ನಾಗರಾಜ ನಂಜುಂಡಯ್ಯ
ಅಂಬೇಡ್ಕರ್ ಅವರನ್ನು ಸಂವಿಧಾನ ಶಿಲ್ಪಿ, ಸಮಾಜ ಸುಧಾರಕ ಮತ್ತು ನ್ಯಾಯಶಾಸ್ತ್ರಜ್ಞ, ಅರ್ಥಶಾಸ್ತ್ರಜ್ಞ ಎಂದು ಅಷ್ಡಕ್ಕೆ ಸೀಮಿತಗೊಳಿಸಲಾಗಿದೆ. ಅವರ ವೈಚಾರಿಕತೆಯ ಚಿಂತನೆ ಮತ್ತು ಸಾಮಾಜಿಕ ಮತ್ತು ಕ್ರಾಂತಿಕಾರಿ ಬರಹಗಳು, ಜಾತಿ ವ್ಯವಸ್ಥೆಗೆ ಮೂಲ ಕಾರಣವಾಗಿರುವ, ಮನುಸ್ಮೃತಿ ಯ ದಹನದ ಚಳುವಳಿ, ಮಹಾಡ್ ಕೆರೆಯ ನೀರಿನ ಹೋರಾಟ, ಇಂತಹ ಹಲವು ಪ್ರಮುಖ ರಾಜಕೀಯ ಬಂಡಾಯ ಹೋರಾಟಗಳ ವ್ಯಕ್ತಿತ್ವವನ್ನು ಉದ್ದೇಶಪೂರ್ವಕ ವಾಗಿಯೇ ಮರೆಮಾಚಲಾಗಿದೆ.
ಡಿಸೆಂಬರ್- 6 -1956 ಬಾಬಾ ಸಾಹೇಬ್ ಅಂಬೇಡ್ಕರ್ ನಿಧನ ಹೊಂದಿದ ದಿನ. ಅಂದು ಮಹಾ ಪರಿ ನಿರ್ವಾಣ ದಿನವನ್ನಾಗಿ ಇಡೀ ದೇಶದಾದ್ಯಂತ ಆಚರಿಸಲಾಗುತ್ತದೆ. ದಲಿತ ಸಮುದಾಯವು ಆಚರಿಸುವ ವಿಶೇಷ ದಿನ ಇದಾಗಿದೆ. ಅದೇ ದಿನದಂದು 1992 ರಲ್ಲಿ, ಆರ್.ಎಸ್.ಎಸ್ ಪ್ರೇರಿತ ಸಂಘಪರಿವಾರದ ಗೊಂಚಲು ಕರಸೇವಕರು ಅಯೋಧ್ಯೆ ದಲ್ಲಿನ ಬಾಬ್ರಿ ಮಸೀದಿಯನ್ನು ಧ್ವಂಸಗೊಳಿಸಿದ ದಿನವು ಹೌದು. ಸಿದ್ಧಾಂತ
(ಕಾಕತಾಳೀಯ ಎಂಬಂತೆ, ಡಿಸೆಂಬರ್ 6, 2013 ರಂದು,ದಕ್ಷಿಣ ಆಫ್ರಿಕಾ ದಲ್ಲಿ ವರ್ಣಬೇದ ನೀತಿಗಳ ವಿರುದ್ದ ಹೋರಾಟ ನಡೆಸಿದ್ದ ನೆಲ್ಸನ್ ಮಂಡೇಲ ರವರು ಅಂದೇ ನಿಧನ ಹೊಂದಿದರು, ಅಂಬೇಡ್ಕರ್ ಮತ್ತು ನೆಲ್ಸನ್ ಮಂಡೇಲಾ ನಡುವಿನ ಸಾಮಾಜಿಕ ಹೋರಾಟ ಜೀವನದಲ್ಲಿ ಸಾಮ್ಯತೆ ಇರುವುದರಿಂದ ನಿಮ್ಮ ನೆನಪಿಗಾಗಿ ಮಾಹಿತಿ) ಸಿದ್ಧಾಂತಆಧುನಿಕ ಭಾರತೀಯ ಇತಿಹಾಸದಲ್ಲಿ ಡಿಸೆಂಬರ್ 6ರ ದಿನಾಂಕವು ಈ ಎರಡು ಘಟನೆಗಳ ಕಾರಣಗಳಿಗಾಗಿ ಮುಖ್ಯವಾಗಿದೆ. ಭೀಮರಾವ್ ರಾಮ್ಜಿ ಅಂಬೇಡ್ಕರ್ ಅವರು ಅಲ್ಪಕಾಲದ ಅನಾರೋಗ್ಯದ ನಂತರ 1956 ರಲ್ಲಿ ಈ ದಿನ ನಿಧನರಾದದ್ದು,. ಅಂಬೇಡ್ಕರರ ಅನುಯಾಯಿಗಳಿಗೆ ದುಃಖದ ದಿನವಾದರೂ, ಅದನ್ನು ಮಹಾ ಪರಿ ನಿರ್ವಾಣ ದಿನವನ್ನಾಗಿ ಅರ್ಥಪೂರ್ಣ ವಾಗಿಯೇ’ ಸಂವಿಧಾನ ಸಂರಕ್ಷಣಾ ದಿನವನ್ನಾಗಿಯೂ ಹಲವು ಕಡೆ ಆಚರಿಸಲ್ಪಡುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ದಲಿತರ ಓಟುಗಳಿಗೆ ಲಗ್ಗೆ ಹಾಕುವ ಉದ್ದೇಶದಿಂದ, ಅನೇಕ ರಾಜಕೀಯ ನೇತಾರರು, ಈ ದಿನದಲ್ಲಿ ದಲಿತ ಕೇರಿಗಳಿಗೆ ಬೇಟಿ ನೀಡುವ, ಅವರ ಗುಡಿಸಲಿನಲ್ಲಿ ವಾಸ್ತವ್ಯ ಹೂಡುವ, ಊಟ ಮಾಡುವ ಪರಿಪಾಠವು ಬೆಳೆದು ಬಂದಿದೆ.
ಅಂಬೇಡ್ಕರ್ ರವರು ಭಾರತ ದೇಶದ ಸಂವಿಧಾನ ಕರಡು ಸಮಿತಿಯ ಅಧ್ಯಕ್ಷರಾಗಿದ್ದ ಕಾರಣ, ಅವರ ಅಪಾರ ಕೊಡುಗೆಗೆ ಸಲ್ಲಬೇಕಾದ ಗೌರವಪೂರ್ವಕವಾಗಿ ಅಧಿಕೃತವಾಗಿ ಸರ್ಕಾರವು ಆಚರಣೆ ಮಾಡುತ್ತದೆ. ಸಮಾನತೆ, ಸ್ವಾತಂತ್ರ್ಯ, ಪ್ರಜಾಪ್ರಭುತ್ವ ಮತ್ತು ಸಾಮಾಜಿಕ ನ್ಯಾಯದಲ್ಲಿ ನಂಬಿಕೆಯಿಡುವ ಜನರಿಗೆ ಇದು ಸಂಭ್ರಮದ ದಿನ.
ಆದಾಗ್ಯೂ, ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ಹರಡಿದ ಸಮಾನತೆಯ ಸಂದೇಶವನ್ನು, ಮತ್ತು ಅವರ ಜಾತಿ ವಿನಾಶದ ಕೂಗನ್ನು ಅರಗಿಸಿ ಕೊಳ್ಳಲಾಗದ ಆರ್.ಎಸ್.ಎಸ್ ಮತ್ತು ಹಿಂದುತ್ವ ಸನಾತನ ಸಂಪ್ರದಾಯಸ್ಥರು, ಸ್ವತಂತ್ರ ಭಾರತದ ಅತ್ಯಂತ ಘೋರ ಅಪರಾಧಗಳಲ್ಲಿ ಒಂದಾದ ಅಯೋಧ್ಯೆಯ ಬಾಬರಿ ಮಸೀದಿ ಧ್ವಂಸಕ್ಕೆ ಇದೇ ದಿನಾಂಕವನ್ನು ಆರಿಸಿಕೊಂಡಿದ್ದು, ಉದ್ದೇಶಪೂರ್ವಕ ವಾಗಿಯೇ ಹೊರೆತುಕಾಕತಾಳೀಯವೇನಲ್ಲ. ಇವೆರಡು ತದ್ವಿರುದ್ಧ ಸೆಣಸಾಡುವ ಸಿದ್ದಾಂತಗಳು. ಒಂದು ಸಿದ್ದಾಂತ ಭಾರತ ದೇಶದ ಪರಿಕಲ್ಪನೆ, ಭಾರತ ದೇಶದ ಸಂವಿಧಾನದ ಆಶಯಗಳಾದ ಸಮಾನತೆಯ ಸಾಮಾಜಿಕ ನ್ಯಾಯದ ಪರಿಕಲ್ಪನೆ ಹೊಂದಿದ್ದರೆ, ಮತ್ತೊಂದು, ಸಿದ್ದಾಂತವೆಂದರೆ, ಸನಾತನ ಹಿಂದು ಸಂಪ್ರದಾಯ ಎತ್ತಿಹಿಡಿಯುವ ಜಾತಿ ವ್ಯವಸ್ಥೆಯ ಬೂನಾದಿ ಮನುವಾದವೇ ಭಾರತದ ಪರಿಕಲ್ಪನೆ, ಹೀಗೆ ಎರಡು ಸಿದ್ದಾಂತದ ಸಂಘರ್ಷಕ್ಕೆ ಸಾಕ್ಷಿಯಾಗಿದೆ, ಡಿಸೆಂಬರ್ 6.
ಬಾಬ್ರಿ ಮಸೀದಿ ಧ್ವಂಸಗೊಳಿಸಿದ ನಂತರ ನಡೆದ ಭೀಕರ ಕೋಮು ಗಲಭೆಗಳು, ಅದರಲ್ಲಿ ನೂರಾರು ಜನರು ಸತ್ತದ್ದು, ಇದೊಂದು ಹಿಂದುತ್ವ ಶಕ್ತಿಗಳ ಘೋರ ವಿದ್ವಂಶಕ ಕೃತ್ಯ ಎಂಬುದನ್ನು ಸ್ಪಷ್ಟವಾಗಿ ಸಾಬೀತು ಪಡಿಸಿತ್ತು.
ಅಂಬೇಡ್ಕರ್ ಅನುಯಾಯಿಗಳಿಗೆ ಮಹಾ ಪರಿ ನಿರ್ವಾಣ ದಿನದ ಆಚರಣೆ ಮತ್ತು ಸಂವಿಧಾನದ ಆಶಯಗಳನ್ನು ದೇಶದ ಜನರಿಂದ ಮರೆ ಮಾಚಿಸಲು, ಸನಾತನ ಹಿಂದೂ ಪ್ರತಿಗಾಮಿ ಬಲಪಂಥೀಯರು ಇದಕ್ಕೆ ಪರ್ಯಾಯವಾಗಿ ಈ ದಿನವನ್ನು ಶೌರ್ಯ ದಿವಸ್ ಅಥವಾ ವಿಜಯ ದಿವಸ್ ಎಂದು ಆಚರಿಸುತ್ತಾರೆ.
ಬಾಬರಿ ಮಸೀದಿ ಧ್ವಂಸವು, ಮುಸ್ಲಿಂ ಸಮುದಾಯದವರ ಅಥವಾ ಕೇವಲ ಹಳೆಯ ಮಸೀದಿಯ ಮೇಲಿನ ದಾಳಿಯಾಗಿರಲಿಲ್ಲ ಅಥವಾ ಭಾರತದಲ್ಲಿ ಕೋಮು ಸೌಹಾರ್ದತೆಯನ್ನು ಕದಡುವ ಪ್ರಯತ್ನ ಮಾತ್ರವಾಗಿರಲಿಲ್ಲ. ಇದು ಅಂಬೇಡ್ಕರ್ ಅವರ ಬೋಧನೆಗಳು, ಬರಹಗಳು, ಸಂದೇಶಗಳು ಮತ್ತು ಅವರ ಸಂವಿಧಾನದ ಸಮಾನತೆಯ ಪರಿಕಲ್ಪನೆಯನ್ನು ಮರೆಮಾಚಿಸಲು, ಅಂಬೇಡ್ಕರ್ ಸಿದ್ದಾಂತದ ಮೇಲೆ ನಡೆದ ಸ್ಪಷ್ಟವಾದ ದಾಳಿಯಾಗಿತ್ತು.
ನಮ್ಮ ಸಂವಿಧಾನ ಒದಗಿಸಿದ ಸಮಾನತೆಯ ಪರಿಕಲ್ಪನೆ, ಕೋಟ್ಯಾಂತರ ದಲಿತರ ಹೃದಯ ಮತ್ತು ಮನಸ್ಸಿನಲ್ಲಿ ಹಾಸುಹೊಕ್ಕಾಗಿದೆ. ಆದರೆ, ಅಂಬೇಡ್ಕರ್ ಅವರನ್ನು ಸಂವಿಧಾನ ಶಿಲ್ಪಿ, ಸಮಾಜ ಸುಧಾರಕ ಮತ್ತು ನ್ಯಾಯಶಾಸ್ತ್ರಜ್ಞ, ಅರ್ಥಶಾಸ್ತ್ರಜ್ಞ ಎಂದು ಅಷ್ಡಕ್ಕೆ ಸೀಮಿತಗೊಳಿಸಲಾಗಿದೆ. ಅವರ ವೈಚಾರಿಕತೆಯ ಚಿಂತನೆ ಮತ್ತು ಸಾಮಾಜಿಕ ಮತ್ತು ಕ್ರಾಂತಿಕಾರಿ ಬರಹಗಳು, ಜಾತಿ ವ್ಯವಸ್ಥೆಗೆ ಮೂಲ ಕಾರಣವಾಗಿರುವ, ಮನುಸ್ಮೃತಿ ಯ ದಹನದ ಚಳುವಳಿ, ಮಹಾಡ್ ಕೆರೆಯ ನೀರಿನ ಹೋರಾಟ, ಇಂತಹ ಹಲವು ಪ್ರಮುಖ ರಾಜಕೀಯ ಬಂಡಾಯ ಹೋರಾಟಗಳ ವ್ಯಕ್ತಿತ್ವವನ್ನು ಉದ್ದೇಶಪೂರ್ವಕ ವಾಗಿಯೇ ಮರೆಮಾಚಲಾಗಿದೆ.
ಅಂಬೇಡ್ಕರ್ ಅವರ ಸಾಮಾಜಿಕ, ಕ್ರಾಂತಿಕಾರಿ ಬರಹಗಳು ಆರ್ ಎಸ್ ಎಸ್ ಮತ್ತು ಹಿಂದೂ ಬಲಪಂಥೀಯರಿಗೆ ಜೀರ್ಣಿಸಿಕೊಳ್ಳಲು ಇಂದಿಗೂ ಸಾಧ್ಯವಾಗುತ್ತಿಲ್ಲ. ಅಷ್ಟೇ ಏಕೆ ಸಂವಿಧಾನವನ್ನು ಸಹಾ ಅವರು ಒಪ್ಪುತ್ತಿಲ್ಲ. ವೇಧ ಉಪನಿಷತ್ತುಗಳಿಂದ ಪ್ರೇರಿತಗೊಂಡ ಅವರ ಗೊಡ್ಡು ಹಿಂದೂ ಸಂಪ್ರದಾಯಗಳು, ಜಾತಿ ಕಟ್ಟುಪಾಡುಗಳು, ಮೂಡ ನಂಬಿಕೆಗಳನ್ನು ಅಂಬೇಡ್ಕರ್ ರವರು ಹೋರಾಟಗಳ ಮೂಲಕ ಧಿಕ್ಕರಿಸಿದರು. ದೇಶದ ಜನರ ಮೇಲೆ ಹೇರುವ ಸಂಘಟಿತ ಹಿಂದೂ ಪಟ್ಟುಗಳನ್ನು ನಿರ್ಮೂಲನೆ ಮಾಡಲು ಜೀವನ ಪರ್ಯಂತ ಅಂಬೇಡ್ಕರ್ ಶ್ರಮಿಸಿದರು. ಕೊನೆಗೆ ಹಿಂದೂ ಧರ್ಮವನ್ನು ತೊರೆದು ಬೌದ್ಧಧರ್ಮವನ್ನು ಸ್ವೀಕರಿಸಿದರು. ಆ ಸಂದರ್ಭದಲ್ಲಿ ಆರ್ಎಸ್ಎಸ್ನ ಮುಖ್ಯ ಸಿದ್ಧಾಂತವಾದಿ ಎಂ.ಎಸ್ ಗೋಳ್ವಾಲ್ಕರ್ ಅವರು ಬೌದ್ಧ ಧರ್ಮವನ್ನು ಮತ್ತು ಜಾತಿರಹಿತ ಸಮಾಜವನ್ನು ಪ್ರತಿಪಾದಿಸುವ, ಅಂಬೇಡ್ಕರ್ ರವರ ಧೈರ್ಯವನ್ನು ಕಂಡು ದಂಗಾಗಿದ್ದರು, ಆ ಕ್ಷಣ ಅವರು ಆತಂಕಗೊಂಡಿದ್ದರು. ಏಕೆಂದರೆ, ಅಂಬೇಡ್ಕರ್ ಜೊತೆ ಸಾವಿರಾರು ದಲಿತರು ಭೌದ್ದ ಧರ್ಮ ಸ್ವೀಕರಿಸಿದ್ದರು. ಅ ಸಂದರ್ಭದಲ್ಲಿ ಗೋಳ್ವಲ್ಕರ್ ‘ಹಿಂದೂ ಸಂಪ್ರದಾಯಬದ್ದ ಜಾತಿ ಪದ್ದತಿಯನ್ನು ತೊಡೆದು ಹಾಕುವ, ಸಮಾನತೆ ಸಾರುವ ಭೌದ್ದ ಧರ್ಮದ ಪ್ರಭಾವದ ಪ್ರಯತ್ನಕ್ಕೆ ಅಡ್ಡಿವುಂಟು ಮಾಡಲು ಎಲ್ಲಾ ರೀತಿಯ ಪ್ರಯತ್ನ ನಡೆಸಿದರು. ಅವರ ಅನುಯಾಯಿಗಳು ಅದನ್ನೇ ಈಗಲೂ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ.
ಆರ್ಎಸ್ಎಸ್ನ ಕಾರ್ಯಸೂಚಿಯು ಅಂಬೇಡ್ಕರ್ ಸಿದ್ಧಾಂತಕ್ಕೆ ವಿರುದ್ಧವಾಗಿದೆ. ಅಂಬೇಡ್ಕರ್ ಅವರು ಅಂಚಿನಲ್ಲಿರುವ ಹಾಗೂ ಶೋಷಣೆಗೆ ತುತ್ತಾದ ಸಮುದಾಯಕ್ಕೆ ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ಸಮಾನತೆಯನ್ನು ಒದಗಿಸಲು ತೀವ್ರವಾಗಿ ಹೋರಾಡಿದರು. ತಮ್ಮ ಪ್ರಸಿದ್ಧ ಪ್ರಬಂಧ “ಜಾತಿ ಪದ್ದತಿ ನಿರ್ಮೂಲನೆ” ( ದಿ ಅನಿಹಿಲೇಷನ್ ಆಫ್ ಕ್ಯಾಸ್ಟ್ನಲ್ಲಿ) “ನನ್ನ ಆದರ್ಶ ಸಮಾಜದ ಪರಿಕಲ್ಪನೆಗಳು, ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವ-ಸೋದರತ್ವದ ಆದಾರ ಸ್ತಂಭದ ಮೇಲೆ ನಿಲ್ಲುವ ಸಮಾಜವಾಗಿದೆ” ಎಂದು ಸಾರಾಸಗಟಾಗಿ ಪ್ರತಿಪಾದಿಸಿದರು. ಇದನ್ನು ಓದಿದ ಗೋಳ್ವಾಲ್ಕರ್ ಬೆದರಿದರು. ಅವರು “ಸಮಾನತೆಯನ್ನು ಪ್ರಾಯೋಗಿಕವಾಗಿ ಜಾರಿಗೊಳಿಸುವುದು ಮಿಥ್ಯೆ, ಅದು ಅಸಾಧ್ಯ ಎಂದು ಘಂಟಾ ಘೋಷವಾಗಿ ಘೋಷಿಸಿದರು. ಇದರ ಅರ್ಥವೆಂದರೆ, ಸಮಾನತೆಯ ಸಮಾಜ ನಿರ್ಮಾಣಕ್ಕೆ ನಮ್ಮ ಮನುವಾದ ಸಿದ್ದಾಂತವು ಬಿಡುವುದಿಲ್ಲ. ಜಾತಿ ವಿನಾಶಕ್ಕೆ ನಾವು ಬದ್ದ ವೈರಿಗಳು ಎಂಬುದನ್ನು ಗೋಳ್ವಾಲ್ಕರ್ ಅಂದೇ ಸ್ಪಷ್ಟಗೊಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಆರ್.ಎಸ್.ಎಸ್ ಮತ್ತು ಹಿಂದೂ ಬಲಪಂಥೀಯರ ಈ ಒಳ ಮರ್ಮದ ಬಗ್ಗೆ ದಲಿತ ಸಮುದಾಯ ಎಚ್ಚರಿಕೆ ವಹಿಸಬೇಕಾಗಿದೆ.
ಇದನ್ನೂ ಓದಿ: ಫ್ಯಾಕ್ಟ್ಚೆಕ್ | ಮುಸ್ಲಿಂ ಆಧ್ಯಾತ್ಮಿಕ ನಾಯಕನನ್ನು ಭಯೋತ್ಪಾದಕ ಬೆಂಬಲಿಗ ಎಂದು ಸುಳ್ಳು ಹೇಳಿದ ಬಿಜೆಪಿ ಶಾಸಕ ಯತ್ನಾಳ್
ಆರ್.ಎಸ್.ಎಸ್ ಸಬಾಲ್ಟರ್ನ್ ಹಿಂದುತ್ವವನ್ನು ತನ್ನ ಸೈದ್ಧಾಂತಿಕ ಮಾರ್ಗವಾಗಿ ಬಿಂಬಿಸುವ ಮೂಲಕ ದಲಿತರ ನಡುವೆ ಪ್ರವೇಶ ಮಾಡಲು ಪ್ರಯತ್ನಿಸುತ್ತಿದೆ. ಹಿಂದೂ ಧರ್ಮವು ವೈವಿಧ್ಯಮಯ ಮತ್ತು ಏಕರೂಪದ ಸಂಪ್ರದಾಯಗಳಿಗೆ ಹೆಸರುವಾಸಿಯಾಗಿದೆ. ಹೀಗಾಗಿ, ಆರ್.ಎಸ್.ಎಸ್ ಭಾರತದ ಜನಸಂಖ್ಯೆಯ ಮೇಲೆ ಏಕರೂಪದ ಹಿಂದೂ ಧರ್ಮದ ಆವೃತ್ತಿಯನ್ನು ಹೇರಲು ಪ್ರಯತ್ನಿಸುತ್ತದೆ. ಉತ್ತರ ಭಾರತದಾದ್ಯಂತ, ಕೆಳಜಾತಿಗಳ ಜನರು, ಪ್ರಮುಖವಾಗಿ ದಲಿತರು ಸಹಾ, ಬ್ರಾಹ್ಮಣರ ಆಮಿಷಕ್ಕೆ ಒಳಗಾಗುತ್ತಿರುವುದನ್ನು ಸ್ಪಷ್ಟವಾಗಿ ವೀಕ್ಷಿಸಬಹುದು. ಇದು ಅಂಬೇಡ್ಕರ್ ಅನುಯಾಯಿಗಳನ್ನು ಸ್ವಾಧೀನ ಪಡಿಸಿಕೊಳ್ಳಲು ನಡೆಸುವ ಆರ್.ಎಸ್.ಎಸ್ನ ಹೊಸ ಕಾರ್ಯಯೋಜನೆಯ ಭಾಗವಾಗಿದೆ. ಒಂದು ದೇಶ,ಒಂದು ಧರ್ಮ ಎನ್ನುವುದು ಇವರ ಸಿದ್ದಾಂತವೆಂಬುದನ್ನು ಮರೆಯಬಾರದು. ( ಇತ್ತೀಚೆಗೆ ಒಂದು ದೇಶ, ಒಂದು ಚುನಾವಣೆ ಎಂಬ ಕೂಗನ್ನು ಎತ್ತಿರುವುದು ಮತ್ತೊಂದು ಉದಾಹರಣೆ)
ಹೀಗಾಗಿಯೇ ಸ್ಥಳೀಯ ದಲಿತ ಗ್ರಾಮ ದೇವತೆಗಳ ಆಚರಣೆಗಳನ್ನು ಅಳಿಸಿ ಹಾಕಿ ಅವುಗಳಿಗೆ ಪರ್ಯಾಯವಾಗಿ ಹಿಂದೂ ಧರ್ಮದ ಹೊಸ ಸ್ವರೂಪದ ಆಚರಣೆಗಳ ಮೂಲಕ ಆ ಸಮುದಾಯದ ಜನರನ್ನು ಭಯಭಕ್ತಿ ಯಿಂದ, ತಮ್ಮ ತೆಕ್ಕೆಗೆ ಸೆಳೆಯುವ ರಾಜಕೀಯ ಪ್ರಯತ್ನ ಹೆಚ್ಚಾಗಿದೆ. ಆದರೆ, ಮತ್ತೊಂದೆಡೆ, ಜಾತಿ ಶ್ರೇಣಿಗಳನ್ನು ನಿರ್ಮೂಲನೆ ಮಾಡದೆ, ವರ್ಣಾಶ್ರಮ ಪದ್ದತಿಯನ್ನು ರಕ್ಷಿಸಿ ಕೊಳ್ಳಲು, ಹಿಂದು ನಾವೆಲ್ಲರೂ ಒಂದು, ಎಂಬ ಪರಿಕಲ್ಪನೆಯ ರಾಷ್ಟ್ರೀಯತೆಯನ್ನು ಹಿಂದೂ ಧರ್ಮದೊಂದಿಗೆ ಸಂಯೋಜಿಸುವ ಕೆಲಸವನ್ನು ವ್ಯವಸ್ಥಿತವಾಗಿ ನಡೆಸುತ್ತಿದೆ. ಈ ವೈರುದ್ಯಗಳನ್ನು ದಲಿತ ಸಮುದಾಯ ಜಾಗೃತವಾಗಿ ಅರ್ಥ ಮಾಡಿಕೊಳ್ಳಬೇಕು.
ಮುಖ್ಯವಾಗಿ ಉತ್ತರ ಭಾರತದಲ್ಲಿ ಹಿಂದೂ ಬಲಪಂಥೀಯ ರಾಜಕೀಯ ನಾಯಕರು ಆಯೋಜಿಸಿದ ಕನ್ವಾಡ್ ಯಾತ್ರೆ’ ಗಳಲ್ಲಿ, ಅದೇ ರೀತಿ ತಮಿಳುನಾಡಿನಲ್ಲಿ ಇತ್ತೀಚೆಗೆ ನಡೆದ ‘ವೇಲ್’ ಯಾತ್ರೆ’ ಯಲ್ಲಿ ದಲಿತರು ಭಾಗವಹಿಸುತ್ತಿರುವುದು, ಅವರಲ್ಲಿ ಆರ್ಎಸ್ಎಸ್ನ ಸಿದ್ಧಾಂತವನ್ನು ನಂಬುವಂತೆ ಮಾಡಿ ಹಿಂದುತ್ವ ಸಂಪ್ರದಾಯದ ಮೂಡ ನಂಬಿಕೆಗಳ ಆಚರಣೆಗಳ ಮೂಲಕ ದಾರಿ ತಪ್ಪಿಸುತ್ತಿರುವುದು ಇವರ ಇತ್ತೀಚಿನ ಕಾರ್ಯ ಯೋಜನೆಯಲ್ಲಿ ಒಂದಾಗಿದೆ.
ಒಂದು ಕಡೆ ದಲಿತರ ವಿರುದ್ಧ ಜಾತಿ ತಾರತಮ್ಯ ಮತ್ತು ಅಸ್ಪೃಶ್ಯತೆ ದೌರ್ಜನ್ಯಗಳು ಮುಂದುವರಿಸುವುದು, ಮತ್ತು ದೌರ್ಜನ್ಯಗಳನ್ನು ಸಮರ್ಥನೆ ಮಾಡಿಕೊಂಡು, ಅಪರಾಧಿಗಳನ್ನು ರಕ್ಷಿಸುವುದು. ಉದಾಹರೆಣೆಗೆ, ಗುಜರಾತಿನ ಊನಾ ಘಟನೆ, ಉತ್ತರ ಪ್ರದೇಶದ ಹತ್ರಾಸ್fನಲ್ಲಿ ದಲಿತ ಬಾಲಕಿಯ ಮೇಲಿನ ದಾರುಣ ದೌರ್ಜನ್ಯ ಪ್ರಕರಣ, ಆಂಧ್ರದಲ್ಲಿ ರೋಹಿತ್ ವೆಮುಲ ಘಟನೆಗಳು ಪ್ರಮುಖವಾದ ಜಾತಿ ತಾರತಮ್ಯ ಪ್ರಕರಣಗಳು. ಕಳೆದ 9 ವರ್ಷಗಳಲ್ಲಿ ಆರ್.ಎಸ್.ಎಸ್ /ಬಿಜೆಪಿ ನೇತೃತ್ವದ ಆಡಳಿತದಲ್ಲಿ ಎನ್.ಸಿ.ಆರ್.ಬಿ,ಯ ಅಧಿಕೃತ ಅಂಕಿ ಅಂಶಗಳ ಪ್ರಕಾರವೇ, ದೇಶದಲ್ಲಿ ಸುಮಾರು 4 ಲಕ್ಷಕ್ಕೂ ಹೆಚ್ವು ಅಸ್ಪೃಶ್ಯತಾ ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ. ಅದರಲ್ಲೂ, ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಇಂತಹ ದೌರ್ಜನ್ಯ ಪ್ರಕರಣಗಳು ಹೆಚ್ಚಾಗಿರುವುದು ದಾಖಲೆಯಲ್ಲಿವೆ.
ಹಾಗಾಗಿಯೇ, ದಲಿತರನ್ನು ಮತ ಬ್ಯಾಂಕ್ಗಳಾಗಿ ಪರಿವರ್ತಿಸುವ ಪ್ರಯತ್ನಗಳನ್ನು ಆರ್.ಎಸ್.ಎಸ್ ತಮ್ಮ ಸನಾತನ ಗೊಡ್ಡು ಹಿಂದೂ ಸಂಪ್ರದಾಯ ಆಚರಣೆಗಳ ಮೂಲಕ ಮುಗ್ದ ದಲಿತ ಸಮುದಾಯವನ್ನು ಸೆಳೆಯುವ ಅದರ ಕಾರ್ಯಯೋಜನೆಯ ಭಾಗವಾಗಿ ಪ್ರಯತ್ನ ಮಾಡುತ್ತಿರುವುದಕ್ಕೆ ಇವೆಲ್ಲ ಪ್ರತ್ಯಕ್ಷ ಸಾಕ್ಷಿಗಳಾಗಿವೆ.
ಆರ್ಎಸ್ಎಸ್ ಮತ್ತು ಹಿಂದೂ ಬಲಪಂಥದ ಮತ್ತೊಂದು ಮುಖವೆಂದರೆ ದೇಶದ ದೊಡ್ಡ ಕಾರ್ಪೊರೇಟ್ ಕುಳಗಳಿಗೆ ಮಣೆಹಾಕುವ ಇವರ ನಿಷ್ಠೆ. ಈ ನಿಷ್ಠೆಯು ಎಷ್ಟರಮಟ್ಟಿಗೆ ಇದೆ ಎಂದರೆ, ದೇಶದ ಜನರ ಬಗ್ಗೆ ಕಾಳಜಿಯಿಲ್ಲ, ಹಾಗೆಯೇ, ಅವರ ಭೌತಿಕ ಅಗತ್ಯಗಳ ಬಗ್ಗೆ ಅಸಡ್ಡೆ ವರ್ತನೆ, ಮತ್ತು ಸಂವಿಧಾನದ ಆಶಯಗಳ ದೂಳಿಪಟ ಇವರ ಕಾರ್ಯಸೂಚಿಯಲ್ಲಿರುವ ಆದ್ಯತೆಗಳು, ಒಟ್ಟಾರೆಯಾಗಿ, ದೇಶದ ಸಾರ್ವಭೌಮತ್ವ ಮತ್ತು ಐಕ್ಯತೆ ಸಮಗ್ರತೆಗೆ ಧಕ್ಕೆ ತರುವ ಪ್ರಯತ್ನಗಳು. ಮನುವಾದಿ ಪ್ರತಿಪಾದಕರ ಆಡಳಿತದ ಕಾರ್ಯವೈಖರಿಯಾಗಿದೆ.
ಕೋವಿಡ್ ಸಾಂಕ್ರಾಮಿಕ ಸಂದರ್ಭವನ್ನು ಬಳಸಿಕೊಂಡು, ಸಂಸತ್ತಿನ ಮೌಲ್ಯಗಳನ್ನು ಗಾಳಿಗೆ ತೂರಿ, ಮೂರು ಕೃಷಿ ಮಸೂದೆಗಳ ಅಂಗೀಕಾರ ಮತ್ತು ದೆಹಲಿಯ ಗಡಿಯಲ್ಲಿ ಪ್ರತಿಭಟನಾ ನಿರತ ರೈತರ ಮೇಲೆ ಲಾಠಿ ಚಾರ್ಜ್ ಮಾಡಿ ನೂರಾರು ರೈತರನ್ನು ಬಲಿ ತೆಗೆದು ಕೊಂಡವರು. ಹಾಗೂ ವಿದ್ಯುತ್ ಮತ್ತು ಹಲವು ಸಾರ್ವಜನಿಕ ಕ್ಷೇತ್ರಗಳ ಖಾಸಗೀಕರಣ, ಇವೆಲ್ಲವೂ ಆರ್.ಎಸ್.ಎಸ್ನವರ ಚಮಚ ಕಾರ್ಫೋರೇಟ್ ಸಂಗಮದ ಶಾಮೀಲು ತನಕ್ಕೆ ಹಿಡಿದ ಕನ್ನಡಿ ಯಾಗಿದೆ. ಆರ್ಎಸ್ಎಸ್ನ ಕೋಮುವಾದಿ ಸಿದ್ಧಾಂತದಿಂದ ಮಾರ್ಗದರ್ಶನ ಪಡೆದ ಬಿಜೆಪಿ ಆಡಳಿತದ ಈ ಅವಧಿಯಲ್ಲಿ, ದೀನ ದಲಿತರು ಎದುರಿಸುತ್ತಿರುವ ಜಾತಿ ತಾರತಮ್ಯ ಮತ್ತು ಶೋಷಣೆಯನ್ನು ಹೆಚ್ಚಿಸಿದೆ.
ಆರ್ ಎಸ್ ಎಸ್ -ಬಿಜೆಪಿಯ ನೀಚ ಕೋಮುವಾದಿ ವಿನ್ಯಾಸಗಳೊಂದಿಗಿನ ಕೋಪ ಮತ್ತು ಹತಾಶೆಯನ್ನು ಮತ್ತು ಜಾತಿ ತಾರತಮ್ಯ, ಲಿಂಗ ದೌರ್ಜನ್ಯಗಳ ವಿರುದ್ಧದ ಹೋರಾಟಗಳು, ದುಡಿಯುವ ವರ್ಗ ನಡೆಸುತ್ತಿರುವ ಆರ್ಥಿಕ ಶೋಷಣೆಯ ವಿರುದ್ದದ ಜನಪ್ರಿಯ ಆಂದೋಲನ ದೊಂದಿಗೆ ಬೆರೆಯುವ ಮೂಲಕ ಕಾರ್ಪೊರೇಟ್ ಮತ್ತು ಕೋಮುವಾದಿ, ಕಾರ್ಯಸೂಚಿಗಳನ್ನು ಸೋಲಿಸಬೇಕು.
ಇದನ್ನೂ ಓದಿ: ದುರಂತ ಬದುಕಿನ ನಡುವೆ ಹಬ್ಬದ ಸಂಭ್ರಮ
ಡಿಸೆಂಬರ್ 6 ರ ಈ ದಿನ ದೇಶದ ಇತಿಹಾಸದ ಪುಟಗಳಲ್ಲಿ ಎರಡು ಸಿದ್ದಾಂತಗಳ ನಡುವಿನ ಘರ್ಷಣೆ ದಿನವಾಗಿ ದಾಖಲಾಗಿದೆ. ಒಂದು ಅಂಬೇಡ್ಕರ್ ವಾದ ಮತ್ತೊಂದು ಮನುವಾದ, ಮೊದಲನೆಯದರ ಪ್ರತಿನಿಧಿಗಳು ಅಸ್ಪೃಶ್ಯರು, ಇವರು ಮನುವಾದ ಮತ್ತು ಕಾರ್ಪೋರೇಟ್ ಶಾಮೀಲು ಮತ್ತು ಸಂಗಮದಿಂದಾಗಿ, ಆರ್ಥಿಕ ಶೋಷಣೆ ಮತ್ತು ಜಾತಿ ದಮನಕ್ಕೆ ತುತ್ತಾದವರು, ಇವರು ಸಂವಿಧಾನದ ಆಶಯಗಳ ರಕ್ಷಣೆಯಲ್ಲಿ ತೊಡಗಿಸಿ ಕೊಂಡಿದ್ದಾರೆ. ಇನ್ನೂ ಎರಡನೆಯವರು ಮನುವಾದ ಮತ್ತು ವರ್ಣಾಶ್ರಮ ಪದ್ದತಿ ಮತ್ತು ಜಾತಿ ವ್ಯವಸ್ಥೆಯ ಪ್ರೋತ್ಸಾಹಕರು ಮತ್ತು ಪ್ರತಿಪಾದಕರು.
ದಲಿತರು ಈ ಸೈದ್ದಾಂತಿಕ ಘರ್ಷಣೆಯನ್ನು ಅಂಬೇಡ್ಕರ್ ರವರ ದೃಷ್ಟಿಕೋನದಿಂದ ಅರ್ಥಿಸೈಕೊಂಡು, ಆರ್ಥಿಕ ಶೋಷಣೆ ವಿರುದ್ಧದ ಪ್ರಬಲ ಕಾರ್ಮಿಕ ವರ್ಗದ ಆಂದೋಲನದಲ್ಲಿ ಬೆರೆಯಬೇಕು. ಮನುವಾದ ಮತ್ತು ಜಾತಿ ಅಸ್ಪೃಶ್ಯತೆ ವ್ಯವಸ್ಥೆಯ ನಿರ್ಮೂಲನೆಯ ತಮ್ಮ ಹೋರಾಟವನ್ನು ಬಲಿಷ್ಟ ಚಳುವಳಿಯ ನೆಲೆಯೊಂದಿಗೆ ಸೇರಬೇಕು. ಇದೇ ಡಿಸೆಂಬರ್ 6 ರ ದಿನದ ಪ್ರತಿಜ್ಞೆಯಾಗಲಿ ಎಂದು ಆಶಿಸೋಣ.
ವಿಡಿಯೋ ನೋಡಿ: ಭಾರತವು ಪ್ಯಾಲೆಸ್ತೀನ್ ಪರ ನಿಲ್ಲಬೇಕು : ಸದಾಗ್ರಹದ ಸಭೆ ಆಗ್ರಹ Janashakthi Media