ಸುಳ್ಯ :ಬಳ್ಪ ರಕ್ಷಿತಾರಣ್ಯದ ಮೂಲಕ ಹಾದು ಹೋಗುವ ಗುತ್ತಿಗಾರು-ಬಳ್ಪ ರಸ್ತೆ ಬದಿಯಲ್ಲಿ 30ಕ್ಕೂಹೆಚ್ಚು ಮಂಗಗಳ ಮೃತದೇಹ ಪತ್ತೆಯಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ಸತ್ತ ಮಂಗಗಳ ಚಿತ್ರ ಹರಿದಾಡುತ್ತಿದ್ದು, ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ. ಮಂಗಗಳನ್ನು ಸಾಮೂಹಿಕವಾಗಿ ಸಾಯಿಸಿ ಬೇರೆಲ್ಲಿಂದಲೋ ತಂದು ಇಲ್ಲಿ ಹಾಕಿರುವ ಶಂಕೆ ಇದೆ. ಶುಕ್ರವಾರ ಮರಣೋತ್ತರ ಪರೀಕ್ಷೆ ಬಳಿಕ ಮಂಗಗಳ ಸಾವಿಗೆ ಕಾರಣ ತಿಳಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ : ಮಂಗಗಳ ಹೆಸರಿನಲ್ಲಿದೆ 32 ಎಕರೆ ಜಮೀನು!
ಮಂಗಗಳ ಸಾವಿಗೆ ಸಾರ್ವಜನಿಕರು ಆಕ್ರೋಶವನ್ನು ವ್ಯಕ್ತಪಡಿಸಿದ್ದು, ಅರಣ್ಯ ಇಲಾಖೆ ಏನು ಮಾಡುತ್ತಿದೆ ಎಂದು ಪ್ರಶ್ನಿಸಿದ್ದಾರೆ. ಇದರ ಹಿಂದೆ ವ್ಯವಸ್ಥಿತ ದಂಧೆ ಇದ್ದಂತೆ ಕಾಣುತ್ತದೆ ಸರಿಯಾದ ತನಿಖೆ ನಡೆಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಈ ರೀತಿ ಮಂಗಗಳು ಸಾವನ್ನಿಪ್ಪಿದ್ದು, ಚಾರಣ ಮಾಡುವವರಿಗೆ ಹಾಗೂ ಪ್ರವಾಸಿಗರಲ್ಲಿ ಆತಂಕ ಸೃಷ್ಟಿಸಿದೆ ಎಂದು ತಿಳಿದು ಬಂದಿದೆ. ಹಾಗಾಗಿ ಕೂಡಲೇ ಅರಣ್ಯ ಇಲಾಖೆ ತನಿಖೆಯನ್ನು ನಡೆಸಿ ಸಾವಿಗೆ ನಿಖರ ಕಾರಣಗಳನ್ನು ಬಹಿರಂಗ ಪಡಿಸಬೇಕಿದೆ.