ರೈತ ಪ್ರತಿಭಟನೆಗೆ ಬೆದರಿದ ದೆಹಲಿ ಪ್ರಭುತ್ವ; ಒಂದು ತಿಂಗಳು 144 ಸೆಕ್ಷನ್ ಜಾರಿ | ಹರಿಯಾಣದಲ್ಲಿ ಇಂಟರ್‌ನೆಟ್ ಸ್ಥಗಿತ!

ನವದೆಹಲಿ: ತಮ್ಮ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನೀಡುವ ಕಾನೂನು ತರಬೇಕು ಎಂದು ಆಗ್ರಹಿಸಿ ದೇಶದ ರೈತ ಸಂಘಟನೆಗಳು ದೆಹಲಿ ಚಲೋ ಮೆರವಣಿಗೆ ಮಂಗಳವಾರ ಹಮ್ಮಿಕೊಂಡಿದೆ. ಸೋಮವಾರ ಚಂಡೀಗಢದಲ್ಲಿ ನಡೆದ ಮಾತುಕತೆಗಳು ವಿಫಲಗೊಂಡ ಹಿನ್ನೆಲೆಯಲ್ಲಿ ರೈತ ಸಂಘಟನೆಗಳು ದೆಹಲಿಗೆ ದೆಹಲಿ ಚಲೋ ಮೆರವಣಿಗೆ ನಡೆಸಲು ನಿರ್ಧಾರ ತೆಗೆದುಕೊಂಡಿದೆ.  ರೈತ ಪ್ರತಿಭಟನೆ

ಕಿಸಾನ್ ಮಜ್ದೂರ್ ಮೋರ್ಚಾದ ಬ್ಯಾನರ್ ಅಡಿಯಲ್ಲಿ 250 ರೈತ ಸಂಘಗಳು ಮತ್ತು 150 ಒಕ್ಕೂಟಗಳ ವೇದಿಕೆಯಾದ ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ) ನೇತೃತ್ವದಲ್ಲಿ ಈ ಪ್ರತಿಭಟನೆ ನಡೆಸಲಾಗುತ್ತಿದೆ. ಪಂಜಾಬ್ ಮೂಲದ ಯೂನಿಯನ್ ಕಿಸಾನ್ ಮಜ್ದೂರ್ ಸಂಘರ್ಷ್ ಸಮಿತಿಯ (KMSC) ಸಂಚಾಲಕ ಸರ್ವಾನ್ ಸಿಂಗ್ ಪಂಧೇರ್ ಪ್ರತಿಭಟನೆಯ ನೇತೃತ್ವ ವಹಿಸಿದ್ದಾರೆ. ರೈತ ಪ್ರತಿಭಟನೆ

ಇದನ್ನೂ ಓದಿ: ರಾಜ್ಯಸಭಾ ಚುನಾವಣೆ | ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್‌ಗೆ ಬಿಜೆಪಿ ಟಿಕೆಟ್ ನಿರಾಕರಣೆ

ಡಾ. ಎಂ.ಎಸ್. ಸ್ವಾಮಿನಾಥನ್ ಆಯೋಗದ ವರದಿಯಂತೆ ಎಲ್ಲಾ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು (ಎಂಎಸ್‌ಪಿ) ಖಾತರಿಪಡಿಸುವ ಕಾನೂನು ಮತ್ತು ಬೆಳೆ ಬೆಲೆಗಳನ್ನು ನಿಗದಿಪಡಿಸುವ ಬೇಡಿಕೆಯನ್ನು ರೈತರು ಸರ್ಕಾರದ ಮುಂದಿಟ್ಟಿದ್ದಾರೆ. ಇಷ್ಟೆ ಅಲ್ಲದೆ ಇನ್ನಷ್ಟು ಬೇಡಿಕೆಗಳನ್ನು ರೈತರು ಸರ್ಕಾರದ ಮುಂದಿಟ್ಟಿದ್ದಾರೆ;

— ರೈತರು ಮತ್ತು ಕಾರ್ಮಿಕರ ಸಂಪೂರ್ಣ ಸಾಲ ಮನ್ನಾ.
— 2013ರ ಭೂಸ್ವಾಧೀನ ಕಾಯಿದೆಯ ಅನುಷ್ಠಾನ, ಸ್ವಾಧೀನಕ್ಕೆ ಮುನ್ನ ರೈತರಿಂದ ಲಿಖಿತ ಒಪ್ಪಿಗೆ ಮತ್ತು ಜಿಲ್ಲಾಧಿಕಾರಿ ದರಕ್ಕಿಂತ ನಾಲ್ಕು ಪಟ್ಟು ಪರಿಹಾರ.
— ಅಕ್ಟೋಬರ್ 2021 ರ ಲಖಿಂಪುರ ಖೇರಿ ಹತ್ಯೆಯ ಅಪರಾಧಿಗಳಿಗೆ ಶಿಕ್ಷೆ.
— ವಿಶ್ವ ವ್ಯಾಪಾರ ಸಂಸ್ಥೆ (WTO) ಹೊರಬಂದು ಎಲ್ಲಾ ಮುಕ್ತ ವ್ಯಾಪಾರ ಒಪ್ಪಂದಗಳನ್ನು ಫ್ರೀಜ್ ಮಾಡುವುದು.
— ರೈತರು ಮತ್ತು ಕೃಷಿ ಕಾರ್ಮಿಕರಿಗೆ ಪಿಂಚಣಿ;
— ದೆಹಲಿ ಪ್ರತಿಭಟನೆಯ ಸಂದರ್ಭದಲ್ಲಿ ಸಾವನ್ನಪ್ಪಿದ ರೈತರಿಗೆ ಪರಿಹಾರ, ಕುಟುಂಬ ಸದಸ್ಯರಿಗೆ ಉದ್ಯೋಗ;
— ವಿದ್ಯುತ್ ತಿದ್ದುಪಡಿ ಮಸೂದೆ 2020 ರ ರದ್ದತಿ
— ವರ್ಷಕ್ಕೆ MGNREGA ಅಡಿಯಲ್ಲಿ 200 (100 ಬದಲಿಗೆ) ದಿನಗಳ ಉದ್ಯೋಗ ಹಾಗೂ ರೂ. 700 ದೈನಂದಿನ ವೇತನ, ಮತ್ತು ಯೋಜನೆಯನ್ನು ಕೃಷಿಯೊಂದಿಗೆ ಜೋಡಿಸುವುದು.
— ನಕಲಿ ಬೀಜಗಳು, ಕೀಟನಾಶಕಗಳು, ರಸಗೊಬ್ಬರಗಳನ್ನು ಉತ್ಪಾದಿಸುವ ಕಂಪನಿಗಳ ಮೇಲೆ ಕಟ್ಟುನಿಟ್ಟಾದ ಕ್ರಮಗಳು; ಬೀಜದ ಗುಣಮಟ್ಟದಲ್ಲಿ ಸುಧಾರಣೆ;
— ಮೆಣಸಿನಕಾಯಿ ಮತ್ತು ಅರಿಶಿನದಂತಹ ಮಸಾಲೆಗಳಿಗಾಗಿ ರಾಷ್ಟ್ರೀಯ ಆಯೋಗ ರಚನೆ ಮಾಡಬೇಕು ಎಂದು ರೈತರು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ‘ಸೇನೆಯ ಚಿತ್ರಹಿಂಸೆ ವರದಿ 24 ಗಂಟೆಯೊಳಗೆ ತೆಗೆದುಹಾಕಿ’ | ದಿ ಕಾರವಾನ್‌ಗೆ ಕೇಂದ್ರ ಸರ್ಕಾರ ಬೆದರಿಕೆ

ದೆಹಲಿ ಗಡಿಯಲ್ಲಿರುವ ರಾಜ್ಯಗಳು ಏನು ಮಾಡುತ್ತಿವೆ?

ರೈತ ಹೋರಾಟದ ಹಿನ್ನೆಲೆಯಲ್ಲಿ ಹರ್ಯಾಣ ಸರ್ಕಾರವು ಫೆಬ್ರವರಿ 8 ರಂದು ಪಂಜಾಬ್‌ನೊಂದಿಗಿನ ತನ್ನ ಗಡಿಯನ್ನು ಮುಚ್ಚಿದೆ. ದೆಹಲಿಗೆ ಹೋಗುವ ರಾಷ್ಟ್ರೀಯ ಹೆದ್ದಾರಿ 1 ರ ಶಂಭು ತಡೆಗೋಡೆಯಲ್ಲಿ ಬೃಹತ್ 12-ಪದರದ ಬ್ಯಾರಿಕೇಡ್ ಅನ್ನು ನಿರ್ಮಿಸಲಾಗಿದೆ. ಜೊತೆಗೆ ಫತೇಹಾಬಾದ್, ಖಾನೌರಿ, ದಬ್ವಾಲಿ, ಇತ್ಯಾದಿ ಕಡೆಗಳಲ್ಲಿ ಕೂಡಾ ಬಹು ಬ್ಯಾರಿಕೇಡ್‌ಗಳನ್ನು ಸ್ಥಾಪಿಸಲಾಗಿದೆ. ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಇಂಟರ್‌ನೆಟ್ ಸ್ಥಗಿತಗೊಳಿಸಲಾಗಿದೆ.

ಫೆಬ್ರವರಿ 11 ರಂದು ರಾಜಸ್ಥಾನವು ಪಂಜಾಬ್ ಮತ್ತು ಹರಿಯಾಣದೊಂದಿಗಿನ ತನ್ನ ಗಡಿಗಳನ್ನು ಮುಚ್ಚಿತ್ತು. ಶ್ರೀ ಗಂಗಾನಗರ ಮತ್ತು ಹನುಮಾನ್‌ಗಢ ಜಿಲ್ಲೆಗಳಲ್ಲಿ ಸೆಕ್ಷನ್ 144 CrPC ಅಡಿಯಲ್ಲಿ ನಿಷೇಧಾಜ್ಞೆಗಳನ್ನು ವಿಧಿಸಿತು.

ಇಷ್ಟೆ ಅಲ್ಲದೆ, ರೈತರ ಪ್ರತಿಭಟನೆ ಹಿನ್ನೆಲೆ ದೆಹಲಿಯಲ್ಲಿ ಸೆಕ್ಷನ್ 144 ಜಾರಿ ಮಾಡಲಾಗಿದ್ದು ಗಡಿಗಳನ್ನು ಕಾಂಕ್ರೀಟ್ ಬ್ಲಾಕ್‌ಗಳು, ಮುಳ್ಳುತಂತಿಗಳಿಂದ ಭದ್ರಪಡಿಸಲಾಗಿದೆ. ದೆಹಲಿಯು ಸಾರ್ವಜನಿಕ ಸಭೆಗಳ ಮೇಲೆ ಒಂದು ತಿಂಗಳ ಅವಧಿಯ ನಿಷೇಧವನ್ನು ವಿಧಿಸಿದೆ. ಇಷ್ಟೆ ಅಲ್ಲದೆ, ಟ್ರಾಕ್ಟರ್‌ಗಳು, ಟ್ರಾಲಿಗಳು ಮತ್ತು ನಗರದಲ್ಲಿ ಒಂದು ತಿಂಗಳ ಕಾಲ “ಆಯುಧಗಳು ಅಥವಾ ಹಿಂಸಾಚಾರದ ಸಾಧನಗಳಾಗಿ ಬಳಸುವ ಸಾಮರ್ಥ್ಯವಿರುವ” ಯಾವುದೇ ವಸ್ತುಗಳ ಪ್ರವೇಶಕ್ಕೆ ನಿಷೇಧ ಹೇರಿದೆ.

ದೆಹಲಿ ಮತ್ತು ಉತ್ತರ ಪ್ರದೇಶ ಪೊಲೀಸರು ರಾಜಧಾನಿಯ ಗಡಿಯಲ್ಲಿರುವ ಮಾರ್ಗಗಳಲ್ಲಿ ತೀವ್ರ ತಪಾಸಣೆ ನಡೆಸುತ್ತಿದ್ದು, ದಟ್ಟಣೆಯನ್ನು ತಪ್ಪಿಸಲು ಮೆಟ್ರೋವನ್ನು ಬಳಸಿಕೊಳ್ಳುವಂತೆ ಪ್ರಯಾಣಿಕರಿಗೆ ಸಲಹೆ ನೀಡಿದ್ದಾರೆ.

ವಿಡಿಯೊ ನೋಡಿ: ಹಿಟ್ ಅಂಡ್ ರನ್ ತಿದ್ದುಪಡಿ : ಕೇಂದ್ರದ ವಿರುದ್ಧ ಸಿಡಿದೆದ್ದ ಚಾಲಕರು Janashakthi Media

Donate Janashakthi Media

Leave a Reply

Your email address will not be published. Required fields are marked *