ಅಶ್ವಿನಿ, ಹೊಸಪೇಟೆ
ಬೆಂಗಳೂರು : ಈ ಬಾರಿ ಶಾಲಾ ವಿದ್ಯಾರ್ಥಿಗಳು ಶೂ ಮತ್ತು ಸಾಕ್ಸ್ ವಿತರಣೆ ತಡವಾಗಲಿದೆ. ಸರಕಾರಿ ಶಾಲೆಗಳು ಮೇ 31ರಿಂದ ಶಾಲೆಗಳು ಆರಂಭವಾಗಿದ್ದು, ಈ ಸಮಯದಲ್ಲೇ ‘ಸಮವಸ್ತ್ರ’, ‘ಪಠ್ಯಪುಸ್ತಕ’ ವಿದ್ಯಾರ್ಥಿಗಳ ಕೈಸೇರಿದೆ. ಇನ್ನು ಬಹಳ ಮುಖ್ಯವಾಗಿ ‘ಶೂ ಮತ್ತು ಸಾಕ್ಸ್, ಸೈಕಲ್ ನೀಡಬೇಕಾಗಿದೆ. ಆದರೆ, ಕಳೆದ ಮೂರು ವರ್ಷಗಳಿಂದ ಸೈಕಲ್ ನೀಡಿಲ್ಲ. ಈ ವರ್ಷ ಕೂಡ ನೀಡುವ ‘ಗ್ಯಾರಂಟಿ’ ಇಲ್ಲ ಎಂಬ ಮಾಹಿತಿ ಲಭ್ಯವಾಗಿದೆ.
2023-24ನೇ ಸಾಲಿನಲ್ಲಿ ಶೂ ಮತ್ತು ಸಾಕ್ಸ್ಗಾಗಿ 125 ಕೋಟಿ ರೂ.ಗಳನ್ನು ಸರಕಾರ ಬಿಡುಗಡೆ ಮಾಡಿದೆ. ಇದು ಎಸ್ಡಿಎಂಸಿ ಅಧ್ಯಕ್ಷರ ಕೈ ಸೇರಲು ಕನಿಷ್ಠ ಒಂದು ತಿಂಗಳು ಬೇಕಿದೆ. ನಂತರ ಖರೀದಿ ಮಾಡಿ ವಿದ್ಯಾರ್ಥಿಗಳಿಗೆ ನೀಡುವಷ್ಟರಲ್ಲಿ ಮೂರು ತಿಂಗಳು ಕಳೆಯಲಿದೆ.
2006-2007 ರಂದು ಉಚಿತ ಬೈಸಿಕಲ್ ಸೌಲಭ್ಯ ಯೋಜನೆಯನ್ನು ಜಾರಿಗೊಳಿಸಲಾಯಿತು. ಈ ಯೋಜನೆಯಿಂದಾಗಿ ಬಡವಿದ್ಯಾರ್ಥಿಗಳಿಗೆ ಹಾಗೂ ರಾಜ್ಯದಲ್ಲಿ ಸಣ್ಣ ಪುಟ್ಟ ಗ್ರಾಮದ, ಗುಡ್ಡಗಾಡು ಪ್ರದೇಶಗಳಲ್ಲಿ ಸರಿಯಾದ ಸಾರಿಗೆ ಹಾಗೂ ವಾಹನ ವ್ಯವಸ್ಥೆಯಿಲ್ಲದ ಪ್ರದೇಶದ ಮಕ್ಕಳಿಗೆ ಸಾಕಷ್ಟು ಅನೂಕುಲಾವಾಗಿತ್ತು. ಸಮಾನ್ಯವಾಗಿ ವಿದ್ಯಾರ್ಥಿಗಳು ಶಿಕ್ಷಣ ಪಡೆಯಲು ನಗರ ಹಾಗೂ ಪಟ್ಟಣದಂತಹ ಪ್ರದೇಶಕ್ಕೆ ಹೋಗಬೇಕಾದ ಅನಿರ್ವಾಯತೆ ಇದೆ. ಬಹುತೇಕ ಗ್ರಾಮಗಳಿಗೆ ಸಾರಿಗೆ ಸೌಲಭ್ಯವೇ ಇಲ್ಲ. ಇಂತಹ ಪರಿಸ್ಥಿತಿಯಲ್ಲಿ ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ತೆರಳಲು ಸಾಕಷ್ಟು ತೊಂದರೆಯನ್ನು ಎದುರಿಸುತ್ತಿದ್ದರು.
ಸರ್ಕಾರ ಉಚಿತ ಸೈಕಲ್ ಯೋಜನೆ ಜಾರಿಗೆ ತಂದ ಮೇಲೆ ಮಕ್ಕಳ ಸಮಸ್ಯೆಗೆ ಪರಿಹಾರ ದೊರಕಿದಾಂಗಿತ್ತು. ಶಾಲಾ ಕಾಲೇಜುಗಳಿಗೆ ವಿದ್ಯಾರ್ಥಿಗಳು ನಿತ್ಯ 6-7ಕಿಮೀ ನಡೆದುಕೊಂಡು ಶಾಲೆಗೆ ಹೋಗಬೇಕಾಗೆದೆ. ಆದರೆ ಬಹುತೇಕ ವಿದ್ಯಾರ್ಥಿಗಳು ಕಷ್ಟವೇ ಬೇಡವೆಂದು ಶಾಲೆಗಳತ್ತ ಮುಖ ಮಾಡುತ್ತಿಲ್ಲ.ಸರ್ಕಾರ ಉಚಿತ ಬೈಸಿಕಲ್ ಸೌಲಭ್ಯ ಯೋಜನೆ ಜಾರಿಗೆ ತಂದಿತೋ ವಿದ್ಯಾರ್ಥಿಗಳಿಗೆ ಸಾಕಷ್ಟು ಅನುಕೂಲಾಯಿತು. ಒಟ್ಟಿನಲ್ಲಿ ಒಬ್ಬ ವಿದ್ಯಾರ್ಥಿಯ ಕಲಿಕಾ ಅವಧಿ ಮುಗಿದ ಬಳಿಕ ಅವರ ಕುಟುಂಬದ ಇನ್ನೂಳಿದ ವಿದ್ಯಾರ್ಥಿಗಳಿಗೆ ಅದು ಸದುಪಯೋಗವಾಗಿತ್ತು. ಜೊತೆಗೆ ಮಕ್ಕಳ ಹಾಜರಾತಿ ಹಾಗೂ ಶಾಲೆಗಳಿಗೆ ಬರುವವರ ಸಂಖ್ಯೆ ಹೆಚ್ಚಾಯಿತು ಎನ್ನಬಹುದು. ಈ ಯೋಜನೆ ಶೈಕ್ಷಣಿಕ ಕ್ಷೇತ್ರದಲ್ಲಿ ಮಾತ್ರವಲ್ಲದೆ ವಿದ್ಯಾರ್ಥಿಗಳ ಜೀವನಕ್ಕೆ ಬಹುದೊಡ್ಡ ಆಸರೆಯಾಗಿತ್ತು. ಆದರೆ, ಕಳೆದ ಮೂರು ವರ್ಷಗಳಿಂದ ಸೈಕಲ್ ನೀಡಿಲ್ಲ. ಈ ವರ್ಷ ಕೂಡ ನೀಡುವ ‘ಗ್ಯಾರಂಟಿ’ ಇಲ್ಲ.
ಶಾಲಾ ಕಾಲೇಜುಗಳಿಗೆ ದಿನನಿತ್ಯ 6 ರಿಂದ 7 ಕಿಮೀ ನಡೆದುಕೊಂಡು ಹೋಗಬೇಕುತ್ತದೆ. ತಡವಾಗಿ ತರಗತಿಗೆ ಹಾಜರಾಗ ಬೇಕಾಗುತ್ತಿದೆ. ಇದರಿಂದ ನಮಗೆಲ್ಲಾ ಕಲಿಕೆಗೆ ಸಾಕಷ್ಟು ತೊಂದರೆಯಾಗುತ್ತಿದೆ ಎಂದು ವಿದ್ಯಾರ್ಥಿಗಳು ಹೇಳುತ್ತಿದಾರೆ. ಕೂಡಲೇ ಸರ್ಕಾರ ಸೈಕಲ್ಗಳನ್ನು ವಿತರಿಸಲು ಮುಂದಾಗಬೇಕು ಎಂದು ಪೋಷಕರು ಆಗ್ರಹ ಮಾಡುತ್ತಿದ್ದಾರೆ.
ಸರ್ಕಾರಕ್ಕೆ ಉಚಿತ ಬೈಸಿಕಲ್ ಯೋಜನೆ ಆರಂಭಿಸಲು ಪ್ರಸಕ್ತ ಶೈಕ್ಷಣಿಕ ವರ್ಷದ ಆರಂಭದಿಂದಲೂ ಶಾಲಭಿವೃದ್ದಿ ಹಾಗೂ ಮೇಲುಸ್ತುವಾರಿ ಸಮಿತಿಗಳ ವೇದಿಕೆ, ಕರ್ನಾಟಕ ಸರ್ಕಾರ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಸೇರಿದಂತೆ ಅನೇಕ ಸಂಘ ಸಂಸ್ಥೆಗಳು ಮನವಿ ಸಲ್ಲಿಸಿವೆ. ಆದ್ರೆ ಸರ್ಕಾರ ಮಾತ್ರ ಇದಕ್ಕೆ ಸ್ಪಂದಿಸಿಲ್ಲ.
ಇದನ್ನೂ ಓದಿ:ಶೈಕ್ಷಣಿಕ ಸಮಸ್ಯೆಗಳ ಪರಿಹಾರಕ್ಕಾಗಿ ಒತ್ತಾಯಿಸಿ ಶಿಕ್ಷಣ ಸಚಿವರಿಗೆ ಮನವಿ
ಶೂ–ಸಾಕ್ಸ್ಮಕ್ಕಳಿಗೆ ನೀಡುವದಕ್ಕಿ ವಿಳಂಬ:
ಕಾಂಗ್ರೆಸ್ ಸರಕಾರ 2017-18ನೇ ರಂದು ಅಂದು ಮಕ್ಕಳಿಗೆಂದು ಶೂ ಮತ್ತು ಸಾಕ್ಸ್ ನೀಡುವ ಯೋಜನೆಯನ್ನು ಜಾರಿಗೆ ತಂದಿತು. ಇದಕ್ಕೆ ಪ್ರತಿ ವಿದ್ಯಾರ್ಥಿಗಳ ಪಾದ ಅಳತೆ ಪಡೆದು ಸರಕಾರ ನೇರವಾಗಿ ಖರೀದಿ ಮಾಡಿ ವಿದ್ಯರ್ಥಿಗಳಿಗೆ ವಿತರಣೆ ಮಾಡಲು ಸಾಧ್ಯವಾಗದೇ ಇರುವುದರಿಂದ ಶಾಲೆಯಲ್ಲಿರುವ ಎಸ್ಡಿಎಂಸಿಗೆ ಹಣ ಬಿಡುಗಡೆ ಮಾಡಿ ವಿದ್ಯಾರ್ಥಿಗಳಿಗೆ ಖರೀದಿಸಿ ನೀಡಲು ಸೂಚಿಸಿತ್ತು. ಮಕ್ಕಳಿಗೆ ನೀಡಯವ ಶೂ ಹಾಗೂ ಸಾಕ್ಸ್ಗಳ ಗುಣಮಟ್ಟ ಕಾಯ್ದುಕೊಳ್ಳುವುದಕ್ಕಾಗಿ ಕೆಲವು ಷರತ್ತುಗಳನ್ನು ವಿಧಿಸಿದೆ.
125 ಕೋಟಿ ರೂ.ಗಳನ್ನು ಸರಕಾರ 2023-24ನೇ ಸಾಲಿನಲ್ಲಿ ಶೂ ಮತ್ತು ಸಾಕ್ಸ್ಗಾಗಿ ಬಿಡುಗಡೆ ಮಾಡಿದೆ ಇದು ಎಸ್ಡಿಎಂಸಿ ಅಧ್ಯಕ್ಷರ ಕೈ ಸೇರಬೇಕಾದಲ್ಲಿ ಕನಿಷ್ಠ ಒಂದು ತಿಂಗಳು ಬೇಕಿದೆ. ಆನಂತರ ಖರೀದಿ ಮಾಡಿ ವಿದ್ಯಾರ್ಥಿಗಳಿಗೆ ಕೈಸೇರಬೇಕೆಂದರೆ ಮತ್ತೊಂದು ತಿಂಗಳ ಅವಶ್ಯಕತೆ ಇದೆ. ಅಲ್ಲಿಯವರೆಗೂ ವಿದ್ಯಾರ್ಥಿಗಳು ಕಳೆದ ವರ್ಷದ ಶೂ ಧರಿಸಿ ಅಥವಾ ಬರಿಗಾಲಿನಲ್ಲೇ ಶಾಲೆಗೆ ಹೋಗಬೇಕಾದ ಪರಿಸ್ಥಿತಿ ಎದುರಾಗಿದೆ. 125 ಕೋಟಿ ರೂ.ಗಳನ್ನು ಸರಕಾರ ಶೂ ಮತ್ತು ಸಾಕ್ಸ್ಗಾಗಿ ಬಿಡುಗಡೆ ಮಾಡಿದೆ. ಶೂ ಮತ್ತು ಸಾಕ್ಸ್ ನೀಡುವುದಕ್ಕೆ ರಾಜ್ಯ ಸರಕಾರ 1 ರಿಂದ 5ನೇ ತರಗತಿ ಮಕ್ಕಳಿಗೆ ಒಂದು ಜೊತೆ ಶೂಗೆ 265 ರೂ., 6 ರಿಂದ 8ನೇ ತರಗತಿ ಮಕ್ಕಳಿಗೆ 295 ರೂ., 9 ಮತ್ತು 10ನೇ ತರಗತಿ ಮಕ್ಕಳಿಗೆ 325 ರೂ. ನಿಗದಿಪಡಿಸಿದೆ. ಅಲ್ಲದೆ, ಇದರ ಜತೆಗೆ ಒಬ್ಬ ವಿದ್ಯಾರ್ಥಿಗೆ ಎರಡು ಜೊತೆ ಸಾಕ್ಸ್ಗಾಗಿ ಒಟ್ಟಾರೆ 125 ಕೋಟಿ ರೂ.ಗಳನ್ನು ಇತ್ತೀಚೆಗೆ ಬಿಡುಗಡೆ ಮಾಡಿದೆ. 45.45 ಲಕ್ಷ ವಿದ್ಯಾರ್ಥಿಗಳು ಇದರ ಫಲಾನುಭವಿಗಳಾಗಿದ್ದಾರೆ.
ಶಾಲಾ ಮಕ್ಕಧಿಳಿಗೆ ಶೂ ಮತ್ತು ಸಾಕ್ಸ್ ನೀಡಲು 125 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ಆದರೆ, ಪ್ರಕ್ರಿಯೆ ಬಾಕಿ ಇದ್ದು. ಶಾಲಾ ಶಿಕ್ಷಣ ಇಲಾಖೆ ಆಯುಕ್ತ, ಡಾ.ಆರ್.ವಿಶಾಲ್ ರವರು ಮುಂದಿನ ದಿನಗಳಲ್ಲಿ ಎಲ್ಲ ಜಿಲ್ಲೆಗಳ ಅಧಿಕಾರಿಗಳ ಜತೆ ವಿಡಿಯೋ ಕಾನ್ಫರೆನ್ಸ್ ನಡೆಸಿ ಪ್ರಕ್ರಿಯೆ ಮುಗಿಸಲಾಗುವುದು. ಆನಂತರ ಎಸ್ಡಿಎಂಸಿಗೆ ಹಣ ಬಿಡುಗಡೆ ಮಾಡಿ ಖರೀದಿಗೆ ಸೂಚಿಸಲಾಗುವುದು ಎಂದು ತಿಳಿಸಿದ್ದಾರೆ.