ನವದೆಹಲಿ : ದೆಹಲಿಯಲ್ಲಿ ಅಧಿಕಾರ ನಡೆಸುತ್ತಿರುವ ಆಮ್ ಆದ್ಮಿ ಪಾರ್ಟಿ(ಎಎಪಿ)ಯ ಸರಕಾರದ ಹಣಕಾಸು ಸಚಿವರು ಆಗಿರುವ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ದೆಹಲಿ ರಾಜ್ಯದ 2021-2022ರ ಸಾಲಿನ ಬಜೆಟ್ ಮಂಡಿಸಿದರು.
ದೇಶಕ್ಕೆ ಸ್ವಾತಂತ್ರ್ಯ ಬಂದು 75 ವಸಂತಗಳನ್ನು ಪೂರೈಸುತ್ತಿರುವ ರಾಜ್ಯದಲ್ಲಿ ದೇಶಭಕ್ತಿ ಮಹೋತ್ಸವ ಆಚರಣೆಯ ಅಂಗವಾಗಿ ಮಾರ್ಚ್ 12 ರಿಂದ 75 ವಾರಗಳ ಹಮ್ಮಿಕೊಳ್ಳಲಾಗುವುದು. ನಮ್ಮದು ʻದೇಶಭಕ್ತಿಯ ಬಜೆಟ್ʼ ಆಗಿದೆ ಎಂದು ಪ್ರಸ್ತಾಪಿಸಿದ ಮನೀಶ್ ಸಿಸೋಡಿಯಾ ತಮ್ಮ ಬಜೆಟ್ ಭಾಷಣವನ್ನು ಪ್ರಾರಂಭಿಸಿದರು.
ಮುಂದಿನ 25 ವರ್ಷಗಳ ಕಾರ್ಯಯೋಜನೆಯ ರೂಪುರೇಷೆಗಳ ಮೂಲಸೌಕರ್ಯಗಳಲ್ಲಿ ಆದ್ಯತೆಯೊಂದಿಗೆ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರ ಪ್ರಮುಖ ವಿಭಾಗವನ್ನು ಗಮನದಲ್ಲಿಟ್ಟುಕೊಂಡು ಬಜೆಟ್ ಮಂಡಿಸಿದರು.
69 ಸಾವಿರ ಕೋಟಿ ರೂ.ಗಳ ಆಯವ್ಯಯವನ್ನು ಮಂಡಿಸಿದ ಮನೀಶ್ ಸಿಸೋಡಿಯಾ ಶಿಕ್ಷಣ ಕ್ಷೇತ್ರಕ್ಕೆ 16,377 ಕೋಟಿ ರೂ.ಗಳು ಹಾಗೂ ಆರೋಗ್ಯ ಕ್ಷೇತ್ರಕ್ಕೆ 9,934 ಕೋಟಿ ರೂ.ಗಳ ಹಣವನ್ನು ಮೀಸಲಿಡಿಸಿದೆ ಎಂದು ಮಂಡಿಸಿದರು.
ದೆಹಲಿ ರಾಜ್ಯದ ಇಂದಿನ ಜನಸಂಖ್ಯೆ 2 ಕೋಟಿ ಇದೆ. 2047ರ ಹೊತ್ತಿಗೆ 3.28 ಕೋಟಿ ಜನಸಂಖ್ಯೆಗೆ ತಲುಪುವ ರಾಜ್ಯದ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಮೂಲಸೌಕರ್ಯಗಳನ್ನು ನಿರ್ಮಿಸಲು ಸರಕಾರ ಬದ್ಧವಾಗಿದೆ ಎಂದು ತಿಳಿಸಿದರು.
ದೆಹಲಿಯಲ್ಲಿ ಶಿಕ್ಷಣ ಜನ್ ಆಂದೋಲನ್ (ಸಾಮೂಹಿಕವಾಗಿ) ಆಗಿ ರೂಪುಗೊಳ್ಳಬೇಕೆಂದು ಕರೆ ನೀಡಿದರು. ಇದಕ್ಕಾಗಿಯೇ ಬಜೆಟ್‌ನ ನಾಲ್ಕನೇ ಒಂದು ಭಾಗ ಶಿಕ್ಷಣ ಕ್ಷೇತ್ರಕ್ಕೆ ಮೀಸಲಿಡಲಾಗಿದೆ ಎಂದು ಹೇಳಿದರು.
ಬಾಲ್ಯದ ಶಿಕ್ಷಣವನ್ನು ಮುಖ್ಯವಾಹಿನಿಯ ಭಾಗವಾಹಿಸಲು ನಾವು ಕಾರ್ಯಪ್ರವೃತ್ತರಾಗಿದ್ದೇವೆ. ನರ್ಸರಿಯಿಂದ ಎಂಟನೇ ತರಗತಿಗೆ ಹೊಸ ಪಠ್ಯಕ್ರಮ ಜಾರಿಗೊಳಿಸಲು ಸರಕಾರ ಸಿದ್ಧವಿದ್ದು, ಈ ಕೆಲಸವು ಅಂತಿಮ ಹಂತದಲ್ಲಿದೆ.
ಇದೇ ಮೊದಲ ಬಾರಿಗೆ ಹೊಸದಾದ ಕಾನೂನು ವಿಶ್ವವಿದ್ಯಾಲಯವನ್ನು ಸರಕಾರ ಶೀಘ್ರದಲ್ಲಿಯೇ ಉದ್ಘಾಟಿಸಲಿದೆ ಎಂದು ಹೇಳಿದರು. ಯೂತ್ ಫಾರ್ ಎಜುಕೇಷನ್ ಎಂಬ ಸ್ವಯಂಪ್ರೇರಿತ ಮಾರ್ಗದರ್ಶನ ಆರಂಭಿಸಲು ಯೋಜಿಸಲಾಗಿದೆ. ಇದರಲ್ಲಿ ವಿದ್ಯಾರ್ಥಿಗಳು ಇತರೆ ವಿದ್ಯಾರ್ಥಿಗಳಿಗೆ ಸಹಾಯ ಮಾಡಲಿದ್ದಾರೆ.
ಭಗತ್‌ಸಿಂಗ್ ಮತ್ತು ಬಿ.ಆರ್.ಅಂಬೇಡ್ಕರ್ ಅವರ ಕೊಡುಗೆಗಳನ್ನು ಇಡೀ ವರ್ಷ ಹಮ್ಮಿಕೊಳ್ಳಲಾಗುವುದು. ಇದಕ್ಕಾಗಿ ತಲಾ 10 ಕೋಟಿ ರೂ.ಗಳು ನೀಡಲಾಗಿದೆ. ಸರಕಾರವು ಸಶಸ್ತ್ರ ಪಡೆಗಳ ಪೂರ್ವಸಿದ್ಧತಾ ಅಕಾಡೆಮಿ ತೆರೆಯಲಿದ್ದು, ಮಕ್ಕಳಿಗೆ ತರಬೇತಿ ನೀಡಲಾಗುವುದು.
ಕಳೆದ ಬಾರಿ ಇಡೀ ವಿಶ್ವದಲ್ಲಿ ಹಗಡಿದ ಕೊರೊನಾ ಸಾಂಕ್ರಾಮಿಕ ರೋಗದಿಂದ ರಾಜ್ಯವು ಗಂಭೀರ ಪರಿಣಾಮ ಎದುರಿಸಬೇಕಾಗಬಹುದೆಂದು ಅಂದಾಜಿಸಲಿಲ್ಲ. ಆದರೆ, ಕೋವಿಡ್-19 ಮತ್ತು ನಂತರದಲ್ಲಿ ಜಾರಿಯಾದ ಲಾಕ್‌ಡೌನ್ ನಿಂದಾಗಿ ರಾಜ್ಯದ ಇಡೀ ಆರ್ಥಿಕ ವ್ಯವಹಾರದ ಮೇಲೆ ಗಂಭೀರ ಪರಿಣಾಮ ಬೀರಿತು. ಜನತೆ ತಮ್ಮ ಕರ್ತವ್ಯದ ಕರೆಯನ್ನು ಮೀರಿಹೋದರು. ಜನತೆ ಇತರರೊಂದಿಗೆ ತಮ್ಮ ಪ್ರಮುಖ ಜವಾಬ್ದಾರಿಯನ್ನು ಸಹ ಪೂರೈಸಿದ್ದಾರೆ.
ದೆಹಲಿಯ ಜನತೆ ಸರಕಾರಿ ಆಸ್ಪತ್ರೆಗಳ ಮೂಲಕ ಉಚಿತವಾಗಿ ಕೋವಿಡ್-19 ವ್ಯಾಕ್ಸಿನೇಷನ್ ಕೊಡಲು ಮುಂದುವರೆಸಲಾಗುವುದು. ಇದಕ್ಕಾಗಿ ರೂ. 50 ಕೋಟಿ ಹಣವನ್ನು ವ್ಯಾಕ್ಸಿನೇಷನ್‌ಗಾಗಿ ತೆಗೆದಿಡಲಾಗಿದೆ. ಪ್ರಸ್ತುತ 45 ಸಾವಿರ ಜನರಿಗೆ ಲಸಿಕೆ ಹಾಕುವ ಹಂತದಲ್ಲಿದ್ದು, ಅತಿಶೀಘ್ರದಲ್ಲಿ 60 ಸಾವಿರ ಜನರಿಗೆ ಹೆಚ್ಚಿಸಲು ಕ್ರಮಕೈಗೊಳ್ಳಲಾಗಿದೆ ಎಂದು ಹೇಳಿದರು.
ಮಹಿಳಾ ಮೊಹಲ್ಲಾ ಚಿಕಿತ್ಸಾಲಯ ಪ್ರಾರಂಭಿಸಲು ನಿರ್ಧಿಸಿದ್ದು, ಶೀಘ್ರದಲ್ಲಿ 100 ಕೇಂದ್ರಗಳು ಕಾರ್ಯಾರಂಭ ಮಾಡಲಾಗುವುದು. 69,000 ಕೋಟಿ ರೂ.ಗಳ ಆಯವ್ಯಯಕ್ಕಾಗಿ ಹಣವನ್ನು ಸರಿದೂಗಿಸಲು ರೂ.43,000 ಕೋಟಿ ರೂ.ಗಳ ತೆರಿಗೆ ಸಂಗ್ರಹದ ಗುರಿಯನ್ನು ಈ ಸಾಲಿನಲ್ಲಿ ಅಂದಾಜಿಸಲಾಗಿದೆ.
2020-2021ರ ಆಯವ್ಯಯದಲ್ಲಿ 44,100 ಕೋಟಿ ರೂ.ಗಳ ತೆರಿಗೆ ಸಂಗ್ರಹಕ್ಕೆ ಪ್ರಸ್ತಾಪಿಸಲಾಗುತ್ತು. ಆದರೆ, ಕೋವಿಡ್-19ರ ಪರಿಣಾಮ ಸಾಂಕ್ರಾಮಿಕ ರೋಗದಿಂದಾಗಿ ಉದ್ದೇಶಿತ ಗುರಿಯನ್ನು ತಲುಪಲು ಸಾಧ್ಯವಾಗಲಿಲ್ಲ.
ನಮ್ಮ ರಾಜ್ಯದಲ್ಲಿ ಒಲಿಂಪಿಕ್ಸ್ ಕ್ರೀಡಾಕೂಟವನ್ನು ಆಯೋಜಿಸಬೇಕೆಂದ ದೊಡ್ಡ ಕನಸಿದೆ. ಅದರ ಭಾಗವಾಗಿ ಕ್ರೀಡಾ ಕ್ಷೇತ್ರಕ್ಕೆ ಹೆಚ್ಚಿನ ಮೂಲಸೌಕರ್ಯಗಳನ್ನು ಒದಗಿಸಲು ಸರಕಾರ ಬದ್ಧವಾಗಿದೆ.
75ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ 500 ಧ್ವಜಗಳನ್ನು ಅಳವಡಿಸಲಾಗುವುದು. ಒಂದರಿಂದ ಎರಡು ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಧ್ವಜ ಗೋಚರಿಸುತ್ತದೆ. ನಗರದಾದ್ಯಂತ ಅಳವಡಿಸಲು ಬಜೆಟ್‌ನಲ್ಲಿ 45 ಕೋಟಿ ಹಣ ಮೀಸಲಿಡಲಾಗಿದೆ.
2047ರ ಹೊತ್ತಿಗೆ ದೆಹಲಿ ನಿವಾಸಿಗಳ ತಲಾ ಆದಾಯವನ್ನು ಸಿಂಗಾಪುರ ನಿವಾಸಿಗಳ ತಲಾ ಆದಾಯಕ್ಕೆ ಸಮಾನವಾಗುವಂತೆ ಪ್ರಗತಿಯನ್ನು ಕೈಗೊಳ್ಳಲಾಗುವುದು.
ಅಂಗನವಾಡಿ ಕೇಂದ್ರಗಳನ್ನು ʻಸಹೇಲಿ ಸಮನ್ವಯ್ ಕೇಂದ್ರʼವಾಗಿಯೂ ಬಳಸಲಾಗುವುದು. ಸಣ್ಣ ಉದ್ಯಮ ಪ್ರಾರಂಭಿಸಲು ಬಯಸುವ ಮಹಿಳೆಯರಿಗೆ ಸಹಕಾರಿಯಾಗಲಿದೆ.
ದೆಹಲಿ ವಿಧಾನಸಭೆಯ ಸದನದಲ್ಲಿ ಹಣಕಾಸು ಮಂತ್ರಿ ಮನೀಶ್ ಸಿಸೋಡಿಯಾ ಮಂಡಿಸಿದ ಬಜೆಟ್ ಅಧಿವೇಶನದ ಸಂದರ್ಭದಲ್ಲಿ ಮಖ್ಯಮಂತ್ರಿ ಅರವಿಂದ ಕೇಜ್ರೀವಾಲ್ ಮತ್ತು ಶಾಸಕರು ಹಾಜರಿದ್ದರು.