ಕೊಪ್ಪಳ: ದೇವದಾಸಿ ಮಹಿಳೆಯರಿಗೆ ಮೂರು ತಿಂಗಳಿಗೊಮ್ಮೆ ಮಾಶಾಸನ ಬರುತ್ತಿದ್ದು, ಇದರಿಂದ ದಿನನಿತ್ಯದ ಖರ್ಚುಗಳಿಗೆ, ಮನೆಯ ಜವಾಬ್ದಾರಿ ನಿರ್ವಹಿಸಲು ಮತ್ತು ಆರೋಗ್ಯ ಮತ್ತು ಮಕ್ಕಳ ಶಿಕ್ಷಣಕ್ಕೆ ತೊಂದರೆಯಾಗುತ್ತಿದ್ದೆ ಹಾಗಾಗಿ ಈಗ ನೀಡಲಾಗುತ್ತಿರುವ ಮಾಶಾಸನವನ್ನು ಹೆಚ್ಚಳ ಮಾಡಬೇಕು ಹಾಗೂ ಪ್ರತಿತಿಂಗಳು ವಿತರಿಸಬೇಕೆಂದು ದೇವದಾಸಿ ವಿಮೋಚನಾ ವೇದಿಕೆ ವತಿಯಿಂದ ಪುನರ್ವಸತಿ ಯೋಜನಾಧಿಕಾರಿ ಕಛೇರಿ ಮುಂಭಾಗ ಪ್ರತಿಭಟನೆ ನಡೆಸಿದರು.
ಸದ್ಯ ನೀಡಲಾಗುತ್ತಿರುವ ಮಾಶಾಸನ ರೂ.1500/- ಸಾಕಾಗುತ್ತಿಲ್ಲ. ವಿಪರೀತವಾಗಿ ಏರುತ್ತಿರುವ ಬೆಲೆಗಳಿಂದಾ ಯಾವುದೇ ಅಗತ್ಯದ ವಸ್ತುಗಳನ್ನು ಖರೀದಿಸುವಲ್ಲಿ ಕಷ್ಟವಾಗುತ್ತಿದೆ. ದಿನನಿತ್ಯದ ಖರ್ಚಿನ ಜೊತೆ ಮಕ್ಕಳ ಶಿಕ್ಷಣ, ಅನಾರೋಗ್ಯ, ಇನ್ನು ಮುಂತಾದ ಸಮಸ್ಯೆಗಳೊಂದಿಗೆ ಜೀವಿಸಬೇಕಾದ ಪರಿಸ್ಥಿತಿ ಎದುರಾಗಿದೆ. ಜೀವನೋಪಾಯಕ್ಕೆ ಸಂಬಂಧಪಟ್ಟಂತೆ ಹಲವು ಮನೆಗಳಲ್ಲಿ ದುಡಿಯುವವರು ಯಾರೂ ಇಲ್ಲದೇ ಇರುವುದು ಸಹ ಮತ್ತಷ್ಟು ಸಮಸ್ಯೆಯನ್ನು ತಂದೊಡ್ಡಿದೆ.
ಒಂದೆಡೆ ನಿರುದ್ಯೋಗದ ಸಮಸ್ಯೆಯಾಗಿದ್ದರೆ, ಮತ್ತೊಂದೆಡೆ ನರೇಗಾ ಕೆಲಸ ಸರಿಯಾಗಿ ಸಿಗದೇ ಇರುವುದರಿಂದ, ಸಾಕಷ್ಟು ಮಹಿಳೆಯರು ಮಾಶಾಸನವನ್ನೇ ಅವಲಂಬಿತವಾಗಿದ್ದಾರೆ. ಪ್ರಾರಂಭದಲ್ಲಿ ರೂ.400/- ಇದ್ದ ಮಾಶಾಸನ ಸಂಘಟನೆಯ ಹೋರಾಟದ ಮೇರೆಗೆ ರೂ.1000 ಕ್ಕೆ ಹೆಚ್ಚಿಸಲಾಯಿತು. ನಂತರ ಮತ್ತಷ್ಟು ತೀವ್ರವಾದ ಹೋರಾಟ ಹಮ್ಮಿಕೊಳ್ಳುವ ಮೂಲಕ ರೂ.1500ಕ್ಕೆ ಹೆಚ್ಚಿಸಿಕೊಳ್ಳಲು ಸಾಧ್ಯವಾಗಿದೆ. ಈ ಮೊತ್ತದಲ್ಲಿ ಇಡೀ ತಿಂಗಳು ಜೀವನ ನಿರ್ವಹಣೆ ಕಷ್ಟಕರವಾಗಿದೆ ಎಂದು ಪ್ರತಿಭಟನಾಕಾರರು ತಮ್ಮ ಅಳಲು ತೋಡಿಕೊಂಡರು.
ಪ್ರಸ್ತುತ ಬೆಲೆ ಏರಿಕೆ, ನಿರುದ್ಯೋಗ, ದಿನನಿತ್ಯ ಸರಿಯಾಗಿ ಕೂಲಿ ಸಿಗದೇ ಇರುವುದು ಮತ್ತು ನಮ್ಮ ಸಮಸ್ಯೆಗಳನ್ನು ಗುರುತಿಸಿ ಮಾಸಾಶನ ಮೊತ್ತವನ್ನು ಕನಿಷ್ಟ ರೂ.6000ಕ ನೀಡಬೇಕು. ಮತ್ತು ಪ್ರತಿ ತಿಂಗಳ 5ನೇ ತಾರೀಖಿನೊಳಗೆ ಖಾತೆಗೆ ಜಮೆ ಮಾಡಬೇಕೆಂದು ದೇವದಾಸಿ ವಿಮೋಚನಾ ವೇದಿಕೆ ಆಗ್ರಹಿಸಿದೆ.
1993-94 ಮತ್ತು 2010-11ರ ಸಮೀಕ್ಷೆ ಪ್ರಕಾರ ಕರ್ನಾಟಕದಲ್ಲಿ ಒಟ್ಟು 46,660 ದೇವದಾಸಿಯರು ಇದ್ದಾರೆ. ಕೊಪ್ಪಳ ಜಿಲ್ಲೆಯಲ್ಲಿ 6035 ದೇವದಾಸಿಯರಿದ್ದಾರೆ. ಆದರೆ 2925 ದೇವದಾಸಿಯರಿಗೆ ಮಾತ್ರ ಪುನರ್ವಸತಿ ಯೋಜನೆ ಮತ್ತು ಮಾಸಾಶನ ಬರುತ್ತಿದೆ ಉಳಿದವರಿಗೆ ಹಲವು ಕಾರಣಗಳಿಂದ ಯಾವುದೇ ಯೋಜನೆಗಳು ಸಿಕ್ಕಿಲ್ಲ 2011 ನಂತರವು ಮತ್ತಷ್ಟು ಮಂದಿ ದೇವದಾಸಿಯರಾಗಿ ಈ ಪದ್ದತಿಗೆ ಒಳಗಾಗಿದ್ದಾರೆ ಅವರಿಗೂ ಸಹ ಜೀವನೋಪಾಯಕ್ಕಾಗಿ ಈ ಸೌಲಭ್ಯಗಳನ್ನು ಕಲ್ಪಸಿಬೇಕೆಂದು ಜಿಲ್ಲಾ ದೇವದಾಸಿ ಪುನರ್ವಸತಿ ಯೋಜನೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಸೌಭಾಗ್ಯ, ಶಶಿಕಲಾ, ಸ್ನೇಹಾ, ಶರಣಪ್ಪ ಓಜನಹಳ್ಳಿ, ಕೆ.ಎಸ್.ಮೈಲಾರಪ್ಪ, ರೂಪಾಂತರ ವೇದಿಕೆಯ ಅಸ್ಮಾ ಸೇರಿದಂತೆ ಅನೇಕರಿದ್ದರು.
ಧನ್ಯವಾದಗಳು ತಮಗೆ ಇಂತಹ ಮೀಡಿಯಾಗಳು ಹೆಚ್ಚಿನ ರೀತಿಯಲ್ಲಿ ಸುದ್ದಿಯನ್ನು ಹೊರಡಿಸುವಲ್ಲಿ
ನಿಮ್ಮ ಸಹಾಯ ನಮಗೆ ಇನ್ನು ಮುಂದೆ ಈಗೆ ಇರಲಿ
ಎ oದು ಕೇಳಿಕೆಳ್ಳುತ್ತೇನೆ