ಎರ್ನಾಕುಲಂ: ಕಟ್ಟುನಿಟ್ಟಾದ ಪಕ್ಷಾಂತರ ವಿರೋಧಿ ಕಾನೂನು ಮತ್ತು ಪಕ್ಷಾಂತರಿಗಳಿಗೆ ಆರ್ಥಿಕ ದಂಡವನ್ನು ವಿಧಿಸುವುದರಿಂದ ಮಾತ್ರ ರಾಜಕೀಯ ಪಕ್ಷಾಂತರದಂತಹ ಭ್ರಷ್ಟ ಪ್ರಕ್ರಿಯೆಗಳನ್ನು ಇಲ್ಲದಾಗಿಸಲು ಸಾಧ್ಯ ಎಂದು ಕೇರಳ ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಪಕ್ಷಾಂತರದಂತಹ ಪ್ರಕ್ರಿಯೆಯು ಪ್ರಜಾಪ್ರಭುತ್ವಕ್ಕೆ ಶಾಪ ಎಂದು ಹೇಳಿದ ನ್ಯಾಯಮೂರ್ತಿ ಬೆಚು ಕುರಿಯನ್ ಥಾಮಸ್, ಪ್ರಸ್ತುತ ಪಕ್ಷಾಂತರ ವಿರೋಧಿ ಕಾನೂನುಗಳು ಇದನ್ನು ನಿಗ್ರಹಿಸುವಲ್ಲಿ ಪರಿಣಾಮಕಾರಿಯಾಗಿಲ್ಲ ಎಂದು ಒತ್ತಿ ಹೇಳಿದ್ದಾರೆ.
“ರಾಜಕೀಯ ಪಕ್ಷಾಂತರದ ನಡವಳಿಕೆಯು ಅಭ್ಯರ್ಥಿಯು ಚುನಾವಣೆಯಲ್ಲಿ ಸ್ಪರ್ಧಿಸಿದ ಪಕ್ಷಕ್ಕೆ ಮಾತ್ರವಲ್ಲದೆ ಅಭ್ಯರ್ಥಿಯನ್ನು ಆಯ್ಕೆ ಮಾಡಿದ ಜನರ ಇಚ್ಛೆಗೆ ಮಾಡುವ ದ್ರೋಹವಾಗಿದೆ. ಚುನಾವಣೆಯ ನಂತರ ಬದಲಾದ ಪಕ್ಷಗಳ ಹೊರತಾಗಿಯೂ ತಾಂತ್ರಿಕ ಅಂಶಗಳ ಮೇಲೆ ಪಕ್ಷಾಂತರ ವಿರೋಧಿ ಕಾನೂನಿನ ದುಷ್ಟತನದಿಂದ ಹೊರಬರುವುದು, ಜಾರಿಯಲ್ಲಿರುವ ಕಾನೂನಿನ ದಕ್ಷತೆಯನ್ನು ಕುಗ್ಗಿಸುತ್ತದೆ” ಎಂದು ಕೇರಳ ಹೈಕೋರ್ಟ್ ಹೇಳಿದೆ.
ಇದನ್ನೂ ಓದಿ: ಬೆಂಗಳೂರಿನ ಟೌನ್ ಹಾಲ್ ಬಳಿ ಪ್ರತಿಭಟನೆಗೆ ಅವಕಾಶ – ಸಿಎಂ ಸಿದ್ದರಾಮಯ್ಯ ಭರವಸೆ
“ಇಂತಹ ಪ್ರಯತ್ನಗಳು ಪ್ರಜಾಪ್ರಭುತ್ವಕ್ಕೆ ಅಪಾಯ ತಂದೊಡ್ಡುತ್ತವೆ. ಪಕ್ಷಾಂತರ ವಿರೋಧಿ ಕಾನೂನಿನಿಂದ ಹೊರಬರಲು ಪಕ್ಷಾಂತರಿಗಳು ಅಳವಡಿಸಿಕೊಂಡಿರುವ ಜಾಣ್ಮೆಯ ವಿಧಾನಗಳ ಜೊತೆಗೆ ಕಠಿಣವಾಗಿ ವ್ಯವಹರಿಸಬೇಕು. ಇಲ್ಲದಿದ್ದರೆ, ಕಾನೂನಿನ ಉದ್ದೇಶವೇ ನಾಶವಾಗಬಹುದು” ಎಂದು ಕೇರಳ ಹೈಕೋರ್ಟ್ ನ್ಯಾಯಮೂರ್ತಿ ಥಾಮಸ್ ಹೇಳಿದ್ದಾರೆ.
“ಇಡೀ ಸನ್ನಿವೇಶವನ್ನು ಪರಿಗಣಿಸಿ, ಪಕ್ಷಾಂತರದ ಕೃತ್ಯಗಳಿಗೆ ಕಠಿಣವಾದ ಆರ್ಥಿಕ ದಂಡವನ್ನು ಸೇರಿಸುವ ಬಗ್ಗೆ ಯೋಚಿಸುವ ಸಮಯ ಬಂದಿದೆ ಎಂಬುವುದು ಈ ನ್ಯಾಯಾಲಯದ ಆಶಯವಾಗಿದೆ. ಪಕ್ಷಾಂತರಿಯು ಹಣ ನಷ್ಟಕ್ಕೆ ಒಳಗಾಗದ ಹೊರತು, ಪಕ್ಷಾಂತರ ವಿರೋಧಿ ಕಾನೂನಿನ ಮೂಲಕ ಪರಿಹಾರವನ್ನು ಹುಡುಕುವ ದುಷ್ಟ ಕೃತ್ಯಗಳು ಮುಂದುವರಿಯುತ್ತವೆ” ಎಂದು ನ್ಯಾಯಾಲಯ ಹೇಳಿದೆ.
ಆದರೆ, ಇದು ಶಾಸಕಾಂಗದ ವಿಷಯವಾಗಿರುವುದರಿಂದ, ಶಾಸಕಾಂಗವು ಈ ಬಗ್ಗೆ ತನ್ನ ಪರಿಗಣನೆಯನ್ನು ಶ್ರದ್ಧೆಯಿಂದ ಮಾಡಬೇಕು ಎಂದು ಈ ನ್ಯಾಯಾಲಯವು ಉತ್ಕಟವಾಗಿ ಆಶಿಸುತ್ತದೆ ಎಂದು ನ್ಯಾಯಮೂರ್ತಿ ಥಾಮಸ್ ಹೇಳಿದ್ದಾರೆ.
2020ರಲ್ಲಿ ಕೌನ್ಸಿಲ್‌ಗೆ ಚುನಾಯಿತರಾದ ತೊಡುಪುಳ ಮುನ್ಸಿಪಲ್ ಕೌನ್ಸಿಲ್‌ನ ಸದಸ್ಯ ಮ್ಯಾಥ್ಯೂ ಜೋಸೆಫ್ ಅವರು ತಾನು ಸ್ಪರ್ಧಿಸಿದ್ದ ಪಕ್ಷವನ್ನು ಬದಲಿಸಿದಕ್ಕೆ ಅವರನ್ನು ಅನರ್ಹಗೊಳಿಸಲು ನಿರಾಕರಿಸಿದ ಕೇರಳ ರಾಜ್ಯ ಚುನಾವಣಾ ಆಯೋಗದ ಆದೇಶವನ್ನು ಪ್ರಶ್ನಿಸಿ ಎರಡು ಅರ್ಜಿಗಳನ್ನು ಪರಿಗಣಿಸುವಾಗ ನ್ಯಾಯಾಲಯವು ಈ ಸೂಚನೆಗಳನ್ನು ನೀಡಿದೆ.
ವಿಡಿಯೊ ನೋಡಿ: ಕಾರ್ನಾಡ್ ನೆನಪು : ಕಾರ್ನಾಡ್ ನಾಟಕಗಳಲ್ಲಿ ʻಪೌರಾಣಿಕ ವಸ್ತುʼ – ಡಾ.ಎಚ್, ಎಲ್, ಪುಷ್ಪಾರವರ ಮಾತುಗಳು