ಮುಳುಗಿದ ದೆಹಲಿ | ಬಿಜೆಪಿ ರೂಪಿಸಿದ ಸಂಚು ಎಂದ ಎಎಪಿ!

ಬೇರೆ ಕಾಲುವೆಗಳಿದ್ದರೂ ಹರಿಯಾಣದ ಹತ್ನಿಕುಂಡ್ ಬ್ಯಾರೇಜ್‌ನಿಂದ ದೆಹಲಿಯನ್ನು ಮುಳುಗಿಸಲೆಂದೆ ಕಡೆಗೆ ಹೆಚ್ಚುವರಿ ನೀರು ಬಿಡುಗಡೆ ಮಾಲಾಗಿದೆ ಎಂಬ ಆರೋಪ

ದೆಹಲಿ: ಯಮುನಾ ನದಿಯ ಮಟ್ಟ 208.66 ಮೀಟರ್‌ಗಳಷ್ಟು ಏರಿಕೆಯಾಗಿ ದೆಹಲಿಯಲ್ಲಿ ಪ್ರವಾಹ ಉಂಟಾಗಿತ್ತು. ಇದೀಗ ನೀರಿನ ಮಟ್ಟ ಇಳಿಕೆಯಾಗಿದ್ದು, ಆಡಳಿತರೂಢ ಆಮ್ ಆದ್ಮಿ ಪಕ್ಷವು ದೆಹಲಿಯನ್ನು ಮುಳುಗಿಸಲು ಬಿಜೆಪಿ ಸಂಚು ರೂಪಿದೆ ಎಂದು ಆರೋಪಿಸಿದೆ. ಹರಿಯಾಣದ ಹತ್ನಿಕುಂಡ್ ಬ್ಯಾರೇಜ್‌ನಿಂದ ರಾಷ್ಟ್ರ ರಾಜಧಾನಿ ಕಡೆಗೆ ಹೆಚ್ಚುವರಿ ನೀರನ್ನು ಬಿಡುಗಡೆ ಮಾಡಲಾಗಿದೆ ಎಂದು ಹೇಳಿದೆ.

ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ದೆಹಲಿ ನೀರಾವರಿ ಮತ್ತು ಪ್ರವಾಹ ನಿಯಂತ್ರಣ ಸಚಿವ ಸೌರಭ್ ಭಾರದ್ವಾಜ್, ಪ್ರವಾಹ ಪರಿಸ್ಥಿತಿಯು ನಗರವನ್ನು “ಮುಳುಗಿಸುವ” ಪಿತೂರಿಯಾಗಿದೆ ಎಂದು ಹೇಳಿದ್ದಾರೆ. “ದೆಹಲಿಯನ್ನು ಉದ್ದೇಶಪೂರ್ವಕವಾಗಿ ಮುಳುಗಿಸಲಾಗುತ್ತಿದೆ. ಹತ್ನಿಕುಂಡ್ ಬ್ಯಾರೇಜ್‌ನಿಂದ ಹೆಚ್ಚುವರಿ ನೀರನ್ನು ದೆಹಲಿಗೆ ಮಾತ್ರ ಕಳುಹಿಸಲಾಗಿದೆ. ಸುಪ್ರೀಂ ಕೋರ್ಟ್ ಸೇರಿದಂತೆ ದೆಹಲಿಯ ಎಲ್ಲಾ ಪ್ರಮುಖ ಸಂಸ್ಥೆಗಳನ್ನು ಮುಳುಗಿಸುವ ಸಂಚು ಕೂಡ ನಡೆದಿದೆ” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ದೆಹಲಿಯಲ್ಲಿ ಪ್ರವಾಹ ಭೀತಿ | ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಯಮುನಾ ನದಿ

ಬ್ಯಾರೇಜ್‌ನಿಂದ ಹೆಚ್ಚುವರಿ ನೀರನ್ನು ಹರಿಯಾಣದ ಪಶ್ಚಿಮ ಕಾಲುವೆ ಮತ್ತು ಉತ್ತರ ಪ್ರದೇಶದ ಪೂರ್ವ ಕಾಲುವೆಗೆ ಬಿಡುತ್ತಿಲ್ಲ ಎಂದು ಅವರು ಪ್ರತಿಪಾದಿಸಿದ್ದಾರೆ.

ದೆಹಲಿ PWD ಸಚಿವೆ ಅತಿಶಿ ಕೂಡಾ ಸೌರಭ್ ಭಾರದ್ವಾಜ್ ಅವರ ಮಾತುಗಳನ್ನೇ ಮುಂದುವರೆಸಿದ್ದು, “ಯಮುನಾ ನದಿ ನೀರು ಕಡಿಮೆಯಾಗುತ್ತಿದೆ, ಮುಂದಿನ 12 ಗಂಟೆಗಳಲ್ಲಿ ದೆಹಲಿ ಜನರಿಗೆ ಪರಿಹಾರ ಸಿಗಲಿದೆ…ಹತ್ನಿಕುಂಡ್ ಬ್ಯಾರೇಜ್‌ನ ಎಲ್ಲಾ ನೀರನ್ನು ದೆಹಲಿಗೆ ಮಾತ್ರ ಏಕೆ ಬಿಡಲಾಗಿದೆ ಎಂಬುದು ದೊಡ್ಡ ಪ್ರಶ್ನೆಯಾಗಿದೆ. ಅಲ್ಲಿಂದ ಉತ್ತರ ಪ್ರದೇಶ ಮತ್ತು ಹರಿಯಾಣಕ್ಕೆ ಕಾಲುವೆಗಳು ಹೋಗುತ್ತವೆ ಅಲ್ಲಿಗೆ ಒಂದೇ ಒಂದು ಹನಿ ನೀರು ಬಿಡಲಿಲ್ಲ…ಇದಕ್ಕೆ ಹರಿಯಾಣ ಉತ್ತರ ನೀಡಬೇಕು. ದೆಹಲಿಯ ಪ್ರವಾಹ ಪರಿಸ್ಥಿತಿಯನ್ನು ತಪ್ಪಿಸಬಹುದಾಗಿತ್ತೆ?” ಅವರು ಸುದ್ದಿ ಸಂಸ್ಥೆ ANI ಗೆ ತಿಳಿಸಿದ್ದಾರೆ.

ಎಎಪಿ ನಾಯಕ ಸೋಮನಾಥ್ ಭಾರ್ತಿ ಕೂಡ ದೆಹಲಿ ಪ್ರವಾಹವನ್ನು “ಬಿಜೆಪಿ ನಿರ್ಮಿತ ದುರಂತ” ಎಂದು ಕರೆದಿದ್ದಾರೆ. “ಉತ್ತರ ಪ್ರದೇಶ ಮತ್ತು ಹರಿಯಾಣದ ಪೂರ್ವ ಮತ್ತು ಪಶ್ಚಿಮ ಕಾಲುವೆಗಳು ಸಂಪೂರ್ಣವಾಗಿ ಒಣಗಿವೆ. ನೀರಿನ ಹರಿವನ್ನು ಉದ್ದೇಶಪೂರ್ವಕವಾಗಿ ದೆಹಲಿ ಕಡೆಗೆ ತಿರುಗಿಸಲಾಗಿದೆ. ದೆಹಲಿಯ ಪ್ರವಾಹವು ಬಿಜೆಪಿ ನಿರ್ಮಿತ ದುರಂತ” ಎಂದು ಅವರು ಆರೋಪಿಸಿದ್ದಾರೆ.

ಇದನ್ನೂ ಓದಿ: ಸತ್ಯಪಾಲ್ ಮಲೀಕ್ ಸ್ವತಃ ಠಾಣೆಗೆ ಬಂದಿದ್ದರು, ವಶಕ್ಕೆ ಪಡೆದಿದ್ದೆವು ಎಂಬುದು ತಪ್ಪಾದ ಮಾಹಿತಿ : ದೆಹಲಿ ಪೊಲೀಸರು

ಎಎಪಿ ನಾಯಕರ ಈ ಹೇಳಿಕೆಯನ್ನು ಬಿಜೆಪಿ ವಿರೋಧಿಸಿದ್ದು, ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ಮಾಡಿದಂತೆ, ಎಎಪಿ ಸರ್ಕಾರವು “ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುತ್ತಿದೆ” ಮತ್ತು ನಗರದಲ್ಲಿನ ಪ್ರವಾಹದಂತಹ ಪರಿಸ್ಥಿತಿಗೆ ಇತರ ರಾಜ್ಯಗಳನ್ನು ದೂಷಿಸುತ್ತಿದೆ ಎಂದು ಆರೋಪಿಸಿದೆ. ನಗರದ ಹೆಚ್ಚಿನ ಭಾಗಗಳು ಮುಳುಗಡೆಯಾಗಲು ಮೂಲ ಕಾರಣ ಅಕ್ರಮ ಆಸ್ತಿಗಳು ಮತ್ತು ಪ್ರವಾಹ ಪ್ರದೇಶಗಳಲ್ಲಿ ನಿರ್ಮಾಣವಾಗಿದೆ ಎಂದು ಬಿಜೆಪಿ ಹೇಳಿದೆ.

Donate Janashakthi Media

Leave a Reply

Your email address will not be published. Required fields are marked *