ್ದು, ಕಲ್ಯಾಣ ಕಾರ್ಯಕ್ರಮಗಳಿಗೆ ಹಣ ಹೊಂದಿಸುವಲ್ಲಿ ಸಂಕಷ್ಟದಲ್ಲಿವೆ ಎಂದರು. ವೇತನ‌

ಇದನ್ನೂ ಓದಿ:ರಾಜ್ಯ ಸರ್ಕಾರಿ ನೌಕರರಿಗೆ ಶೇ.3ರಷ್ಟು ತುಟ್ಟಿಭತ್ಯೆ ಹೆಚ್ಚಳ

ಕಾರ್ಯಾಧ್ಯಕ್ಷರಾದ ಎನ್. ಶೋಭಾ ಲೋಕನಾಗಣ್ಣ ಮಾತನಾಡಿ, ಬದಲಾದ ರಾಜಕೀಯ ಸನ್ನಿವೇಶದಿಂದಾಗಿ ಕೆಲವು ರಾಜ್ಯ ಸರ್ಕಾರಗಳು NPS ಪದ್ಧತಿಯನ್ನು ರದ್ದುಗೊಳಿಸಿ OPS ಅನ್ನು ಜಾರಿಗೊಳಿಸಲು ಆದೇಶ ಮಾಡಿವೆ. ಆದರೆ, ನೌಕರರಿಗೆ ನಿಶ್ಚಿತ ಪಿಂಚಣಿ ನೀಡಲು ಈಗಾಗಲೇ PFRDA ಪ್ರಾಧಿಕಾರದಲ್ಲಿ ಸಂಗ್ರಹವಾಗಿರುವ ಸರ್ಕಾರದ ಮತ್ತು ನೌಕರರ ವಂತಿಗೆಯ ಮೊತ್ತವನ್ನು ರಾಜ್ಯ ಸರ್ಕಾರಕ್ಕೆ ಹಿಂತಿರುಗಿಸುವಂತೆ ರಾಜಸ್ತಾನ, ಛತ್ತೀಸಗಢ ರಾಜ್ಯ ಸರ್ಕಾರಗಳು ಕೋರಿದ್ದು, ಹೀಗೆ ತನ್ನಲ್ಲಿ ಸಂಗ್ರಹವಾಗಿರುವ ಮೊತ್ತವನ್ನು ಹಿಂದಿರುಗಿಸಲು ನಿಯಮಗಳಲ್ಲಿ ಅವಕಾಶವಿಲ್ಲ ಎಂದು ಕಈಖಿಆಂ ತಿಳಿಸಿದೆ. 20 ವರ್ಷಗಳಿಂದಲೂ PFRDA ಪ್ರಾಧಿಕಾರದಲ್ಲಿ 85 ಲಕ್ಷ ಕೇಂದ್ರ ಮತ್ತು ರಾಜ್ಯ ಸರ್ಕಾರಿ ನೌಕರರ ಹಾಗೂ ಸರ್ಕಾರದ ವಂತಿಗೆ ಹಣ ಒಟ್ಟು ರೂ 7 ಲಕ್ಷ ಕೋಟಿ ಸಂಗ್ರಹವಾಗಿದ್ದು, ಇದನ್ನು ಕಾರ್ಪೊರೇಟ್ ಕಂಪನಿಗಳಿಗೆ ಅನುಕೂಲ ಮಾಡಿಕೊಡಲು ಷೇರು ಮಾರುಕಟ್ಟೆಯಲ್ಲಿ ಹೂಡಿಕೆಯಾಗುತ್ತಿದೆ. ಇದನ್ನು ವಾಪಸ್ ನೀಡದೇ ನೌಕರರಿಗೆ ಹಳೆಯ ಪಿಂಚಣಿ ನೀಡಲು ಸಾಧ್ಯವಿಲ್ಲ ಎಂದು ರಾಜ್ಯ ಸರ್ಕಾರಗಳು ಹೇಳಿವೆ. ರಾಜಸ್ತಾನದಲ್ಲಿ ಎನ್.ಪಿ.ಎಸ್ ರದ್ದುಪಡಿಸಿದ್ದು, ಎನ್.ಪಿ.ಎಸ್ ಅಡಿ ನೇಮಕವಾಗಿದ್ದ ನೌಕರರಿಗೆ ಮತ್ತು ಹೊಸದಾಗಿ ಸರ್ಕಾರಿ ಸೇವೆಗೆ ನೇಮಕಾತಿಯಾಗುವವರಿಗೆ ನೌಕರರು ಮತ್ತು ಸರ್ಕಾರದ ವಂತಿಗೆ ಕಟಾವಣೆ ನಿಲ್ಲಿಸಲಾಗಿದ್ದು, ಒಪಿಎಸ್‌ ನೀಡಲಾಗುತ್ತಿದೆ. ಹೊಸದಾಗಿ ನೇಮಕಾತಿಯಾಗುವ ನೌಕರರಿಗೆ ಮಾತ್ರ ಒಪಿಎಸ್ ಮತ್ತು ಭವಿಷ್ಯನಿಧಿ ಸೌಲಭ್ಯ ನೀಡಲಾಗುತ್ತಿದೆ. ಆದರೆ, ಎನ್.ಪಿ.ಎಸ್ ಜಾರಿಗೆ ಬಂದಾಗಿನಿಂದ ಇಲ್ಲಿಯವರೆಗೆ ಸೇವೆಗೆ ಸೇರಿ, NPS ರದ್ದಾದ ನಂತರ ನಿವೃತ್ತರಾಗುತ್ತಿರುವ ನೌಕರರಿಗೆ ಗ್ರಾಚ್ಯುಯಿಟಿ ಮೊತ್ತ ನೀಡದೇ ಕೇವಲ ಮಾಸಿಕ ಪಿಂಚಣಿ (OPS) ನೀಡಲು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಮತ್ತೊಂದೆಡೆ, ಕೆಲವು ರಾಜ್ಯಗಳಲ್ಲಿ OPS ಪದ್ಧತಿಯಡಿ ವಂತಿಗೆ ಕಟಾವಣೆಯಾಗಿರುವ ನೌಕರರಿಗೆ OPS ನೀಡಲಾಗದೆಂದು ಮಹಾಲೇಖಪಾಲರು ಆಕ್ಷೇಪಿಸಿದ್ದಾರೆ. ಒಪಿಎಸ್‌ ಜಾರಿಗೊಳಿಸಿರುವ ರಾಜ್ಯಗಳ ನಡೆ ಫ್ಲಾಘನೀಯವಾದರೂ, ಆ ರಾಜ್ಯಗಳಲ್ಲಿ OPS ನೀಡುವ ಪ್ರಕ್ರಿಯೆ ಗೊಂದಲದ ಗೂಡಾಗಿದೆ.

ಅಲ್ಲದೇ, OPS ಅನ್ನು ಮರುಜಾರಿಗೊಳಿಸಿರುವ ರಾಜ್ಯಗಳಲ್ಲಿ ಸರ್ಕಾರಗಳು ಬದಲಾದಾಗ ಮತ್ತೆ NPS ಮರುಸ್ಥಾಪಿಸಲು ಅವಕಾಶಗಳಿರುತ್ತವೆ ಎಂಬುದನ್ನು ಅರಿಯಬೇಕು. ಪ್ರಸ್ತುತ OPS ಅಡಿ ಬರುವ ನೌಕರರುಗಳಿಗೂ ಮುಂದೆ NPS ಬರುವ ಸಾಧ್ಯತೆಯು PFRDA ಕಾಯಿದೆ ನಿಯಮಗಳಲ್ಲಿವೆ. ಮತ್ತೊಂದೆಡೆ, ಸಂಸತ್ತಿನ ಅಧಿವೇಶನದಲ್ಲಿ OPS ಮರುಸ್ಥಾಪಿಸುವ ಬಗ್ಗೆ ಕೇಳಲಾದ ಪ್ರಶ್ನೆಗೆ ಕೇಂದ್ರದ ಹಣಕಾಸು ಮಂತ್ರಿಗಳು ಪಿ.ಎಫ್.ಆರ್.ಡಿ.ಎ ಪ್ರಾಧಿಕಾರದಲ್ಲಿ ಸಂಗ್ರಹವಾಗಿರುವ ಮೊತ್ತವನ್ನು ಹಿಂತಿರುಗಿಸಲು ನಿಯಮಗಳಲ್ಲಿ ಅವಕಾಶವಿಲ್ಲ ಎಂದು ತಿಳಿಸಿದ್ದಾರೆ. ಅಲ್ಲದೇ, ನೌಕರರ ಪಿಂಚಣಿ ಹಣವನ್ನು ರಾಜ್ಯ ಸರ್ಕಾರಗಳಿಗೆ ನೀಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ವೇತನ‌

ಇದನ್ನೂ ಓದಿ:ಸಂಪುಟ ಚರ್ಚೆ ಬಳಿಕ ಎನ್‌ಪಿಎಸ್‌ ರದ್ದು ನಿರ್ಧಾರ, ಸರ್ಕಾರಿ ನೌಕರರಿಗೆ ಸಿದ್ದರಾಮಯ್ಯ ಭರವಸೆ

ಪ್ರಧಾನಮಂತ್ರಿಯವರು OPS ಪಿಂಚಣಿ ಪದ್ಧತಿಯನ್ನು ಮರುಜಾರಿಗೊಳಿಸುವುದು ಪಾಪದ ಕೆಲಸ ಎಂದು ಹೇಳಿದ್ದಾರೆ, ಇದರಿಂದ ಆರ್ಥಿಕ ವ್ಯವಸ್ಥೆ ಹಾಳಾಗಿ ನಮ್ಮ ದೇಶದ ಮಕ್ಕಳ ಭವಿಷ್ಯ ಹಾನಿಯಾಗುತ್ತದೆ ಎಂದು ಹೇಳಿರುವುದು ವರದಿಯಾಗಿದೆ. ಹೀಗೆ ಸರ್ಕಾರಿ ನೌಕರಿಯ ಅಸ್ತಿತ್ವಕ್ಕೇ ಸಂಚಕಾರ ತರಲಾಗುತ್ತಿದೆ. ಕೆಲವು ನೌಕರ ಸಂಘಗಳು NPS ರದ್ದುಪಡಿಸಿ OPS ಜಾರಿಗೊಳಿಸಲು ಆಗ್ರಹಿಸುತ್ತಿವೆ. ಎನ್.ಪಿ.ಎಸ್ ಪದ್ಧತಿಯ ಮೂಲಬೇರಾದ PFRDA ಕಾಯಿದೆ ರದ್ದತಿಯ ಬಗ್ಗೆ ಪ್ರಸ್ತಾಪಿಸದೇ ಇರುವುದು ಹಾಗೆಯೇ, ಖಾಲಿಹುದ್ದೆ ಭರ್ತಿ, ವೇತನ ಪರಿಷ್ಕರಣೆ, ಹೊರಗುತ್ತಿಗೆಯವರ ಖಾಯಮ್ಮಾತಿ ಬಗ್ಗೆ ಪ್ರಸ್ತಾಪಿಸದೇ ಇರುವುದು ಸಂಕುಚಿತ ಧೋರಣೆಯಾಗುತ್ತದೆ. ಹಲವು ಆರ್ಥಿಕ ತಜ್ಞರು ಹೇಳುವಂತೆ ಕಾರ್ಪೊರೇಟ್ ಕಂಪನಿಗಳಿಗೆ ಶೇ.1 ರಷ್ಟು ಸಂಪತ್ತಿನ ತೆರಿಗೆಯನ್ನು ವಿಧಿಸಿದರೆ ಸಾಕು, ಪಿಂಚಣಿ ನೀಡಲು ಅವಶ್ಯವಿರುವ ಪೂರ್ತಿ ಸಂಪನ್ಮೂಲ ಲಭ್ಯವಾಗುತ್ತದೆ. ಆದರೆ ಕೇಂದ್ರ ಸರ್ಕಾರವು ಕಾರ್ಪೊರೇಟ್ ಕಂಪನಿಗಳಿಗೆ ಲಕ್ಷಾಂತರ ಕೋಟಿ ಸಾಲ ಮನ್ನಾ ಮತ್ತು ದೇಶದ ಉತ್ಪನ್ನದ ಬಹುಪಾಲು ಲಾಭ ಅವುಗಳಿಗೆ ಹರಿದು ಹೋಗುವ ನೀತಿಗಳನ್ನು ಅನುಸರಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಕಾರ್ಯಕ್ರಮದಲ್ಲಿ ದೇಶದ ಮೂಲೆಮೂಲೆಗಳಿಂದ ಲಕ್ಷಾಂತರ ನೌಕರರು ಭಾಗವಹಿಸಿ “ದೆಹಲಿ ಚಲೋ” ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ದಾರೆ. ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೂಟದ ಕರೆಯ ಮೇರೆಗೆ, ಕರ್ನಾಟಕದಿಂದ ಸುಮಾರು 200 ನೌಕರರು ವಿವಿಧ ಜಿಲ್ಲೆಗಳಿಂದ ಭಾಗವಹಿಸಿದ್ದರು. ವೇತನ‌ 

ಇತರೆ ಪ್ರಮುಖ ಬೇಡಿಕೆಗಳು:

  • ರಾಜ್ಯದಲ್ಲಿ 7ನೇ ವೇತನ ಆಯೋಗದ ವೇತನ ಪರಿಷ್ಕರಣೆ ಶೇ. 40ರಷ್ಟು ಹೆಚ್ಚಿಸಿ ಕೂಡಲೇ ಜಾರಿಗೊಳಿಸುವುದು.
  • ಕೇಂದ್ರ ಮತ್ತು ರಾಜ್ಯ ಸರ್ಕಾರದ ಇಲಾಖೆಗಳಲ್ಲಿ ಹಾಗೂ ಸಾರ್ವಜನಿಕ ಉದ್ದಿಮೆಗಳಲ್ಲಿ ಖಾಲಿ ಇರುವ 60 ಲಕ್ಷ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಕೂಡಲೇ ಮಾಡುವುದು.
  • ರಾಜ್ಯದಲ್ಲಿ ಆಡಳಿತ ಸುಧಾರಣಾ ಆಯೋಗ-2ರಲ್ಲಿ ನೌಕರ-ವಿರೋಧಿ & ಸಾರ್ವಜನಿಕ ಸೇವೆಗಳ ಖಾಸಗೀಕರಣ ಶಿಫಾರಸ್ಸುಗಳನ್ನು ಕೈಬಿಡುವುದು.
  • ತಡೆಹಿಡಿದಿರುವ I8 ತಿಂಗಳ ತುಟ್ಟಿಭತ್ಯೆಯನ್ನು ಕೂಡಲೇ ಬಿಡುಗಡೆ ಮಾಡುವುದು.
  • ಅನುಕಂಪ ಆಧಾರಿತ ಕೆಲಸ ನೀಡುವಲ್ಲಿ ಇರುವ ಎಲ್ಲ ನಿಬಂಧನೆಗಳನ್ನು ರದ್ದುಗೊಳಿಸಬೇಕು.
  • ರಾಜ್ಯದ ಎಲ್ಲಾ ಇಲಾಖೆಗಳಲ್ಲಿನ ಎಲ್ಲಾ ವೃಂದಗಳ ಜೇಷ್ಠತಾ ಪಟ್ಟಿ ಅಂತಿಮಗೊಳಿಸುವುದು, ಸಿ & ಆರ್ ಪರಿಷ್ಕರಣೆ ಮತ್ತು ಮುಂಬಡ್ತಿ ನೀಡಲು ಕ್ರಮವಹಿಸುವುದು,
  • ಸಚಿವಾಲಯದ ಸಿ ಅಂಡ್ ಆರ್ ನಿಯಮಗಳ ಪ್ರಕಾರವೇ ಖಾಲಿ ಹುದ್ದೆಗಳ ನಿಯೋಜನೆ/ಭರ್ತಿಗೆ ಕ್ರಮವಹಿಸಬೇಕು. ಇಲಾಖೆ/ಹುದ್ದೆಗಳ ರದ್ದತಿ/ವಿಲೀನ ಪ್ರಕ್ರಿಯೆ ಕೈಬಿಡಬೇಕು.
  • ಆರೋಗ್ಯ, ಆಹಾರ, ಶಿಕ್ಷಣ ಒಳಗೊಂಡಂತೆ ಎಲ್ಲ ಸರ್ಕಾರಿ ಇಲಾಖೆಗಳಲ್ಲಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಗುತ್ತಿಗೆ / ಹೊರಗುತ್ತಿಗೆ / ಅತಿಥಿ ನೌಕರರನ್ನು ನಿಯಮಾನುಸಾರ ಖಾಯಂ ಮಾಡಬೇಕು. ಸುಪ್ರೀಂ ಕೋರ್ಟ್ ಅನುಸಾರ ಗುತ್ತಿಗೆ / ಹೊರಗುತ್ತಿಗೆ / ಅತಿಥಿ ನೌಕರರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು.
  • ಸಾರ್ವಜನಿಕ ಉದ್ದಿಮೆಗಳ ಖಾಸಗೀಕರಣ ನಿಲ್ಲಿಸಬೇಕು.
  • ಅಸಂವಿಧಾನಿಕವಾದ ನೌಕರ-ವಿರೋಧಿ ಅಂಶಗಳನ್ನು ನಡತೆ ನಿಯಮಗಳಿಂದ ಕೈಬಿಡುವುದು.
  • ನೌಕರ/ಕಾರ್ಮಿಕ ಸಂಘಟನೆಗಳಿಗೆ ಪ್ರಜಾಸತ್ತಾತ್ಮಕ ಹಕ್ಕನ್ನು ಖಾತರಿಪಡಿಸಬೇಕು ಮತ್ತು ನ್ಯಾಯಯುತ ಬೇಡಿಕೆಗಳಿಗಾಗಿ ಒತ್ತಾಯಿಸುತ್ತಿರುವ ನೌಕರ ಸಂಘಟನೆಗಳ ಸಂಯೋಜನೆ ರದ್ದತಿ ಆದೇಶ ಹಿಂಪಡೆಯಬೇಕು.
  • ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರದ್ದುಗೊಳಿಸುವುದು. ಬೇಡಿಕೆಗಳ 

ವಿಡಿಯೋ ನೋಡಿ:ಸರಕಾರಿ ನೌಕರರ ಮುಷ್ಕರ್ – 17% ವೇತನ ಹೆಚ್ಚಳಕ್ಕೆ ನೌಕರರ ಸಂಘ ಹೇಳುವುದೇನು? #7thpaycommission

Donate Janashakthi Media

Leave a Reply

Your email address will not be published. Required fields are marked *