“ಮಹಿಳಾ ಸಂಘಟನೆಯಾಗಿ ನಮ್ಮ ಮಹಿಳಾ ನ್ಯಾಯಾಧೀಶರಿಂದ ಉತ್ತಮ ತಿಳುವಳಿಕೆಯನ್ನು ನಿರೀಕ್ಷಿಸುತ್ತೇವೆ”
ಮಹಿಳೆಯರಿಗೆ ಮನುಸ್ಮೃತಿ ಅತ್ಯಂತ ಗೌರವಾನ್ವಿತ ಸ್ಥಾನ ನೀಡಿದೆ ಎಂದು ನ್ಯಾಯಮೂರ್ತಿ ಪ್ರತಿಬಾ ಎಂ. ಸಿಂಗ್ ಹೇಳಿರುವುದಾಗಿ ವರದಿಯಾಗಿದೆ. ಈ ಹೇಳಿಕೆಗೆ ಅಖಿಲ ಭಾರತ ಜನವಾದಿ ಮಹಿಳಾ ಸಂಘ (ಎಐಡಿಡಬ್ಲ್ಯುಎ) ಬಲವಾದ ಆಕ್ಷೇಪವನ್ನು ವ್ಯಕ್ತಪಡಿಸಿದೆ.
ಅವರ ಈ ಹೇಳಿಕೆ ಉದ್ಯಮಿಗಳ ಸಂಘಟನೆ ‘ಫಿಕಿ’ ಇತ್ತೀಚೆಗೆ ಆಯೋಜಿಸಿದ್ದ ಸಮ್ಮೇಳನದಲ್ಲಿ ಅವರ ಉದ್ಘಾಟನಾ ಭಾಷಣದ ಒಂದು ಭಾಗವಾಗಿದೆ. ಇಲ್ಲಿ ಅವರು ಮನುಸ್ಮೃತಿಯಂತಹ ಧರ್ಮಗ್ರಂಥಗಳಿಂದಾಗಿ ಭಾರತೀಯ ಮಹಿಳೆಯರು ‘ಪೂಜ್ಯ’ರೆನಿಸಿಕೊಂಡಿದ್ದಾರೆ, ‘ನೀವು ಮಹಿಳೆಯರನ್ನು ಗೌರವಿಸದಿದ್ದರೆ ಮತ್ತು ಗೌರವಿಸದಿದ್ದರೆ, ನೀವು ಮಾಡುವ ಎಲ್ಲಾ ಪೂಜಾ ಮಾರ್ಗಗಳಿಗೆ ಯಾವುದೇ ಅರ್ಥವಿಲ್ಲ’ ಎಂದು ಇವುಗಳಲ್ಲಿ ಹೇಳಲಾಗಿದೆ ಎಂದೂ ಹೇಳಿದರು.
ಮೊದಲನೆಯದಾಗಿ, ಮನುಸ್ಮೃತಿಯ ನಿಜವಾದ ಉಲ್ಲೇಖವೆಂದರೆ ‘ದೇವರುಗಳು ಮಹಿಳೆಯರನ್ನು ಗೌರವಿಸುವ ಸ್ಥಳಗಳಲ್ಲಿ ವಾಸಿಸುತ್ತಾರೆ’. ಅದೇ ಪಠ್ಯದಿಂದ ಕನಿಷ್ಠ ಹತ್ತು ಇತರ ಉಲ್ಲೇಖಗಳನ್ನು ನೀಡಬಹುದು, ಅಲ್ಲಿ ಮಹಿಳೆಯರನ್ನು ನಂಬಿಕೆಗೆ ಅನರ್ಹರು ಮತ್ತು ಸಂಪೂರ್ಣವಾಗಿ ಲೈಂಗಿಕ ಭಾವೋದ್ರೇಕಗಳಿಂದ ವರ್ತಿಸುವವರು ಎಂದೂ ಹೇಳಲಾಗಿದೆ; ಅವರು ಸ್ವತಂತ್ರವಾಗಿ ಕಾರ್ಯಾಚರಿಸದಂತೆ ನೋಡಿಕೊಳ್ಳಬೇಕು ಎಂದು ಹೇಳುವಲ್ಲಿ, ಅವರು ಗಂಡು ಮಕ್ಕಳನ್ನು ಹೆರದಿದ್ದರೆ ಅವರನ್ನು ಕಡೆಗಣಿಸಬಹುದು ಎಂದೂ ಸೂಚಿಸಲಾಗಿದೆ. ‘ಬಹಿಷ್ಕರಿಸಿದ’ ಜಾತಿಯ ಪುರುಷನೊಂದಿಗೆ ಸಹಬಾಳ್ವೆ ನಡೆಸುವ ಮಹಿಳೆಯಿಂದ ಜನಿಸಿದ ಮಕ್ಕಳು ಅಗತ್ಯವಾಗಿ ‘ಇನ್ನೂ ಹೆಚ್ಚಿನ ಬಹಿಷ್ಕಾರ’ಕ್ಕೆ ಒಳಗಾಗುತ್ತಾರೆ ಎಂದು ಹೇಳಲಾಗಿÀದೆ. ಮನುಸ್ಮೃತಿಯು ಈ ವಿದ್ವಾಂಸ ನ್ಯಾಯಾಮೂರ್ತಿಗಳು ಹೇಳುವಂತೆ ‘ವೈದಿಕ ಪಠ್ಯ’ವೂ ಅಲ್ಲ, ಬದಲಿಗೆ ಬ್ರಾಹ್ಮಣ ಪ್ರಾಬಲ್ಯವನ್ನು ಬಲಪಡಿಸುವ ಮತ್ತು ಹರಡುವ ನಿರ್ದಿಷ್ಟ ಉದ್ದೇಶದಿಂದ ನಿರ್ದಿಷ್ಟ ಐತಿಹಾಸಿಕ ಘಟ್ಟದಲ್ಲಿ ಮಾಡಿದ ಸಂಕಲನವಾಗಿದೆ. ಯಾವ ಸಂವಿಧಾನವನ್ನು ಪಾಲಿಸುವುದಾಗಿ ಈ ವಿದ್ವಾಂಸ ನ್ಯಾಯಾಧೀಶರು ಪ್ರತಿಜ್ಞೆ ಮಾಡಿದ್ದಾರೋ ಮತ್ತು ಯಾವುದು ಅವರು ಪ್ರಸ್ತುತ ಗೌರವಾನ್ವಿತ ಸ್ಥಾನವನ್ನು ಹೊಂದಲು ಅವಕಾಶ ಮಾಡಿಕೊಟ್ಟಿದೆಯೋ, ಆ ಭಾರತೀಯ ಸಂವಿಧಾನ ಮತ್ತು ಭಾರತೀಯ ಕಾನೂನು ವ್ಯವಸ್ಥೆಯೊಂದಿಗೆ ಮನುಸ್ಮೃತಿ ಹೊಂದಿರುವ ವೈರುಧ್ಯವನ್ನು ಅವರು ಕಡೆಗಣಿಸಿದ್ದಾರೆ ಎಂದು ಎಐಡಿಡಬ್ಲ್ಯುಎ ಟಿಪ್ಪಣಿ ಮಾಡಿದೆ.
ಎರಡನೆಯದಾಗಿ, ಭಾರತವು ಅನೇಕ ಧರ್ಮಗಳ ದೇಶ ಎಂಬುದನ್ನೂ ಅವರು ಮರೆತಂತೆ ತೋರುತ್ತಿದೆ ಮತ್ತು ಮನುಸ್ಮೃತಿಯನ್ನು ‘ನಮ್ಮ ಧರ್ಮಗ್ರಂಥಗಳು’ ಎಂದು ವಿವರಿಸುವ ಮೂಲಕ ಅವರು ಬಹುಸಂಖ್ಯಾಕ ವಿಭಜನಕಾರೀÀ ನಿಲುವನ್ನು ತೆಗೆದುಕೊಳ್ಳುತ್ತಿದ್ದಾರೆ ಮತ್ತು ನಮ್ಮ ಪ್ರಜಾಸತ್ತಾತ್ಮಕ ಜಾತ್ಯತೀತ ಸಂವಿಧಾನದಿAದ ಪರಸ್ಪರ ಒಂದುಗೂಡಿರುವ ಮತ್ತು ಮನುಸ್ಮೃತಿಗೆ ಅರ್ಥಹೀನವಾಗಿರುವ ನಮ್ಮ ಜನರ ಬಹುದೊಡ್ಡ ವಿಭಾಗಗÀಳಿಗೆ ತಮ್ಮನ್ನು ಪರಕೀಯರಾಗಿಸಿಕೊಳ್ಳುತ್ತಿದಾರೆ. ಎಲ್ಲರಿಗೂ ನ್ಯಾಯ ಎಂಬುದನ್ನು ಪ್ರತಿನಿಧಿಸುವ ಸಾರ್ವಜನಿಕ ವ್ಯಕ್ತಿಯಾಗಿ ಅವರು ಖಂಡಿತವಾಗಿಯೂ ಇದನ್ನು ಮಾಡಲು ಸಾಧ್ಯವಿಲ್ಲ. ಆಳುವ ಪಕ್ಷದ ರಾಜಕಾರಣಿಗಳು ಮತ್ತು ಜನಪ್ರತಿನಿಧಿಗಳು ಮಹಿಳೆಯರನ್ನು ಅವಮಾನಿಸುವ, ‘ಕೆಳಜಾತಿ’ಯವರು ಎನಿಸಿಕೊಳ್ಳುವವರು ಮತ್ತು ಧಾರ್ಮಿಕ ಅಲ್ಪಸಂಖ್ಯಾತರನ್ನು ಅವಮಾನಿಸುವ ಮತ್ತು ಅವರ ವಿರುದ್ಧದ ದೌರ್ಜನ್ಯವನ್ನು ಮಂಜೂರು ಮಾಡುವ ಹೇಳಿಕೆಗಳನ್ನು ನಾವು ಪ್ರತಿದಿನ ಕೇಳುತ್ತಿರುವ ಪರಿಸ್ಥಿತಿಯಲ್ಲಿ ಇದು ವಿಶೇಷವಾಗಿ ಖಂಡನೀಯವಾಗಿದೆ. ಆಕೆ ಮಾಡಿದಂತೆ ನ್ಯಾಯಾಂಗದಲ್ಲಿ ಯಾರಾದರೂ ಪಕ್ಷಪಾತ ಧೋರಣೆ ತಳೆದರೆ, ಅದು ಮೇಲೆ ಹೇಳಿದ ವಿಭಾಗಗಳ ಅಭದ್ರತೆಯನ್ನು ಹೆಚ್ಚಿಸುತ್ತದೆ ಎಂದಿರುವ ಎಐಡಿಡಬ್ಲ್ಯುಎ “ಮಹಿಳಾ ಸಂಘಟನೆಯಾಗಿ ನಾವು ನಮ್ಮ ಮಹಿಳಾ ನ್ಯಾಯಾಧೀಶರಿಂದ ಉತ್ತಮ ತಿಳುವಳಿಕೆಯನ್ನು ನಿರೀಕ್ಷಿಸುತ್ತೇವೆ ಮತ್ತು ಅವರ ಮಾತುಗಳನ್ನು ಹಿಂತೆಗೆದುಕೊಳ್ಳುವಂತೆ ಒತ್ತಾಯಿಸುತ್ತೇವೆ” ಎಂದು ಹೇಳಿದೆ.